Search

    Language Settings
    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    -1

    ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ಸಿಎಂ ವರ್ಸಸ್ ಡಿಸಿಎಂ ಬೆಂಬಲಿಗರ ಫೈಟ್‌! ಸಹಕಾರ ರಂಗದಲ್ಲಿ ರಾಜಕೀಯ ಶಕ್ತಿ ಪ್ರದರ್ಶನ

    1 hour ago

    ರಾಜ್ಯದ ಸಹಕಾರಿ ಸಂಸ್ಥೆಗಳಲ್ಲಿ ಪ್ರಮುಖವಾದ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕಾಗಿ ಈ ಭಾರಿ ಕಾಂಗ್ರೆಸ್ ಪಕ್ಷದೊಳಗೆ ತೀವ್ರವಾದ ಫೈಟ್ ನಡೆಯುವುದು ನಿಶ್ಚಿತವಾಗಿದೆ. ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಫೈಟ್ ನಡೆಯುತ್ತಿಲ್ಲ. ಬದಲಿಗೆ ಸ್ಪಷ್ಟವಾದ ಬಹುಮತ ಹೊಂದಿರುವ ಕಾಂಗ್ರೆಸ್ ಪಕ್ಷದೊಳಗಡೆಯೇ ಇಬ್ಬರು ದಿಗ್ಗಜ ನಾಯಕರ ನಡುವೆ ಫೈಟ್ ನಡೆಯುತ್ತಿದೆ. ಇಬ್ಬರು ದಿಗ್ಗಜ ನಾಯಕರು ತಮ್ಮ ಶಿಷ್ಯರು, ಬೆಂಬಲಿಗರನ್ನೇ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನದಲ್ಲಿ ಕೂರಿಸಲು ಶತಾಯಗತಾಯ ಹೋರಾಟ ನಡೆಸುತ್ತಿದ್ದಾರೆ.  ಆ ಇಬ್ಬರು ದಿಗ್ಗಜ ನಾಯಕರು ಬೇರಾರು ಅಲ್ಲ . ರಾಜ್ಯದ ಹಾಲಿ ಮುಖ್ಯಮಂತ್ರಿ ಹಾಗೂ ಹಾಲಿ ಉಪಮುಖ್ಯಮಂತ್ರಿ ಎಂಬುದು ವಿಶೇಷ.   ಸಿಎಂ ಸಿದ್ದರಾಮಯ್ಯ ಅವರ ಬೆಂಬಲಿಗ  ಮಧುಗಿರಿ ಕ್ಷೇತ್ರದ ಶಾಸಕ ಕೆ.ಎನ್.ರಾಜಣ್ಣ ಈಗಾಗಲೇ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದಾರೆ.  ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸೋದರ ಸಂಬಂಧಿ ಎಸ್‌.ರವಿ ಕೂಡ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದಾರೆ.  ಆದರೇ,   ಅಪೆಕ್ಸ್ ಬ್ಯಾಂಕ್ ನಲ್ಲಿ ಈ ಭಾರಿ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕರುಗಳೇ ವಿವಿಧ ಜಿಲ್ಲೆಗಳಿಂದ ಅಪೆಕ್ಸ್ ಬ್ಯಾಂಕ್‌ಗೆ ನಿರ್ದೇಶಕರಾಗಿ ಆಯ್ಕೆಯಾಗಿ ಬಂದಿದ್ದಾರೆ. ಹೀಗಾಗಿ ಈ ಭಾರಿ  ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನ ಕಾಂಗ್ರೆಸ್ ಪಕ್ಷ  ಹಾಗೂ ಕಾಂಗ್ರೆಸ್  ನಾಯಕರ ಪಾಲಾಗುವುದು ಖಚಿತ. ಆದರೇ, ಕಾಂಗ್ರೆಸ್ ನಲ್ಲಿ ಯಾರು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರಾಗಬೇಕೆಂಬ ಗೊಂದಲ ಬಗೆಹರಿದಿಲ್ಲ. ಸಿಎಂ ಮತ್ತು ಡಿಸಿಎಂ ಇಬ್ಬರೂ ತಮ್ಮ ಬೆಂಬಲಿಗರೇ ಅಪೆಕ್ಸ್  ಬ್ಯಾಂಕ್ ಅಧ್ಯಕ್ಷರಾಗಬೇಕೆಂದು ಬಿಗಿ ಪಟ್ಟು ಹಿಡಿದಿದ್ದಾರೆ. ಹೀಗಾಗಿ ಕಾಂಗ್ರೆಸ್ ಪಾಲಿಗೆ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ಯಾರು ಅನ್ನು ಆಯ್ಕೆ ಮಾಡುವುದು ಎನ್ನುವುದೇ ಕಗ್ಗಂಟಾಗಿದೆ. ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ  ಮಾಜಿ ಸಚಿವ ಕೆ.ಎನ್.ರಾಜಣ್ಣ  ಅವರು ಆಕಾಂಕ್ಷಿಯಾಗಿದ್ದಾರೆ.  ಸಿಎಂ ಸಿದ್ದರಾಮಯ್ಯ ಅವರಿಗೆ ಕೆ.ಎನ್. ರಾಜಣ್ಣ ಕಟ್ಟಾ ಬೆಂಬಲಿಗರು.  ಈ ಹಿಂದೆ 2001 ರಿಂದ 2005 ಹಾಗೂ 2015 ರಿಂದ 2020 ರ ಅವಧಿಯಲ್ಲಿ ಎರಡು ಭಾರಿ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರಾಗಿ ಆಳ್ವಿಕೆ ನಡೆಸಿದ್ದಾರೆ. ಈಗ ಮತ್ತೊಮ್ಮೆ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದಾರೆ. ಆದರೇ, ರಾಜಣ್ಣ ಒಬ್ಬರೇ ಕಾಂಗ್ರೆಸ್ ನಿಂದ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಯಾಗಿಲ್ಲ.  ಬೆಂಗಳೂರು ಗ್ರಾಮಾಂತರ ಹಾಗೂ ಬೆಂಗಳೂರು ದಕ್ಷಿಣ ಜಿಲ್ಲಾ ಡಿಸಿಸಿ ಬ್ಯಾಂಕ್ ನಿಂದ ಅಪೆಕ್ಸ್ ಬ್ಯಾಂಕ್ ಗೆ ನಿರ್ದೇಶಕರಾಗಿ ಬಂದಿರುವ ಎಸ್‌.ರವಿ ಅವರು ಕೂಡ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದಾರೆ. ಎಸ್‌.ರವಿ ಅವರು ಹಾಲಿ ವಿಧಾನ ಪರಿಷತ್ ಸದಸ್ಯರು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸೋದರ ಸಂಬಂಧಿ.  ಕನಕಪುರ ತಾಲ್ಲೂಕಿನವರು. ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಕೂಡ ಈ ಭಾರಿ ತಮ್ಮ ಸೋದರ ಸಂಬಂಧಿ ಎಸ್‌.ರವಿ ಅವರನ್ನೇ  ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರನ್ನಾಗಿ ಮಾಡಬೇಕೆಂದು ಹಠಕ್ಕೆ ಬಿದ್ದಿದ್ದಾರೆ.  ಹೀಗಾಗಿಯೇ ರವಿ ಅವರು ಚುನಾವಣಾ ಅಖಾಡಕ್ಕೆ ಇಳಿಯುವರು. ರವಿ ಅವಿರೋಧವಾಗಿ ಆಯ್ಕೆಯಾಗುವಂತೆ ಮಾಡಲು ತುಮಕೂರು ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿರುವ ಮಾಜಿ ಸಚಿವ ಕೆ.ಎನ್.ರಾಜಣ್ಣ ಅವರ ಬೆಂಬಲ ಪಡೆಯುವ ಉದ್ದೇಶದಿಂದಲೇ ಇತ್ತೀಚೆಗೆ 2 ಭಾರಿ ಬೆಂಗಳೂರಿನಲ್ಲಿ ಡಿಕೆಶಿ ಭೇಟಿಯಾಗಿದ್ದರು.  ಕೆ.ಎನ್‌. ರಾಜಣ್ಣ ಅವರ ಮನವೊಲಿಸಿ, ಅವರ ಬೆಂಬಲ ಪಡೆಯುವ ಯತ್ನವನ್ನು ಡಿಸಿಎಂ ಡಿ.ಕೆ.ಶಿವಕುಮಾರ್ ನಡೆಸಿದ್ದಾರೆ. ಆದರೇ, ರಾಜಣ್ಣ ಅವರನ್ನು ಮನವೊಲಿಸಿ ಬೆಂಬಲ ಪಡೆಯಲು ಡಿಕೆ ಶಿವಕುಮಾರ್ ಅವರಿಗೆ ಸಾಧ್ಯವಾಗಿಲ್ಲ.      ಹೀಗಾಗಿ ಕೆ.ಎನ್.ರಾಜಣ್ಣ ಮತ್ತು ಎಸ್‌.ರವಿ ಇಬ್ಬರೂ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿ ಸ್ಪರ್ಧಿಸಿದರೇ, ಕಾಂಗ್ರೆಸ್ ನಾಯಕರ ನಡುವೆಯೇ ಫೈಟ್ ನಡೆಯಲಿದೆ. ಜೊತೆಗೆ ಸಿಎಂ ಮತ್ತು ಡಿಸಿಎಂ  ಬೆಂಬಲಿಗರ ನಡುವೆಯೇ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ಫೈಟ್ ನಡೆಯಲಿದೆ. ಸಿಎಂ ಮತ್ತು ಡಿಸಿಎಂ ನಡುವಿನ ಸಹಕಾರಿ ರಂಗದ ಶಕ್ತಿ ಪ್ರದರ್ಶನಕ್ಕೂ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನದ ಚುನಾವಣೆ ವೇದಿಕೆಯಾಗಲಿದೆ.ಈಗ 21 ಡಿಸಿಸಿ ಬ್ಯಾಂಕ್ ಗಳಿಂದ ಅಪೆಕ್ಸ್ ಬ್ಯಾಂಕ್ ಗೆ ನಿರ್ದೇಶಕರಾಗಿ ಆಯ್ಕೆಯಾಗಿ ಬಂದಿರುವ ಸಹಕಾರಿ ಧುರೀಣರು, ಅಪೆಕ್ಸ್ ಬ್ಯಾಂಕ್ ನ ನಿರ್ದೇಶಕ ಸ್ಥಾನಕ್ಕೆ ಔಪಚಾರಿಕವಾಗಿ ನಾಮಪತ್ರ ಸಲ್ಲಿಸಿದ್ದಾರೆ. ತುಮಕೂರು ಡಿಸಿಸಿ ಬ್ಯಾಂಕ್ ನಿಂದ ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ಕೆ.ಎನ್.ರಾಜಣ್ಣ ಐದು ದಿನದ ಹಿಂದೆಯೇ ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ಧಾರವಾಡ ಡಿಸಿಸಿ ಬ್ಯಾಂಕ್ ನಿಂದ ಶಿವಕುಮಾರ್ ಗೌಡ ಪಾಟೀಲ್, ಬಳ್ಳಾರಿ ಡಿಸಿಸಿ ಬ್ಯಾಂಕ್ ನಿಂದ ಪಿ.ಮೂಕಯ್ಯಸ್ವಾಮಿ, ಮೈಸೂರು ಮತ್ತು ಚಾಮರಾಜನಗರ ಡಿಸಿಸಿ ಬ್ಯಾಂಕ್ ನಿಂದ ಆರ್‌.ನರೇಂದ್ರ, ಬೆಳಗಾವಿ ಡಿಸಿಸಿ ಬ್ಯಾಂಕ್ ನಿಂದ ರಾಹುಲ್ ಜಾರಕಿಹೊಳಿ, ರಾಯಚೂರು ಡಿಸಿಸಿ ಬ್ಯಾಂಕ್ ನಿಂದ ಶರಣಗೌಡ ಪಾಟೀಲ್, ದಾವಣಗೆರೆ ಡಿಸಿಸಿ ಬ್ಯಾಂಕ್ ನಿಂದ ಗಿರೀಶ್ ಮುದ್ದೇಗೌಡರು ಸಹ  ಕೆ.ಎನ್.ರಾಜಣ್ಣ ಅವರ ಜೊತೆಗೆ ಇದ್ದು ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ತಮ್ಮ ತಮ್ಮ ಡಿಸಿಸಿ ಬ್ಯಾಂಕ್ ಪ್ರತಿನಿಧಿಗಳಾಗಿ ಔಪಚಾರಿಕ ನಾಮಪತ್ರ ಸಲ್ಲಿಸಿದ್ದಾರೆ.ಇನ್ನೂ ಒಂದೆರೆಡು ದಿನದಲ್ಲೇ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣಾ ವೇಳಾಪಟ್ಟಿ ಪ್ರಕಟವಾಗುತ್ತೆ. ಬಳಿಕ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಗಳು ನಾಮಪತ್ರ ಸಲ್ಲಿಸುವರು. ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ಮಾಜಿ ಸಚಿವ ಕೆ.ಎನ್.ರಾಜಣ್ಣ ಹಾಗೂ ಎಸ್.ರವಿ ಇಬ್ಬರೂ ನಾಮಪತ್ರ ಸಲ್ಲಿಸುವ ಸಾಧ್ಯತೆ ಇದೆ.  ಒಬ್ಬರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರೇ,  ಬಹುತೇಕ ಈ ತಿಂಗಳ 28 ಅಥವಾ 29 ರಂದು ಚುನಾವಣೆ ನಡೆಯಲಿದೆ.   ರಾಜ್ಯದಲ್ಲಿ ಈಗಾಗಲೇ ಕೋಲಾರ ಮತ್ತು ಬಾಗಲಕೋಟೆ ಡಿಸಿಸಿ ಬ್ಯಾಂಕ್ ಹೊರತುಪಡಿಸಿ ಉಳಿದೆಲ್ಲಾ ಡಿಸಿಸಿ ಬ್ಯಾಂಕ್ ಗಳ ಅಧ್ಯಕ್ಷರ ಆಯ್ಕೆಯಾಗಿದೆ. ಚಿಕ್ಕಮಗಳೂರು ಡಿಸಿಸಿ ಬ್ಯಾಂಕ್ ನಿಂದ ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ಬಿಜೆಪಿಯ ಬೆಳ್ಳಿ ಪ್ರಕಾಶ್ ನಾಮಪತ್ರ ಸಲ್ಲಿಸಿದ್ದಾರೆ. ಅಪೆಕ್ಸ್ ಬ್ಯಾಂಕ್ ನಲ್ಲಿ 21 ಮಂದಿ ನಿರ್ದೇಶಕ ಸ್ಥಾನಗಳಿವೆ. ಇದರಲ್ಲಿ 19 ಸ್ಥಾನಕ್ಕೆ ಆಯಾ ಜಿಲ್ಲಾ ಡಿಸಿಸಿ ಬ್ಯಾಂಕ್ ಗಳು ತಮ್ಮ ಪ್ರತಿನಿಧಿಗಳನ್ನು ಈಗಾಗಲೇ ಆಯ್ಕೆ ಮಾಡಿವೆ.  ಕೋಲಾರ ಮತ್ತು ಬಾಗಲಕೋಟೆ ಜಿಲ್ಲಾ ಡಿಸಿಸಿ ಬ್ಯಾಂಕ್ ನಿಂದ ಅಪೆಕ್ಸ್ ಬ್ಯಾಂಕ್ ಗೆ ನಿರ್ದೇಶಕರ ಆಯ್ಕೆಯಾಗಿಲ್ಲ. ಸದ್ಯ ವಿವಿಧ ಜಿಲ್ಲಾ ಡಿಸಿಸಿ ಬ್ಯಾಂಕ್ ನಿಂದ ಅಪೆಕ್ಸ್ ಬ್ಯಾಂಕ್ ಗೆ ನಿರ್ದೇಶಕರಾಗಿ ಆಯ್ಕೆಯಾಗಿರುವ 16 ಮಂದಿ ಪೈಕಿ ಬಿಜೆಪಿಯ ಇಬ್ಬರು, ಜೆಡಿಎಸ್‌ನ ಒಬ್ಬರು ಮಾತ್ರ ಇದ್ದಾರೆ. ಸಚಿವರಾದ ಶಿವಾನಂದ ಪಾಟೀಲ್, ಚಿತ್ರದುರ್ಗದ ಡಿ.ಸುಧಾಕರ್, ನರೇಂದ್ರ ಸ್ವಾಮಿ, ಶಿವರಾಮ ಹೆಬ್ಬಾರ್, ಎಸ್‌.ರವಿ, ಶರಣಗೌಡ ಪಾಟೀಲ್,  ಮಾಜಿ ಶಾಸಕ ನರೇಂದ್ರ ಈ ಬಾರಿ ಅಪೆಕ್ಸ್ ಬ್ಯಾಂಕ್ ನಿರ್ದೇಶಕರಾಗಿದ್ದಾರೆ. ಸಚಿವ ಸತೀಶ್ ಜಾರಕಿಹೊಳಿ ಪುತ್ರ ರಾಹುಲ್ ಜಾರಕಿಹೊಳಿ ಬೆಳಗಾವಿ ಡಿಸಿಸಿ ಬ್ಯಾಂಕ್ ನಿಂದ ಅಪೆಕ್ಸ್ ಬ್ಯಾಂಕ್ ಗೆ ನಿರ್ದೇಶಕರಾಗಿ ಆಯ್ಕೆಯಾಗಿ ಬಂದಿದ್ದಾರೆ. ಬೀದರ್ ನಿಂದ ಸಚಿವ ಈಶ್ವರ್ ಖಂಡ್ರೆ ಸೋದರ ಅಮರ್ ಕುಮಾರ್ ಖಂಡ್ರೆ ಅಪೆಕ್ಸ್ ಬ್ಯಾಂಕ್ ನಿರ್ದೇಶಕರಾಗಿದ್ದಾರೆ. ಇನ್ನೂ ಶಿವಮೊಗ್ಗ  ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್‌.ಎಂ.ಮಂಜುನಾಥ್ ಗೌಡ ಕೂಡ ಅಪೆಕ್ಸ್ ಬ್ಯಾಂಕ್ ನಿರ್ದೇಶಕರಾಗಿದ್ದಾರೆ.  ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರಾದರೇ, ರಾಜ್ಯದ ಸಹಕಾರ ರಂಗದ ಮೇಲೆ ಹಿಡಿತ ಸಾಧಿಸಬಹುದು ಎನ್ನುವ ಕಾರಣಕ್ಕೆ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರಾಗಲು ಅನೇಕರು ಆಕಾಂಕ್ಷಿಗಳಾಗಿದ್ದಾರೆ. ಇನ್ನೂ ಅಪೆಕ್ಸ್ ಬ್ಯಾಂಕ್ ಗೆ ನಬಾರ್ಡ್ ನಿಂದ ಫಂಡ್ ಬರುತ್ತೆ. ಇದನ್ನು ಜಿಲ್ಲಾ ಡಿಸಿಸಿ ಬ್ಯಾಂಕ್ ಗಳಿಗೆ ನೀಡಬೇಕು. ಅಪೆಕ್ಸ್ ಬ್ಯಾಂಕ್ ನಲ್ಲಿ ರಾಜ್ಯ ಸರ್ಕಾರದ ಮೂರು ಇಲಾಖೆಗಳಷ್ಟು ಹಣ ಇರುತ್ತೆ. 2024-25 ರಲ್ಲಿ ಅಪೆಕ್ಸ್ ಬ್ಯಾಂಕ್ ನಲ್ಲಿ 35,046  ಕೋಟಿ ರೂಪಾಯಿ ವರ್ಕಿಂಗ್ ಕ್ಯಾಪಿಟಲ್ ಇದೆ. ಅಪೆಕ್ಸ್ ಬ್ಯಾಂಕ್ ನ ಗ್ರಾಸ್ ಪ್ರಾಫಿಟ್ 370  ಕೋಟಿ ರೂಪಾಯಿ ಆಗಿದೆ. ಹೀಗಾಗಿ ಅಪೆಕ್ಸ್ ಬ್ಯಾಂಕ್ ರಾಜ್ಯದ ಪ್ರತಿಷ್ಠಿತ ಬ್ಯಾಂಕ್‌.  ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
    Click here to Read More
    Previous Article
    ಮಂಡ್ಯ: ನ್ಯಾಯಾಲಯ ಕಾಮಗಾರಿಗಳ ಪರಿಶೀಲಿಸಿದ ಹೈಕೋರ್ಟ್ ನ್ಯಾ. ಸುನಿಲ್ ದತ್ ಯಾದವ್
    Next Article
    ಮಾರುಕಟ್ಟೆ ಧಾರಣೆ | ಜನವರಿ 17 | ಹತ್ತಿ ರೇಟ್ ಎಷ್ಟಿದೆ?

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment