We use cookies to ensure you get the best experience on our website. By continuing to use our site, you accept our use of cookies,
Privacy Policy,
and
Terms of Service.
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಮೇಷ
ಹಣ ಗಳಿಸುವ ಹೊಸ ಮೂಲಕ್ಕಾಗಿ ಶೋಧನೆ ನಡೆಸುತ್ತೀರಿ
ಯಾರನ್ನು ನಂಬಿ ಮೋಸ ಹೋಗಬಾರದು
ವಿನಾಕಾರಣ ಬೇರೆಯವರೊಂದಿಗೆ ವಾಗ್ವಾದ ಮಾಡಬೇಡಿ
ಹಣದ ಅವಶ್ಯಕತೆ ಇದೆ ಅಂತ ದಾರಿ ತಪ್ಪಿ ನಡೆಯುವ ವಾತಾವರಣ ಸೃಷ್ಟಿಯಾಗಬಹುದು ಎಚ್ಚರಿಕೆ
ವಿದ್ಯಾರ್ಥಿಗಳು ಉನ್ನತ ಶಿಕ್ಷಣದಲ್ಲಿ ಪ್ರವೇಶ ಪಡೆಯಲು ಅವಕಾಶವಿರುತ್ತದೆ
ವಿವಾಹಿತರಿಗೆ ಉತ್ತಮವಾದ ಫಲವನ್ನು ಕೊಡುವ ದಿನ
ತಂದೆಯವರ ಸೇವೆ ಮಾಡಿ
ವೃಷಭ
ಅವಿವಾಹಿತರಿಗೆ ಒಳ್ಳೆಯ ದಿನವಲ್ಲ ತುಂಬಾ ಬೇಸರ ಆಗುವ ದಿನ
ದೈಹಿಕವಾಗಿ ತುಂಬಾ ಪ್ರಯಾಸವಾಗಲಿದೆ ವಿಶ್ರಾಂತಿ ಪಡೆಯಿರಿ
ಪ್ರಯಾಣದ ಸಮಯದಲ್ಲಿ ಸಮಸ್ಯೆ ಉಂಟಾಗಲಿದೆ ಎಚ್ಚರವಹಿಸಿ
ವ್ಯಾವಹಾರಿಕ ದೋಷದಿಂದ ಆರ್ಥಿಕ ನಷ್ಟ ಅನುಭವಿಸುತ್ತೀರಿ
ಅದೃಷ್ಟದ ಕೊರತೆಯಿಂದ ಕೆಲವು ದುಷ್ಪರಿಣಾಮಗಳು ಬೀರಬಹುದು
ತಾಳ್ಮೆ ಮುಖ್ಯ, ತಾಳ್ಮೆಯನ್ನು ಕಳೆದುಕೊಂಡಾಗ ಕೆಲಸಗಳಲ್ಲಿ ಹಿನ್ನಡೆಯಾಗುವ ಸಾಧ್ಯತೆ ಇದೆ
ಶ್ರೀಕೃಷ್ಣನನ್ನು ಅರ್ಚನೆ ಮಾಡಿ
ಮಿಥುನ
ಕಾರ್ಯಕ್ಷೇತ್ರದಲ್ಲಿ ಉನ್ನತ ಸ್ಥಾನ ದೊರೆಯಲಿದೆ
ಆಧ್ಯಾತ್ಮಿಕ ವಿಚಾರದಲ್ಲಿ ಹೆಚ್ಚಿನ ಮನಸ್ಸನ್ನು ಕೊಡುತ್ತೀರಿ
ನಿಮ್ಮ ಮಾತಿನಿಂದ ಎಲ್ಲರನ್ನೂ ನಿಮ್ಮ ಕಡೆ ಆಕರ್ಷಣೆ ಮಾಡುವ ಶಕ್ತಿ ನಿಮಗಿದೆ
ಆಸಕ್ತಿ, ಉತ್ಸಾಹಗಳು ಹೆಚ್ಚಾಗಿ ದಾಂಪತ್ಯದಲ್ಲಿ ಬೇಸರವಾಗಲಿದೆ
ವೈವಾಹಿಕ ಜೀವನದಲ್ಲಿ ಹೊಂದಾಣಿಕೆಯ ಕೊರತೆ ಇರುತ್ತದೆ
ಕುಟುಂಬ ಸದಸ್ಯರು ಹಾಗೂ ಬಂಧುಗಳ ಜೊತೆ ಹಲವು ವಿಷಯಗಳನ್ನು ಚರ್ಚೆ ಮಾಡುತ್ತೀರಿ
ಧ್ಯಾನಕ್ಕೆ ಶರಣು ಹೋಗಿ
ಕಟಕ
ಸಣ್ಣ-ಪುಟ್ಟ ಸಮಸ್ಯೆಗಳು ದೂರವಾಗುವ ದಿನ
ವಿದೇಶದಿಂದ ಉದ್ಯೋಗಾವಕಾಶಗಳು ಸಿಗುವ ಸಾಧ್ಯತೆಗಳಿವೆ
ನಿಮ್ಮ ಆರ್ಥಿಕ ಸ್ಥಿತಿ ಅನುಕೂಲವಾಗುತ್ತದೆ
ಅಧೀನ ಉದ್ಯೋಗಸ್ಥರು ನಿಮ್ಮೊಂದಿಗೆ ಸಂತೋಷದಿಂದ ಇರುತ್ತಾರೆ
ಮನೆಯಲ್ಲಿ ಚಿಕ್ಕಮಕ್ಕಳಿಗೆ ತೊಂದರೆಯಾಗಲಿದೆ ಜಾಗ್ರತೆವಹಿಸಿ
ನಿಮ್ಮ ಧೈರ್ಯ ಆತ್ಮವಿಶ್ವಾಸ ಹೆಚ್ಚಾಗುತ್ತದೆ
ಗಣಪತಿಯ ಅನುಗ್ರಹ ಪಡೆದುಕೊಳ್ಳಿ
ಸಿಂಹ
ನಿಮ್ಮ ಕಾರ್ಯಕ್ಷೇತ್ರದಲ್ಲಿ ಯಶಸ್ಸು ಸಿಗಲಿದೆ
ಇಂದು ಮಕ್ಕಳೊಂದಿಗೆ ಕಾಲ ಕಳೆಯುತ್ತೀರಿ
ಮಾರ್ಕೆಟಿಂಗ್ ನಲ್ಲಿ ಕೆಲಸ ಮಾಡುವವರಿಗೆ ಈ ದಿನ ಜನಪ್ರಿಯತೆ ಸಿಗುವಂತ ದಿವಸ
ಕುಟುಂಬ ಸಾಮರಸ್ಯ ಚೆನ್ನಾಗಿರುತ್ತದೆ
ಕಲೆಗಳನ್ನು ನೋಡಿ ಆನಂದಿಸುತ್ತೀರಿ
ವಿದ್ಯಾರ್ಥಿಗಳಿಗೆ ಓದಿನ ವಿಚಾರದಲ್ಲಿ ಬೇಸರವಾಗಲಿದೆ
ನವಗ್ರಹರನ್ನು ಪ್ರಾರ್ಥಿಸಿ
ಕನ್ಯಾ
ಸ್ನೇಹಿತರ ಬೆಂಬಲವಿದೆ ಆದರೆ ನಿಮ್ಮ ತೀರ್ಮಾನ ಸರಿ ಇರಬೇಕು
ಶಿಸ್ತು ಬದ್ಧವಾದ ನಡವಳಿಕೆಯಿಂದ ಜಯವಾಗಲಿದೆ
ಮನೆಯಲ್ಲಿ ಉತ್ಸಾಹದ ವಾತಾವರಣವಿರುತ್ತದೆ
ವೆಚ್ಚಗಳನ್ನು ನಿಯಂತ್ರಿಸಲು ಬೇರೆ ಬೇರೆ ಕೆಲಸಗಳನ್ನು ಮಾಡಬೇಕಾಗುತ್ತದೆ
ವ್ಯವಹಾರಕ್ಕೆ ಸಂಬಂಧಿಸಿದಂತೆ ಮಾತುಕತೆ, ಸಭೆ ನಡೆಯಬಹುದು
ಉದ್ಯಮಿಗಳು ಮಾತ್ರ ದೊಡ್ಡ ಪ್ರಮಾಣದಲ್ಲಿ ಹೂಡಿಕೆ ಮಾಡಬಾರದು
ಮಹಾವಿಷ್ಣುವನ್ನು ಪ್ರಾರ್ಥಿಸಿ
ತುಲಾ
ಉದ್ಯೋಗದಲ್ಲಿ ಪ್ರಗತಿ ಏನೋ ಸಾಧಿಸಿದ ಆತ್ಮತೃಪ್ತಿ ಸಿಗಲಿದೆ
ಮನೆಯಲ್ಲಿ ವಾತಾವರಣ ಚೆನ್ನಾಗಿರುವುದಿಲ್ಲ
ಸಣ್ಣ-ಪುಟ್ಟ ಕನಸುಗಳು ನನಸಾಗುವ ಸಮಯ
ತಾಯಿ,ಅಕ್ಕ,ಹೆಂಡತಿ ಯಾರಿಗಾದರೂ ಅನಾರೋಗ್ಯದ ಸೂಚನೆ ಇರುವುದರಿಂದ ಬೇಸರದ ದಿನ
ಶುಭ ಸಮಾರಂಭಗಳಲ್ಲಿ ಭಾಗವಹಿಸುವ ಅವಕಾಶವಿದೆ
ವಿದ್ಯಾರ್ಥಿಗಳಿಗೆ ಈ ದಿನ ಫಲಪ್ರದಾಯಕವಾಗಿರುತ್ತದೆ
ಧನ್ವಂತರಿ ದೇವತೆಯನ್ನು ಪ್ರಾರ್ಥಿಸಿ
ವೃಶ್ಚಿಕ
ಬೇರೆಯವರೊಂದಿಗೆ ಜಗಳ ಮಾಡುವ ಬದಲು ವಿಷಯ ಅರ್ಥಮಾಡಿಕೊಳ್ಳಬೇಕು
ಕೆಲವರು ನಿಮಗೆ ನಂಬಿಕೆ ದ್ರೋಹ ಮಾಡಬಹುದು ಹುಷಾರಾಗಿರಿ
ಗುಪ್ತಶತ್ರುಗಳು ನಿಮಗೆ ತೊಂದರೆ ಮಾಡಲು ಕಾಯುತ್ತಿರುತ್ತಾರೆ ಜಾಗ್ರತೆ
ಬೇರೆಯವರಿಗೆ ಸಹಾಯ ಮಾಡಲು ಮುಂದಾಗುತ್ತೀರಿ ಆದರೆ
ನಿಮ್ಮ ಸ್ವಭಾವ ವರ್ತನೆಯಿಂದ ಸಂಬಂಧಿಕರಿಗೆ ಕೋಪ ಬರಬಹುದು
ಸಾಲ ಮಾಡುವ ಪರಿಸ್ಥಿತಿ ಅಥವಾ ಹಣದ ನಷ್ಟವಾಗಬಹುದು ಎಚ್ಚರ
ಗಾಯತ್ರಿ ದೇವಿಯನ್ನು ಉಪಾಸನೆ ಮಾಡಿ
ಧನಸ್ಸು
ನಿಮ್ಮ ಬಗ್ಗೆ ನೀವೇ ಹೇಳಿಕೊಳ್ಳುವುದನ್ನು ನಿಲ್ಲಿಸಬೇಕಾಗುತ್ತದೆ
ಇಂದು ಆರೋಗ್ಯ ಸುಧಾರಣೆಯಾಗಲಿದೆ
ಉದ್ದೇಶ ಒಳಿತಾಗಿಟ್ಟುಕೊಂಡು ಪ್ರಯತ್ನ ಪಟ್ಟರೆ ಖಂಡಿತ ಶುಭವಾಗುವ ದಿನ
ನಿಮ್ಮ ಆಸೆಗಳನ್ನು ಈಡೇರಿಸಿಕೊಳ್ಳಲು ಸುಸಮಯ
ಸಾಮಾಜಿಕ ಕಾರ್ಯಗಳಲ್ಲಿ ಭಾಗಿಯಾಗಲು ಅವಕಾಶವಿದೆ
ಹೊಸ ಕೆಲಸವನ್ನು ಪ್ರಾರಂಭಿಸಲು ಇಂದು ಉತ್ತಮ ದಿನ
ಸ್ವಲ್ಪ ದೂರ ಪ್ರಯಾಣದ ಯೋಗವಿದೆ
ನಿಮ್ಮ ಗುರುಗಳ ಆಶೀರ್ವಾದ ಪಡೆಯಿರಿ
ಮಕರ
ನಿಮ್ಮ ಕೆಲಸದಲ್ಲಿ ಕಾರ್ಯ ಪ್ರವುತ್ತರಾದರೆ ಕೆಲಸದಲ್ಲಿ ಜಯಶೀಲರಾಗುತ್ತೀರಿ
ಕಾನೂನಿನ ವಿಷಯಗಳಲ್ಲಿ ಬಹಳ ಗೊಂದಲವಿರುತ್ತದೆ
ಅನುಭವಿಗಳ ಭೇಟಿ ಮತ್ತು ಸಲಹೆ ಸಿಕ್ಕಿದರೂ ಕೂಡ ಪ್ರಯೋಜನವಿಲ್ಲ
ನೀವು ಉಪಯೋಗಿಸುವ ವಾಹನದಲ್ಲಿ ಸಮಸ್ಯೆ ಕಾಣಬಹುದು ಎಚ್ಚರ ಇರಲಿ
ಹಣದ ಕೊರತೆಯಿಂದ ನೀವು ಮಾಡಬೇಕಾದ ಕೆಲಸ ಅರ್ಧಕ್ಕೆ ನಿಲ್ಲುವ ಸಾಧ್ಯತೆ ಇದೆ
ಹೊಸ ಹೊಸ ವಿಚಾರ ತಿಳಿಯಲು ಉತ್ಸುಕರಾಗಿರುತ್ತೀರಿ
ದುರ್ಗಾರಾಧನೆ ಮಾಡಿ
ಕುಂಭ
ಸರ್ಕಾರಿ ನೌಕರರಿಗೆ ಒತ್ತಡ ಕಡಿಮೆ ಆದರೆ ಆಲಸ್ಯ ಬೇಡ
ಸಾಹಿತ್ಯ ತತ್ವಶಾಸ್ತ್ರಗಳ ಕಡೆ ಮನಸ್ಸು ಹರಿಸಬಹುದು
ವ್ಯಾಪಾರ ವ್ಯವಹಾರ ಅಧ್ಯಯನ ಸಂಬಂಧಿಸಿದ ವಿಚಾರಗಳಿಗೆ ಶುಭದಿನ
ಇಂದು ಬಹಳ ಉತ್ತಮವಾದ ದಿನ
ಆತ್ಮೀಯರೊಂದಿಗೆ ಉತ್ತಮ ಸಮಯ ಕಳೆಯಲು ಅವಕಾಶಗಳಿವೆ
ಹಿಂದೆ ಮಾಡಿದ ವ್ಯಾಪಾರ, ವ್ಯವಹಾರದ ನಷ್ಟಗಳಿದ್ದರೆ ಈ ದಿನ ಸರಿದೂಗಿಸಬಹುದು
ರೋಗಿಗಳಿಗೆ ಹಣ್ಣನ್ನು ನೀಡಿ
ಮೀನ
ಕೆಲಸ ಮಾಡುವ ಸ್ಥಳದಲ್ಲಿ ಹೆಚ್ಚಿನ ಸವಾಲುಗಳನ್ನು ಎದುರಿಸಬಹುದು
ಆತ್ಮವಿಶ್ವಾಸ ಹೆಚ್ಚುತ್ತದೆ ಆದರೆ ತುಂಬಾ ತಾಳ್ಮೆ ಇರಲಿ
ಮಾನಸಿಕವಾಗಿ ತುಂಬಾ ತೊಳಲಾಟ ನೋವು ಅನುಭವಿಸುವ ಸಾಧ್ಯತೆ
ದಿನಪೂರ್ತಿ ಕಷ್ಟಪಟ್ಟು ಕೆಲಸ ಮಾಡಿ ಸಂಜೆ ವೇಳೆಗೆ ವಿಶ್ರಾಂತಿ ಪಡೆಯಿರಿ
ಈ ದಿನ ಕೆಲಸ ಒತ್ತಡದಿಂದ ಪ್ರಾರಂಭವಾಗುವ ಸಾಧ್ಯತೆ
ಕುಟುಂಬದ ಕೆಲಸಗಳಿಗೆ ಹೆಚ್ಚು ಒತ್ತಡಗಳು ಬರುವ ಸಾಧ್ಯತೆಯಿದೆ
ಅನಾರೊಗ್ಯ ಪೀಡಿತರಿಗೆ ಆರೋಗ್ಯ ಸುಧಾರಿಸುವ ಸಾಧ್ಯತೆ
ಸುಬ್ರಹ್ಮಣ್ಯನನ್ನು ಆರಾಧನೆ ಮಾಡಿ
ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ