~ಹನುಮಂತ ನಾಯ್ಕ್ .ಡಿ ಎಲ್. ಎಲ್. ಬಿ, ಆರ್. ಎಲ್. ಕಾನೂನು ಕಾಲೇಜು ದಾವಣಗೆರೆ ದಾವಣಗೆರೆ ವಿಶ್ವವಿದ್ಯಾಲಯವು ಈ ಹಿಂದೆ ಮೌಲ್ಯಮಾಪನ ಮುಗಿದು 24 ಗಂಟೆಗಳ ಒಳಗೆ ಹಾಗೂ 2 ದಿನದ ಒಳಗೆ ಫಲಿತಾಂಶವನ್ನು ಪ್ರಕಟಿಸಿ ನೂತನ ದಾಖಲೆಯನ್ನು ನಿರ್ಮಿಸಿರುವ ಅನೇಕ ಪ್ರಸಂಗಗಳು ಉಂಟು. ಆದ್ಯಾಗ್ಯ್ಯು ಇದರಲ್ಲಿ ಅಷ್ಟೇ ಲೋಪದೋಷಗಳಿವೆ. ಇದರಿಂದಾಗಿ ಪ್ರಾಮಾಣಿಕವಾಗಿ ಓದುವ ವಿದ್ಯಾರ್ಥಿಗಳಿಗೆ ಮೋಸ ಹಾಗೂ ನಷ್ಟ ಉಂಟಾಗಿದೆ ಎಂದರೆ ತಪ್ಪಾಗಲಾರದು. ವಿಶ್ವವಿದ್ಯಾಲಯದಲ್ಲಿದ್ದಾರಾ ಕಳಪೆ ಮೌಲ್ಯಮಾಪಕರು? ವಿಶ್ವವಿದ್ಯಾಲಯ ನಡೆಸುವ ಪ್ರತಿ ಸೆಮಿಸ್ಟರ್ ಪರೀಕ್ಷೆಗಳಲ್ಲಿ ಹೀಗೊಂದು […]
~ಹನುಮಂತ ನಾಯ್ಕ್ .ಡಿ ಎಲ್. ಎಲ್. ಬಿ, ಆರ್. ಎಲ್. ಕಾನೂನು ಕಾಲೇಜು ದಾವಣಗೆರೆ
ದಾವಣಗೆರೆ ವಿಶ್ವವಿದ್ಯಾಲಯವು ಈ ಹಿಂದೆ ಮೌಲ್ಯಮಾಪನ ಮುಗಿದು 24 ಗಂಟೆಗಳ ಒಳಗೆ ಹಾಗೂ 2 ದಿನದ ಒಳಗೆ ಫಲಿತಾಂಶವನ್ನು ಪ್ರಕಟಿಸಿ ನೂತನ ದಾಖಲೆಯನ್ನು ನಿರ್ಮಿಸಿರುವ ಅನೇಕ ಪ್ರಸಂಗಗಳು ಉಂಟು. ಆದ್ಯಾಗ್ಯ್ಯು ಇದರಲ್ಲಿ ಅಷ್ಟೇ ಲೋಪದೋಷಗಳಿವೆ. ಇದರಿಂದಾಗಿ ಪ್ರಾಮಾಣಿಕವಾಗಿ ಓದುವ ವಿದ್ಯಾರ್ಥಿಗಳಿಗೆ ಮೋಸ ಹಾಗೂ ನಷ್ಟ ಉಂಟಾಗಿದೆ ಎಂದರೆ ತಪ್ಪಾಗಲಾರದು.
ವಿಶ್ವವಿದ್ಯಾಲಯದಲ್ಲಿದ್ದಾರಾ ಕಳಪೆ ಮೌಲ್ಯಮಾಪಕರು?
ವಿಶ್ವವಿದ್ಯಾಲಯ ನಡೆಸುವ ಪ್ರತಿ ಸೆಮಿಸ್ಟರ್ ಪರೀಕ್ಷೆಗಳಲ್ಲಿ ಹೀಗೊಂದು ಪವಾಡ ಆಗುವುದುoಟು ಏನು ಓದದೇ ಇರುವ ವಿದ್ಯಾರ್ಥಿ 35-40 ಅಂಕ ಗಳಿಸುವ ಪರಿಯನ್ನು ನೋಡಿದ್ದೇವೆ. ಚೆನ್ನಾಗಿ ಓದಿಕೊಂಡು ತರಗತಿಗೆ ಚಾಚು ತಪ್ಪದೆ ಬಂದು ಚೆನ್ನಾಗಿ ಬರೆದರು ವಿದ್ಯಾರ್ಥಿಗಳು ಫೇಲ್ ಆಗುತ್ತಿರುವುದು ನಿಜಕ್ಕೂ ದುರಾದುಷ್ಟಕರ .ಇಲ್ಲಿ ಮೌಲ್ಯ ಮಾಪನದಲ್ಲಿ ಇರುವ ಕಳಪೆಯನ್ನು ಮತ್ತು ಗುಣ ಮಟ್ಟವನ್ನು ಕಾಣಬಹುದು.
ರೀಪಿಟರ್ಸ್ ಗೋಳೇನು?
ರಿಪೀಟರ್ಸ್ ವಿದ್ಯಾರ್ಥಿಗಳು ಬ್ಯಾಕ್ ಲಾಗ್ ಗಳನ್ನು ಮಾಡಿ ಕೊಂಡಿರುವುದೇ ಅವರ ಪಾಲಿನ ದುರದೃಷ್ಟ ಎನ್ನಬಹುದು. ಏಕೆಂದರೆ ಒಂದು ಬಾರಿ ಫೇಲ್ ಆದರೆ ಅದನ್ನು ಮತ್ತೆ – ಮತ್ತೆ ಬರೆದರೂ ಸಹ ಅದನ್ನು ಪಾಸ್ ಆಗಲು ಸೆಣ ಸಾಡಬೇಕಾಗುತ್ತದೆ. ಇದರಿಂದಾಗಿ ತಮ್ಮ ಡಿಗ್ರಿ ಯನ್ನು ಅರ್ಧಕ್ಕೆ ನಿಲ್ಲಿಸಿ ಕೆಲಸದ ಮೊರೆ ಹೋಗುವಂತಾಗಿದೆ. ಒಬ್ಬ ವಿದ್ಯಾರ್ಥಿ ಎಷ್ಟು ಬಾರಿ ಫೇಲ್ ಆಗಲು ಸಾಧ್ಯ, ಮತ್ತೊಮ್ಮೆ ಆತ ಪರೀಕ್ಷೆ ಎದುರಿಸುವಾಗ ತನ್ನ ತಪ್ಪನ್ನೆಲ್ಲ ತಿದ್ದಿಕೊಂಡು ಪ್ರಯತ್ನಿಸುತ್ತಾನೆ. ಆದರೆ ಹತ್ತು ಬಾರಿ ಹೇಗೆ ಫೇಲ್ ಆಗಲು ಸಾಧ್ಯ.
ಸಕಾಲಕ್ಕೆ ಸಿಗದ ಮೂಲ ಅಂಕಪಟ್ಟಿಗಳು
ವಿಶ್ವವಿದ್ಯಾಲಯವು ಈ ಹಿಂದೆ ನಡೆಸಿದ ಒಂದು ಮತ್ತು ನಾಲ್ಕನೇ ಸೆಮಿಸ್ಟರ್ ನವರೆಗೂ ಮಾತ್ರ ಮೂಲ ಅಂಕಪಟ್ಟಿಗಳನ್ನು ವಿತರಿಸಿದೆ. ಐದು ಮತ್ತು ಆರನೇ ಸೆಮಿಸ್ಟರ್ ನ ಅಂಕಪಟ್ಟಿಗಳಿಲ್ಲದೆ ವಿದ್ಯಾರ್ಥಿಗಳು ( ಕಾನೂನು ಕಾಲೇಜು ಮತ್ತು BED ಅಭ್ಯರ್ಥಿಗಳು) ತಮ್ಮ ಪ್ರವೇಶವನ್ನು ರದ್ದು ಮಾಡುವ ಭೀತಿಯನ್ನು ಎದುರಿಸುವಂತಹ ಪರಿಸ್ಥಿತಿ ಉಂಟಾಗಿತ್ತು. ಇದಕ್ಕೆ ಮುಲಾಮು ಎಂಬಂತೆ ರಿಜಿಸ್ಟರ್ ರವರ ಸಹಿಯನ್ನು 5 ಮತ್ತು 6 ನೇ ಸೆಮಿಸ್ಟರ್ ಅಂಕಪಟ್ಟಿಗಳಿಗೆ ಹಾಕಲಾಯಿತು. ಇದಕ್ಕೆ ವಿಶ್ವವಿದ್ಯಾಲಯು ವೇಗವಾಗಿ ಮರುಮೌಲ್ಯ ಮಾಪನದ ನಂತರ ವೇಗವಾಗಿ ಈ ಪ್ರಕ್ರಿಯೆಯನ್ನು ಮುಗಿಸಬಹುದಿತ್ತು. ಸುಪ್ರೀಂಕೋರ್ಟ್ ನ ಆದೇಶದಂತೆ ಒಂದು ವಿಶ್ವವಿದ್ಯಾನಿಲಯವು ನಿಗದಿತ ಅವಧಿಯೊಳಗೆ ಮೂಲ ಅಂಕಪಟ್ಟಿ ಯನ್ನು ವಿದ್ಯಾರ್ಥಿಗಳಿಗೆ ವಿತರಿಸಬೇಕು ಎಂಬ ನಿರ್ದೇಶನವನ್ನು UGC ಗೆ ನೀಡಿದೆ.
ರಿಪೀಟರ್ಸ್ ಬಂಡೆಲ್ ಗಳನ್ನು ಬೇಕಾ ಬಿಟ್ಟಿ ಮೌಲ್ಯಮಾಪನ ಮಾಡಲಾಗುತ್ತಿದೆಯೇ?
ಮೌಲ್ಯಮಾಪಕರು ಪುನರಾ ವರ್ತಿತ ವಿದ್ಯಾರ್ಥಿಗಳ ಬುಕ್ಲೆಟ್ ಗಳನ್ನು ಸೂಕ್ತ ಉತ್ತರವಿದ್ದರೂ ಸಹ ಸುಮ್ಮನೆ ಗೀಟ್ ಎಳೆದು ಅವರನ್ನು ಫೇಲ್ ಮಾಡುತ್ತಿದ್ದಾರೆ. ಇಂತಹ ಕಳಪೆ ಮೌಲ್ಯಮಾಪಕರಿಂದ ಮೌಲ್ಯಮಾಪನಕ್ಕೆ ಇರುವ ಘನತೆ ಮತ್ತು ಗುಣಮಟ್ಟ ವನ್ನು ಕಳೆದುಕೊಳ್ಳುವoತಾಗಿದೆ. ಆದ್ದರಿಂದ ಸಂಬಂಧ ಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಅಂತಹ ಕಳಪೆ ಮೌಲ್ಯಮಾಪಕರನ್ನು ಗುರುತಿಸಿ ಅವರನ್ನು ಈ ಪ್ರಕ್ರಿಯೆಯಿಂದ ಕೈಬಿಡಬೇಕು.
ಗುಣಮುಟ್ಟದ ಪರೀಕ್ಷೆಗಳು ಈಗಿಲ್ಲ…
ಇತ್ತೀಚಿನ ದಿನಗಳಲ್ಲಿ ಪರೀಕ್ಷೆಗೆ ಇದ್ದಂತಹ ಮೌಲ್ಯ, ಗುಣಮಟ್ಟವು ಮರೆಯಾಗಿವೆ. ನ್ಯಾಯಯುತವಾಗಿ ಪರೀಕ್ಷೆಗಳನ್ನು ನಡೆಸುತ್ತಿಲ್ಲ, ಕೆಲವು ಖಾಸಗಿ ಕಾಲೇಜುಗಳು ತಮ್ಮ ಫಲಿತಾಂಶವನ್ನು ಸುಧಾರಿಸುದಕ್ಕೆ ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ನಕಲು ಮಾಡಲು ಸಹಾಯ ಮಾಡುತ್ತಿವೆ.. ಇದರಿಂದಾಗಿ ವಿದ್ಯಾರ್ಥಿಗಳು ನಕಲು ಮಾಡಲು ಅವಕಾಶ ಇರುವ ಕಾಲೇಜುಗಳಿಗೆ ಪ್ರವೇಶವನ್ನು ತೆಗೆದುಕೊಳ್ಳುತ್ತಿದ್ದಾರೆ.
ಇವುಗಳನ್ನೆಲ್ಲ ನೋಡಿದರೆ ಪರೀಕ್ಷೆಗಳನ್ನು ನಡೆಸಿದರು ಪ್ರಯೋಜನವಿಲ್ಲ, ಕಾಲೇಜಿಗೆ ರೆಗ್ಯುಲರ್ ಆಗಿ ಹೋಗುವ ಅವಶ್ಯಕತೆ ಇಲ್ಲ, ಕೇವಲ ಜೆರಾಕ್ಸ್ ಅಂಗಡಿಗಳಲ್ಲಿ ಮೈಕ್ರೋ ಜೆರಾಕ್ಸ್ ಮಾಡಿಸಿಕೊಂಡರೆ ಸಾಕು ಪಾಸಾಗಬಹುದು ಎಂಬಂತಹ ಅಲಕ್ಷ್ಯ ವಿದ್ಯಾರ್ಥಿಗಳಿಗೆ ಅವರಿಸಿಕೊಂಡಿದೆ. ಈ ಮಾರ್ಗದ ಮೂಲಕ ಕಲಿತು ಪದವಿ ಪಡೆದ ವಿದ್ಯಾರ್ಥಿಗಳು ಸಮಾಜಕ್ಕೆ ಹಾಗೂ ಪೋಷಕರಿಗೆ ಏನು ಒಳಿತು ಮಾಡಿಯಾರು?. ನಾವು ಸುಮ್ಮನೆ ಗಣ್ಯರ ಕಾರ್ಯಕ್ರಮಗಳಲ್ಲಿ ನೀತಿ ಭೋದನೆ ಮಾಡುತ್ತೇವೆ ವಿನಃ ಅದನ್ನು ಕಾರ್ಯಗತ ಗೊಳಿಸುವಲ್ಲಿ ಹಾಗೂ ತಪ್ಪು ನಡೆದರು ಸಹ ಪ್ರಶ್ನಿಸದ ಬುದ್ದಿ ಜೀವಿ ಯಂತಿರುವ ಮೌನಿಗಳಾಗಿದ್ದೇವೆ. ಇದಕ್ಕೆ ಸಂಬಂಧ ಪಟ್ಟ ಅಧಿಕಾರಿಗಳು ಸೂಕ್ತ ಕ್ರಮವಹಿಸಿ ಇವುಗಳಿಗೆ ನಾಂದಿ ಹಾಡಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತೇವೆ…
ಮರುಮೌಲ್ಯಮಾಪನ ಹೆಸರಿಗಷ್ಟೇ
ಪದವಿ ಪರೀಕ್ಷೆ ಗಳಲ್ಲಿ ಕಡಿಮೆ ಅಂಕ ದೊರೆತ ವಿದ್ಯಾರ್ಥಿಗಳು ಮರು ಮೌಲ್ಯಮಾಪನದ ಮೊರೆ ಹೋಗುವುದುoಟು. ಅಲ್ಲಿಯೂ ಸಹ ವಿದ್ಯಾರ್ಥಿಗಳಿಗೆ ಅನ್ಯಾಯ ವಾಗುತ್ತಿದೆ, ಸುಮ್ಮನ್ನೆ ಬಡ ವಿದ್ಯಾರ್ಥಿಗಳು 350 ರೂಪಾಯಿ ಗಳನ್ನು ವ್ಯರ್ಥಮಾಡಿಕೊಳ್ಳುವಂತಹ ಸ್ಥಿತಿ ಏರ್ಪಟ್ಟಿದೆ. ಮೊದಲಿದ್ದ ಅಂಕಗಳನ್ನೇ ಪುನಃ ನಮೂದಿಸುರುತ್ತಾರೆ ಹೊರತು ಅದನ್ನು ನ್ಯಾಯಯು ತವಾಗಿ ಅಂಕಗಳನ್ನು ನೀಡುತ್ತಿಲ್ಲ ಇದರಿಂದ ಎಷ್ಟೋ ವಿದ್ಯಾರ್ಥಿಗಳು ಕಾಲೇಜು ಬಿಡುವಂತಹ ಸ್ಥಿತಿ ಏರ್ಪಟ್ಟಿದೆ. ಸರ್ಕಾರಿ ಕಾಲೇಜುಗಳಲ್ಲಿ ಓದುವ ಬಡ ವಿದ್ಯಾರ್ಥಿಗಳು ಪದವಿ ತ್ಯಜಿಸುತ್ತಿದ್ದಾರೆ. ಇದರಿಂದಾಗಿ ಸರ್ಕಾರಿ ಕಾಲೇಜುಗಳಿಗೆ ಸೇರುವವರ ಸಂಖ್ಯೆ ಕಡಿಮೆಯಾಗಿ ದಾಖಲಾತಿ ಅಂಕಿ ಅಂಶ ಗಳು ಬದಲಾಗಿವೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
Previous Article
ಹುಬ್ಬಳ್ಳಿ ಪ್ರಕರಣ CID ತನಿಖೆಗೆ ನೀಡಲು ಸಿಎಂ ಜೊತೆ ಚರ್ಚೆ: ಗೃಹ ಸಚಿವ ಪರಮೇಶ್ವರ್
Next Article
ಕನ್ನಡ ಶಾಲೆಗಳಲ್ಲಿ ಮಲಯಾಳಂ ಕಲಿಕೆ ಕಡ್ಡಾಯ : ಭಾಷಾ ಸ್ವಾತಂತ್ರ್ಯದ ಮೇಲಿನ ಪ್ರಹಾರ- ಸಿಎಂ ಸಿದ್ದರಾಮಯ್ಯ ಕಿಡಿ