ಪ್ರತಿಯೊಬ್ಬ ಮನುಷ್ಯನ ಜೀವನವು ಅತ್ಯಮೂಲ್ಯ. ಪ್ರತಿಯೊಬ್ಬರೂ ಉತ್ತಮವಾಗಿ ಜೀವನ ನಡೆಸಲು ಭಾರತೀಯ ಸಂವಿಧಾನ ಪ್ರತ್ಯೇಕ ಹಕ್ಕುಗಳನ್ನು ನೀಡಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಹಾಗೂ ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶ ಆನಂದ್ ಎಂ ಹೇಳಿದರು. ಮಂಡ್ಯ ನಗರದ ಪ್ರಾದೇಶಿಕ ಸಾರಿಗೆ ಕಚೇರಿಯ ಆವರಣದಲ್ಲಿ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಪ್ರಾದೇಶಿಕ ಸಾರಿಗೆ ಕಚೇರಿಯ ವತಿಯಿಂದ ಇಂದು ನಡೆದ 37 ನೇ ರಾಷ್ಟ್ರೀಯ ರಸ್ತೆ ಸುರಕ್ಷತೆ ಮಹಾಸಾಚರಣೆ-2026 […]
The post ನೆಮ್ಮದಿಯಿಂದ ಜೀವಿಸಲು ಪ್ರತಿಯೊಬ್ಬರಿಗೂ ಸಾಂವಿಧಾನಿಕ ಹಕ್ಕುಗಳಿವೆ : ಆನಂದ್ appeared first on nudikarnataka.
ಪ್ರತಿಯೊಬ್ಬ ಮನುಷ್ಯನ ಜೀವನವು ಅತ್ಯಮೂಲ್ಯ. ಪ್ರತಿಯೊಬ್ಬರೂ ಉತ್ತಮವಾಗಿ ಜೀವನ ನಡೆಸಲು ಭಾರತೀಯ ಸಂವಿಧಾನ ಪ್ರತ್ಯೇಕ ಹಕ್ಕುಗಳನ್ನು ನೀಡಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಹಾಗೂ ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶ ಆನಂದ್ ಎಂ ಹೇಳಿದರು.
ಮಂಡ್ಯ ನಗರದ ಪ್ರಾದೇಶಿಕ ಸಾರಿಗೆ ಕಚೇರಿಯ ಆವರಣದಲ್ಲಿ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಪ್ರಾದೇಶಿಕ ಸಾರಿಗೆ ಕಚೇರಿಯ ವತಿಯಿಂದ ಇಂದು ನಡೆದ 37 ನೇ ರಾಷ್ಟ್ರೀಯ ರಸ್ತೆ ಸುರಕ್ಷತೆ ಮಹಾಸಾಚರಣೆ-2026 “ರಸ್ತೆ ಸುರಕ್ಷೆ -ಜೀವದ ರಕ್ಷೆ” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ರಸ್ತೆ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ನಾವು ಬದುಕಬೇಕು ಹಾಗೂ ಉಳಿದವರನ್ನು ಬದುಕಲು ಬಿಡಬೇಕು. ಇಂದಿನಿಂದ ಎಲ್ಲರೂ ರಸ್ತೆ ನಿಯಮಗಳನ್ನು ಪಾಲಿಸಬೇಕು ಎಂಬ ಸಂಕಲ್ಪವನ್ನು ಮಾಡುವ ಮೂಲಕ ರಸ್ತೆ ಅಪಘಾತಗಳನ್ನು ತಪ್ಪಿಸೋಣ ಎಂದು ಹೇಳಿದರು.
ಇತ್ತೀಚಿಗಷ್ಟೇ ಮೈಸೂರು ಬೆಂಗಳೂರು ಹೈವೇ ಮಾಡಿ ವಾಹನಗಳಿಗೆ ವೇಗದ ಮಿತಿಯನ್ನು ಆಳವಡಿಸಲಾಯಿತು ಆದರೂ ಸಹ ಅಪಘಾತಗಳ ಪ್ರಕರಣಗಳು ಹೆಚ್ಚಾಗುತ್ತಿವೆ. ಬೆಂಗಳೂರಿನಂತಹ ಮಹಾನಗರಗಳಲ್ಲಿ ರಸ್ತೆಗೊಂಡಿಯಿಂದ ಅಪಘಾತ ಸಂಭವಿಸುತ್ತಿವೆ ಆದರೆ ಮಂಡ್ಯದಲ್ಲಿ ಅಂತಹ ರಸ್ತೆಗಳು ಹೆಚ್ಚು ಇಲ್ಲ. ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸಿ ರಸ್ತೆ ಸುರಕ್ಷತಾ ಮಾಸಾಚರಣೆಗೆ ಕಾರ್ಯಕ್ರಮದ ಕುರಿತು ಜಾಗೃತಿ ಮೂಡಿಸಬೇಕು ಎಂದರು.
18 ವರ್ಷ ಮೇಲ್ಪಟ್ಟವರಿಗೆ ಮಾತ್ರ ವಾಹನ ಪರವಾಗಿ ನೀಡಲಾಗುತ್ತದೆ ಆದರೆ ತಂದೆ ತಾಯಿಗಳು ತಮ್ಮ ಮಕ್ಕಳು ವಾಹನ ಚಾಲನೆಯನ್ನು ಕಲಿಯಲಿ ಎಂಬ ಉದ್ದೇಶದಿಂದ ಅಪ್ರಾಪ್ತ ಮಕ್ಕಳಿಗೆ ವಾಹನವನ್ನು ನೀಡುತ್ತಿದ್ದಾರೆ. ಇದರಿಂದ ಅದೆಷ್ಟು ಅಪ್ರಾಪ್ತ ಮಕ್ಕಳು ಅಪಘಾತಕ್ಕೆ ಬಲಿಯಾಗಿದ್ದಾರೆ ಇದರ ಕುರಿತಾಗಿ ತಂದೆ ತಾಯಿಗಳು ಜಾಗೃತಿ ವಹಿಸಬೇಕು. ಅಪ್ರಾಪ್ತ ಮಕ್ಕಳಿಗೆ ವಾಹನ ಪರವಾನಿಗೆಲ್ಲದೆ ವಾಹನಗಳನ್ನು ನೀಡುವುದು ಕಾನೂನಿನ ಪ್ರಕಾರ ಶಿಕ್ಷಾರ್ಹ ಅಪರಾಧ ಇದರ ಅಡಿ 25,000 ದಂಡ ಹಾಗೂ ಪೋಷಕರಿಗೆ ಜೈಲು ಶಿಕ್ಷೆಯನ್ನು ಸಹವಿಧಿಸಬಹುದು ಎಂದು ಹೇಳಿದರು.
ಮದ್ಯಪಾನ ಮಾಡಿ ವಾಹನ ಚಲಾಯಿಸಬೇಡಿ. ಆಟೋ ಚಾಲಕರು ತಮ್ಮ ಸಹೋದ್ಯೋಗಿಗಳಿಗೆ ಸಂಚಾರಿ ನಿಯಮಗಳನ್ನು ಪಾಲಿಸುವಂತೆ ಅರಿವು ಮೂಡಿಸಬೇಕು. ಸಿಗ್ನಲ್ ಗಳನ್ನು ಜಂಪ್ ಮಾಡಿ ಕಷ್ಟಪಟ್ಟು ದುಡಿದ ಹಣವನ್ನು ದಂಡಕ್ಕೆ ನೀಡಬೇಡಿ. ಕಾನೂನು ಸೇವಗಳ ಪ್ರಾಧಿಕಾರದ ಮೂಲಕ ಕಳೆದ ಎರಡು ಲೋಕ ಅದಾಲತ್ ಗಳಲ್ಲಿ ಸಂಚಾರಿ ದಂಡವನ್ನು ಶೇ 50 ರಷ್ಟು ಪಾವತಿ ಮಾಡುವಂತೆ ಅವಕಾಶ ಅರ್ಪಿಸಲಾಯಿತು ಸಾಕಷ್ಟು ಜನರು ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ದಂಡವನ್ನು ತೆತ್ತಿದರು ಎಂದು ಹೇಳಿದರು.
ಸಂಚಾರಿ ನಿಯಮಗಳನ್ನು ಪಾಲಿಸುವುದರಿಂದ ಸರ್ಕಾರಕ್ಕೆ ದಂಡವನ್ನು ಕಟ್ಟುವ ಅನಿವಾರ್ಯತೆ ಇರುವುದಿಲ್ಲ. ವಾಹನ ಚಲಾವಣೆ ಮಾಡುವಾಗ ಎಚ್ಚರಿಕೆವಹಿಸಿ ಜಾಗೃತವಾಗಿ ವಾಹನ ಚಲಾಯಿಸಿ. ರಸ್ತೆ ಸಂಚಾರಿ ನಿಯಮಗಳನ್ನು ಪಾಲಿಸುವ ಮೂಲಕ ಅಪಘಾತಗಳನ್ನು ಕಡಿಮೆ ಮಾಡೋಣ ಎಂದು ಕರೆ ನೀಡಿದರು.
ಹೆಚ್ಚುವರಿ ಪೊಲೀಸ್ ಅಧಿಕಾರಿಯಾದ ತಿಮ್ಮಯ್ಯ ಮಾತನಾಡಿ ಜಿಲ್ಲೆಯಲ್ಲಿ 2025 ನೇ ಸಾಲಿನಲ್ಲಿ 496 ಮಾರಣಾಂತಿಕ ಅಪಘಾತಗಳು ಸಂಭವಿಸಿ 547 ಜನರು ಸಾವನ್ನಪ್ಪಿದ್ದಾರೆ. 3000ಕ್ಕೂ ಹೆಚ್ಚು ಸಣ್ಣಪುಟ್ಟ ಅಪಘಾತಗಳು ಸಂಭವಿಸಿದೆ ಇದರಿಂದ ಅನೇಕರು ಕಾಲು ಕೈ ದೃಷ್ಟಿಯನ್ನು ಕಳೆದುಕೊಂಡಿದ್ದಾರೆ. ಇವೆಲ್ಲ ಪ್ರಕರಣಗಳನ್ನು ಅವಲೋಕಿಸಿದಾಗ ಹೆಚ್ಚಿನ ಪ್ರಕರಣಗಳಲ್ಲಿ ಯುವಜನತೆ ಅಪಘಾತಗಳಿಗೆ ಒಳಗಾಗಿದೆ ಎಂದು ಹೇಳಿದರು.
ಅನೇಕ ಅಪಘಾತಗಳು ಸಂಚಾರಿ ನಿಯಮಗಳನ್ನು ಪಾಲಿಸದೆ ಹೋದ ಸಂದರ್ಭದಲ್ಲಿ ಸಂಭವಿಸಿದೆ. ವಾಹನ ಚಲಾಯಿಸುವಾಗ ನಾವು ನಮ್ಮ ಬಗ್ಗೆ ಯೋಚಿಸಬೇಕು ಹಾಗೂ ನಮ್ಮ ಕುಟುಂಬದ ಕುರಿತಾಗಿಯೂ ಯೋಚಿಸಬೇಕು. ವಾಹನವನ್ನು ನಿಧಾನವಾಗಿ ಚಲಾಯಿಸಬೇಕು. ಅತಿಯಾದ ವೇಗದಲ್ಲಿ ವಾಹನ ಚಲಾಯಿಸುವುದರಿಂದ ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರಿಗೂ ಅಪಾಯ ಉಂಟಾಗುತ್ತದೆ. ಪೋಷಕರು ತಮ್ಮ ಮಕ್ಕಳಿಗೆ 18 ವರ್ಷಗಳು ಆದ ನಂತರ ವಾಹನಗಳನ್ನು ನೀಡಿ ಎಂದು ಹೇಳಿದರು.
ಪ್ರಾದೇಶಿಕ ಸಾರಿಗೆ ಅಧಿಕಾರಿ ಹೇಮಾವತಿ ಮಾತನಾಡಿ ರಸ್ತೆಯ ಅಪಘಾತಗಳನ್ನ ಕಡಿಮೆ ಮಾಡುವ ಉದ್ದೇಶದಿಂದ ಎಲ್ಲಾ ನಾಗರಿಕರಿಗೂ ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳಿಗು ಅರಿವನ್ನ ಮೂಡಿಸಲು 37ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚಾರಣೆ ಕಾರ್ಯಕ್ರಮವನ್ನ ಅಯೋಜನೆ ಮಾಡಲಾಗಿದೆ ಎಂದರು.
ಸಾರ್ವಜನಿಕರು ಕಾನೂನು ಉಲ್ಲಂಘನೆ ಮಾಡುವುದರಿಂದ ಹೆಚ್ಚು ಅಪಘಾತಗಳು ಉಂಟಾಗುತ್ತಿವೆ ಲೈಸೆನ್ಸ್ ಪಡೆದವರು ಸಹ ಕಾನೂನು ಉಲ್ಲಂಘನೆ ಮಾಡುವುದರಿಂದ ಹೆಚ್ಚು ಅಪಘಾತಗಳು ಸಂಭಾವಿಸುತ್ತಿವೆ. ಸಾರ್ವಜನಿಕರು ವಾಹನವನ್ನು ಚಲಾಯಿಸುವಾಗ ದ್ವಿಚಕ್ರ ವಾಹನ ಸಾವರಾರು ಹೆಲ್ಮೆಟ್ ಅನ್ನು ಧರಿಸುವುದು ಮತ್ತು ನಾಲ್ಕು ಚಕ್ರ ವಾಹನಗಳು ಸೀಟ್ ಬೆಲ್ಟ್ ಅನ್ನು ಧರಿಸಬೇಕು ಹಾಗೂ ಕಾನೂನು ಉಲ್ಲಂಘನೆಯಾಗದಂತೆ ಸಿಗ್ನೇಲ್ ಗಳಲ್ಲಿ ಚಿಹ್ನೆಗಳನ್ನು ಅಳವಡಿಸಲಾಗಿದೆ ಅದರಂತೆ ಸಾರ್ವಜನಿಕರು ವಾಹನ ಚಲಿಸಬೇಕು ಇಲ್ಲವಾದಲ್ಲಿ ದಂಡವನ್ನು ವಿಧಿಸಲಾಗುವುದು ಆದ್ದರಿಂದ ಜಾಗೃತವಾಗಿ ವಾಹನವನ್ನು ಚಲಾಯಿಸಿ ಎಂದು ಹೇಳಿದರು.
ನಂತರ ರಸ್ತೆ ಸಂಚಾರಿ ನಿಯಮಗಳನ್ನು ಉಲ್ಲಂಘಿಸದಂತೆ ಪ್ರಮಾಣವಚನ ಬೋಧಿಸಿ. ಪ್ರಾದೇಶಿಕ ಸಾರಿಗೆ ಕಚೇರಿಯ ಆವರಣದಲ್ಲಿ ಸಸಿಗಳನ್ನು ನೀಡಲಾಯಿತು.
ಕಾರ್ಯಕ್ರಮದಲ್ಲಿ ಪ್ರಾದೇಶಿಕ ಸಾರಿಗೆ ಇಲಾಖೆಯ ಮೋಟಾರ್ ವಾಹನ ಅಧಿಕ್ಷಕರುಗಳಾದ ಚಿಕ್ಕ ಮಾದೇಗೌಡ, ಅಶೋಕ್, ಪ್ರಾದೇಶಿಕ ಸಾರಿಗೆ ಇಲಾಖೆಯ ನಿವೃತ್ತ ಅಧೀಕ್ಷಕರಾದ ಪ್ರಸಾದ್ ಮಂಗಲ ಯೋಗೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
The post ನೆಮ್ಮದಿಯಿಂದ ಜೀವಿಸಲು ಪ್ರತಿಯೊಬ್ಬರಿಗೂ ಸಾಂವಿಧಾನಿಕ ಹಕ್ಕುಗಳಿವೆ : ಆನಂದ್ appeared first on nudikarnataka.
Previous Article
ಸುದೀರ್ಘ ಅವಧಿಗೆ ಸಿಎಂ ದಾಖಲೆ: ಜನರ ಆಶೀರ್ವಾದಿಂದ ಸಾಧ್ಯ ಎಂದ ಸಿಎಂ ಸಿದ್ದರಾಮಯ್ಯ
Next Article
ಮಂಡ್ಯ | ಫೆಬ್ರವರಿಯಲ್ಲಿ ಸರ್ವಧರ್ಮ ಮಾನವ ಸಮ್ಮೇಳನ