ಕಳೆದ 11 ವರ್ಷಗಳಿಂದ ನೌಕರರ ಭವಿಷ್ಯ ನಿಧಿ (EPF) ಯೋಜನೆಯ ವೇತನ ಮಿತಿ ಸ್ಥಗಿತಗೊಂಡಿದ್ದು, ಇದರ ವೇತನ ಮಿತಿಯನ್ನು ಹೆಚ್ಚಳ ಮಾಡಬೇಕು ಎಂಬುದು ಉದ್ಯೋಗಿಗಳ ಬೇಡಿಕೆಯಾಗಿತ್ತು. ಈ ಪ್ರಕರಣ ಸುಪ್ರಿಂ ಕೋರ್ಟ್ ಮೆಟ್ಟಿಲೇರಿದ್ದರು ಯಾವುದೇ ಸುಳಿವು ಸಿಗಲಿಲ್ಲ. ಇದೀಗ ಕೇಂದ್ರ ಸರ್ಕಾರ ನಾಲ್ಕು ತಿಂಗಳೊಳಗೆ ನಿರ್ಧಾರ ತೆಗೆದುಕೊಳ್ಳುವಂತೆ ಸುಪ್ರೀಂ ಕೋರ್ಟ್ ಗೆ ಆದೇಶ ನೀಡಿದೆ. ಸಾಮಾಜಿಕ ಕಾರ್ಯಕರ್ತ ನವೀನ್ ಪ್ರಕಾಶ್ ನೌಟಿಯಾಲ್ ಸಲ್ಲಿಸಿದ ಅರ್ಜಿಯ ಮೇರೆಗೆ ಸೋಮವಾರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟಿನ ನ್ಯಾ. ಜೆ.ಕೆ. ಮಹೇಶ್ವರಿ […]
ಕಳೆದ 11 ವರ್ಷಗಳಿಂದ ನೌಕರರ ಭವಿಷ್ಯ ನಿಧಿ (EPF) ಯೋಜನೆಯ ವೇತನ ಮಿತಿ ಸ್ಥಗಿತಗೊಂಡಿದ್ದು, ಇದರ ವೇತನ ಮಿತಿಯನ್ನು ಹೆಚ್ಚಳ ಮಾಡಬೇಕು ಎಂಬುದು ಉದ್ಯೋಗಿಗಳ ಬೇಡಿಕೆಯಾಗಿತ್ತು. ಈ ಪ್ರಕರಣ ಸುಪ್ರಿಂ ಕೋರ್ಟ್ ಮೆಟ್ಟಿಲೇರಿದ್ದರು ಯಾವುದೇ ಸುಳಿವು ಸಿಗಲಿಲ್ಲ. ಇದೀಗ ಕೇಂದ್ರ ಸರ್ಕಾರ ನಾಲ್ಕು ತಿಂಗಳೊಳಗೆ ನಿರ್ಧಾರ ತೆಗೆದುಕೊಳ್ಳುವಂತೆ ಸುಪ್ರೀಂ ಕೋರ್ಟ್ ಗೆ ಆದೇಶ ನೀಡಿದೆ.
ಸಾಮಾಜಿಕ ಕಾರ್ಯಕರ್ತ ನವೀನ್ ಪ್ರಕಾಶ್ ನೌಟಿಯಾಲ್ ಸಲ್ಲಿಸಿದ ಅರ್ಜಿಯ ಮೇರೆಗೆ ಸೋಮವಾರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟಿನ ನ್ಯಾ. ಜೆ.ಕೆ. ಮಹೇಶ್ವರಿ ಮತ್ತು ನ್ಯಾ. ಎ.ಎಸ್. ಚಂದೂರ್ಕರ್ ಅವರ ದ್ವಿಸದಸ್ಯ ಪೀಠವು ಮಹತ್ವದ ಆದೇಶವನ್ನು ನೀಡಿದೆ.

ಉದ್ಯೋಗಿಗಳಿಗೆ ನೌಕರರ ಭವಿಷ್ಯ ನಿಧಿ (EPF) ಯೋಜನೆಯಲ್ಲಿ ವೇತನ ಮಿತಿಯನ್ನು ಹೆಚ್ಚಿಸುವ (EPF Wage Ceiling Hike) ವಿಷಯದ ಕುರಿತು ನಾಲ್ಕು ತಿಂಗಳೊಳಗೆ ನಿರ್ಧಾರ ತೆಗೆದುಕೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಅರ್ಜಿಯ ಪ್ರಕಾರ, ಈ ಯೋಜನೆಯಲ್ಲಿ 15,000 ರೂ.ಗಿಂತ ಹೆಚ್ಚಿನ ಮಾಸಿಕ ಆದಾಯ ಹೊಂದಿರುವ ಉದ್ಯೋಗಿಗಳನ್ನ ಸೇರಿಸಲಾಗಿಲ್ಲ.
ಇಪಿಎಫ್‌ಓ ಯೋಜನೆಯಡಿ 15 ಸಾವಿರ ರೂಪಾಯಿಗಳಿಗಿಂತ ಹೆಚ್ಚಿನ ಮಾಸಿಕ ವೇತನ ಹೊಂದಿರುವ ಉದ್ಯೋಗಿಗಳನ್ನು ಒಳಗೊಳ್ಳುವುದಿಲ್ಲ. ಆದರೆ ಹಲವು ರಾಜ್ಯಗಳಲ್ಲಿ ಕನಿಷ್ಠ ವೇತನವು ಈಗಾಗಲೇ ಈ ಮಿತಿಯನ್ನು ಮೀರಿದ್ದರು , EPF ವೇತನ ಮಿತಿಯಲ್ಲಿ ಮಾತ್ರ ಯಾವುದೇ ಬದಲಾವಣೆಗಳಾಗಿಲ್ಲ. ಇದರಿಂದ ಹೆಚ್ಚಿನ ಸಂಖ್ಯೆಯ ಉದ್ಯೋಗಿಗಳನ್ನು ಸಾಮಾಜಿಕ ಭದ್ರತೆ ಮತ್ತು ಭವಿಷ್ಯ ನಿಧಿ ಪ್ರಯೋಜನಗಳಿಂದ ವಂಚಿಸಲಾಗುತ್ತಿದೆ ಎಂದು ಅರ್ಜಿದಾರರ ವಕೀಲರಾದ ಪ್ರಣವ್ ಸಚ್‌ದೇವ ಮತ್ತು ನೇಹಾ ರಥಿ ಸುಪ್ರೀಂ ಕೋರ್ಟ್ ಗಮನಸೆಳೆದರು.
ಸುಪ್ರೀಂ ಕೋರ್ಟ್ ಆದೇಶದಲ್ಲಿ ಏನಿದೆ?
ಸುದ್ದಿ ಸಂಸ್ಥೆಯಾದ ಪಿಟಿಐ (PTI) ವರದಿ ಮಾಡಿರುವ ಪ್ರಕಾರ, ಎರಡು ವಾರಗಳಲ್ಲಿ ಅರ್ಜಿದಾರರಿಗೆ ಪ್ರಾತಿನಿಧ್ಯವನ್ನು ಆದೇಶದ ಪ್ರತಿಯೊಂದಿಗೆ ಸಲ್ಲಿಸುವಂತೆ ಮತ್ತು ನಾಲ್ಕು ತಿಂಗಳೊಳಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳುವಂತೆ ನಿರ್ದೇಶನ ನೀಡಿದೆ. ವೇತನ ಮಿತಿ ಹೆಚ್ಚಿಸುವ ಅಥವಾ ಯೋಜನೆಯನ್ನು ಸುಧಾರಿಸಲು ಸರ್ಕಾರ ಹೆಚ್ಚು ಸಮಯ ತೆಗೆದುಕೊಳ್ಳಬಾರದು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದೆ.
ಕಳೆದ 70 ವರ್ಷಗಳಲ್ಲಿ EPF ಯೋಜನೆಯ ವೇತನ ಮಿತಿಗಳಲ್ಲಿನ ಬದಲಾವಣೆಗಳು ಬಹಳ ಅನಿಯಮಿತವಾಗಿವೆ. ಕೆಲವೊಮ್ಮೆ 13-14 ವರ್ಷಗಳ ಮಧ್ಯಂತರದ ನಂತರ ಸಂಭವಿಸುತ್ತವೆ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ. ಈ ವೇಳೆ ಹಣದುಬ್ಬರ, ಕನಿಷ್ಠ ವೇತನ ಅಥವಾ ತಲಾ ಆದಾಯದಂತಹ ಆರ್ಥಿಕ ಸೂಚನೆಗಳೊಂದಿಗೆ ಯಾವುದೇ ಸಂಬಂಧವನ್ನು ಕಾಯ್ದುಕೊಳ್ಳಲಾಗಿಲ್ಲ. ಈ ಕಾರಣದಿಂದಲೇ ಪ್ರಸ್ತುತ ಕಡಿಮೆ ಸಂಖ್ಯೆಯ ಉದ್ಯೋಗಿಗಳು ಮಾತ್ರ EPF ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ ಎಂದು ಸುಪ್ರೀಂ ಕೋರ್ಟಿಗೆ ಸಲ್ಲಿಸಿದ್ದ ಅರ್ಜಿಯಲ್ಲಿ ತಿಳಿಸಲಾಗಿದೆ.
ಹಿಂದಿನ ಶಿಫಾರಸುಗಳು ಏನು?
“2022ರಲ್ಲಿ EPFO ಉಪಸಮಿತಿಯು ವೇತನ ಮಿತಿಯನ್ನು ಹೆಚ್ಚಿಸಲು ಮತ್ತು ಯೋಜನೆಯಲ್ಲಿ ಹೆಚ್ಚಿನ ಉದ್ಯೋಗಿಗಳನ್ನು ಸೇರಿಸಲು ಶಿಫಾರಸು ಮಾಡಿತ್ತು ಎಂದು ಅರ್ಜಿದಾರರು ಉಲ್ಲೇಖ ಮಾಡಿದ್ದರು. ಇದನ್ನು ಕೇಂದ್ರ ಮಂಡಳಿಯು ಸಹ ಅನುಮೋದಿಸಿದೆ. ಅದಾಗ್ಯೂ, ಕೇಂದ್ರ ಸರ್ಕಾರವು ಇಲ್ಲಿಯವರೆಗೆ ಈ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ” ಎಂದು ವೇತನ ಮಿತಿ ಹೆಚ್ಚಿಸುವಲ್ಲಿ ವಿಳಂಬವಾಗಲು ಸರ್ಕಾರದ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯು ಪ್ರಾಥಮಿಕ ಕಾರಣ ಎಂದು ವಿವರಿಸಲಾಗಿದೆ.
ಅರ್ಜಿಯ ಪ್ರಕಾರ, ಕಳೆದ 70 ವರ್ಷಗಳಲ್ಲಿ ಇಪಿಎಫ್ ಯೋಜನೆಯ ವೇತನ ಮಿತಿಗೆ ಮಾಡಲಾದ ಪರಿಷ್ಕರಣೆಗಳ ವಿಶ್ಲೇಷಣೆಯು ಮೊದಲ 30 ವರ್ಷಗಳಲ್ಲಿ ಇದು ಅಂತರ್ಗತ ಚೌಕಟ್ಟಾಗಿದ್ದರೂ, ಕಳೆದ ಮೂರು ದಶಕಗಳಲ್ಲಿ ಇದು ಹೆಚ್ಚಿನ ಉದ್ಯೋಗಿಗಳನ್ನು ಹೊರಗಿಡುವ ಒಂದು ಸಾಧನವಾಗಿ ಸ್ಪಷ್ಟವಾಗಿ ಮಾರ್ಪಟ್ಟಿದೆ ಎಂದು ಬಹಿರಂಗಪಡಿಸುತ್ತದೆ.
Previous Article
ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಆರೋಪ: ಉಪನ್ಯಾಸಕನ ಬಂಧನ
Next Article
ಇ-ಆಸ್ತಿ ಮಾಲೀಕರಿಗೆ Big News: ಹೊಸ ಸೌಲಭ್ಯದ ಮೂಲಕ ತಂತ್ರಾಶ ಕಲ್ಪಿಸಿರುವ ರಾಜ್ಯ ಸರ್ಕಾರ