ಮಲಪ್ಪುರಂನಲ್ಲಿ ದುರಂತ: ವ್ಯೂಪಾಯಿಂಟ್‌ನಲ್ಲಿ ಸಿಡಿಲು ಬಡಿದು ನಾಲ್ವರು ವಿದ್ಯಾರ್ಥಿಗಳು ಸಾವು

5 months ago

43

0

ಹೊಸ ದಿಗಂತ ಡಿಜಿಟಲ್ ಡೆಸ್ಕ್: ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಗುಡುಗು ಸಿಡಿಲಿನ ಸಹಿತ ಭಾರೀ ಮಳೆಯಾಗುತ್ತಿದೆ. ಜಿಲ್ಲೆಯ ಮಂಕಡದ ವ್ಯೂ ಪಾಯಿಂಟ್ ನಲ್ಲಿ ಸಿಡಿಲು ಬಡಿದು ನಾಲ್ವರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿರುವ ಘಟನೆ ನಡೆದಿದೆ. ಮೃತರನ್ನು ರಹೀಸ್(20), ಫಹಾದ್(19), ಬಹಾಸ್(18) ಮತ್ತು ಜಿಯಾದ್(18) ಎಂದು ಗುರುತಿಸಲಾಗಿದೆ. ಇಂದು ಸಂಜೆ ಪಂತಲ್ಲೂರು ಬೆಟ್ಟದಲ್ಲಿ ಈ ಭೀಕರ ದುರಂತ ಸಂಭವಿಸಿದ್ದು, ಒಟ್ಟು ಏಳು ವಿದ್ಯಾರ್ಥಿಗಳಿಗೆ ಸಿಡಿಲು ಬಡಿದಿದೆ. ಮೂವರು ವಿದ್ಯಾರ್ಥಿಗಳು ಮಂಜೇರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. The post ಮಲಪ್ಪುರಂನಲ್ಲಿ ದುರಂತ: ವ್ಯೂಪಾಯಿಂಟ್‌ನಲ್ಲಿ ಸಿಡಿಲು ಬಡಿದು ನಾಲ್ವರು ವಿದ್ಯಾರ್ಥಿಗಳು ಸಾವು appeared first on ONLINE. ಈ ಘಟನೆ ಕರ್ನಾಟಕದಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳ ನಡುವಿನ ಒಂದು ಪ್ರಮುಖ ಬೆಳವಣಿಗೆಯಾಗಿದೆ. ಇಂತಹ ಘಟನೆಗಳು ಸ್ಥಳೀಯ ಭದ್ರತಾ ವ್ಯವಸ್ಥೆಗಳ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತವೆ.
Click here to Read More
Previous Article
ಗುಡ್ ನ್ಯೂಸ್ : ಯಶವಂತಪುರ-ತಾಳಗುಪ್ಪ ವಿಶೇಷ ರೈಲು ಕಾಯಂ: ವೇಳಾಪಟ್ಟಿ ಗಮನಿಸಿ!
Next Article
ಗಾಂಜಾ ಮಾರಾಟ ಮಾಡುತ್ತಿದ್ದ ಅಡ್ಡೆಗೆ ಸಿಸಿಬಿ ಪೊಲೀಸರ ದಾಳಿ: ಓರ್ವ ವ್ಯಕ್ತಿ ಬಂಧನ

Related ಅಪರಾಧ ಸುದ್ದಿ Updates:

Are you sure? You want to delete this comment..! Remove Cancel

Comments (0)

    Leave a comment