Search

    Language Settings
    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    -1

    ಪೌರಾಯುಕ್ತೆಗೆ ನಿಂದಿಸಿದ್ದ ರಾಜೀವ್ ಗೌಡ ಎಸ್ಕೇಪ್‌! ಪೊಲೀಸರಿಂದ ಆರೋಪಿಗಾಗಿ ಹುಡುಕಾಟ

    1 hour ago

    ಪೌರಾಯುಕ್ತೆಗೆ ನಿಂದಿಸಿದ್ದ ‘ಕೈ’ ಮುಖಂಡನ ವಿರುದ್ಧ ಶಿಡ್ಲಘಟ್ಟ ನಗರ ಠಾಣೆಯಲ್ಲಿ FIR ದಾಖಲಾಗಿದೆ.  ‘ಕಲ್ಟ್’​ ಬ್ಯಾನರ್ ತೆರವು ಮಾಡಿದ್ದಕ್ಕೆ ಪೌರಾಯುಕ್ತೆಗೆ ರಾಜೀವ್ ಗೌಡ  ಬೆದರಿಕೆ ಹಾಕಿದ್ದರು.  ಪ್ರಾಣ ಬೆದರಿಕೆ, ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದ ರಾಜೀವ್ ಗೌಡ ವಿರುದ್ಧ  ಅಮೃತಾ ಗೌಡ  ಪೊಲೀಸ್ ಠಾಣೆಗೆ ನೀಡಿದ್ದ  ದೂರಿನ ಅನ್ವಯ ರಾಜೀವ್ ಗೌಡ ವಿರುದ್ಧ FIR ದಾಖಲಾಗಿದೆ.  ಯಾವ ಕ್ಷಣದಲ್ಲಾದರೂ ರಾಜೀವ್ ಗೌಡ ಬಂಧನವಾಗುವ   ಸಾಧ್ಯತೆ ಇದೆ.   FIR ಆಗ್ತಿದ್ದಂತೆ ‘ಕೈ’ ಮುಖಂಡ ರಾಜೀವ್ ಗೌಡ ಪರಾರಿಯಾಗಿದ್ದಾರೆ.  FIR ಬಳಿಕ ಫೋನ್ ಸ್ವಿಚ್ಡ್ ಆಫ್ ಮಾಡಿಕೊಂಡು ರಾಜೀವ್ ಗೌಡ  ಎಸ್ಕೇಪ್ ಆಗಿದ್ದಾರೆ. ಶಿಡ್ಲಘಟ್ಟ ನಗರ ಠಾಣೆಯಲ್ಲಿ ಬಿಎನ್‌ಎಸ್   ಸೆಕ್ಷನ್ 352, 351, 256,132, 224  ರ ಅಡಿ ಪ್ರಕರಣ ದಾಖಲಾಗಿದೆ.   ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. ಸರ್ಕಾರಿ ಕೆಲಸಕ್ಕೆ ಅಡ್ಡಿ, ಬೆದರಿಕೆ, ಅವ್ಯಾಚ್ಯ ಶಬ್ದಗಳಿಂದ ನಿಂದನೆ, ದುಷ್ಪ್ರೇರಣೆ ಅಡಿ ಪ್ರಕರಣ ದಾಖಲು ಮಾಡಲಾಗಿದೆ.   ಇನ್ನೂ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ, ಪೌರಾಯುಕ್ತೆ ಅಮೃತಾಗೌಡ ಜೊತೆ ಕೆಟ್ಟದ್ದಾಗಿ ಮಾತನಾಡಿದ್ದಕ್ಕೆ ಕ್ಷಮೆ ಕೇಳಿದ ವಿಡಿಯೋ ಬಿಡುಗಡೆ ಮಾಡಿದ್ದಾರೆ.  ಯಾವುದೇ ಉದ್ದೇಶ ಇಟ್ಟುಕೊಂಡು ಮಾತಾಡಿಲ್ಲ. ಯಾವುದೇ ದ್ವೇಷ ಕೂಡ ಇಲ್ಲ. ಕಾರ್ಯಕ್ರಮಕ್ಕೆ 9 ತಾರೀಖು ಅರ್ಜಿ ಕೊಟ್ಟಿದ್ದೇವೆ. ಏಕಾಏಕಿ ಬ್ಯಾನರ್ ತೆಗೆದು ಹಾಕಿದ್ರು. ಅದನ್ನು ಯಾಕೆ ಅಂತ ಕೇಳಿದ್ದೇನೆ.  ಆಗ ರಸ್ತೆಗೆ ಅಡ್ಡ ಇತ್ತು ಅಂತ ಹೇಳಿದ್ರು. ರಸ್ತೆಗೆ ಅಡ್ಡಲಾಗಿ ಯಾವುದೇ ಬ್ಯಾನರ್ ಹಾಕಿರಲಿಲ್ಲ. ಕಳೆದ ಬಾರಿ ಕೂಡ ಸಿಎಂ-ಡಿಸಿಎಂ ಬ್ಯಾನರ್ ಬಿಚ್ಚಿಸಿದ್ರು. ಈಗ ಪರ್ಮಿಷನ್ ಇದ್ರೂ ಬ್ಯಾನರ್ ತೆಗೆದಿದ್ದಾರೆ. ಅವರು ನನಗೆ ಅಕ್ಕ-ತಂಗಿ ತರಹ, ಉದ್ದೇಶ ಇಟ್ಟುಕೊಂಡು ಮಾತಾಡಿಲ್ಲ.  ನಾನು ಆ ತರಹದ ವ್ಯಕ್ತಿ ಅಲ್ಲ, ನನ್ನಿಂದ ನೋವಾಗಿದ್ರೆ ಕ್ಷಮಿಸಿ ಅಂತ‌ ಹೇಳ್ತೇನೆ ಎಂದು ಕ್ಷಮೆ ಕೇಳಿದ್ದಾರೆ. ಮಹಿಳಾ ಅಧಿಕಾರಿಗಳ ಮೇಲೆ ರಾಜೀವ್ ದರ್ಪ ಇದೇ ಮೊದಲಲ್ಲ.  ಶಿಡ್ಲಘಟ್ಟ ತಹಶೀಲ್ದಾರ್​ಗೂ ರಾಜೀವ್ ಗೌಡ ನಿಂದಿಸಿದ್ದಾರೆ.   ತಹಶೀಲ್ದಾರ್ ಗಗನ ಸಿಂಧುಗೂ ರಾಜೀವ್ ಗೌಡ  ನಿಂದಿಸಿದ್ದಾರೆ.ಕಡತವೊಂದರ ವಿಲೇವಾರಿ ವಿಚಾರದಲ್ಲಿ ರಾಜೀವ್ ಗೌಡ ಧಮ್ಕಿ ಹಾಕಿದ್ದಾರೆ. ಶಿಡ್ಲಘಟ್ಟಕ್ಕೆ ಸಿಎಂ ಬಂದಾಗಲೇ  ರಾಜೀವ್ ಗೌಡ ನಿಂದಿಸಿರುವುದು ಈಗ ಬೆಳಕಿಗೆ ಬಂದಿದೆ. ತಹಸೀಲ್ದಾರ್‌ ಗಂಗನ ಸಿಂಧುಗೆ  ಕರೆ ಮಾಡಿ  ಧಮ್ಕಿ ಹಾಕಿದ್ದಾರೆ.  ದೊಡ್ಡದು ಮಾಡೋದು ಬೇಡ ಅಂತ ತಹಸೀಲ್ದಾರ್  ಗಗನ ಸಿಂಧು ಸುಮ್ಮನಾಗಿದ್ದಾರೆ.   ಗಗನ ಸಿಂಧು ಬಳಿಕ ಅಮೃತಾ ಗೌಡಗೆ ನಿಂದಿಸಿ ಕೊಲೆ ಬೆದರಿಕೆ ಹಾಕಿದ್ದಾರೆ.    ಕೆ.ಎಚ್.ಮುನಿಯಪ್ಪ ಪ್ರತಿಕ್ರಿಯೆಕೆಟ್ಟ, ಕೊಳಕು ಮಾತಾಡಿದ ರಾಜೀವ್ ಸೌಮ್ಯ ಸ್ವಭಾವದವರಂತೆ. ರಾಜೀವ್  ಗೌಡ ಸೌಮ್ಯ ಸ್ವಭಾವದವ್ರು, ಎಮೋಷನ್ ಆಗಬಾರದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ  ಸಚಿವ ಕೆ.ಹೆಚ್​ ಮುನಿಯಪ್ಪ ಹೇಳಿದ್ದಾರೆ.  ಅಧಿಕಾರಿ ಜೊತೆಗೆ ಹಾಗೆ ಮಾತನಾಡಿರೋದು ಸರಿಯಲ್ಲ. ಇದು ಸರಿಯಲ್ಲ, ಏನೇ ಇದ್ದರೂ ಕುಳಿತು ಮಾತನಾಡಬೇಕು. ಎಲ್ಲಾದರೂ  ಸಿಕ್ಕಿದರೆ ನಾನು ಬುದ್ದಿ ಹೇಳುತ್ತೇನೆ ಎಂದು ಸಚಿವ ಕೆ.ಎಚ್‌. ಮುನಿಯಪ್ಪ ಹೇಳಿದ್ದಾರೆ.ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.   
    Click here to Read More
    Previous Article
    ಯಾವ ಕ್ರಾಂತಿಯೂ ಇಲ್ಲ, ಬ್ರಾಂತಿಯೂ ಇಲ್ಲ: ಬಿಜೆಪಿಯವರಿಗೆ ವಾಂತಿ-ಬೇಧಿ- ಸಚಿವ ಜಮೀರ್ ವ್ಯಂಗ್ಯ
    Next Article
    ಬಾಲಿವುಡ್ ನಟ ಜೀತೇಂದ್ರರಿಂದ 30 ಸಾವಿರ ಚದರ ಮೀಟರ್ ಜಾಗ 559 ಕೋಟಿ ರೂ.ಗೆ ಮಾರಾಟ!

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment