Filters

Channels
Topics
Other Filters

ಶೀಘ್ರದಲ್ಲೇ ಬೆಂಗಳೂರು-ಮುಂಬೈ ನಡುವೆ ವಂದೇ ಭಾರತ್ ಸ್ಲೀಪರ್ ರೈಲು

ಬೆಂಗಳೂರು ಮತ್ತು ಮುಂಬೈ ನಡುವೆ ಪ್ರಯಾಣಿಸುವ ರೈಲು ಪ್ರಯಾಣಿಕರಿಗೆ ಸಿಹಿಸುದ್ದಿ ಸಿಗುವ ನಿರೀಕ್ಷೆಯಿದೆ. ಬಹುನಿರೀಕ್ಷಿತ ಬೆಂಗಳೂರು–ಮುಂಬೈ ವಂದೇ ಭಾರತ್ ಸ್ಲೀಪರ್ ರೈಲು ಸೇವೆಗೆ ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವದ ದಿನ ಚಾಲನೆ ದೊರೆಯುವ ಸಾಧ್ಯತೆಯಿದೆ. ರೈಲ್ವೆ ಇಲಾಖೆಯ ಅಂತಿಮ ಅಧಿಕೃತ ಘೋಷಣೆ ಇನ್ನಷ್ಟೇ ಹೊರಬೀಳಬೇಕಿದ್ದು, ಹೊಸ ರೈಲು ಸೇವೆ ಆರಂಭವಾದರೆ ಎರಡು ಪ್ರಮುಖ ನಗರಗಳ ನಡುವಿನ ಪ್ರಯಾಣ ಮತ್ತಷ್ಟು ಆರಾಮದಾಯಕವಾಗುವ ನಿರೀಕ್ಷೆಯಿದೆ. ಬೆಂಗಳೂರು–ಮುಂಬೈ ನಡುವೆ ಹೊಸ ರೈಲು ಸೇವೆ  ಮಾಹಿತಿಯ ಪ್ರಕಾರ, ದಕ್ಷಿಣ ಭಾರತದ ಮೊದಲ ವಂದೇ […] Source

ಶಿವಮೊಗ್ಗ ದಸರಾ ಮಹೋತ್ಸವಕ್ಕೆ ನಾಳೆ ತೆರೆ: ಅಂಬಾರಿ ಮೆರವಣಿಗೆ, ಬನ್ನಿ ಮುಡಿಯುವ ಕಾರ್ಯಕ್ರಮದ ಸಂಪೂರ್ಣ ವಿವರ ಇಲ್ಲಿದೆ!

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ: ಕಳೆದ 9 ದಿನಗಳಿಂದ ಶಿವಮೊಗ್ಗದಲ್ಲಿ ವೈಭವದಿಂದ ನಡೆಯುತ್ತಿರುವ ದಸರಾ ಹಬ್ಬಕ್ಕೆ ನಾಳೆ ಬನ್ನಿ ಮುಡಿಯುವ ಕಾರ್ಯಕ್ರಮದ ಮೂಲಕ ತೆರೆ ಬೀಳಲಿದೆ. ... ಕ್ಲಿಕ್ ಮಾಡಿ

UPSC Current Affairs Quiz – 20 October 2026 | Daily Prelims Quiz

  The Current Affairs Quiz is a daily quiz based on the DAILY CURRENT AFFAIRS AND PIB SUMMARY from the previous day, as posted on our website. It covers all relevant news sources and is designed to test your knowledge of current events. Solving these questions will help you retain both concepts and facts relevant … Continue reading "UPSC Current Affairs Quiz – 20 October 2026 | Daily Prelims Quiz" The post UPSC Current Affairs Quiz – 20 October 2026 | Daily Prelims Quiz appeared first on INSIGHTS IAS - Simplifying UPSC IAS Exam Preparation.

ಕೋಚ್ ಜೊತೆ ಕಿರಿಕ್, ತಂಡ ತೊರೆದ ಬೆನ್ನಲ್ಲೇ ರೊನಾಲ್ಡೊಗೆ ಶಾಕ್: 30 ದಿನ ನಿಷೇಧ ಹೇರಿದ ಫೆಡರೇಷನ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಫುಟ್‌ಬಾಲ್ ಜಗತ್ತಿನ ದಿಗ್ಗಜ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊಗೆ ಪೋರ್ಚುಗಲ್ ಫುಟ್‌ಬಾಲ್ ಫೆಡರೇಷನ್ (FPF) ಶಿಸ್ತು ಕ್ರಮ ಕೈಗೊಂಡಿದೆ. ರಾಷ್ಟ್ರೀಯ ತಂಡದ ಶಿಬಿರವನ್ನು ತೊರೆದ ಪ್ರಕರಣಕ್ಕೆ ಸಂಬಂಧಿಸಿದಂತೆ ರೊನಾಲ್ಡೊಗೆ 30 ದಿನಗಳ ಅಮಾನತು ಹಾಗೂ 255 ಯುರೋ ದಂಡ ವಿಧಿಸಲಾಗಿದೆ ಎಂದು ಫೆಡರೇಷನ್ ಹೇಳಿದೆ. 41 ವರ್ಷದ ಸ್ಟಾರ್ ಆಟಗಾರನ ವಿರುದ್ಧದ ಆರೋಪವನ್ನು ಶಿಸ್ತು ಸಮಿತಿ ಎತ್ತಿಹಿಡಿದಿದ್ದು, ಅವರು ತಪ್ಪೊಪ್ಪಿಕೊಂಡಿರುವುದು ಮತ್ತು ಹಿಂದಿನ ಶಿಸ್ತು ದಾಖಲೆ ಉತ್ತಮವಾಗಿರುವುದು ಶಿಕ್ಷೆಯ ಪ್ರಮಾಣ ಕಡಿಮೆಯಾಗಲು ಕಾರಣವಾಗಿದೆ ಎಂದು […] The post ಕೋಚ್ ಜೊತೆ ಕಿರಿಕ್, ತಂಡ ತೊರೆದ ಬೆನ್ನಲ್ಲೇ ರೊನಾಲ್ಡೊಗೆ ಶಾಕ್: 30 ದಿನ ನಿಷೇಧ ಹೇರಿದ ಫೆಡರೇಷನ್ appeared first on ONLINE.

ಇಡೀ ದೇಶದಲ್ಲಿ ಕಬ್ಬು ಬೆಳೆಗಾರರಿಗೆ ನ್ಯಾಯ ದೊರಕಿಸಿಕೊಟ್ಟಿದ್ದು ಕೇಂದ್ರ ಸರ್ಕಾರ- ಬಿ.ವೈ. ವಿಜಯೇಂದ್ರ

ಬೆಂಗಳೂರು,ಅಕ್ಟೋಬರ್,20,2026 (www.justkannada.in):  ಇಡೀ ದೇಶದಲ್ಲಿ ಕಬ್ಬು ಬೆಳೆಗಾರರಿಗೆ ನ್ಯಾಯ ದೊರಕಿಸಿಕೊಟ್ಟಿದ್ದು ನರೇಂದ್ರ ಮೋದಿ ಅವರ ನೇತೃತ್ವದ ಎನ್ ಡಿಎ ಸರ್ಕಾರ. ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು. ಇಂದು ಮಾಧ್ಯಮಗಳ ಜೊತೆ  ಮಾತನಾಡಿದ ಬಿವೈ ವಿಜಯೇಂದ್ರ,, ಮೋದಿ ಅವರು ಬಂದ ಮೇಲೆ ಎಂಎಸ್ ಪಿ ತಂದರು.  ಎಥೆನಾಲ್ ಉತ್ಪಾದನೆಗೆ ಅವಕಾಶ ನೀಡಿದರು. ಕಬ್ಬು ಅರೆಯುವ ಕಾರ್ಖಾನೆಗಳಿಗೆ ಅನುಕೂಲ ಆಗುವ ನೀತಿಯನ್ನು ಜಾರಿ ಮಾಡಿದ್ದಾರೆ. ಹಣಕಾಸು ಸಹಾಯ ಸೇರಿದಂತೆ ಹಲವು ರೀತಿಯಲ್ಲಿ ಅನುಕೂಲ ಮಾಡಿದ್ದಾರೆ ಎಂದರು. ಕಬ್ಬು ಬೆಳೆಗಾರರು […]

ಗ್ಯಾರಂಟಿ ನ್ಯೂಸ್‌ ಕಚೇರಿಯಲ್ಲಿ ಅದ್ಧೂರಿ ಆಯುಧ ಪೂಜೆ

ಬೆಂಗಳೂರು: ನಾಡಿನಾದ್ಯಂತ ಇಂದು ಆಯುಧ ಪೂಜೆಯ ಸಂಭ್ರಮ ಮನೆಮಾಡಿದೆ. ನವರಾತ್ರಿ ಮಹೋತ್ಸವದ ಪ್ರಮುಖ ಆಚರಣೆಗಳಲ್ಲಿ ಒಂದಾದ ಆಯುಧ ಪೂಜೆಯನ್ನು ಜನರು ಭಕ್ತಿ, ಶ್ರದ್ಧೆ ಹಾಗೂ ಸಡಗರದಿಂದ ಆಚರಿಸುತ್ತಿದ್ದಾರೆ. ತಮ್ಮ ದಿನನಿತ್ಯದ ಕೆಲಸಗಳಿಗೆ ನೆರವಾಗುವ ಉಪಕರಣಗಳು, ಯಂತ್ರಗಳು ಹಾಗೂ ವಾಹನಗಳಿಗೆ ಪೂಜೆ ಸಲ್ಲಿಸುವ ಮೂಲಕ ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಆಯುಧ ಪೂಜೆಯ ಶುಭದಿನದಂದು ಗ್ಯಾರಂಟಿ ನ್ಯೂಸ್ ಕಚೇರಿಯಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.  ಗ್ಯಾರಂಟಿ ನ್ಯೂಸ್ ಕಚೇರಿಯಲ್ಲಿ ಆಯುಧ ಪೂಜೆಯನ್ನು ಭಕ್ತಿ ಭಾವದಿಂದ ಹಾಗೂ ಅದ್ಧೂರಿಯಾಗಿ ನೆರವೇರಿಸಲಾಯಿತು.  ಗ್ಯಾರಂಟಿ ನ್ಯೂಸ್ ಸಂಸ್ಥೆಯ […] Source

ರೈತರ ಹೋರಾಟ: ಪ್ರಧಾನಿ ಮೋದಿ ಭೇಟಿಗೆ ಸಮಯ ಕೇಳಿದ್ದೇವೆ-ಸಿಎಂ ಡಿಕೆ ಶಿವಕುಮಾರ್

ಬೆಂಗಳೂರು,ಅಕ್ಟೋಬರ್,20,2026 (www.justkannada.in): ರಾಜ್ಯದಲ್ಲಿ ಕಬ್ಬುಬೆಳೆಗಾರರಿಂದ  ಹೋರಾಟ ನಡೆಸುತ್ತಿರುವ ಸಂಬಂಧ ಪ್ರತಿ ಟನ್ ಕಬ್ಬಿಗೆ 5,500 ರೂಪಾಯಿ ಬೆಲೆ ನಿಗದಿ ಸೇರಿ ವಿವಿಧ ಬೇಡಿಕೆಗಳನ್ನ ಈಡೇರಿಸುವಂತೆ ಆಗ್ರಹಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದ ಹಿನ್ನಲೆಯಲ್ಲಿ ಪ್ರಧಾನಿ ಮೋದಿ ಅವರ ಭೇಟಿಗೆ ಸಮಯ ಕೇಳಿದ್ದೇವೆ. ಸಮಯ ನಿಗದಿಯಾಗಿಲ್ಲ ಎಂದು ಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ. ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಡಿಕೆ ಶಿವಕುಮಾರ್, ರೈತರ ಸಮಸ್ಯೆ ಕಾರ್ಖಾನೆಗಳ ಮಾಲೀಕರಿಗೆ ತಿಳಿಸಿದ್ದೇನೆ. ರೈತರು, ಸಕ್ಕೆರೆ ಕಾರ್ಖಾನೆಯವರ ಜತೆ ಪ್ರತ್ಯೇಕವಾಗಿ ಮಾತಾಡಬೇಕಿದೆ. ಕೇಂದ್ರ […]

ಬೆಂಗಳೂರು–ಮುಂಬೈಗೆ ವಂದೇ ಭಾರತ್ ಸ್ಲೀಪರ್ ರೈಲು: 24 ಗಂಟೆಯ ಪ್ರಯಾಣ ಇನ್ಮುಂದೆ 16 ಗಂಟೆಗಳಲ್ಲಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಕರ್ನಾಟಕ ರಾಜ್ಯೋತ್ಸವದ ದಿನವಾದ ನವೆಂಬರ್ 1ರಂದು ಬೆಂಗಳೂರು–ಮುಂಬೈ ನಡುವೆ ವಂದೇ ಭಾರತ್ ಸ್ಲೀಪರ್ ರೈಲಿನ ಉದ್ಘಾಟನಾ ವಿಶೇಷ ಸೇವೆ ಆರಂಭಿಸುವ ನಿರೀಕ್ಷೆಯಿದೆ. ಹೌದು! ನೈರುತ್ಯ ರೈಲ್ವೆ ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ, ಈ ರೈಲು ಎರಡು ಪ್ರಮುಖ ವಾಣಿಜ್ಯ ನಗರಗಳ ನಡುವಿನ ಪ್ರಯಾಣದ ಅವಧಿಯನ್ನು ಸುಮಾರು 16 ಗಂಟೆಗಳಿಗೆ ಇಳಿಸುವ ಉದ್ದೇಶ ಹೊಂದಿದೆ. ಆದರೆ ನಿಯಮಿತ ಸಂಚಾರದ ವೇಳಾಪಟ್ಟಿ ಮತ್ತು ಅಂತಿಮ ಕಾರ್ಯಾಚರಣೆಯ ವಿವರಗಳನ್ನು ರೈಲ್ವೆ ಇಲಾಖೆ ಇನ್ನೂ ಅಧಿಕೃತವಾಗಿ ಪ್ರಕಟಿಸಬೇಕಿದೆ. ಯಾವಾಗ […] The post ಬೆಂಗಳೂರು–ಮುಂಬೈಗೆ ವಂದೇ ಭಾರತ್ ಸ್ಲೀಪರ್ ರೈಲು: 24 ಗಂಟೆಯ ಪ್ರಯಾಣ ಇನ್ಮುಂದೆ 16 ಗಂಟೆಗಳಲ್ಲಿ appeared first on ONLINE.

ಮುಂಬೈನ 13 ಅಂತಸ್ತಿನ ಕಟ್ಟಡದಲ್ಲಿ ಬೆಂಕಿ ಅವಘಡ: ಮೂವರು ಮಕ್ಕಳು ಸೇರಿ 9 ಮಂದಿಗೆ ಗಾಯ

ಮುಂಬೈ: ಮಹಾರಾಷ್ಟ್ರದ ಮುಂಬೈ ನಗರದ ಕುರ್ಲಾ ಪಶ್ಚಿಮದಲ್ಲಿರುವ 13 ಅಂತಸ್ತಿನ ಅಪಾರ್ಟ್‌ಮೆಂಟ್‌ನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಮೂವರು ಮಕ್ಕಳು ಸೇರಿದಂತೆ ಒಟ್ಟು ಒಂಬತ್ತು ಮಂದಿ ಗಾಯಗೊಂಡಿದ್ದಾರೆ. ಬೆಳಗಿನ ಜಾವ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡು ದಟ್ಟ ಹೊಗೆ ಆವರಿಸಿದ್ದರಿಂದ ನಿವಾಸಿಗಳಲ್ಲಿ ಆತಂಕ ಸೃಷ್ಟಿಯಾಗಿತ್ತು. ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದು, ಸಂಭವಿಸಬಹುದಾಗಿದ್ದ ಭಾರೀ ಅನಾಹುತವನ್ನು ತಪ್ಪಿಸಿದ್ದಾರೆ. ಬೆಳಗಿನ ಜಾವ ಬೆಂಕಿ ಕಾಣಿಸಿಕೊಂಡು ಆತಂಕ ಕುರ್ಲಾ ಪಶ್ಚಿಮದಲ್ಲಿರುವ ಕೊಹಿನೂರ್ ಎಚ್‌ಡಿಐಎಲ್ ಕಟ್ಟಡ ಸಂಖ್ಯೆ 5ರಲ್ಲಿ ಅಕ್ಟೋಬರ್ 20ರಂದು […] Source

ಬಾಂಗ್ಲಾ, ಫ್ರಾನ್ಸ್ ಮಾದರಿಯಲ್ಲಿ ದೇಶದಲ್ಲೂ ಆಡಳಿತ ಬದಲಾವಣೆಗೆ ವ್ಯವಸ್ಥಿತ ಪಿತೂರಿ: ಮೋಹನ್ ಭಾಗವತ್

ನಾಗ್ಪುರ, ಅಕ್ಟೋಬರ್ 20,2026 (www.justkannada.in):  ಬಾಂಗ್ಲಾದೇಶ, ನೇಪಾಳ ಹಾಗೂ ಯುರೋಪ್‌ ನ ಫ್ರಾನ್ಸ್‌ನಲ್ಲಿ ನಡೆದ ಹಿಂಸಾತ್ಮಕ ದಂಗೆಗಳ ಮಾದರಿಯಲ್ಲೇ ಭಾರತದಲ್ಲೂ ‘ಆಡಳಿತ ಬದಲಾವಣೆ ಮಾಡಲು ಹುನ್ನಾರ. ವ್ಯವಸ್ಥಿತ ಪಿತೂರಿಗಳು ನಡೆಯುತ್ತಿವೆ. ಆದರೆ ಭಾರತದಲ್ಲಿ ಇಂತಹ ಅರಾಜಕತೆಯ ಪ್ರಯತ್ನಗಳು ಎಂದಿಗೂ ಸಫಲವಾಗಲ್ಲ  ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘ ಚಾಲಕ ಮೋಹನ್ ಭಾಗವತ್  ತಿಳಿಸಿದ್ದಾರೆ. ಇಂದು ನಾಗ್ಪುರದಲ್ಲಿ ನಡೆದ ವಾರ್ಷಿಕ ವಿಜಯದಶಮಿ ಉತ್ಸವದಲ್ಲಿ ಮಾತನಾಡಿದ ಮೋಹನ್ ಭಾಗವತ್ , ಫ್ರಾನ್ಸ್, ಬಾಂಗ್ಲಾದೇಶ ಮತ್ತು ನೇಪಾಳಗಳಲ್ಲಿ ಬೀದಿಗಿಳಿದು ಆಡಳಿತ ಬದಲಿಸಿದ […]

ಅರಮನೆಯಲ್ಲಿ ಆಯುಧ ಪೂಜೆ ಸಂಭ್ರಮ; ಆಯುಧಗಳಿಗೆ ಯದುವೀರ್ ಒಡೆಯರ್‌‌ರಿಂದ ವಿಶೇಷ ಪೂಜೆ

ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಧಾರ್ಮಿಕ ಆಚರಣೆಗಳಲ್ಲಿ ಒಂದಾದ ಆಯುಧ ಪೂಜೆಯನ್ನು ಮೈಸೂರು ಅರಮನೆಯಲ್ಲಿ ಸಾಂಪ್ರದಾಯಿಕ ವೈಭವದಿಂದ ನೆರವೇರಿಸಲಾಯಿತು. ಮಹಾನವಮಿಯ ಶುಭ ಸಂದರ್ಭದಲ್ಲಿ ರಾಜವಂಶಸ್ಥರಾದ ಯದುವೀರ್ ಒಡೆಯರ್‌‌ ಅವರು ಧಾರ್ಮಿಕ ವಿಧಿವಿಧಾನಗಳೊಂದಿಗೆ ಖಾಸಾ ಆಯುಧಗಳಿಗೆ ವಿಶೇಷ ಪೂಜೆ ಸಲ್ಲಿಸಿದರು. ಅರಮನೆಯ ಸಂಪ್ರದಾಯ ಮತ್ತು ರಾಜಪರಂಪರೆಯ ಪ್ರತೀಕವಾಗಿರುವ ಈ ಆಚರಣೆಯಲ್ಲಿ ಪಟ್ಟದ ಕತ್ತಿ, ಈಟಿ, ಗುರಾಣಿ, ಧನುರ್ಬಾಣ ಸೇರಿದಂತೆ ಹಲವು ಆಯುಧಗಳನ್ನು ಪೂಜಿಸಲಾಯಿತು. ವಿಜಯನಗರ ಸಾಮ್ರಾಜ್ಯದ ಕಾಲದಿಂದಲೂ ನಡೆದುಕೊಂಡು ಬಂದಿರುವ ಆಯುಧ ಪೂಜೆಯು ಮೈಸೂರು ಅರಮನೆಯ […] Source

ಸ್ಟಿಂಗ್ ಅಪರೇಷನ್ ಮುಚ್ಚಿ ಹಾಕುವ ಕೆಲಸ ಮಾಡುತ್ತಿದ್ದಾರೆ: ಸಿಬಿಐಗೆ ವಹಿಸಿ- ಛಲವಾದಿ ನಾರಾಯಣಸ್ವಾಮಿ

ಬೆಂಗಳೂರು, ಅಕ್ಟೋಬರ್,20,2026 (www.justkannada.in): ಸ್ಟಿಂಗ್ ಅಪರೇಷನ್ ಮುಚ್ಚಿ ಹಾಕುವ ಕೆಲಸ ಮಾಡುತ್ತಿದ್ದಾರೆ. ಸಿಬಿಐಗೆ ಪ್ರಕರಣದ ತನಿಖೆ ವಹಿಸಿ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದರು. ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ, ಸ್ಟಿಂಗ್ ಆಪರೇಷನ್ ಪ್ರಕರಣದ ತನಿಖೆಯನ್ ಸಿಬಿಐಗೆ ಕೊಡಿ. ಸ್ಟಿಂಗ್ ಆಪರೇಷನ್ ಮುಚ್ಚಿ ಹಾಕುವ ಕೆಲಸವನ್ನು ಮಾಡುತ್ತಿದ್ದಾರೆ.  ಇದರಲ್ಲಿ ಯಾರೇ ಭಾಗಿಯಾದರೂ ಅವರ ವಿರುದ್ದ ಕ್ರಮ ಆಗಬೇಕು. ಸ್ಟಿಂಗ್ ವಿಷಯದಲ್ಲಿ ಗೃಹ ಸಚಿವರು ಮಾತಾಡಿದರೆ ಸರಿಯಲ್ಲ.  ಗೃಹ ಖಾತೆ ವಹಿಸಿಕೊಂಡವರು ಬಹಳ […]

56.36 ಸೆಕೆಂಡ್‌ಗಳಲ್ಲಿ ಚಿನ್ನದ ಬೇಟೆ: ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ದಾಖಲೆ ಬರೆದ ದೀಪ್ತಿ ಜೀವಂಜಿ

ಹೊಸದಿಗಂತ ಡಿಜಿಟಲ್ ಡೆಸ್ಕ್: 2026ರ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಭಾರತದ ಪ್ಯಾರಾ ಅಥ್ಲೀಟ್ ದೀಪ್ತಿ ಜೀವಂಜಿ ಅಮೋಘ ಪ್ರದರ್ಶನ ನೀಡಿ ಚಿನ್ನದ ಪದಕ ಗೆದ್ದಿದ್ದಾರೆ. ಮಂಗಳವಾರ ನಡೆದ ಮಹಿಳೆಯರ 400 ಮೀಟರ್ ಟಿ20 ಓಟವನ್ನು ಕೇವಲ 56.36 ಸೆಕೆಂಡ್‌ಗಳಲ್ಲಿ ಪೂರ್ಣಗೊಳಿಸಿದ ಅವರು, ಹೊಸ ಗೇಮ್ಸ್ ದಾಖಲೆಯನ್ನೂ ನಿರ್ಮಿಸಿದ್ದಾರೆ. ಈ ಮೂಲಕ ಭಾರತಕ್ಕೆ ಐದನೇ ಚಿನ್ನದ ಪದಕ ತಂದುಕೊಟ್ಟಿದ್ದಲ್ಲದೆ, ಎರಡನೇ ದಿನದ ಸ್ಪರ್ಧೆಯಲ್ಲಿ ದೇಶದ ಮೊದಲ ಚಿನ್ನದ ಸಾಧಕಿಯಾಗಿದ್ದಾರೆ. 2024 ಪ್ಯಾರಾಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಪ್ಯಾರಿಸ್ 2024 ಪ್ಯಾರಾಲಿಂಪಿಕ್ಸ್‌ನಲ್ಲಿ […] The post 56.36 ಸೆಕೆಂಡ್‌ಗಳಲ್ಲಿ ಚಿನ್ನದ ಬೇಟೆ: ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ದಾಖಲೆ ಬರೆದ ದೀಪ್ತಿ ಜೀವಂಜಿ appeared first on ONLINE.

ಶಿವಮೊಗ್ಗದಲ್ಲಿ ಅಪರೂಪದ ಮಲಬಾರ್ ಪಿಟ್ ವೈಪರ್ ಹಾವು ಪತ್ತೆ: ಸ್ನೇಕ್​​​ ಕಿರಣ್​​ರಿಂದ ರಕ್ಷಣೆ! 

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ: ಮಲಬಾರ್ ಪಿಟ್ ವೈಪರ್ ಎಂಬ ಅಪರೂಪದ  ಹಾವು ನಗರದ ಗಾಡಿಕೊಪ್ಪ ಪೊಲೀಸ್ ಕ್ವಾಟ್ರಸ್‌ನಲ್ಲಿ ಪತ್ತೆಯಾಗಿದ್ದು, ಅದನ್ನು ಉರಗ ರಕ್ಷಕ ಸ್ನೇಕ್ ... ಕ್ಲಿಕ್ ಮಾಡಿ

ಮೈಸೂರು ಅರಮನೆಯಲ್ಲಿ ಅಯುಧ ಪೂಜಾ ಸಂಭ್ರಮ: ಪೂಜಾ ಕೈಂಕರ್ಯ ನೆರವೇರಿಸಿದ ರಾಜವಂಶಸ್ಥ ಯದುವೀರ್

ಮೈಸೂರು,ಅಕ್ಟೋಬರ್,20,2026(www.justkannada.in): ನಾಡಿನೆಲ್ಲಡೆ ದಸರಾ, ಆಯುಧ ಪೂಜೆ ಸಂಭ್ರಮವಾಗಿದ್ದು ಮೈಸೂರು ಅರಮನೆಯಲ್ಲಿ ಸಾಂಸ್ಕೃತಿಕ ವೈಭವ ಕಳೆಗಟ್ಟಿದೆ. ಮೈಸೂರಿನ ಅರಮನೆಯಲ್ಲಿ ಇಂದು ಬೆಳಗ್ಗೆಯಿಂದ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ಆರಂಭವಾಗಿವೆ. ಇಂದು ಸಾಂಪ್ರದಾಯಿಕವಾಗಿ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಆಯುಧಗಳಿಗೆ ಪೂಜೆ ಸಲ್ಲಿಕೆ ಮಾಡಿದರು.  ಮೊದಲು ಅರಮನೆಯ ಆನೆ ಬಾಗಿಲಿನ ಮೂಲಕ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸುಗಳು ಆಗಮಿಸಿ ಖಾಸಾ ಆಯುಧಗಳನ್ನು ಅರಮನೆಯಿಂದ ಕೋಡಿ ಸೋಮೇಶ್ವರ ದೇವಾಲಯಕ್ಕೆ ತೆಗೆದುಕೊಂಡು ಹೋಗಿ, ಅಲ್ಲಿ ಸ್ವಚ್ಛಗೊಳಿಸಲಾಯಿತು. ಬಳಿಕ, ಅಲ್ಲಿಂದ […]