Search

    Language Settings
    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    -1

    ಪರ್ಯಾಯಕ್ಕೆ ಮುಸ್ಲಿಂ ಸ್ನೇಹ ಸಮಿತಿಯ ಸಹಕಾರದ ಬಗ್ಗೆ ಜಾಲತಾಣದಲ್ಲಿ ಆಕ್ಷೇಪಾರ್ಹ ಬರಹ- ಓರ್ವನ ಬಂಧನ

    1 week ago

    ಉಡುಪಿ: ಫೇಸ್ ಬುಕ್‌ನಲ್ಲಿ ಪರ್ಯಾಯ ಉತ್ಸವಕ್ಕೆ ಜಿಲ್ಲಾ ಮುಸ್ಲಿಂ ಸ್ನೇಹ ಸಮಿತಿಯು ನೀಡಲಿರುವ ಸಹಕಾರದ ಕುರಿತು ಧರ್ಮ – ಧರ್ಮ,...

    The post ಪರ್ಯಾಯಕ್ಕೆ ಮುಸ್ಲಿಂ ಸ್ನೇಹ ಸಮಿತಿಯ ಸಹಕಾರದ ಬಗ್ಗೆ ಜಾಲತಾಣದಲ್ಲಿ ಆಕ್ಷೇಪಾರ್ಹ ಬರಹ- ಓರ್ವನ ಬಂಧನ first appeared on Udupi Times.



    ಉಡುಪಿ: ಫೇಸ್ ಬುಕ್‌ನಲ್ಲಿ ಪರ್ಯಾಯ ಉತ್ಸವಕ್ಕೆ ಜಿಲ್ಲಾ ಮುಸ್ಲಿಂ ಸ್ನೇಹ ಸಮಿತಿಯು ನೀಡಲಿರುವ ಸಹಕಾರದ ಕುರಿತು ಧರ್ಮ – ಧರ್ಮ, ಜನಾಂಗಗಳ ಮಧ್ಯೆ ದ್ವೇಷವನ್ನು ಉತ್ತೇಜಿಸುವ ಮತ್ತು ಸಾರ್ವಜನಿಕ ಸಾಮರಸ್ಯಕ್ಕೆ ತೊಂದರೆ ಮಾಡುವ ರೀತಿ ಆಕ್ಷೇಪಾರ್ಹ ಬರಹ ಬರೆದ ವ್ಯಕ್ತಿಯ ವಿರುದ್ಧ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಈ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಸುಧಾಕರ (37) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

    “Sudeep Appu Nitte” ಖಾತೆಯಲ್ಲಿ “ ಹಿಂದೂ ಮುಸ್ಲಿಂ ಸೌಹಾರ್ದತೆಯಿಂದ ಇರಬೇಕಾದರೆ ಈ ಸೌಹಾರ್ದ ಸಮಿತಿಯವರಿಗೆ ಎಷ್ಟೋ ಕಾರ್ಯಗಳಿವೆ. ಅದನ್ನ ಬಿಟ್ಟು ಹಿಂದುಗಳ ಪರ್ಯಾಯ ಮೆರವಣಿಗೆಯಲ್ಲಿ “ಧಫ್ ದುಫ್ ಡಮ್ “ಅಂತ ಕಾರ್ಯಕ್ರಮ ಮಾಡುವ ಅಗತ್ಯವಿಲ್ಲ. ಪರ್ಯಾಯದಲ್ಲಿ ಶರಬತ್‌, ನೀರಿನ ಬಾಟಲಿ ಹಂಚಿದ ಕೂಡಲೇ ಸೌಹಾರ್ದ ಬೆಳೆಯಲ್ಲ, ಇದರಿಂದ ಹಿಂದುಗಳಿಗೆ ನಂಬಿಕೆ ಏನು ನಿಮ್ಮ ಮೇಲೆ ಹೆಚ್ಚಲ್ಲ. ಬಾಕಿದ್ದನ್ನು ಹೇಳಬೇಕಾದವರು ಹೇಳಿದ್ದಾರೆ” ಎಂದು ಬರೆಯಲಾಗಿತ್ತು.

    ಇದು ಧರ್ಮ -ಧರ್ಮ, ಜನಾಂಗಗಳ ಮಧ್ಯೆ ದ್ವೇಷವನ್ನು ಉತ್ತೇಜಿಸುವ ಮತ್ತು ಸಾರ್ವಜನಿಕ ಸಾಮರಸ್ಯಕ್ಕೆ ತೊಂದರೆ ಮಾಡುವ ಪೊಸ್ಟ್ ಎಂಬ ಕಾರಣಕ್ಕೆ ಅಪರಾಧ ಕ್ರಮಾಂಕ 01/2026 ಕಲಂ 196(1), 353(2), 352 ಭಾರತೀಯ ನ್ಯಾಯ ಸಂಹಿತೆ 2023 ರಂತೆ ಪ್ರಕರಣ ದಾಖಲಾಗಿದೆ. ಈತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಲಯವು ಆರೋಪಿಗೆ 15 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದೆ.

    The post ಪರ್ಯಾಯಕ್ಕೆ ಮುಸ್ಲಿಂ ಸ್ನೇಹ ಸಮಿತಿಯ ಸಹಕಾರದ ಬಗ್ಗೆ ಜಾಲತಾಣದಲ್ಲಿ ಆಕ್ಷೇಪಾರ್ಹ ಬರಹ- ಓರ್ವನ ಬಂಧನ first appeared on Udupi Times.

    Click here to Read More
    Previous Article
    ಕುಂಬಾರ ಸಮಾಜದ ಅಭಿವೃದ್ಧಿಗೆ ಸರ್ಕಾರ ಬದ್ಧ : ಸಿಎಂ ಸಿದ್ದರಾಮಯ್ಯ
    Next Article
    ಸಮಾಜದಲ್ಲಿ ಅಸಮಾನತೆ ನೀಗಿಸುವವರೆಗೂ ಹೋರಾಟ, ಜನರ ಕೆಲಸ ಮಾಡುತ್ತೇನೆ: ಸಿಎಂ ಸಿದ್ದರಾಮಯ್ಯ

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment