Search

    Language Settings
    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    -1

    ಭಾರತಕ್ಕೆ EOS-N1 ಅನ್ವೇಷಾ ಶಕ್ತಿ; ನಭಕ್ಕೆ ನೆಗೆದ ಈ ಉಪಗ್ರಹದ ತಾಖತ್ತು ಎಂಥದ್ದು..?

    4 days ago

    ದೇಶದ ಹೆಮ್ಮೆಯ ಇಸ್ರೋ (ISRO) ಇವತ್ತು ಮತ್ತೊಂದು ಮೈಲಿಗಲ್ಲಿಗೆ ಸಾಕ್ಷಿಯಾಗಿದೆ. ಆಂಧ್ರ ಪ್ರದೇಶದ ಶ್ರೀಹರಿಕೋಟಾದಿಂದ EOS-N1 Anvesha ಉಪಗ್ರಹವನ್ನು PSLV-C62 ರಾಕೆಟ್ ಮೂಲಕ ನಭಕ್ಕೆ ಯಶಸ್ವಿಯಾಗಿ ಉಡಾಯಿಸಿದೆ. 2026ರ ವರ್ಷದ ಮೊದಲ ಬಾಹ್ಯಾಕಾಶ ಕಾರ್ಯಾಚರಣೆ ಇದಾಗಿದೆ. 

    ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಬೆಳಗ್ಗೆ 10:17ಕ್ಕೆ EOS-N1 ಉಪಗ್ರಹ ಹೊತ್ತ PSLV-C62 ರಾಕೆಟ್ ಆಕಾಶಕ್ಕೆ ನೆಗೆದಿದೆ. DRDO ವ್ಯೂಹಾತ್ಮಕ ಕಣ್ಗಾವಲು ಉದ್ದೇಶಕ್ಕಾಗಿ ಹೈಪರ್ಸ್‌ಪೆಕ್ಟ್ರಲ್ ಭೂ-ವೀಕ್ಷಣಾ ಉಪಗ್ರಹ ಅಭಿವೃದ್ಧಿ ಮಾಡಿದೆ. ಈ ಹೈಪರ್ಸ್‌ಪೆಕ್ಟ್ರಲ್ ಭೂ-ವೀಕ್ಷಣಾ ಉಪಗ್ರಹ ಸೇರಿ ಒಟ್ಟು ಭಾರತ & ವಿದೇಶಗಳ 14 ಉಪಗ್ರಹಗಳನ್ನ PSLV-C62 ರಾಕೆಟ್ ಹೊತ್ತೊಯ್ದಿದೆ. ಹೆಮ್ಮೆಯ ಭಾರತದ ಮೇಲೆ ನಭದಿಂದಲೇ ಕಣ್ಗಾವಲು ಇಡುವ ಉಪಗ್ರಹ ಇದಾಗಿದೆ. ಶತ್ರು ದೇಶಗಳಾದ ಪಾಕಿಸ್ತಾನ​, ಚೀನಾ ಗಡಿಗಳ ಸರಹದ್ದಿನ ಮೇಲೆ ಹದ್ದಿನ ಕಣ್ಣು ಇಡಲಿದೆ. 

    ಇದನ್ನೂ ಓದಿ: ಬಾಹ್ಯಾಕಾಶ ನಿಲ್ದಾಣದಿಂದ ವಾಪಸ್ ಬರುವ ನಾಲ್ವರು ಗಗನಯಾತ್ರಿಗಳು! : ಯಾಱರು? ಯಾವ ಕಾರಣಕ್ಕೆ ವಾಪಸ್ ಗೊತ್ತಾ?

    EOS-N1 (1)

    ಅನ್ವೇಷಾ (EOS-N1) ಉಪಗ್ರಹದ ಶಕ್ತಿ

    • DRDO ಅಭಿವೃದ್ಧಿಪಡಿಸಿದ ಹೈಪರ್‌ಸ್ಪೆಕ್ಟ್ರಲ್ ಇಮೇಜಿಂಗ್ ಉಪಗ್ರಹ 
    • 400 ಕೆ.ಜಿ ತೂಕದ ಉಪಗ್ರಹ, 600 ಕಿಮೀ ಎತ್ತರದಿಂದ ಭೂ-ಕಕ್ಷೆ ರೌಂಡ್​​ 
    • ಸಾಮಾನ್ಯ ಉಪಗ್ರಹಗಳಿಗಿಂತ ಅನ್ವೇಷಾ ಉಪಗ್ರಹವೂ ಸಾಕಷ್ಟು ಭಿನ್ನ
    • ಸಾಮಾನ್ಯ ಕ್ಯಾಮೆರಾಗಿಂತ ಪರಿಣಾಮಕಾರಿಯಾಗಿ ಚಿತ್ರ ಸೆರೆಹಿಡಿಯಲಿದೆ
    • ಭೂಮಿಯ ಮೇಲಿನ ವಸ್ತುವಿನ ವಿಶಿಷ್ಟ 'ಸ್ಪೆಕ್ಟ್ರಲ್ ಸಿಗ್ನೇಚರ್' ಗುರುತು 
    • ರಕ್ಷಣಾ ಉದ್ದೇಶಗಳಲ್ಲದೆ ಬೇರೆ ಉದ್ದೇಶಕ್ಕೂ ಅನ್ವೇಷಾ ಬಳಕೆ ಆಗಲಿದೆ
    • ಬೆಳೆಗಳ ಆರೋಗ್ಯ & ಮಣ್ಣಿನ ತೇವಾಂಶ, ಮಾಲಿನ್ಯದ ಮೇಲ್ವಿಚಾರಣೆ
    • ಭೂಮಿ ಆಳದಲ್ಲಿ ಖನಿಜ ಸಂಪನ್ಮೂಲಗಳನ್ನು ಗುರುತಿಸುವ ಸಾಮರ್ಥ್ಯ

    ಭಾರತದ ‘ಬಾಹ್ಯಾಕಾಶದ ಕಣ್ಣು’

    ಸಾಮಾನ್ಯ ಉಪಗ್ರಹಗಳು ಕೇವಲ ಬಣ್ಣಗಳನ್ನು ನೋಡುತ್ತವೆ. ಆದರೆ ಅನ್ವೇಷಾ ಹೈಪರ್‌ಸ್ಪೆಕ್ಟ್ರಲ್ ತಂತ್ರಜ್ಞಾನ ಹಾಗಲ್ಲ. ಅವು ವಸ್ತುಗಳನ್ನ ಪತ್ತೆ ಮಾಡುತ್ತವೆ. ಗಿಡಗಂಟಿಗಳ ನಡುವೆ ಅಡಗಿಸಿಟ್ಟಿರುವ ಶತ್ರುಗಳ ಟ್ಯಾಂಕ್‌ಗಳು, ಕ್ಷಿಪಣಿ ಲಾಂಚರ್‌, ಅಥವಾ ಬಂಕರ್‌ಗಳನ್ನು ಪತ್ತೆಹಚ್ಚಬಲ್ಲದು. LoC ಮತ್ತು LAC ಅಲ್ಲಿನ ಶತ್ರುಗಳ ಚಲನವಲನ ಮೇಲೆ ಕಣ್ಣು ಇಡಲಿದೆ.  

    ಹೊಸ ಕಟ್ಟಡ ನಿರ್ಮಾಣಗಳನ್ನು ನಿಖರವಾಗಿ ಗಮನಿಸಲಿದೆ. ಬಳಿಕ ಭಾರತೀಯ ಸೇನೆಗೆ ಅದರ ಬಗ್ಗೆ ಮಾಹಿತಿ ನೀಡಲಿದೆ. ಕೇವಲ ಚಿತ್ರವಲ್ಲ, ವಸ್ತುವಿನ ರಾಸಾಯನಿಕ ಲಕ್ಷಣಗಳ ಬಗ್ಗೆಯೂ ಮಾಹಿತಿ ನೀಡಲಿದೆ. ಸೇನೆ ಕ್ಷಿಪಣಿ ಉಡಾವಣಾ ಸ್ಥಳಗಳ ಮೇಲ್ವಿಚಾರಣೆ ನಡೆಸುತ್ತದೆ. ಯುದ್ಧ ಭೂಮಿಯ ನೈಜ ಚಿತ್ರಣವನ್ನ ಕ್ಷಣ ಕ್ಷಣಕ್ಕೂ ನೀಡುತ್ತೆ. ಭೂಮಿ ಮೇಲಿನ 12 ಮೀಟರ್‌ವರೆಗಿನ ಸಣ್ಣ ವಸ್ತುಗಳ ಗುರುತು ಪತ್ತೆ ಮಾಡುತ್ತದೆ. 

    ಇದನ್ನೂ ಓದಿ: ಪೋಷಕರ ಕಂಟ್ರೋಲ್​​ನಲ್ಲಿ ಮಕ್ಕಳ WhatsApp.. ಬರ್ತಿದೆ ಹೊಸ ಫೀಚರ್ಸ್​..!

    ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

    Click here to Read More
    Previous Article
    ಫೋನ್ ಸಂಪರ್ಕ ಇರಲಿಲ್ಲ, CCTV ಕೂಡ ಇರಲಿಲ್ಲ -ಟೆಕ್ಕಿ ಜೀವ ತೆಗೆದ ಆರೋಪಿ ಟ್ರೇಸ್ ಆಗಿದ್ದು ಹೇಗೆ..?
    Next Article
    ಟೆಕ್ಕಿ ಶರ್ಮಿಳಾ ದುರಂತ ಅಂತ್ಯದ ಸತ್ಯ ಬಯಲು.. ಅಂದು ಮನೆಗೆ ಎಂಟ್ರಿ ಕೊಟ್ಟಿದ್ದು PUC ಹುಡುಗ..!

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment