Filters

Channels
Topics
Other Filters

KSOU: ರಾಷ್ಟ್ರೀಯ ಸಮ್ಮೇಳನಕ್ಕೆ ಸಂಶೋಧನಾ ಪ್ರಬಂಧಗಳ ಆಹ್ವಾನ

ಮೈಸೂರು,ಅಕ್ಟೋಬರ್,31,2026 (www.justkannada.in):  ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ (KSOU), ಮೈಸೂರಿನ ಮ್ಯಾನೇಜ್ಮೆಂಟ್ ಅಧ್ಯಯನ ಮತ್ತು ಸಂಶೋಧನಾ ವಿಭಾಗವು “ಸಮಕಾಲೀನ ನಿರ್ವಹಣೆಯಲ್ಲಿನ ಸಮಸ್ಯೆಗಳು: ನಾವೀನ್ಯತೆ, ಸುಸ್ಥಿರತೆ ಮತ್ತು ಡಿಜಿಟಲ್ ರೂಪಾಂತರ” ಎಂಬ ವಿಷಯದ ಕುರಿತು ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನವನ್ನು (NCIM 2027) ಆಯೋಜಿಸಿದೆ. ಈ ಸಮ್ಮೇಳನಕ್ಕೆ ICSSR-SRC, ಹೈದರಾಬಾದ್ ಪ್ರಾಯೋಜಕತ್ವ ನೀಡಿದೆ.  2027ರ ಜನವರಿ 29 ಮತ್ತು 30 (ಶುಕ್ರವಾರ ಮತ್ತು ಶನಿವಾರ), ಸ್ಥಳ: KSOU ಆವರಣ, ಮುಕ್ತಗಂಗೋತ್ರಿ, ಮೈಸೂರು ಇಲ್ಲಿ ನಡೆಯಲಿದೆ. ಘನ ಉಪಸ್ಥಿತಿ: ಸಮ್ಮೇಳನದಲ್ಲಿ […]

ಕುಮಾರಸ್ವಾಮಿ ಊಸರವಳ್ಳಿ ರಾಜಕಾರಣ ಬಿಡಲಿ, ವೈಯಕ್ತಿಕ ಟೀಕೆ ನಿಲ್ಲಿಸಲಿ: ಸಚಿವ ಬಾಲಕೃಷ್ಣ

ಹೊಸದಿಗಂತ ವರದಿ ರಾಮನಗರ: ಕುಮಾರಸ್ವಾಮಿ ಮೊದಲು ಊಸರವಳ್ಳಿ ರಾಜಕಾರಣ ಮಾಡುವುದನ್ನು ಬಿಡಬೇಕು ಮತ್ತು ವೈಯಕ್ತಿಕ ವಿಚಾರಗಳನ್ನು ಮಾತನಾಡುವುದನ್ನು ನಿಲ್ಲಿಸಬೇಕು ಎಂದು ಸಚಿವ ಎಚ್.ಸಿ ಬಾಲಕೃಷ್ಣ ತಿಳಿಸಿದರು. ಮಾಜಿ ಸಿಎಂ ಸಿದ್ದರಾಮಯ್ಯ ಕುರಿತು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಮೃದು ಧೋರಣೆ ತೋರುತ್ತಿರುವ ವಿಚಾರದ ಕುರಿತು ಮಾಗಡಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಿತ್ಯ ಮಾಧ್ಯಮಗಳ ಮುಂದೆ ತೋರಿಸುತ್ತಿರುವ ಈ ಪ್ರಕರಣಗಳು ಕೊನೆಗೆ ಅವರ ಬುಡಕ್ಕೇ ಬರಲಿವೆ. ಸ್ವಲ್ಪ ದಿನ ಕಾದು ನೋಡಿ, ಎಲ್ಲವೂ ಗೊತ್ತಾಗಲಿದೆ ಎಂದು ತಿಳಿಸಿದರು. […] The post ಕುಮಾರಸ್ವಾಮಿ ಊಸರವಳ್ಳಿ ರಾಜಕಾರಣ ಬಿಡಲಿ, ವೈಯಕ್ತಿಕ ಟೀಕೆ ನಿಲ್ಲಿಸಲಿ: ಸಚಿವ ಬಾಲಕೃಷ್ಣ appeared first on ONLINE.

ರಾಷ್ಟ್ರಮಟ್ಟದ ಹ್ಯಾಕಥಾನ್: RV ವಿವಿಯ ವಿದ್ಯಾರ್ಥಿನಿಯರಿಗೆ ಪ್ರಥಮ ಬಹುಮಾನ

ಬೆಂಗಳೂರು, ಅಕ್ಟೋಬರ್,31,2026 (www.justkannada.in):  ರಾಜಾನುಕುಂಟೆಯ ಸಾಯಿ ವಿದ್ಯಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಅಕ್ಟೋಬರ್ 28 ಮತ್ತು 29ರಂದು ಆಯೋಜಿಸಲಾಗಿದ್ದ 24 ಗಂಟೆಗಳ ರಾಷ್ಟ್ರಮಟ್ಟದ ಹ್ಯಾಕಥಾನ್ HackFest 2026ರಲ್ಲಿ ಆರ್‌ ವಿ ವಿಶ್ವವಿದ್ಯಾಲಯದ ಬಿ.ಟೆಕ್ (ಆನರ್ಸ್) ದ್ವಿತೀಯ ವರ್ಷದ ವಿದ್ಯಾರ್ಥಿನಿಯರಾದ ಮೇಧಾ ಉಮೇಶ್ ಮತ್ತು ಸಾಯಿ ಯಶಸ್ವಿ ಕಂಚರ್ಲಾ ಅವರು **GreenTech & Impact* ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ. ಇವರು ಅಭಿವೃದ್ಧಿಪಡಿಸಿದ *ಕಾರ್ಬನ್ ಹೆಜ್ಜೆಗುರುತುಗಳ ಮೇಲ್ವಿಚಾರಣೆ ಮತ್ತು ಕಡಿತ ವ್ಯವಸ್ಥೆ (Carbon Footprint Tracking and Reduction […]

ನಾಳೆ ದೆಹಲಿಯಲ್ಲಿ ಬೃಹತ್ ರ‍್ಯಾಲಿ: ಬಿಗಿ ಭದ್ರತೆ, 200 ಸಿಸಿಟಿವಿ ಕ್ಯಾಮೆರಾ ಅಳವಡಿಕೆ!

ರಾಷ್ಟ್ರ ರಾಜಧಾನಿ ದೆಹಲಿಯ ರಾಮಲೀಲಾ ಮೈದಾನದಲ್ಲಿ ಇಂಡಿ ಒಕ್ಕೂಟ ಆಯೋಜಿಸಿರುವ ‘ವೋಟ್ ಬಚಾವೋ, ದೇಶ್ ಬಚಾವೋ’ ಬೃಹತ್ ರ‍್ಯಾಲಿಗೆ ಸಕಲ ಸಿದ್ಧತೆಗಳು ನಡೆದಿವೆ. ಈ ರ‍್ಯಾಲಿಯ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ಬಿಗಿ ಭದ್ರತಾ ವ್ಯವಸ್ಥೆ ಕೈಗೊಂಡಿದ್ದಾರೆ. ಲಕ್ಷಾಂತರ ಜನರು ಹಾಗೂ ವಿಪಕ್ಷಗಳ ಪ್ರಮುಖ ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿರುವುದರಿಂದ ಮೈದಾನ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪೊಲೀಸ್ ಕಟ್ಟೆಚ್ಚರ ವಹಿಸಲಾಗಿದೆ. ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿವೆ ಎಂಬ ಆರೋಪ, ಮತಗಳ್ಳತನ ಹಾಗೂ […] Source

ವಂಚನೆ ಪ್ರಕರಣ: ಶಿವಂ ಅಸೋಸಿಯೇಟ್ಸ್‌ಗೆ ಸೇರಿದ 427.16 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ

ಹೊಸದಿಗಂತ ವರದಿ ಬೆಳಗಾವಿ: ಬೆಳಗಾವಿಯ ಬಹುಕೋಟಿ ಹೂಡಿಕೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ.ಡಿ.) ಮಹತ್ವದ ಕಾರ್ಯಾಚರಣೆ ನಡೆಸಿದ್ದು, ಶಿವಂ ಅಸೋಸಿಯೇಟ್ಸ್ ಸಂಸ್ಥೆಯ ಮುಖ್ಯಸ್ಥ ಶಿವಾನಂದ ಸಿದ್ಧಪ್ಪ ನೀಲಣ್ಣವರ್ ಹಾಗೂ ಅವರ ಸಹಚರರಿಗೆ ಸೇರಿದ ಒಟ್ಟು 427.16 ಕೋಟಿ ಮೌಲ್ಯದ ಚರ ಮತ್ತು ಸ್ಥಿರಾಸ್ತಿಗಳನ್ನು ತಾತ್ಕಾಲಿಕವಾಗಿ ಜಪ್ತಿ ಮಾಡಲಾಗಿದೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ಅಡಿಯಲ್ಲಿ ಅ.30ರಂದು ಈ ಕ್ರಮ ಕೈಗೊಳ್ಳಲಾಗಿದೆ. ಜಪ್ತಿ ಮಾಡಿದ ಆಸ್ತಿಗಳಲ್ಲಿ ಸುಮಾರು 367.78 ಕೋಟಿ ಮೌಲ್ಯದ ನಿಶ್ಚಿತ […] The post ವಂಚನೆ ಪ್ರಕರಣ: ಶಿವಂ ಅಸೋಸಿಯೇಟ್ಸ್‌ಗೆ ಸೇರಿದ 427.16 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ appeared first on ONLINE.

ಕಾಂಗ್ರೆಸ್ ಕಾರ್ಯಕರ್ತರ ಬೆವರಿನ ಕಾಣಿಕೆಯಿಂದಲೇ ಇಂದಿರಾ ಭವನ ನಿರ್ಮಾಣವಾಗಲಿ: ಸಿಎಂ ಡಿ.ಕೆ ಶಿವಕುಮಾರ್

ಮಂಡ್ಯ, ಅಕ್ಟೋಬರ್,31,2026 (www.justkannada.in): “ಇಂದಿರಾ ಭವನ ಎನ್ನುವುದು ಕೇವಲ ಕಾಂಗ್ರೆಸ್ ಪಕ್ಷದ ಕಚೇರಿಯಾಗದೆ, ಜಿಲ್ಲೆಯ ಪ್ರತಿಯೊಬ್ಬ ಕಾರ್ಯಕರ್ತನ ಸ್ವಾಭಿಮಾನದ ಸಂಕೇತವಾಗಬೇಕು. ಊರಿನಲ್ಲಿ ದೇವಸ್ಥಾನ ನಿರ್ಮಿಸಲು ಮನೆಮನೆಗೆ ತೆರಳಿ ಚಂದಾ ಸಂಗ್ರಹಿಸುವಂತೆ, ಪ್ರತಿಯೊಬ್ಬ ಕಾರ್ಯಕರ್ತರೂ ತಮ್ಮ ಶಕ್ತ್ಯಾನುಸಾರ 100 ರೂಪಾಯಿಂದ ರಿಂದ 10 ಲಕ್ಷದವರೆಗೆ ಕಾಣಿಕೆ ನೀಡಿ ಈ ಭವನ ನಿರ್ಮಾಣದಲ್ಲಿ ಕೈಜೋಡಿಸಬೇಕು. ಆಗ ಮಾತ್ರ ಇದು ನಮ್ಮ ಭವನ, ನಮ್ಮ ಆಸ್ತಿ ಎಂಬ ಆತ್ಮೀಯತೆ ಮೂಡಲು ಸಾಧ್ಯ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಹೇಳಿದರು. […]

ಭಾರತೀಯ ವಾಯುಪಡೆಗೆ ನೂತನ ಸಾರಥಿ: ಮುಖ್ಯಸ್ಥರಾಗಿ ಅಶುತೋಷ್ ದೀಕ್ಷಿತ್ ಅಧಿಕಾರ ಸ್ವೀಕಾರ

ಭಾರತೀಯ ವಾಯುಪಡೆಯ (Indian Air Force) ನೂತನ ಮುಖ್ಯಸ್ಥರಾಗಿ ಏರ್ ಚೀಫ್ ಮಾರ್ಷಲ್ ಅಶುತೋಷ್ ದೀಕ್ಷಿತ್ ಅವರು ಶನಿವಾರ ಅಧಿಕಾರ ವಹಿಸಿಕೊಂಡಿದ್ದಾರೆ. ಸುಮಾರು ನಾಲ್ಕು ದಶಕಗಳ ಸುದೀರ್ಘ ಸೇವಾನುಭವ ಹೊಂದಿರುವ ದೀಕ್ಷಿತ್, ದೇಶದ ವಾಯು ರಕ್ಷಣಾ ವ್ಯವಸ್ಥೆಯಲ್ಲಿ ಮಹತ್ವದ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ. 43 ವರ್ಷಗಳ ಸುದೀರ್ಘ ಹಾಗೂ ವಿಶಿಷ್ಟ ಸೇವೆಯ ಬಳಿಕ ನಿವೃತ್ತರಾದ ಏರ್ ಚೀಫ್ ಮಾರ್ಷಲ್ ಎ.ಪಿ. ಸಿಂಗ್ ಅವರ ಸ್ಥಾನಕ್ಕೆ ಇದೀಗ ಅಶುತೋಷ್ ದೀಕ್ಷಿತ್ ನೇಮಕಗೊಂಡಿದ್ದಾರೆ. ‘ಆಪರೇಷನ್ ಸಿಂಧೂರ’ ಸೇರಿದಂತೆ ಹಲವು ಪ್ರಮುಖ ಸೇನಾ […] Source

ಸೈದಾಪುರ ಬಳಿ ಭೀಕರ ರಸ್ತೆ ಅಪಘಾತ: ಬೈಕ್ ಗೆ ಫಾರ್ಚುನರ್ ಕಾರು ಡಿಕ್ಕಿ; ಒಂದೇ ಕುಟುಂಬದ ಮೂವರು ಸಾ*ವು

ಹೊಸದಿಗಂತ ವರದಿ ಯಾದಗಿರಿ: ಯಾದಗಿರಿ ಜಿಲ್ಲೆಯ ಸೈದಾಪುರ ಪಟ್ಟಣದ ಹೊರವಲಯದ ರಾಷ್ಟ್ರೀಯ ಹೆದ್ದಾರಿಯ ಕರಿಬೆಟ್ಟ ಸಮೀಪ ಶುಕ್ರವಾರ ಸಂಜೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ದುರ್ಮರಣ ಹೊಂದಿದ್ದಾರೆ. ಮೃತರನ್ನು ಸೈದಾಪುರ ಗ್ರಾಮದ ತಿಮ್ಮಣ್ಣ (30), ಅವರ ಪತ್ನಿ ನಾಗಮ್ಮ (30) ಹಾಗೂ ತಾಯಿ ಬಸಲಿಂಗಮ್ಮ (60) ಎಂದು ಗುರುತಿಸಲಾಗಿದೆ. ಪಲ್ಸರ್ ಬೈಕ್‌ನಲ್ಲಿ ಕಣೇಕಲ್ ಗ್ರಾಮದಿಂದ ಸೈದಾಪುರಕ್ಕೆ ತೆರಳುತ್ತಿದ್ದ ವೇಳೆ ಕರಿಬೆಟ್ಟ ಸಮೀಪ ರಾಷ್ಟ್ರೀಯ ಹೆದ್ದಾರಿ ದಾಟಲು ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಯಾದಗಿರಿ ಕಡೆಯಿಂದ […] The post ಸೈದಾಪುರ ಬಳಿ ಭೀಕರ ರಸ್ತೆ ಅಪಘಾತ: ಬೈಕ್ ಗೆ ಫಾರ್ಚುನರ್ ಕಾರು ಡಿಕ್ಕಿ; ಒಂದೇ ಕುಟುಂಬದ ಮೂವರು ಸಾ*ವು appeared first on ONLINE.

ಸಂತೆಬೆನ್ನೂರು ಫೈಜ್ನಟ್ರಾಜ್ ಗೆ ಮುದ್ದಣ ಕಾವ್ಯ ಪ್ರಶಸ್ತಿ

ಸುದ್ದಿದಿನ,ದಾವಣಗೆರೆ:ಮೂಡುಬಿದರೆಯ ಕಾಂತಾವರ ಕನ್ನಡ ಸಂಘ ಪಠೇಲ್ ಪುನರೂರು ವಾಸುದೇವರಾವ್ ಟ್ರಸ್ಟ್ ವತಿಯಿಂದ ಪ್ರತಿವರ್ಷ’ ಮುದ್ದಣ ಕಾವ್ಯ ಪ್ರಶಸ್ತಿ ಗಾಗಿ’ ಏರ್ಪಡಿಸುವ ಕವನ ಸಂಕಲನಗಳ ಹಸ್ತಪ್ರತಿ ಸ್ಪರ್ಧೆಯಲ್ಲಿ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸಾಹಿತಿ ಸಂತೆಬೆನ್ನೂರು ಫೈಜ್ನಟ್ರಾಜ್ ಅವರ ” ಅಂಗುಲಿಮಾಲನ ಎದುರು ಕೂತ ಬುದ್ಧ ನೀನಲ್ಲ” ಎಂಬ ಹಸ್ತಪ್ರತಿಗೆ 2026 ನೇ ಸಾಲಿನ ಮುದ್ದಣ ಕಾವ್ಯ ಪ್ರಶಸ್ತಿ ದೊರೆತಿದೆ ಎಂದು ಕಾಂತಾವರ ಕನ್ನಡ ಸಂಘದ ಅಧ್ಯಕ್ಷರಾದ ನಾ. ಮೊಗಸಾಲೆ ಘೋಷಣೆ ಮಾಡಿದ್ದಾರೆ. ನಾಡಿನ ಪ್ರತಿಷ್ಠಿತ ಕವಿ ಉಡುಪಿಯ […]

ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೆ ಆಕಿಬ್ ನಬಿ ಸೇರ್ಪಡೆ: ಗಾಯದಿಂದ ಪ್ರಸಿದ್ಧ್ ಕೃಷ್ಣ ಔಟ್

ಹೊಸದಿಗಂತ ಡಿಜಿಟಲ್‌ ಡೆಸ್ಕ್: ನ್ಯೂಜಿಲೆಂಡ್ ವಿರುದ್ಧದ ಐದು ಪಂದ್ಯಗಳ ಏಕದಿನ ಸರಣಿಗೆ ಭಾರತ ತಂಡದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ಜಮ್ಮು ಮತ್ತು ಕಾಶ್ಮೀರದ ವೇಗದ ಬೌಲರ್ ಆಕಿಬ್ ನಬಿ ಅವರನ್ನು ಮೊದಲ ಮೂರು ಏಕದಿನ ಪಂದ್ಯಗಳ ತಂಡಕ್ಕೂ ಸೇರಿಸಲಾಗಿದ್ದು, ಇದೀಗ ಅವರು ಸಂಪೂರ್ಣ ಸರಣಿಗೆ ಲಭ್ಯರಾಗಿದ್ದಾರೆ. ಆರಂಭದಲ್ಲಿ ನಾಲ್ಕು ಮತ್ತು ಐದನೇ ಪಂದ್ಯಗಳಿಗೆ ಮಾತ್ರ ಆಯ್ಕೆಯಾಗಿದ್ದ ನಬಿ, ಪ್ರಸಿದ್ಧ್ ಕೃಷ್ಣ ಗಾಯದಿಂದ ಹೊರಗುಳಿದ ಹಿನ್ನೆಲೆಯಲ್ಲಿ ಮೊದಲಿನಿಂದಲೇ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಹ್ಯಾಮ್‌ಸ್ಟ್ರಿಂಗ್ ಗಾಯದಿಂದ ಪ್ರಸಿದ್ಧ್ ಕೃಷ್ಣ ಅಲಭ್ಯ […] The post ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೆ ಆಕಿಬ್ ನಬಿ ಸೇರ್ಪಡೆ: ಗಾಯದಿಂದ ಪ್ರಸಿದ್ಧ್ ಕೃಷ್ಣ ಔಟ್ appeared first on ONLINE.

ಮಂಡ್ಯದಲ್ಲಿ ಇಂದಿರಾ ಭವನ ನಿರ್ಮಾಣಕ್ಕೆ ಸಿಎಂ ಡಿ.ಕೆ.ಶಿವಕುಮಾರ್ ಶಂಕುಸ್ಥಾಪನೆ

ಮಂಡ್ಯ: ಉಕ್ಕಿನ ಮಹಿಳೆ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಪುಣ್ಯಸ್ಮರಣೆ ದಿನವಾದ ಇಂದು ಮಂಡ್ಯದಲ್ಲಿ ಇಂದಿರಾ ಭವನ ನಿರ್ಮಾಣಕ್ಕೆ ಅಡಿಗಲ್ಲು ಇಡುತ್ತಿದ್ದು, ಇದು ಕಾಂಗ್ರೆಸ್ ಕಚೇರಿಯಲ್ಲ, ದೇವಸ್ಥಾನ. ನಿಮ್ಮೆಲ್ಲರನ್ನೂ ಒಗ್ಗೂಡಿಸುವಂತಹ, ಎಲ್ಲ ವರ್ಗದ ಜನರನ್ನು ಶಕ್ತಿಶಾಲಿಯಾಗಿ ಬೆಳೆಸುವಂತಹ ದೇವಸ್ಥಾನ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹೇಳಿದರು. ನಗರದ ಕೆರೆಯಂಗಳದಲ್ಲಿ ನೂತನವಾಗಿ ನಿರ್ಮಿಸಲಾಗುತ್ತಿರುವ ಇಂದಿರಾ ಭವನ (ಕಾಂಗ್ರೆಸ್ ಕಚೇರಿ)ಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಒಂದು ಹೆಣ್ಣುಮಗಳು ಯಾವ ರೀತಿ ಬ್ಯಾಂಕುಗಳನ್ನು ರಾಷ್ಟಿçÃಕರಣ ಮಾಡಿ, […] The post ಮಂಡ್ಯದಲ್ಲಿ ಇಂದಿರಾ ಭವನ ನಿರ್ಮಾಣಕ್ಕೆ ಸಿಎಂ ಡಿ.ಕೆ.ಶಿವಕುಮಾರ್ ಶಂಕುಸ್ಥಾಪನೆ appeared first on nudikarnataka.

ಶಿವಮೊಗ್ಗ :  ನವೆಂಬರ್ 21 ರಿಂದ ಸ್ಟಾರ್ ಏರ್ ವಿಮಾನ ಬುಕಿಂಗ್ ಸ್ಥಗಿತ: ಶಿವಮೊಗ್ಗ ವಿಮಾನ ನಿಲ್ದಾಣದ ಕಾರ್ಯಾಚರಣೆಗೆ ಆತಂಕ

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಬೆಂಗಳೂರು ಹಾಗೂ ಮಂಗಳೂರು ವಿಮಾನ ನಿಲ್ದಾಣಗಳ ಬಳಿಕ ಅತಿ ಹೆಚ್ಚು ಪ್ರಯಾಣಿಕರನ್ನು ಸೆಳೆದು ಉತ್ತಮ ವಿಮಾನಯಾನ ಸೇವೆಯ ಮೂಲಕ ... ಕ್ಲಿಕ್ ಮಾಡಿ

ಹಾಲು, ಮೊಸರಿನ ದರ ಏರಿಕೆಗೆ ಬಿಜೆಪಿ ಟೀಕೆ: ಸಚಿವ ಈಶ್ವರ್ ಖಂಡ್ರೆ ತಿರುಗೇಟು

ಬೆಂಗಳೂರು,ಆಕ್ಟೋಬರ್,31,2026 (www.justkannada.in):  ರಾಜ್ಯದಲ್ಲಿ ಪ್ರತಿ ಲೀಟರ್ ಹಾಲು ಮತ್ತು ಮೊಸರಿನ ದರ ಏರಿಕೆ ಮಾಡುತ್ತಿರುವ ರಾಜ್ಯ ಸರ್ಕಾರದ ವಿರುದ್ದ ತೀವ್ರವಾಗಿ ಟೀಕಿಸಿರುವ ಬಿಜೆಪಿಗೆ ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವ ಈಶ್ವರ್ ಖಂಡ್ರೆ ಟಾಂಗ್ ಕೊಟ್ಟಿದ್ದಾರೆ. ನಂದಿನಿ ಹಾಲಿನ ದರ 8 ರೂ., ಮೊಸರಿನ ದರ 14 ರೂ.ಹೆಚ್ಚಳ ಮಾಡಿರುವ ಕುರಿತು ಮಾತನಾಡಿದ ಸಚಿವ ಈಶ್ವರ್ ಖಂಡ್ರೆ,  ಹಣ ಹಾಲು ಉತ್ಪಾದಕರಿಗೆ ಹೋಗುತ್ತಿದೆ.  ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ , ಗ್ಯಾಸ್, ಅಕ್ಕಿ ಬೆಲೆ ಜಾಸ್ತಿ ಮಾಡುತ್ತಾರೆ.  ಇವರೇ ಹೆಚ್ಚು […]

ಶಿವಮೊಗ್ಗ : ಹಾಲಿನ ದರ ಏರಿಕೆ ಖಂಡಿಸಿ ಶಿವಮೊಗ್ಗದಲ್ಲಿ ಬಿಜೆಪಿ ಬೃಹತ್ ಪ್ರತಿಭಟನೆ: ದರ ವಾಪಸ್ ಪಡೆಯುವಂತೆ ಆಗ್ರಹ! 

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ: ರಾಜ್ಯ ಸರ್ಕಾರವು ಹಾಲಿನ ದರವನ್ನು ಹೆಚ್ಚಿಸಿರುವುದನ್ನು ಖಂಡಿಸಿ, ಬಿಜೆಪಿ ಶಿವಮೊಗ್ಗ ನಗರ ಘಟಕದ ವತಿಯಿಂದ ನಗರದಲ್ಲಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಯಿತು. ... ಕ್ಲಿಕ್ ಮಾಡಿ

ಹೋರಾಟಗಳಿಂದ ಮಂಡ್ಯದಲ್ಲಿ ಕೃಷಿ ಕ್ಷೇತ್ರ ಇಂದಿಗೂ ಜೀವಂತ : ಡಿ.ಕೆ. ಶಿವಕುಮಾರ್

ಮಂಡ್ಯ : ಮಂಡ್ಯ ಎಂದರೆ ಸಕ್ಕರೆ, ಅನ್ನದ ತಟ್ಟೆ, ಅಕ್ಕರೆ ಮತ್ತು ಆಸರೆ. ಇಲ್ಲಿನ ಜನರ ಮಾತು ನೇರವಾಗಿದ್ದರೂ ಮನಸ್ಸು ಕಬ್ಬಿನ ಜಲ್ಲೆಯಷ್ಟೇ ಮೃದು ಮತ್ತು ಸಿಹಿಯಾಗಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಸರ್ ಎಂ. ವಿಶ್ವೇಶ್ವರಯ್ಯ ಅವರ ದೂರದೃಷ್ಟಿಯಿಂದ ಈ ಭಾಗದ ರೈತರ ಬದುಕಿಗೆ ನೀರಾವರಿ ಸೌಲಭ್ಯ ದೊರೆತಿದೆ. ನಂಜುಂಡಸ್ವಾಮಿ, ಮಾದೇಗೌಡರು ಹಾಗೂ ಪುಟ್ಟಣ್ಣಯ್ಯ ಅವರ ಹೋರಾಟಗಳಿಂದ ಕೃಷಿ ಕ್ಷೇತ್ರ ಇಂದಿಗೂ ಜೀವಂತವಾಗಿದೆ. ಇದೇ ಮಣ್ಣಿನ ಎಸ್.ಎಂ. ಕೃಷ್ಣ ಅವರು ರಾಜ್ಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ […] The post ಹೋರಾಟಗಳಿಂದ ಮಂಡ್ಯದಲ್ಲಿ ಕೃಷಿ ಕ್ಷೇತ್ರ ಇಂದಿಗೂ ಜೀವಂತ : ಡಿ.ಕೆ. ಶಿವಕುಮಾರ್ appeared first on nudikarnataka.