ಮಂಡ್ಯ ಜಿಲ್ಲೆಯಲ್ಲಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಸೇರಿದಂತೆ ಜೆಡಿಎಸ್ ನಾಯಕರು ಯಾವುದೇ ಕಾರ್ಖಾನೆ ಸ್ಥಾಪನೆ ಮಾಡುವುದಿದ್ದರೆ, ಕಂಪನಿಯ ಮೂಲಕ ಸರಕಾರಕ್ಕೆ ಅರ್ಜಿ ಸಲ್ಲಿಸಿ ಕಾನೂನಿನಂತೆ ನಡೆದುಕೊಳ್ಳಲಿ. ಅದನ್ನು ಬಿಟ್ಟು ಸುಳ್ಳಿನಿಂದ ಕೂಡಿದ ಕಪೋಲಕಲ್ಪಿತ ಸುದ್ದಿ ಹರಡುವುದನ್ನು ಬಿಡಬೇಕು ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್ ತಿರುಗೇಟು ನೀಡಿದರು. ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಡ್ಯ ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಾಪನೆಗೆ ಜಾಗ ಕೊಡುವ ಸಂಬಂಧ ಸಚಿವರು, ಶಾಸಕರಿಗೆ ಆಸಕ್ತಿ ಇಲ್ಲ ಎಂದು ಹೇಳಿಕೆ ನೀಡುವುದು ಹಾಸ್ಯಾಸ್ಪದವಾಗಿದೆ. ಮಂಡ್ಯ ಶಾಸಕರು ಕಾಡಾ […]
The post ಮಂಡ್ಯಕ್ಕೆ ಕಾರ್ಖಾನೆ ತರುವುದಿದ್ದರೆ ಕಂಪನಿ ಮೂಲಕ ಅರ್ಜಿ ಸಲ್ಲಿಸಿ : ಗಂಗಾಧರ್ appeared first on nudikarnataka.
ಮಂಡ್ಯ ಜಿಲ್ಲೆಯಲ್ಲಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಸೇರಿದಂತೆ ಜೆಡಿಎಸ್ ನಾಯಕರು ಯಾವುದೇ ಕಾರ್ಖಾನೆ ಸ್ಥಾಪನೆ ಮಾಡುವುದಿದ್ದರೆ, ಕಂಪನಿಯ ಮೂಲಕ ಸರಕಾರಕ್ಕೆ ಅರ್ಜಿ ಸಲ್ಲಿಸಿ ಕಾನೂನಿನಂತೆ ನಡೆದುಕೊಳ್ಳಲಿ. ಅದನ್ನು ಬಿಟ್ಟು ಸುಳ್ಳಿನಿಂದ ಕೂಡಿದ ಕಪೋಲಕಲ್ಪಿತ ಸುದ್ದಿ ಹರಡುವುದನ್ನು ಬಿಡಬೇಕು ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್ ತಿರುಗೇಟು ನೀಡಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಡ್ಯ ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಾಪನೆಗೆ ಜಾಗ ಕೊಡುವ ಸಂಬಂಧ ಸಚಿವರು, ಶಾಸಕರಿಗೆ ಆಸಕ್ತಿ ಇಲ್ಲ ಎಂದು ಹೇಳಿಕೆ ನೀಡುವುದು ಹಾಸ್ಯಾಸ್ಪದವಾಗಿದೆ. ಮಂಡ್ಯ ಶಾಸಕರು ಕಾಡಾ ಇಲಾಖೆ ವ್ಯಾಪ್ತಿಯಲ್ಲಿ ೮೦ ಎಕರೆ ಜಾಗ ನೀಡಲು ಸಿದ್ದರಿದ್ದೇವೆ ಎಂದು ತಿಳಿಸಿದ್ದಾರೆ. ಹೀಗಿರುವಾಗ ಕೈಗಾರಿಕೆ ಸ್ಥಾಪಿಸುವ ಸಂಬಂಧ ಮಂಡ್ಯ ಜಿಲ್ಲೆಯ ಕೆಲವು ಮಾಜಿ ಶಾಸಕರು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಹಾಲಿ ಶಾಸಕರ ಬಗ್ಗೆ ಅನಗತ್ಯ ಆರೋಪ ಮಾಡಿರುವುದು ಸರಿಯಲ್ಲ ಎಂದರು.
ಕಾಂಗ್ರೆಸ್ ಸರಕಾರ ಬಂದಾಗಿನಿಂದ ನಮ್ಮ ಶಾಸಕರು ತಮ್ಮ ಕ್ಷೇತ್ರಗಳಿಗೆ ಅತಿ ಹೆಚ್ಚು ಅನುದಾನ ತಂದಿದ್ದಾರೆ. ಕುಮಾರಸ್ವಾಮಿ ಅವರು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದಾಗ ಜೆಡಿಎಸ್ ಶಾಸಕರು ತಮ್ಮ ಅವಧಿಯಲ್ಲಿ ಏನು ಅಭಿವೃದ್ಧಿ ಕಾರ್‍ಯಕ್ರಮಗಳನ್ನು ಮಾಡದೇ ಕಾಲಾಹರಣ ಮಾಡಿದ್ದಾರೆ ಎಂದು ಟೀಕಿಸಿದರು.
ಸುಳ್ಳು ಹೇಳುವಲ್ಲಿ ನಿಸ್ಸೀಮರು
ಮಾಜಿ ಶಾಸಕರಾದ ಸಿ.ಎಸ್.ಪುಟ್ಟರಾಜು, ಸುರೇಶ್‌ಗೌಡ ಅವರು ಸುಳ್ಳು ಹೇಳುವಲ್ಲಿ ನಿಸ್ಸೀಮರು, ಕಳೆದ ಎರಡೂವರೆ ವರ್ಷಗಳಿಂದ ತಮ್ಮ ಕ್ಷೇತ್ರದ ಕಾರ್‍ಯಕರ್ತರಿಗೆ ನೈತಿಕ ಬೆಂಬಲ ನೀಡದೇ ಇದ್ದು, ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಸ್ಪರ್ಧಿಸಲು ಅರ್ಜಿಯನ್ನೂ ಹಾಕಲಿಲ್ಲ. ಕಾಂಗ್ರೆಸ್ ಪಕ್ಷ ಜಿಲ್ಲೆಯ ಎಲ್ಲಾ ವರ್ಗದ ಕಾರ್‍ಯಕರ್ತರಿಗೆ ದಾಖಲೆಯ ಮಟ್ಟದ ಅಧಿಕಾರ ಸ್ಥಾನ-ಮಾನ ನೀಡಿದೆ ಎಂದು ಹೇಳಿದರು.
ಜೆಡಿಎಸ್ ಅವಕಾಶವಾದಿ ಪಕ್ಷವಾಗಿದೆ. ರಾಜ್ಯದ ರಾಜಕೀಯದಲ್ಲಿ ಅಧಿಕಾರಕ್ಕಾಗಿ ಒಮ್ಮೆ ಬಿಜೆಪಿಯೊಟ್ಟಿಗೆ ಇನ್ನೊಮ್ಮೆ ನಮ್ಮೊಂದಿಗೆ ಮೈತ್ರಿ ಮಾಡಿಕೊಂಡಿರುವುದನ್ನು ಇತಿಹಾಸ ತಿಳಿಸುತ್ತದೆ.
ಮೈಷುಗರ್‌ಗೆ ೩೦೦ ಕೋಟಿ ಆರ್ಥಿಕ ಶಕ್ತಿ ತುಂಬಲಾಗಿದೆ. ಮಾಜಿ ಅಧ್ಯಕ್ಷ ನಾಗರಾಜಪ್ಪರಿಂದ ೧೨೭ ಕೋಟಿ ರೂ. ಹಿಂಪಡೆಯಲು ಕ್ರಮ ವಹಿಸಲಾಗಿದೆ. ೨೭ ಎಕರೆ ಭೂಮಿ ಪತ್ತೆ ಹಚ್ಚಲಾಗಿದೆ. ೧೬ ಕೋಟಿ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಯಾವುದೇ ರೀತಿಯ ಆರೋಪ ಮಾಡುವ ಮೊದಲು ಮಾಜಿ ನಿರುದ್ಯೋಗಿ ಶಾಸಕರು ಮಾಹಿತಿ ಪಡೆದು ಮಾತನಾಡುವಂತೆ ತಾಕೀತು ಮಾಡಿದರು.
ರಾಜ್ಯದ ಜನತೆಗೆ ಗೊತ್ತಿದೆ
ಕಾಂಗ್ರೆಸ್ ಮುಖಂಡ ಬಿ.ನಾಗೇಂದ್ರಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್‍ಯವಾದಲ್ಲಿ ಅದರಿಂದ ಜೆಡಿಎಸ್‌ಗೆ ಹೆಸರು ಬರಲಿದೆ ಎಂಬ ಕಾರಣಕ್ಕೆ ಕಾಂಗ್ರೆಸ್ ಹಿಂಜರಿಯತ್ತಿದ್ದಾರೆ ಎಂದು ಶಾಸಕ ಎಚ್.ಡಿ.ಮಂಜು ಹೇಳಿದ್ದಾರೆ. ೨೦೧೩, ೧೮ರಲ್ಲಿ ಕಾಂಗ್ರೆಸ್ ಪಕ್ಷದ ಅಧಿಕಾರಾವಧಿಯಲ್ಲಿ ನಡೆದ ಅಭಿವೃದ್ಧಿ ಬಗ್ಗೆ ರಾಜ್ಯದ ಜನತೆಗೆ ಗೊತ್ತಿದೆ. ಕೆ.ಆರ್.ಪೇಟೆ ಕ್ಷೇತ್ರವನ್ನು ಪ್ರಬುದ್ಧರು ಅಭಿವೃದ್ದಿಪಡಿಸಿದ್ದಾರೆ. ಜಿಲ್ಲೆಯ ನಾಯಕರಾದ ಚಲುವರಾಯಸ್ವಾಮಿ ಅವರು ಅಭಿವೃದ್ಧಿಯ ದಾಹದೊಂದಿಗೆ ಜಿಲ್ಲೆಯ ಅಭಿವೃದ್ಧಿಗೆ ಮುಂದಾಗಿದ್ದಾರೆ ಎಂದರು.
ಅಭಿವೃದ್ಧಿಯ ನಾಗಾಲೋಟ
ಮಾಜಿ ಶಾಸಕ ಎಚ್.ಬಿ.ರಾಮು ಮಾತನಾಡಿ, ಕಳೆದ ಎರಡೂವರೆ ವರ್ಷಗಳಿಂದ ಮಂಡ್ಯ ಅಭಿವೃದ್ಧಿಯ ನಾಗಾಲೋಟದಲ್ಲಿ ತೇಲುತ್ತಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿಯೂ ಅಭಿವೃದ್ಧಿ ಕಾರ್‍ಯಗಳು ನಿರಂತರವಾಗಿ ನಡೆಯುತ್ತಿದೆ ಎಂದರು.
ಕೇಂದ್ರ ಸಚಿವರು ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಾಪಿಸುವ ಸಂಸ್ಥೆಯಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲು ಮುಂದಾಗಬೇಕು. ಈ ಮೂಲಕ ರಾಜ್ಯ ಸರಕಾರದ ಸಹಕಾರದೊಂದಿಗೆ ಕೈಗಾರಿಕೆ ಸ್ಥಾಪಿಸಬೇಕು. ಈ ಸಂಬಂಧ ಕೇಂದ್ರ ಸಚಿವರಾಗಿ ಉನ್ನತ ಸ್ಥಾನದಲ್ಲಿದ್ದು ಜಿಲ್ಲಾ ಸಚಿವರ ಹಾಗೂ ಜಿಲ್ಲೆಯ ಎಲ್ಲಾ ಶಾಸಕರ ಸಭೆ ಕರೆದು ಚರ್ಚೆ ಮಾಡಲು ಏನು ಕಷ್ಟ ಎಂದು ಪ್ರಶ್ನಿಸಿದರು.
ಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾ ಕಾರ್‍ಯಾಧ್ಯಕ್ಷ ಚಿದಂಬರ್, ಎಸ್ಸಿ ಎಸ್ಟಿ ವಿಭಾದ ಉಪಾಧ್ಯಕ್ಷ ವಿಜಯ್‌ಕುಮಾರ್, ಮುಡಾಧ್ಯಕ್ಷ ಬಿ.ಪಿ.ಪ್ರಕಾಶ್, ಮೂರ್ತಿ, ಕಿಸಾನ್ ಮೋರ್ಚಾ ಅಧ್ಯಕ್ಷ ಮೋಹನ್‌ಕುಮಾರ್, ಪುಟ್ಟಸ್ವಾಮಿ, ರಾಜೇಶ್, ಮೂರ್ತಿ ಇದ್ದರು.
The post ಮಂಡ್ಯಕ್ಕೆ ಕಾರ್ಖಾನೆ ತರುವುದಿದ್ದರೆ ಕಂಪನಿ ಮೂಲಕ ಅರ್ಜಿ ಸಲ್ಲಿಸಿ : ಗಂಗಾಧರ್ appeared first on nudikarnataka.
Previous Article
ಜ.6 ರಂದು ಆಹಾರ ಸಚಿವರೊಂದಿಗೆ ಪಡಿತರ ವಿತರಕರ ಸಭೆ : ಟಿ.ಕೃಷ್ಣಪ್ಪ
Next Article
‘ನಾರಾಯಣ ಗುರು ಚಿಂತನೆ ರವೀಂದ್ರನಾಥ ಟ್ಯಾಗೋರ್ ಅವರನ್ನು ಪ್ರಭಾವಿಸಿತ್ತು’ – ಸಿಎಂ ಸಿದ್ದರಾಮಯ್ಯ