Filters

Channels
Topics
Other Filters

ಧಾರವಾಡದಲ್ಲಿ ನೇಣು ಬಿಗಿದು ಸರ್ಕಾರಿ ನೌಕರನ ಆತ್ಮಹ*ತ್ಯೆ: ಸಾವಿನ ಹಿಂದಿನ ಕಾರಣ ನಿಗೂಢ

ಹೊಸದಿಗಂತ ವರದಿ ಧಾರವಾಡ: ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ನಗರದ ಮದಿಹಾಳ ಬಡಾವಣೆಯಲ್ಲಿ ಶನಿವಾರ ನಡೆದಿದೆ. ಬೆಳಗಾವಿ ಜಿಲ್ಲೆ ಗೋಕಾಕ್ ತಾಲೂಕಿನ ಕಲಾರಕೊಪ್ಪ ಗ್ರಾಮದ ನಿವಾಸಿ ರೇವಪ್ಪ ದುರದುಂಡಿ (35) ಆತ್ಮಹತ್ಯೆ ಮಾಡಿಕೊಂಡ ಯುವಕ ಎಂದು ಗುರುತಿಸಲಾಗಿದೆ. ಧಾರವಾಡ ಜೆಎಂಎಫ್‌ಸಿ ಕೋರ್ಟ್‌ನಲ್ಲಿ ದ್ವಿತೀಯ ದರ್ಜೆಯ ಸಹಾಯಕನಾಗಿ ಕಾರ್ಯನಿರ್ವಹಿಸುತ್ತಿದ್ದ ರೇವಪ್ಪ, ಮದಿಹಾಳದ ಬಡಾವಣೆಯ ತಮ್ಮ ನಿವಾಸದಲ್ಲಿ ನೇಣಿಗೆ ಶರಣಾಗಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಈ ಕುರಿತು ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ. The post ಧಾರವಾಡದಲ್ಲಿ ನೇಣು ಬಿಗಿದು ಸರ್ಕಾರಿ ನೌಕರನ ಆತ್ಮಹ*ತ್ಯೆ: ಸಾವಿನ ಹಿಂದಿನ ಕಾರಣ ನಿಗೂಢ appeared first on ONLINE.

Agniveer Rally: ತಿಂಗಳಾಂತ್ಯಕ್ಕೆ ಅಗ್ನಿವೀರ್‌ ರ‍್ಯಾಲಿಗೆ ಸಜ್ಜಾಗಿ, ದಿನಾಂಕ, ಸ್ಥಳ ಹಾಗೂ ನಿಯಮದ ವಿವರ ಬೇಕೆ? ಇಲ್ಲಿ ನೋಡಿ

ಚಿತ್ರದುರ್ಗದ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ಅಕ್ಟೋಬರ್ 31 ರಿಂದ ನವೆಂಬರ್ 03 ರವರೆಗೆ ಬೃಹತ್ ಅಗ್ನಿವೀರ ನೇಮಕಾತಿ ರ್ಯಾಲಿ ಆಯೋಜಿಸಲಾಗಿದೆ. ಬೆಂಗಳೂರು ನೇಮಕಾತಿ ಕಚೇರಿ ಹಾಗೂ ಜಿಲ್ಲಾಡಳಿತದ ವತಿಯಿಂದ ಈ ರ್ಯಾಲಿ ನಡೆಯುತ್ತಿದ್ದು, ವಿವಿಧ ಜಿಲ್ಲೆಗಳ ನೂರಾರು ಅಭ್ಯರ್ಥಿಗಳು ಭಾಗವಹಿಸಲಿದ್ದಾರೆ.

ಮನೆಯಲ್ಲಿ ಚಿರತೆಯ10 ಉಗುರುಗಳು ಪತ್ತೆ: ಅರಣ್ಯ ಇಲಾಖೆ ಬಲೆಗೆ ಬಿದ್ದ ವ್ಯಕ್ತಿ

ಹೊಸದಿಗಂತ ವರದಿ ಬನವಾಸಿ: ಮನೆಯಲ್ಲೇ ಅಕ್ರಮವಾಗಿ ಚಿರತೆಯ 10 ಉಗುರುಗಳನ್ನು ಸಂಗ್ರಹಿಸಿಟ್ಟಿದ್ದ ಆರೋಪದ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ವ್ಯಕ್ತಿಯೊಬ್ಬನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಬನವಾಸಿ ಸಮೀಪದ ಕಲ್ಲಿ ಗ್ರಾಮದಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ. 2026ರ ಅಕ್ಟೋಬರ್ 22ರಂದು ಕಲ್ಲಿ ಗ್ರಾಮದ ಅರಣ್ಯ ಸರ್ವೆ ನಂಬರ್ 80ರ ವ್ಯಾಪ್ತಿಯಲ್ಲಿರುವ ಮನೆಯಲ್ಲಿ ಚಿರತೆಯ ಉಗುರುಗಳನ್ನು ಅನಧಿಕೃತವಾಗಿ ಸಂಗ್ರಹಿಸಿಟ್ಟಿರುವ ಬಗ್ಗೆ ಅರಣ್ಯ ಇಲಾಖೆಗೆ ಖಚಿತ ಮಾಹಿತಿ ಲಭಿಸಿತ್ತು. ಮಾಹಿತಿ ಆಧರಿಸಿ ಸ್ಥಳಕ್ಕೆ ಭೇಟಿ ನೀಡಿದ […] The post ಮನೆಯಲ್ಲಿ ಚಿರತೆಯ10 ಉಗುರುಗಳು ಪತ್ತೆ: ಅರಣ್ಯ ಇಲಾಖೆ ಬಲೆಗೆ ಬಿದ್ದ ವ್ಯಕ್ತಿ appeared first on ONLINE.

ಕ್ಷುಲ್ಲಕ ರಾಜಕೀಯ ಬಿಟ್ಟು ಕಬ್ಬು ಬೆಳೆಗಾರರಿಗೆ ನ್ಯಾಯ ಕೊಡಿಸಿ : ಹೆಚ್.ಡಿ.ಕೆ.ಗೆ ಚಲುವರಾಯಸ್ವಾಮಿ ಸವಾಲು

ಬೆಂಗಳೂರು :  ಕರ್ನಾಟಕದ ರೈತರು, ವಿಶೇಷವಾಗಿ ಕಬ್ಬು ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಆದ್ಯತೆಯಾಗಬೇಕೇ ಹೊರತು, ಕ್ಷುಲ್ಲಕ ರಾಜಕೀಯ ಟೀಕೆ ಮತ್ತು ಆರೋಪ-ಪ್ರತ್ಯಾರೋಪಗಳಲ್ಲಿ ಕಾಲ ಕಳೆಯುವುದಲ್ಲ ಎಂದು ಬೃಹತ್ ಮತ್ತು ಮಧ್ಯಮ ನೀರಾವರಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ತಿರುಗೇಟು ನೀಡಿದ್ದಾರೆ. ಬೆಂಗಳೂರಿನಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜಕೀಯದಲ್ಲಿ ಭಿನ್ನಾಭಿಪ್ರಾಯಗಳು ಸಹಜ. ಆದರೆ ರಾಜ್ಯದ ರೈತರು ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಜನರ ಬದುಕಿಗೆ ಸಂಬಂಧಿಸಿದ ಗಂಭೀರ ವಿಚಾರಗಳನ್ನು ಬದಿಗಿಟ್ಟು ಪರಸ್ಪರ ಟೀಕೆಗಳಲ್ಲಿ […] The post ಕ್ಷುಲ್ಲಕ ರಾಜಕೀಯ ಬಿಟ್ಟು ಕಬ್ಬು ಬೆಳೆಗಾರರಿಗೆ ನ್ಯಾಯ ಕೊಡಿಸಿ : ಹೆಚ್.ಡಿ.ಕೆ.ಗೆ ಚಲುವರಾಯಸ್ವಾಮಿ ಸವಾಲು appeared first on nudikarnataka.

ಸಾಲದ ಸಂಕಷ್ಟಕ್ಕೆ ತಾಯಿ-ಮಗಳು ಬಲಿ: ಇಬ್ಬರು ಮಕ್ಕಳ ಸ್ಥಿತಿ ಗಂಭೀರ

ಹೊಸದಿಗಂತ ವರದಿ ಧಾರವಾಡ: ಸಾಲಬಾಧೆ ತಾಳದೆ, ತಾಯಿ ತನ್ನ ಮೂರು ಮಕ್ಕಳಿಗೆ ವಿಷ ನೀಡಿ ತಾನೂ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ದಾರುಣ ಘಟನೆ ತಾಲೂಕಿನ ಕರಡಿಗುಡ್ಡ ಗ್ರಾಮದಲ್ಲಿ ಶನಿವಾರ ನಡೆದಿದೆ. ಮೃತರನ್ನು ಸವಿತಾ ಕುರಗುಂದ (38) ಮತ್ತು ಗದಿಗೆವ್ವ ಕುರಗುಂದ (8) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಭಾಗ್ಯಶ್ರೀ (6) ಹಾಗೂ ಹರ್ಷಿತಾ (9) ಎಂಬ ಇಬ್ಬರು ಮಕ್ಕಳ ಸ್ಥಿತಿ ಚಿಂತಾಜನಕವಿದ್ದು, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. The post ಸಾಲದ ಸಂಕಷ್ಟಕ್ಕೆ ತಾಯಿ-ಮಗಳು ಬಲಿ: ಇಬ್ಬರು ಮಕ್ಕಳ ಸ್ಥಿತಿ ಗಂಭೀರ appeared first on ONLINE.

ಗದಗದಿಂದ ನಾಪತ್ತೆ, ಮುಂಬೈನಲ್ಲಿ ಪತ್ತೆ: 40 ದಿನಗಳ ಬಳಿಕ ಮನೆಗೆ ಮರಳಿದ ಪರ್ವೀಜ್

ಹೊಸದಿಗಂತ ವರದಿ ಗದಗ: ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತ ಉಪವಿಭಾಗದ ಕಾರ್ಯನಿರ್ವಾಹಕ ಅಭಿಯಂತರ ಪರ್ವೀಜ್ ಧಾರವಾಡ ಅವರು 40 ದಿನಗಳ ಬಳಿಕ ಮುಂಬೈನ ಬಾಂದ್ರಾ ರೈಲು ನಿಲ್ದಾಣದಲ್ಲಿ ಪತ್ತೆಯಾಗಿದ್ದು, ಮುಂಬೈನಿಂದ ಗದಗ ನಗರಕ್ಕೆ ಕರೆದುಕೊಂಡು ಬಂದ ಪೊಲೀಸರು ವಿಚಾರಣೆ ನಡೆಸಿ ಅಧಿಕಾರಿಯನ್ನು ಕುಟುಂಬಕ್ಕೆ ಒಪ್ಪಿಸಿದ್ದಾರೆ. ಅ. 13ರಂದು ಕಚೇರಿ ಕೆಲಸ ಎಂದು ಹೇಳಿ ಗದಗದಿಂದ ಬೆಂಗಳೂರಿಗೆ ತೆರಳಿದ್ದ ಪರ್ವಿಜ್ ಅಲ್ಲಿಂದ ನಾಪತ್ತೆಯಾಗಿದ್ದರು. ಕೆಆರ್‌ಐಡಿಎಲ್ ಬೆಳಗಾವಿ ವಿಭಾಗದ ಎಂಡಿಗೆ ಬರೆದಿರುವ ಪತ್ರ ಬಹಿರಂಗವಾಗಿ ನಾಪತ್ತೆ ಕೇಸ್ […] The post ಗದಗದಿಂದ ನಾಪತ್ತೆ, ಮುಂಬೈನಲ್ಲಿ ಪತ್ತೆ: 40 ದಿನಗಳ ಬಳಿಕ ಮನೆಗೆ ಮರಳಿದ ಪರ್ವೀಜ್ appeared first on ONLINE.

ನನ್ನ ತಲೆಗೆ ಸ್ಟಿಂಗ್ ಕಟ್ಟಲು ಡಿ.ಕೆ. ಶಿವಕುಮಾರ್, ಪ್ರಿಯಾಂಕ್ ಖರ್ಗೆ ಸಂಚು ; ಹೆಚ್.ಡಿ.ಕುಮಾರಸ್ವಾಮಿ

ಹಾಸನ : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಸ್ಟಿಂಗ್ ಮಾಡಿದ್ದ ಆರೋಪಿ ನಾನೇ ಸ್ಟಿಂಗ್ ಮಾಡಿದ್ದು ಎಂದು ಸತ್ಯ ಒಪ್ಪಿಕೊಂಡ ಮೇಲೆಯೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರಿಬ್ಬರು ಇಡೀ ಪ್ರಕರಣವನ್ನು ನನ್ನ ಕಡೆಗೆ ತಿರುಗಿಸಿ ನನ್ನ ಬಗ್ಗೆ ಅನುಮಾನ ಹುಟ್ಟುವಂತೆ ಮಾಡಲು ವ್ಯವಸ್ಥಿತ ಷಡ್ಯಂತ್ರ ರೂಪಿಸಿದ್ದಾರೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಗಂಭೀರ ಆರೋಪ ಮಾಡಿದರು. ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಮಾವಿನಕೆರೆ ಬೆಟ್ಟದಲ್ಲಿ ಶನಿವಾರ ಬೆಳಗ್ಗೆ ಶ್ರೀ ರಂಗನಾಥಸ್ವಾಮಿ […] The post ನನ್ನ ತಲೆಗೆ ಸ್ಟಿಂಗ್ ಕಟ್ಟಲು ಡಿ.ಕೆ. ಶಿವಕುಮಾರ್, ಪ್ರಿಯಾಂಕ್ ಖರ್ಗೆ ಸಂಚು ; ಹೆಚ್.ಡಿ.ಕುಮಾರಸ್ವಾಮಿ appeared first on nudikarnataka.

ಅನೆ ದಂತ ಅಕ್ರಮ ಸಾಗಾಟ: ಇಬ್ಬರ ಬಂಧನ

ಮೈಸೂರು,ಅಕ್ಟೋಬರ್,24,2026 (www.justkannada.in):  ಅಕ್ರಮವಾಗಿ ಆನೆ ದಂತ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನ ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ. ಹುಣಸೂರು ತಾಲ್ಲೂಕು ಬಲ್ಲೇನಹಳ್ಳಿ ಗ್ರಾಮದ ರವಿಚಂದ್ರ ಜೆ., ಕ್ಯಾತಮಾರನಹಳ್ಳಿ,ಯ ರಾಜೇಶ್ ಜೆ ಬಂಧಿತ ಆರೋಪಿಗಳು ಬಂಧಿತರು ಮೈಸೂರು ಜಿಲ್ಲೆ, ಮೈಸೂರು ತಾಲ್ಲೂಕು, ಚಿಕ್ಕಹಳ್ಳಿ ಗ್ರಾಮ ವ್ಯಾಪ್ತಿಯ ಶ್ರೀರಾಮ ಬಡಾವಣೆಯ ಮೊಸಂಬಾಯನಹಳ್ಳಿ ರಸ್ತೆಯಲ್ಲಿ ಆನೆ ದಂತ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದುದ್ದನ್ನು ಪತ್ತೆಹಚ್ಚಿ ಆರೋಪಿಗಳಿಂದ ಒಂದು ಆನೆದಂತ, ಆನೆದಂತ ಸಾಗಾಣಿಕೆ ಮಾಡಲು ಬಳಸಿದ್ದ ಬಜಾಜ್ ಪಲ್ಸರ್ 220 SF ಬೈಕ್, ಬ್ಯಾಗ್‌ಗಳು ಮತ್ತು ಎರಡು […]

ಬುದ್ಧರು ವೈಜ್ಞಾನಿಕ ಚಿಂತನೆ ಮತ್ತು ಸಮಾನತೆಯ ಸಾರವಿರುವ ಧರ್ಮವನ್ನು ಸ್ಥಾಪಿಸಿದ ಮಹಾನ್ ಚೇತನ- ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ

ಚಾಮರಾಜನಗರ:,ಅಕ್ಟೋಬರ್,24,2026 (www.justkannada.in): ಜಗತ್ತಿನಾದ್ಯಂತ ಅಶಾಂತಿ, ಅಸಹನೆ ಮತ್ತು ಹಿಂಸಾಚಾರ ಹೆಚ್ಚುತ್ತಿರುವ ಇಂದಿನ ಸಂದರ್ಭದಲ್ಲಿ, ಭಗವಾನ್ ಬುದ್ಧರ ಶಾಂತಿ, ಕರುಣೆ, ಸಮಾನತೆ ಹಾಗೂ ಅಹಿಂಸೆಯ ಬೋಧನೆಗಳು ಮಾನವಕುಲದ ಸಂಕಷ್ಟಗಳಿಗೆ ಪರಿಹಾರವಾಗಬಲ್ಲವು ಎಂದು ನಗರಾಭಿವೃದ್ಧಿ ಸಚಿವರಾದ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಅಭಿಪ್ರಾಯಪಟ್ಟರು. ಚಾಮರಾಜನಗರದ ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಅಂತಾರಾಷ್ಟ್ರೀಯ ಬೌದ್ಧ ಮಹಾ ಸಮ್ಮೇಳನದಲ್ಲಿ ಪಾಲ್ಗೊಂಡು, ಭಗವಾನ್ ಬುದ್ಧ ಹಾಗೂ ಸಂವಿಧಾನ ಶಿಲ್ಪಿ ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗಳಿಗೆ ಪುಷ್ಪನಮನ ಸಲ್ಲಿಸಿ ಮಾತನಾಡಿದ […]

ವಾರ್ತಾ ಇಲಾಖೆಯ ಹುದ್ದೆಗೆ ದಂತವೈದ್ಯೆಯ ನೇಮಕ

ನವದೆಹಲಿ,ಅಕ್ಟೋಬರ್,24,2026(www.justkannada.in): ವಾರ್ತಾ ಇಲಾಖೆಯ ಹುದ್ದೆಗಳನ್ನ ನಿರ್ವಹಿಸಲು  ತಾಂತ್ರಿಕ ಪರಿಣಿತಿ ಹೊಂದಿರುವ ಅಗತ್ಯವಿದ್ದು ಪತ್ರಿಕೋದ್ಯಮ/ ಸಮೂಹ ಸಂವಹನ ವಿದ್ಯಾರ್ಹತೆ ಹೊಂದಿರಬೇಕು. ಆದರೆ  ವಾರ್ತಾ ಇಲಾಖೆಯ ನವದೆಹಲಿ ಕಚೇರಿಯ ಉಪನಿರ್ದೇಶಕ ಹುದ್ದೆಗೆ  ದಂತವೈದ್ಯಾಧಿಕಾರಿಯೊಬ್ಬರನ್ನು ನಿಯೋಜಿಸಿ ಆದೇಶ ಹೊರಡಿಸಲಾಗಿದ್ದು ಚರ್ಚೆಗೆ ಗ್ರಾಸವಾಗಿದೆ. ಕರ್ನಾಟಕ ವಾರ್ತಾ ಹಾಗೂ ಸಾರ್ವಜನಿಕ ಸಂಪರ್ಕ ಇಲಾಖೆ ಅಭಿಪ್ರಾಯ ಬದಿಗಿಟ್ಟು ಈ ಕ್ರಮ ಕೈಗೊಳ್ಳಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.  ಈ ಹುದ್ದೆ ಹಲವು ತಿಂಗಳುಗಳಿಂದ ಖಾಲಿ ಇತ್ತು. ಕರ್ನಾಟಕ ಭವನದಲ್ಲಿರುವ ಉಪನಿರ್ದೇಶಕರ ಕಚೇರಿಯಲ್ಲಿ ಸದ್ಯ ‘ಸಿ’ ದರ್ಜೆಯ […]

ರಾಯಚೂರಿನಲ್ಲಿ ಬೆಚ್ಚಿಬೀಳಿಸುವ ದಂಧೆ ಬಯಲು: ಹೂತಿದ್ದ ಮೃತದೇಹಗಳ ಅಕ್ರಮ ಸಾಗಾಟ, ಮಾರಾಟ

ರಾಯಚೂರು: ಮೃತರಿಗೆ ಅಂತಿಮ ವಿದಾಯ ಹೇಳುವ ಸ್ಮಶಾನದಲ್ಲೇ ಹೂಳಲಾದ ಮೃತದೇಹಗಳನ್ನು ಹೊರತೆಗೆದು ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪ ರಾಯಚೂರಿನಲ್ಲಿ ಬೆಳಕಿಗೆ ಬಂದಿದೆ. ನಗರದ ಮಂತ್ರಾಲಯ ರಸ್ತೆಯಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ಈ ಘಟನೆ ನಡೆದಿದೆ. ಮೃತದೇಹಗಳನ್ನು ಖಾಸಗಿ ವೈದ್ಯಕೀಯ ಕಾಲೇಜಿಗೆ ಸಾಗಿಸಲಾಗುತ್ತಿತ್ತು ಎಂಬ ಆರೋಪ ಕೇಳಿಬಂದಿದೆ. ಸ್ಥಳೀಯರೇ ಈ ಕೃತ್ಯವನ್ನು ಪತ್ತೆಹಚ್ಚಿ ಸಂಬಂಧಪಟ್ಟವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸ್ಮಶಾನದಲ್ಲೇ ಮೃತದೇಹಗಳ ಅಕ್ರಮ ಸಾಗಾಟ ರಾಯಚೂರು ನಗರದ […] Source

ಮೈಸೂರಿನ ಸಿಎಫ್‌ಟಿಆರ್‌ಐನಲ್ಲಿ 28 ತಾಂತ್ರಿಕ ಹುದ್ದೆಗಳ ನೇಮಕಾತಿ! ಇಲ್ಲಿದೆ ಪೂರ್ತಿ ಮಾಹಿತಿ

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಮೈಸೂರಿನ ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾಲಯವು (CFTRI) 28 ತಾಂತ್ರಿಕ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ. ಈ ಪೈಕಿ ... ಕ್ಲಿಕ್ ಮಾಡಿ

ಶಿವಮೊಗ್ಗ–ತುಮಕೂರು ರೈಲು ಸೇರಿ 10 ರೈಲುಗಳ ಸಂಚಾರ ರದ್ದು; ಜನಶತಾಬ್ದಿ ರೈಲು ಮಾರ್ಗ ಬದಲು! ಕಾರಣ ಇಲ್ಲಿದೆ

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ನೈಋತ್ಯ ರೈಲ್ವೆ ವ್ಯಾಪ್ತಿಯ ಟಿಪಟೂರು ಮತ್ತು ಹೊನ್ನವಳ್ಳಿ ರೋಡ್ ರೈಲು ನಿಲ್ದಾಣಗಳ ನಡುವಿನ ಲೆವೆಲ್ ಕ್ರಾಸಿಂಗ್ ಸಂಖ್ಯೆ 88ರಲ್ಲಿ ... ಕ್ಲಿಕ್ ಮಾಡಿ

ಸಚಿವರ ಸಮ್ಮುಖದಲ್ಲೇ ನಕಲಿ ಮತದಾನ ಆರೋಪ: ಪ್ರಕರಣ ದಾಖಲಿಸಲು ಶಾಸಕ ಟೆಂಗಿನಕಾಯಿ ಆಗ್ರಹ

ಹೊಸದಿಗಂತ ವರದಿ ಹುಬ್ಬಳ್ಳಿ: ಚುನಾವಣಾ ಆಯೋಗದ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ(ಎಸ್‌ಐಆರ್) ಮೂಲಕ ಮತಗಳ್ಳತನ ಮಾಡಲಾಗುತ್ತಿದೆ ಎಂದು ಆರೋಪಿಸುವ ಕಾಂಗ್ರೆಸ್, ಅಧಿಕಾರ ದುರಪಯೋಗ ಪಡಿಸಿಕೊಂಡು ಪದವೀಧರ ಮತ ಕ್ಷೇತ್ರದ ಚುನಾವಣೆಯಲ್ಲಿ ನಕಲಿ ಮತದಾನ ಮಾಡಿಸಿದೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಆರೋಪಿಸಿದರು. ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಸಾಕ್ಷ್ಯಾಧಾರಗಳಾದ ವಿಡಿಯೋ ದೃಶ್ಯ ಹಾಗೂ ಚಿತ್ರಗಳ ಮೂಲಕ ತೋರಿಸುವ ಮೂಲಕ ಕಾಂಗ್ರೆಸ್ ಸರ್ಕಾರ ವಿರುದ್ಧ ಹರಿಹಾಯ್ದರು. ಹಾವೇರಿ ಬೂತ್ ನಂಬರ್ 85 ರಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಘಟಕದ ಅಧ್ಯಕ್ಷ ಸಂಜೀವಕುಮಾರ […] The post ಸಚಿವರ ಸಮ್ಮುಖದಲ್ಲೇ ನಕಲಿ ಮತದಾನ ಆರೋಪ: ಪ್ರಕರಣ ದಾಖಲಿಸಲು ಶಾಸಕ ಟೆಂಗಿನಕಾಯಿ ಆಗ್ರಹ appeared first on ONLINE.

Weekly Horoscope :ಅಕ್ಟೋಬರ್ ಕೊನೆಯ ವಾರ ಈ ರಾಶಿಯವರಿಗೆ ಗೇಮ್ ಚೇಂಜರ್; ಹಣಕ್ಕಿರಲ್ಲ ಕೊರತೆ, ಅದೃಷ್ಟದ ವಾರ

Weekly Horoscope :ಅಕ್ಟೋಬರ್ ಕೊನೆಯ ವಾರ ಈ ರಾಶಿಯವರಿಗೆ ಗೇಮ್ ಚೇಂಜರ್; ಹಣಕ್ಕಿರಲ್ಲ ಕೊರತೆ, ಅದೃಷ್ಟದ ವಾರ. Weekly horoscope october 26 to november 1st lucky zodiac sign zodiac prediction lucky number colour of all sign.