Filters

Channels
Topics
Other Filters

‘ಅರ್ನಾಬ್’ ಚಂಡಮಾರುತಕ್ಕೆ ಚೆನ್ನೈ ತತ್ತರ: ರಸ್ತೆಗೆ ನುಗ್ಗಿದ ಸಮುದ್ರದ ನೀರು, ವಾಹನಗಳಿಗೆ ಹಾನಿ

ಚೆನ್ನೈ: ಬಂಗಾಳಕೊಲ್ಲಿಯಲ್ಲಿ ರೂಪುಗೊಂಡಿರುವ ‘ಅರ್ನಾಬ್’ ಚಂಡಮಾರುತದ ಪರಿಣಾಮ ಕರಾವಳಿ ಪ್ರದೇಶಗಳಲ್ಲಿ ಭಾರಿ ಮಳೆ, ಬಿರುಗಾಳಿ ಹಾಗೂ ಸಮುದ್ರದ ಅಲೆಗಳ ಅಬ್ಬರದ ಆತಂಕ ಎದುರಾಗಿದೆ. ಚೆನ್ನೈ ಸಮೀಪದ ಎನ್ನೋರ್ ಕರಾವಳಿಯಲ್ಲಿ ಬೃಹತ್ ಅಲೆಗಳು ತಡೆಗೋಡೆಗಳನ್ನು ದಾಟಿ ರಸ್ತೆಗೆ ನುಗ್ಗಿದ್ದು, ವಾಹನಗಳು ಹಾಗೂ ಅಂಗಡಿ ಮುಂಗಟ್ಟುಗಳಿಗೆ ಹಾನಿಯಾಗಿದೆ. ಚಂಡಮಾರುತದ ಹಿನ್ನೆಲೆ ತಮಿಳುನಾಡು, ಆಂಧ್ರಪ್ರದೇಶ ಮತ್ತು ಒಡಿಶಾದಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಎನ್ನೋರ್ ಕರಾವಳಿಯಲ್ಲಿ ಅಲೆಗಳ ಅಟ್ಟಹಾಸ ಮಂಗಳವಾರ ರಾತ್ರಿ ಚೆನ್ನೈ ಸಮೀಪದ ಎನ್ನೋರ್ ಬೀಚ್‌ನಲ್ಲಿ ಸಮುದ್ರದ ಅಲೆಗಳು ತೀವ್ರ ಸ್ವರೂಪ […] Source

ಹೈಬಿಪಿ ಇರುವವರಿಗೆ ಬೀಟ್‌ರೂಟ್, ದಾಳಿಂಬೆ ಜ್ಯೂಸ್‌? ರಕ್ತದೊತ್ತಡ ನಿಯಂತ್ರಣಕ್ಕೆ ಯಾವುದು ಬೆಸ್ಟ್!

ಅಧಿಕ ರಕ್ತದೊತ್ತಡ (ಹೈಬಿಪಿ) ಇರುವವರು ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಬಹಳ ಮುಖ್ಯ. ಅನೇಕರು ಬೀಟ್‌ರೂಟ್ ಮತ್ತು ದಾಳಿಂಬೆ ರಸವನ್ನು ಕುಡಿಯಲು ಇಷ್ಟಪಡುತ್ತಾರೆ. ಆದರೆ, ಇವೆರಡರಲ್ಲಿ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು ಯಾವುದು ಹೆಚ್ಚು ಪ್ರಯೋಜನಕಾರಿ ಎಂಬ ಪ್ರಶ್ನೆ ಹಲವರಲ್ಲಿದೆ. ಈ ಲೇಖನದಲ್ಲಿ ಎರಡೂ ರಸಗಳ ಪ್ರಯೋಜನಗಳು, ಕಾರ್ಯವಿಧಾನ ಮತ್ತು ಮುನ್ನೆಚ್ಚರಿಕೆಗಳನ್ನು ವಿವರವಾಗಿ ತಿಳಿಯೋಣ. ಈ ಎರಡೂ ರಸಗಳಲ್ಲಿ ಹೃದಯದ ಆರೋಗ್ಯವನ್ನು ಕಾಪಾಡಲು ಮತ್ತು ರಕ್ತದೊತ್ತಡವನ್ನು ಸಾಮಾನ್ಯ ಸ್ಥಿತಿಯಲ್ಲಿಡಲು ಸಹಾಯ ಮಾಡುವ ಪೋಷಕಾಂಶಗಳು ಹಾಗೂ ನೈಸರ್ಗಿಕ ಸಂಯುಕ್ತಗಳಿವೆ. ಆದರೆ, […] Source

ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ–ಜೆಡಿಎಸ್‌ಗೆ ಭರ್ಜರಿ ಯಶಸ್ಸು: ರಂಗನಾಥ್, ನಮೋಶಿ ಗೆಲುವಿನ ನಗೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್: ರಾಜ್ಯ ವಿಧಾನ ಪರಿಷತ್ತಿನ ನಾಲ್ಕು ಕ್ಷೇತ್ರಗಳ ಚುನಾವಣೆಯಲ್ಲಿ ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿ–ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ಎ.ಪಿ. ರಂಗನಾಥ್ ಗೆಲುವು ಸಾಧಿಸಿದರೆ, ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶಶೀಲ್ ಜಿ. ನಮೋಶಿ ಜಯಭೇರಿ ಬಾರಿಸಿದ್ದಾರೆ. ಈ ಫಲಿತಾಂಶಗಳಿಂದ ಬಿಜೆಪಿ ಹಾಗೂ ಎನ್‌ಡಿಎ ಪಾಳಯದಲ್ಲಿ ಸಂಭ್ರಮ ಮನೆಮಾಡಿದ್ದು, ಉಳಿದ ಎರಡು ಕ್ಷೇತ್ರಗಳ ಫಲಿತಾಂಶವೂ ಬಿಜೆಪಿ-ಜೆಡಿಎಸ್ ಮೈತ್ರಿಕೂಟ NDA ಪರವಾಗಿಯೇ ಹೊರ ಬರುವ ನಿರೀಕ್ಷೆ ಇದೆ. 908 ಮತಗಳ ಅಂತರದಲ್ಲಿ ರಂಗನಾಥ್ ಗೆಲುವು ಬೆಂಗಳೂರು […] The post ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ–ಜೆಡಿಎಸ್‌ಗೆ ಭರ್ಜರಿ ಯಶಸ್ಸು: ರಂಗನಾಥ್, ನಮೋಶಿ ಗೆಲುವಿನ ನಗೆ appeared first on ONLINE.

Railway Job: ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಪಡೆಯುವ ಕನಸೇ? ಈ ಚಾನ್ಸ್ ಮಿಸ್ ಮಾಡ್ಕೋಬೇಡಿ!

ಬೆಂಗಳೂರಿನ ರೈಲ್ ವೀಲ್ ಫ್ಯಾಕ್ಟರಿಯು ಜೆಇ ಮತ್ತು ಎಸ್‍ಎಸ್‍ಇ ಸೇರಿದಂತೆ ಒಟ್ಟು 11 ಹುದ್ದೆಗಳ ಭರ್ತ್ಗೆ ಅಧಿಸೂಚನೆ ಹೊರಡಿಸಿದೆ. ನಿವೃತ್ತ ನೌಕರರು ನವೆಂಬರ್ 6ರೊಳಗೆ ಅರ್ಜಿ ಸಲ್ಲಿಸಬಹುದು.

ದೀಪಾವಳಿಗೆ ಮುನ್ನ ಮಹಾಲಕ್ಷ್ಮಿ ರಾಜಯೋಗ : 4 ರಾಶಿಯವರಿಗೆ ಅದೃಷ್ಟವೋ ಅದೃಷ್ಟ, ಬಂಪರ್ ಧನಲಾಭ

Mahalakshmi Raja Yoga :ದೀಪಾವಳಿಗೆ ಮುನ್ನ ಮಹಾಲಕ್ಷ್ಮಿ ರಾಜಯೋಗ : 4 ರಾಶಿಯವರಿಗೆ ಅದೃಷ್ಟವೋ ಅದೃಷ್ಟ, ಬಂಪರ್ ಧನಲಾಭ. Mahalakshmi Raja yoga 2026 golden period to start 4 zodiac people happy time money flow Lucky Sign

NIA Recruitment: 56 ವರ್ಷ ಆದವರಿಗೂ NIAನಲ್ಲಿ ಉದ್ಯೋಗಾವಕಾಶ, 92,000 ರೂ.ವರೆಗೆ ಸಂಬಳ

ಆಯ್ಕೆಯಾದ ಅಭ್ಯರ್ಥಿಗಳು ಹುದ್ದೆಗೆ ಅನುಗುಣವಾಗಿ ₹25,500 ರಿಂದ ₹92,300 ರವರೆಗೆ ವೇತನವನ್ನು ಪಡೆಯುತ್ತಾರೆ. ಈ ನೇಮಕಾತಿ ನೇರ ನೇಮಕಾತಿಯಲ್ಲ, ಆದರೆ ಡೆಪ್ಯುಟೇಶನ್ ಆಧಾರದ ಮೇಲೆ ನಡೆಸಲಾಗುತ್ತಿದೆ.

Job News: ಪದವಿ ಮುಗಿಸಿ ಕೆಲಸ ಹುಡುಕುತ್ತಿದ್ದೀರಾ? ಈ ಅವಕಾಶ ಮಿಸ್ ಮಾಡ್ಕೋಬೇಡಿ!

ಎಲ್‍ಐಸಿ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ಕರ್ನಾಟಕದಲ್ಲಿ 25 ಸೇರಿದಂತೆ ಒಟ್ಟು 232 ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಪದವೀಧರರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

Kundalini Yoga ದ ಬಗ್ಗೆ ಸದ್ಗುರು ಏನ್‌ ಹೇಳ್ತಾರೆ? ಇದರ ಅಪಾಯಗಳೇನು? ಯಾರು ಬೇಕಾದರೂ ಇದನ್ನು ಮಾಡ್ಬಹುದಾ?

Kundalini Yoga: Why does Sadhguru call Kundalini Yoga the most potent and dangerous form of yoga? ಕುಂಡಲಿನಿ ಯೋಗವನ್ನು ಅತ್ಯಂತ ಶಕ್ತಿಶಾಲಿ ಮತ್ತು ಅಪಾಯಕಾರಿ ಯೋಗ ಎಂದು ಸದ್ಗುರು ಏಕೆ ಕರೆಯುತ್ತಾರೆ?

ತದಡಿ ಬಂದರಿನಲ್ಲಿ ದುರಂತ: ಬೋಟ್ ಸ್ವಚ್ಛಗೊಳಿಸುವಾಗ ಉಸಿರುಗಟ್ಟಿ ಮೂವರು ಕಾರ್ಮಿಕರ ಸಾ*ವು

ಹೊಸದಿಗಂತ ವರದಿ ಗೋಕರ್ಣ: ಮೀನುಗಾರಿಕೆ ಮುಗಿಸಿ ಬಂದಿದ್ದ ಬೋಟ್‌ನಿಂದ ಮೀನು ಇಳಿಸಿದ ಬಳಿಕ ಸ್ವಚ್ಛಗೊಳಿಸುವ ಕಾರ್ಯದಲ್ಲಿ ತೊಡಗಿದ್ದ ಮೂವರು ಕಾರ್ಮಿಕರು ಮೃತಪಟ್ಟಿದ್ದು, ಮತ್ತೊಬ್ಬರು ಪ್ರಾಣಾಪಾಯದಿಂದ ಪಾರಾಗಿರುವ ದಾರುಣ ಘಟನೆ ಮಂಗಳವಾರ ಸಂಜೆ ತದಡಿ ಬಂದರಿನಲ್ಲಿ ನಡೆದಿದೆ. ಮೀನಿನ ಕೊಳೆತ ತ್ಯಾಜ್ಯದಿಂದ ಉಂಟಾದ ತೀವ್ರ ವಾಸನೆಯಿಂದ ಕಾರ್ಮಿಕರು ಅಸ್ವಸ್ಥರಾಗಿರಬಹುದು ಎಂದು ಶಂಕಿಸಲಾಗಿದೆ. ಸ್ವಚ್ಛತೆಗೆ ಇಳಿದ ಕಾರ್ಮಿಕರಿಗೆ ಏಕಾಏಕಿ ಅಸ್ವಸ್ಥತೆ ಕುಮಟಾ ತಾಲೂಕಿನ ಒನ್ನಳ್ಳಿಯ ‘ಖುಜೈನಾ’ ಬೋಟ್‌ನಲ್ಲಿ ಮಂಗಳವಾರ ಮೀನು ಇಳಿಸಿದ ಬಳಿಕ ಕಾರ್ಮಿಕರು ತ್ಯಾಜ್ಯ ತೆರವುಗೊಳಿಸಲು ಮುಂದಾಗಿದ್ದರು. ಈ […] The post ತದಡಿ ಬಂದರಿನಲ್ಲಿ ದುರಂತ: ಬೋಟ್ ಸ್ವಚ್ಛಗೊಳಿಸುವಾಗ ಉಸಿರುಗಟ್ಟಿ ಮೂವರು ಕಾರ್ಮಿಕರ ಸಾ*ವು appeared first on ONLINE.

ಬ್ಯಾಕ್‌ಲಾಗ್ ಹುದ್ದೆಗಳ ಭರ್ತಿಗೆ 3–4 ತಿಂಗಳಲ್ಲಿ ಪರಿಹಾರ : ಸಚಿವ ಕೆ.ಎಸ್.ಬಸವಂತಪ್ಪ ಭರವಸೆ

ದಾವಣಗೆರೆ : ಮಹರ್ಷಿ ವಾಲ್ಮೀಕಿ, ಡಾ.ಬಿ.ಆರ್.ಅಂಬೇಡ್ಕರ್, ಮಹಾತ್ಮ ಗಾಂಧಿ ಸೇರಿದಂತೆ ಮಹನೀಯರ ಜಯಂತಿಗಳನ್ನು ಆಚರಿಸುವುದು ಅವರ ವಿಚಾರಧಾರೆಗಳನ್ನು ತಿಳಿದುಕೊಳ್ಳುವುದಕ್ಕೆ ಮಾತ್ರ ಸೀಮಿತವಾಗಬಾರದು. ಅವರು ತೋರಿದ ಆದರ್ಶದ ಹಾದಿಯಲ್ಲಿ ಪ್ರಾಮಾಣಿಕವಾಗಿ ನಡೆಯಲು ಪ್ರಯತ್ನಿಸಿದಾಗ ಮಾತ್ರ ಜಯಂತಿ ಆಚರಣೆಗೆ ನಿಜವಾದ ಅರ್ಥ ಮತ್ತು ಗೌರವ ದೊರೆಯುತ್ತದೆ ಎಂದು ಮುಜರಾಯಿ, ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಕೆ.ಎಸ್.ಬಸವಂತಪ್ಪ ಹೇಳಿದರು. ನಗರದ ಗುಂಡಿ ಮಹಾದೇವಪ್ಪ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಸಾರ್ವಜನಿಕ ವಾಲ್ಮೀಕಿ ಜಯಂತ್ಯುತ್ಸವ ಸಮಿತಿ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ [...]

ಕಿತ್ತೂರು ಬಳಿ ಭೀಕರ ರಸ್ತೆ ಅಪಘಾತ: ಬೈಕ್‌ನಲ್ಲಿದ್ದ ದಂಪತಿ ಸೇರಿ ಮೂವರ ದುರ್ಮ*ರಣ

ಹೊಸದಿಗಂತ ವರದಿ ಕಿತ್ತೂರು: ಟಾಟಾ ಗೂಡ್ಸ್ ವಾಹನ ಹಾಗೂ ದ್ವಿಚಕ್ರ ವಾಹನದ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ದಂಪತಿ ಸೇರಿದಂತೆ ಮೂವರು ಮೃತಪಟ್ಟಿರುವ ದಾರುಣ ಘಟನೆ ಮಲ್ಲಾಪುರ–ದೇಮಟ್ಟಿ ಮಾರ್ಗ ಮಧ್ಯೆ ನಡೆದಿದೆ. ಮೃತರನ್ನು ಧಾರವಾಡ ತಾಲೂಕಿನ ಹೆಗ್ಗೇರಿ ಮೂಲದ, ಪ್ರಸ್ತುತ ದೇಮಟ್ಟಿ ಗ್ರಾಮದಲ್ಲಿ ವಾಸವಿದ್ದ ಅಜಾದ್ ಇಸ್ಮಾಯಿಲ್ ಜಮಾದಾರ (45), ಅವರ ಪತ್ನಿ ಖೈರುನಬಿ ಅಜಾದ್ ಜಮಾದಾರ (40) ಹಾಗೂ ದೇಮಟ್ಟಿ ಗ್ರಾಮದ ಬಾಬಾಜಾನ್ ನಿಸಾರ್ ಅಹಮ್ಮದ್ ತಡಕೋಡ (16) ಎಂದು ಗುರುತಿಸಲಾಗಿದೆ. ಮಲ್ಲಾಪುರ–ದೇಮಟ್ಟಿ ರಸ್ತೆಯಲ್ಲಿ […] The post ಕಿತ್ತೂರು ಬಳಿ ಭೀಕರ ರಸ್ತೆ ಅಪಘಾತ: ಬೈಕ್‌ನಲ್ಲಿದ್ದ ದಂಪತಿ ಸೇರಿ ಮೂವರ ದುರ್ಮ*ರಣ appeared first on ONLINE.

ಡಾ. ಜಿ. ಪರಮೇಶ್ವರ್ ಆರೋಗ್ಯದಲ್ಲಿ ಏರುಪೇರು: ಆಸ್ಪತ್ರೆಗೆ ದಾಖಲಾಗಿ ಸ್ವತಃ ಮಾಹಿತಿ ಹಂಚಿಕೊಂಡ ಡಿಸಿಎಂ

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಕ್ರೀಡಾಕೂಟದ ಉದ್ಘಾಟನಾ ಸಮಾರಂಭದ ವೇಳೆ ಏಕಾಏಕಿ ಹೃದಯಬಡಿತ ಹೆಚ್ಚಾಗಿ ಆಸ್ಪತ್ರೆಗೆ ದಾಖಲಾಗಿದ್ದ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ. ಸದ್ಯ ಅವರ ಆರೋಗ್ಯ ಸ್ಥಿರವಾಗಿದ್ದು, ಆತಂಕಪಡುವ ಅಗತ್ಯವಿಲ್ಲ ಎಂದು ಸ್ವತಃ ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ. ಈ ಕುರಿತು ತಮ್ಮ ಅಧಿಕೃತ ‘ಎಕ್ಸ್‌’ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಪರಮೇಶ್ವರ್, ಕಾರ್ಯಕ್ರಮದ ಸಂದರ್ಭದಲ್ಲಿ ಹೃದಯಬಡಿತ ಹೆಚ್ಚಾದ ತಕ್ಷಣ ವೈದೇಹಿ ಆಸ್ಪತ್ರೆಗೆ ತೆರಳಿ ವೈದ್ಯರಿಂದ ಅಗತ್ಯ ಚಿಕಿತ್ಸೆ ಪಡೆದಿರುವುದಾಗಿ ಹೇಳಿದ್ದಾರೆ. ತಮ್ಮ ಆರೋಗ್ಯದ ಬಗ್ಗೆ […] The post ಡಾ. ಜಿ. ಪರಮೇಶ್ವರ್ ಆರೋಗ್ಯದಲ್ಲಿ ಏರುಪೇರು: ಆಸ್ಪತ್ರೆಗೆ ದಾಖಲಾಗಿ ಸ್ವತಃ ಮಾಹಿತಿ ಹಂಚಿಕೊಂಡ ಡಿಸಿಎಂ appeared first on ONLINE.

ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿ ವಿಜಯ ಪತಾಕೆ: ಶಶೀಲ್ ನಮೋಶಿಗೆ ಭರ್ಜರಿ ಜಯ

ಹೊಸದಿಗಂತ ವರದಿ ಕಲಬುರಗಿ: ಈಶಾನ್ಯ ಶಿಕ್ಷಕರ ಮತಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಶಶೀಲ್ ಜಿ. ನಮೋಶಿ ಗೆಲುವಿನತ್ತ ಮುನ್ನಡೆದಿದ್ದು, ಮೊದಲ ಪ್ರಾಶಸ್ತ್ಯದ ಮತಗಳ ಎಣಿಕೆಯಲ್ಲೇ ಭರ್ಜರಿ ಮುನ್ನಡೆ ಸಾಧಿಸಿ ಗೆಲುವು ಪಡೆದುಕೊಂಡಿದ್ದಾರೆ. ಶಶೀಲ್ ನಮೋಶಿ ಅವರು ಕಾಂಗ್ರೆಸ್ ಅಭ್ಯರ್ಥಿ ಶರಣಪ್ಪ ಮಟ್ಟೂರು ವಿರುದ್ಧ 3,450 ಮತಗಳ ಮುನ್ನಡೆ ಹೊಂದಿದ್ದು, ಅವರ ಬೆಂಬಲಿಗರಲ್ಲಿ ಸಂಭ್ರಮ ಮನೆಮಾಡಿದೆ. ಮತ ಎಣಿಕೆಯ ಮೊದಲ ಸುತ್ತಿನಲ್ಲಿ 7,239 ಮತಗಳು ಹಾಗೂ ಎರಡನೇ ಸುತ್ತಿನಲ್ಲಿ 7,311 ಮತಗಳ ಎಣಿಕೆ ಪೂರ್ಣಗೊಂಡಿದ್ದು, ಒಟ್ಟು 14,540 ಮತಗಳ […] The post ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿ ವಿಜಯ ಪತಾಕೆ: ಶಶೀಲ್ ನಮೋಶಿಗೆ ಭರ್ಜರಿ ಜಯ appeared first on ONLINE.

ವಿಧಾನ ಪರಿಷತ್ ಚುನಾವಣೆ ಫಲಿತಾಂಶ: 4 ಕ್ಷೇತ್ರಗಳಲ್ಲಿ NDA ಮೇಲುಗೈ, ಕಾಂಗ್ರೆಸ್‌ಗೆ ಭಾರೀ ಹಿನ್ನಡೆ

ಬೆಂಗಳೂರು: ಕರ್ನಾಟಕ ವಿಧಾನ ಪರಿಷತ್ತಿನ ನಾಲ್ಕು ಕ್ಷೇತ್ರಗಳಿಗೆ (ಎರಡು ಪದವೀಧರ ಹಾಗೂ ಎರಡು ಶಿಕ್ಷಕರ ಕ್ಷೇತ್ರಗಳು) ನಡೆದ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಒಳಗೊಂಡ ಎನ್‌ಡಿಎ ಮೈತ್ರಿಕೂಟ ಭಾರೀ ಮುನ್ನಡೆ ಸಾಧಿಸಿದೆ. ಆಡಳಿತರೂಢ ಕಾಂಗ್ರೆಸ್ ಭಾರೀ ಹಿನ್ನಡೆಯಾಗಿದೆ. ಅಕ್ಟೋಬರ್ 23ರಂದು ನಡೆದಿದ್ದ ಮತದಾನದ ಬಳಿಕ ಅಂತಿಮ ಫಲಿತಾಂಶಕ್ಕಾಗಿ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿತ್ತು. ನಾಲ್ಕರ ಪೈಕಿ ಮೂರರಲ್ಲಿ ಬಿರುಸಿನ ಮತ ಎಣಿಕೆ ನಡೆದಿದ್ದು, ಆಗ್ನೇಯ ಪದವೀಧರರ ಕ್ಷೇತ್ರದಲ್ಲಿ ತಾಂತ್ರಿಕ ಕಾರಣದಿಂದ ಎಣಿಕೆ ತಡವಾಗಿದೆ. ಬೆಂಗಳೂರು ಶಿಕ್ಷಕರ […] Source

ಮಂಗಳೂರು ಸಂಚಾರ ದಕ್ಷಿಣ ಪೊಲೀಸ್ ಠಾಣೆ ಸ್ಥಳಾಂತರ: ನಾಗರಿಕರಿಗೆ ಸಂಕೋಳಿಗೆ ನೂತನ ಕಟ್ಟಡದಲ್ಲಿ ಸಿಗಲಿದೆ ಸೇವೆ

ಹೊಸದಿಗಂತ ವರದಿ ಮಂಗಳೂರು: ಜಪ್ಪಿನಮೊಗೆರು ಪ್ರದೇಶದಲ್ಲಿ ಕಾರ್ಯಾಚರಿಸುತ್ತಿದ್ದ ಸಂಚಾರ ದಕ್ಷಿಣ ಪೊಲೀಸ್ ಠಾಣೆಯನ್ನು ಸಾರ್ವಜನಿಕರ ಅನುಕೂಲಕ್ಕಾಗಿ ಉಳ್ಳಾಲ ತಾಲೂಕಿನ ಕೋಟೆಕಾರ್ ಗ್ರಾಮದ ಸಂಕೋಳಿಗೆಯಲ್ಲಿರುವ ನೂತನ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ಸಾರ್ವಜನಿಕರು ಇನ್ನುಮುಂದೆ ದೂರುಗಳು ಹಾಗೂ ಇತರ ಪೊಲೀಸ್ ಸೇವೆಗಳಿಗಾಗಿ ಈ ನೂತನ ವಿಳಾಸವನ್ನು ಸಂಪರ್ಕಿಸಬಹುದಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ. ಈ ಠಾಣೆಯು ಹಿಂದೆ ಜಪ್ಪಿನಮೊಗೆರು ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿ-66ರ ಸಮೀಪ, ವಾಹನ ಗ್ಯಾರೇಜ್ ಮಾಲಕರ ಸಂಘದ ಬಳಿಯ ಖಾಸಗಿ ಕಟ್ಟಡದಲ್ಲಿ ಸಂಚಾರ ದಕ್ಷಿಣ ಪೊಲೀಸ್ […] The post ಮಂಗಳೂರು ಸಂಚಾರ ದಕ್ಷಿಣ ಪೊಲೀಸ್ ಠಾಣೆ ಸ್ಥಳಾಂತರ: ನಾಗರಿಕರಿಗೆ ಸಂಕೋಳಿಗೆ ನೂತನ ಕಟ್ಟಡದಲ್ಲಿ ಸಿಗಲಿದೆ ಸೇವೆ appeared first on ONLINE.