Search

    Language Settings
    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    -1

    ಹೈಕಮಾಂಡ್​​ನಿಂದ ಡಿಕೆಶಿಗೆ ಸಿಕ್ಕೇಬಿಡ್ತಾ ಗುಡ್​ನ್ಯೂಸ್​​? ಸಿಎಂ ಸಿದ್ದರಾಮಯ್ಯ ಕಥೆಯೇನು?

    1 day ago

    ಬೆಂಗಳೂರು: ಎರಡೂವರೆ ವರ್ಷ.. ಒಂಟಿ ಹರಕೆ.. ಅದೊಂದೆ ತಪಸ್ಸು.. ನಿತ್ಯವೂ ಅದೇ ಮಂತ್ರ.. ಒಂದೇ ಕನವರಿಕೆ.. ಇದು ಕನಕಪುರದ ರಣಕಲಿ ಬಂಡೆ ಮನಸ್ಸಿನ ಹೊಯ್ದಾಟದಲ್ಲಿ ಕಂಡ ಪ್ರತಿಫಲನದ ಬೆಳಕು.. ಅಂದ್ಹಾಗೆ ಡೆಲ್ಲಿಯಲ್ಲಿ ಲಂಗರು ಹಾಕಿರುವ ಡಿಕೆಶಿಗೆ ಮನದ ಒಲವಿನ ಪೂಜಾಫಲ ಫಲಿಸಿದಂತೆ ಕಾಣ್ತಿದೆ.. ಫಲಾಫಲ ಏನು ಅನ್ನೋದು ಡಿಕೆಶಿ ಬಾಯ್ಬಿಡ್ತಿಲ್ಲವಾದ್ರೂ ಮುಖವೇ ಮನಸ್ಸಿನ ಕನ್ನಡಿ ಅಲ್ವಾ? ಅದು ಸಂಭ್ರಮದ ರೂಪದಲ್ಲಿ ಕಾಣಿಸ್ತಿದೆ.. ಆದ್ರೆ, ಸಿಎಂ ಕ್ಯಾಂಪ್​ ಮಾತ್ರ ಪಂಚವರ್ಷದ ಜಪ-ತಪದಲ್ಲಿ ನಿರತವಾಗಿದೆ. ಕಾಳಗ.. ರಾಜ್ಯ ರಾಜಕೀಯದಲ್ಲಿ ಇದು ಮುಗಿಯದ ಕಾಳಗ.. ಅಂತ್ಯಗಾಣದ ಯುದ್ಧ.. ಕುರ್ಚಿ ಕಾಳಗದಲ್ಲಿ ಕನಕಪುರ ಬಂಡೆ ಡೆಲ್ಲಿಯಲ್ಲಿ ಸಂಕ್ರಾಂತಿಯ ಶಕ್ತಿ ಪ್ರದರ್ಶನಕ್ಕೆ ನಿಂತಿದ್ದಾರೆ.. ಈವರೆಗೆ ಬೇವಿನ ಬೇಗುದಿಯಲ್ಲಿ ಒದ್ದಾಡಿದ ಕಟ್ಟಪ್ಪ, ನವ ಸಂವತ್ಸರ ಯುಗಾದಿಗೆ ಬೆಲ್ಲದ ಸಿಹಿಯ ನಿರೀಕ್ಷೆಯಲ್ಲಿದ್ದಂತಿದೆ.. ಹೈಕಮಾಂಡ್​​​ ಪಕ್ಕದಲ್ಲಿ ಕೂತು ಎದ್ದುಬಂದ ಡಿಕೆಶಿ ಮೊಗದಲ್ಲಿ ಮಂದಹಾಸ, ಕ್ಷಾತ್ರ ತೇಜಸ್ಸು ಇಣುಕ್ತಿದೆ.. ಹೈಕಮಾಂಡ್​ ಲೆವೆಲ್​​ನಲ್ಲಿ ಡಿಕೆಶಿಗೆ ಸಿಕ್ಕೇ ಬಿಡ್ತಾ ಗುಡ್​​​ನ್ಯೂಸ್​​? ಕರ್ನಾಟಕದಲ್ಲಿ ಸಿಂಹಾಸನ ಸಂಘರ್ಷ ಮಕರ ಸಂಕ್ರಮಣಕ್ಕೂ ಕಾಲಿಟ್ಟಿದೆ.. ಜಲವಾಸಿ ಮಕರ, ರಣ ಬೇಟೆಗಾರ.. ಸಿಕ್ಕ ಬೇಟೆಯನ್ನ ಹುಸಿ ಹೋಗದ ಹಾಗೇ ಸಮರ ಗೆಲ್ಲುವ ತಾಕತ್ತು.. ಈಗ ಕನಕಪುರದ ರಣಕಲಿ ಆದಿ ಅಂ​ತ್ಯದ ಯುದ್ಧಕ್ಕೆ ಶಂಕನಾದ ಮೊಳಗಿಸಿದ್ದಾರೆ.. ಹೈಕಮಾಂಡ್​ ಲೆವೆಲ್​​ನಲ್ಲಿ ಡಿಕೆಶಿಗೆ ಖುಷಿ ಸುದ್ದಿ ಸಿಕ್ಕಂತೆ ಕಾಣ್ತಿದೆ.. ನಗು ನಗುತ್ತಲೇ ಸಭೆ ಮುಗಿಸಿ ಹೊರಬಂದ ಡಿಕೆ, ಪ್ರತಿದಿನವೂ ಒಳ್ಳೇಯದು ಅಂತ ಫಿಲಾಸಫರ್​​ ಆಗಿದ್ದಾರೆ.. ರಾಹುಲ್​ ಗಾಂಧಿ ಭೇಟಿಯ ಗುಟ್ಟನ್ನ ಡಿಕೆಶಿ ಮತ್ತಷ್ಟು ರಹಸ್ಯವಾಗಿಟ್ರು.. ಅಲ್ಲಿ ಗ್ರಹಗತಿ ಬದಲಾಗುವ ಮುನ್ಸೂಚನೆ ಅರಿತಿದ್ದ ಸಿದ್ದು, ತಮ್ಮ ಆಪ್ತ ಜಾರ್ಜ್​​ ಮೂಲಕ ಸಂದೇಶ ರವಾನಿಸಿದ್ದಾರೆ.. ಒಂದ್ಕಡೆ ಖರ್ಗೆ ಭೇಟಿಯಾಗಿ ಡಿಕೆಶಿ ಕುರ್ಚಿ ಪಾಲಿಟಿಕ್ಸ್​ನಲ್ಲಿ ಮುಳುಗಿದ್ರೆ, ರಾಹುಲ್ ಗಾಂಧಿಗೆ ಜಾರ್ಜ್​​ ರಿಪೋರ್ಟ್​​ ಕೊಟ್ಟಿದ್ದಾರೆ.. ಆದ್ರೆ, ರಾಹುಲ್​​ ಜೊತೆ ಡಿಕೆಶಿಗೆ ಒನ್ ಟು ಒನ್ ಸಭೆಗೆ ಸಮಯ ಸಾಕಾಗಿಲ್ಲ ಅನ್ನೋ ಮಾಹಿತಿ ಸಿಕ್ಕಿದೆ. ‘ಕುರ್ಚಿ’ ಗೊಂದಲದಿಂದ ಪಕ್ಷಕ್ಕೆ ಡ್ಯಾಮೇಜ್​ ಅಂದ್ರು ಸಾಹುಕಾರ್​​​! ಕುರ್ಚಿ ಕಿತ್ತಾಟ ರಾಜ್ಯದಲ್ಲಿ ನೆಗೆಟಿವ್​ ಇಮೇಜ್​​ ಬ್ಯುಲ್ಡ್​​ ಆಗ್ತಿದೆ.. ಸಚಿವ ಸತೀಶ್​​ ಇದೇ ವಿಚಾರ ಪ್ರಸ್ತಾಪಿಸ್ತಿದ್ದಾರೆ.. ಸರ್ಕಾರದ ಮೇಲೆ ಡ್ಯಾಮೇಜ್ ಆಗ್ತಿರೋದನ್ನ ಸಾಹುಕಾರ್​​​ ಒಪ್ಪುತ್ತಿದ್ದಾರೆ.. ಆದ್ರೆ ಜಮೀರ್​​ಗೆ ನಿತ್ಯ ರಂಪಾಟವು ರೇಜಿಗೆ ಹುಟ್ಟಿಸಿದೆ.. ಬೀದಿಗೆ ಹೋಗೋ ದಾಸಯ್ಯ ಆದ್ರೂ ಸಿಎಂ ಆಗ್ಲಿ ಅಂತ ಹುಬ್ಬಳ್ಳಿಯಲ್ಲಿ ರೊಚ್ಚಿಗೆದ್ದಂತೆ ಕಾಣಿಸ್ತು.. ಒಟ್ಟಾರೆ, ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ-ಡಿ.ಕೆ.ಶಿವಕುಮಾರ್ ನಡುವಿನ ಸಿಂಹಾಸನ ಸಮರ, ಸಂಕ್ರಾಂತಿ ಬಳಿಕ ಪಥ ಬದಲಿಸ್ತಿದ್ದಂತಿ.. ಸಂಘರ್ಷದ ಭವಿಷ್ಯವಾಣಿ ಹೊಸ ದಿಕ್ಕಿನ ಗ್ರಹಗತಿ ಹೇಳ್ತಿದೆ. ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
    Click here to Read More
    Previous Article
    ಇವತ್ತು IND vs NZ ಫೈನಲ್​ ಫೈಟ್.. ಗೆಲ್ಲೋದ್ಯಾರು..?
    Next Article
    ಪೌರಾಯುಕ್ತೆ ಮೇಲೆ ದರ್ಪ ಕೇಸ್​ಗೆ ಟ್ವಿಸ್ಟ್​​.. ರಾಜೀವ್ ಗೌಡ ವಿರುದ್ಧ ಕೋಟಿ ಕೋಟಿ ವಂಚನೆ ಆರೋಪ

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment