Search

    Language Settings
    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    -1

    ಬೆಂಗಳೂರಿನ ಹೊರವಲಯಕ್ಕೂ ಕಾವೇರಿ ನೀರು, ಡಿಪಿಆರ್‌ ರೆಡಿ : ರಾಜ್ಯ ಸರ್ಕಾರದ ಒಪ್ಪಿಗೆಗೆ ಮೀನಾಮೇಷ!!

    2 hours ago

    ರಾಜ್ಯ ರಾಜಧಾನಿ ಬೆಂಗಳೂರಿನ ಹೊರವಲಯದ ಪ್ರದೇಶಗಳು ಹಾಗೂ ಉಪನಗರಗಳ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಜಲಮಂಡಳಿ ರೂಪಿಸಿರುವ ಕಾವೇರಿ 6ನೇ ಹಂತದ ಯೋಜನೆಗೆ ಅನುಮೋದನೆ ನೀಡಲು ರಾಜ್ಯ ಸರ್ಕಾರ ಹಿಂದೇಟು ಹಾಕುತ್ತಿದೆ.  9 ತಿಂಗಳ ಹಿಂದೆಯೇ ಡಿಪಿಆರ್ ಸಿದ್ದವಾಗಿದ್ದು, ರಾಜ್ಯ ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ಆದರೇ, ರಾಜ್ಯ ಸರಕಾರ ಇನ್ನೂ ಕಾವೇರಿ 6ನೇ ಹಂತದ ಯೋಜನೆಗೆ ಒಪ್ಪಿಗೆ ನೀಡಿಲ್ಲ. ಬರೋಬ್ಬರಿ 6,939 ಕೋಟಿ ರೂಪಾಯಿ ವೆಚ್ಚದಲ್ಲಿ ಕಾವೇರಿ 6ನೇ ಹಂತದ ಯೋಜನೆಯನ್ನು ಜಾರಿಗೊಳಿಸಲು ಡಿಪಿಆರ್ ಸಲ್ಲಿಕೆಯಾಗಿದೆ.ಕಾವೇರಿ 6ನೇ ಹಂತದ ಯೋಜನೆಯಲ್ಲಿ ಕೆಆರ್‌ಎಸ್ ನಿಂದ 6 ಟಿಎಂಸಿ ಅಡಿ ನೀರು ಅನ್ನು ನಗರ ಪ್ರದೇಶ, ಉಪನಗರ ಪ್ರದೇಶಗಳಿಗೆ ಸರಬರಾಜು ಮಾಡುವ ಪ್ಲ್ಯಾನ್ ಮಾಡಲಾಗಿದೆ. 6 ಟಿಎಂಸಿ ಅಡಿ ನೀರಿನ ಪೈಕಿ 4 ಟಿಎಂಸಿ ಅಡಿ ನೀರು  ಅನ್ನು ನಾಡಪ್ರಭು ಕೆಂಪೇಗೌಡ ಬಡಾವಣೆ, ಹೊಸದಾಗಿ ನಿರ್ಮಾಣವಾಗುತ್ತಿರುವ ಶಿವರಾಮಕಾರಂತ ಬಡಾವಣೆ ಸೇರಿದಂತೆ ಇತರೆ ಬಡಾವಣೆಗಳಿಗೆ ಪೂರೈಕೆ ಮಾಡಲಾಗುತ್ತೆ. ಉಳಿದ 2 ಟಿಎಂಸಿ ಅಡಿ ನೀರು ಅನ್ನು ಕರ್ನಾಟಕ ಗ್ರಾಮೀಣಾ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಬೇಡಿಕೆಯ ಅನುಸಾರ ಮಾದನಾಯಕನಹಳ್ಳಿ, ಹುಣಸಮಾರನಹಳ್ಳಿ, ಚಿಕ್ಕಬಾಣಾವರ, ನೆಲಮಂಗಲ, ಹೊಸಕೋಟೆ, ದೇವನಹಳ್ಳಿ, ಬಾಶೆಟ್ಟಿಹಳ್ಳಿ ಹಾಗೂ ವಿಜಯಪುರಕ್ಕೆ ಸರಬರಾಜು ಮಾಡಲು ತೀರ್ಮಾನಿಸಲಾಗಿದೆ. ಕಾವೇರಿಯಿಂದ ಸದ್ಯ ವಾರ್ಷಿಕ 29 ಟಿಎಂಸಿ ಅಡಿ ನೀರು ಅನ್ನು ಬೆಂಗಳೂರು ನಗರಕ್ಕಾಗಿ ಪಡೆಯಲಾಗುತ್ತಿದೆ. ಉದ್ದೇಶಿತ ಕಾವೇರಿ 6 ನೇ ಹಂತದ ಯೋಜನೆಯಡಿ 6 ಟಿಎಂಸಿ ಅಡಿ ನೀರು ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಕಾವೇರಿ 6ನೇ ಹಂತದ ಯೋಜನೆಯಡಿ ನಗರ ಹಾಗೂ ಹೊರವಲಯದಲ್ಲಿನ ಪ್ರದೇಶಗಳಿಗೆ ನೀರು ಪೂರೈಸಲು ಡಿಪಿಆರ್ ಸಿದ್ದಪಡಿಸಿ, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರ್ಕಾರದ ಅನುಮೋದನೆ ದೊರೆತ ಕೂಡಲೇ ಕಾಮಗಾರಿ ಕೈಗೊಳ್ಳಲು ಅಗತ್ಯ ಕ್ರಮ ವಹಿಸಲಾಗುವುದು ಎಂದು ಬೆಂಗಳೂರಿನ ಜಲಮಂಡಳಿ ಅಧ್ಯಕ್ಷ ರಾಮಪ್ರಸಾತ್ ಮನೋಹರ್ ಹೇಳಿದ್ದಾರೆ.ಇನ್ನೂ ಬೆಂಗಳೂರು ನಗರದ ಜನರ ನೀರಿನ ದಾಹ ತಣಿಸಲು ಪ್ರತಿ 10 ವರ್ಷಗಳಿಗೊಂದು ಯೋಜನೆ ತಯಾರಿಸಿ ನೀರು ಪೂರೈಸಲಾಗುತ್ತಿದೆ. ಕಾವೇರಿ 5ನೇ ಹಂತದ ಯೋಜನೆಗೆ 2014 ರಲ್ಲಿ ಚಾಲನೆ ನೀಡಲಾಯಿತು. 2024ರ ಅಕ್ಟೋಬರ್ ನಲ್ಲಿ ಕಾವೇರಿ ನೀರು ಅನ್ನು ನಗರದ ಜನತೆಗೆ 5ನೇ ಹಂತದ ಯೋಜನೆಯಡಿ ಸರಬರಾಜು ಮಾಡಲಾಯಿತು.  ಈಗ ಕಾವೇರಿ 6ನೇ ಹಂತದ ಯೋಜನೆ ಆರಂಭಿಸಿದರೂ, ಯೋಜನೆ ಪೂರ್ಣವಾಗಿ ಕಾರ್ಯರೂಪಕ್ಕೆ ಬರಲು 10 ವರ್ಷ ಸಮಯ ಅವಕಾಶ ಬೇಕಾಗಬಹುದು. ಯೋಜನೆಗೆ 130 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಬೇಕಾಗಿದೆ.   ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 
    Click here to Read More
    Previous Article
    ವಿದ್ಯುತ್ ದರ ಏರಿಕೆಗೆ ಎಸ್ಕಾಂಗಳಿಂದ ಕೆಇಆರ್‌ಸಿಗೆ ಮನವಿ: ಏಪ್ರಿಲ್ ನಲ್ಲಿ ವಿದ್ಯುತ್ ದರ ಏರಿಕೆ ಸಾಧ್ಯತೆ
    Next Article
    ವಿದೇಶದಲ್ಲಿ ಭಾರತೀಯ ಪ್ರತಿಭೆಗೆ ಭಾರೀ ಡಿಮ್ಯಾಂಡ್​​.. ಕಾರಣವೇನು?

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment