ಆರ್.ವಿ.ದೇವರಾಜ್ ಅವರು ಅಂಬರೀಶ್ ತರಹ ಎಲ್ಲರ ಪ್ರೀತಿ,ವಿಶ್ವಾಸ ಗಳಿಸಿಕೊಂಡು ಸ್ನೇಹಜೀವಿಯಾಗಿದ್ದರು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು. ಅಖಿಲ ಕರ್ನಾಟಕ ಅಂಬರೀಶ್ ಅಭಿಮಾನಿಗಳ ಸಂಘದ ವತಿಯಿಂದ ಮಂಡ್ಯ ನಗರದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ನಡೆದ ಆರ್.ವಿ. ದೇವರಾಜ್ ಪುಷ್ಪನಮನ ಹಾಗೂ ನುಡಿನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಆರ್.ವಿ.ದೇವರಾಜು ಅವರು ಮಂಡ್ಯದಲ್ಲಿ ಕಾಂಗ್ರೆಸ್ ಪಕ್ಷದ ಉಸ್ತುವಾರಿಯಾಗಿದ್ದಾಗ ಎಲ್ಲರ ಜೊತೆ ಆತ್ಮೀಯತೆ ಬೆಳೆಸಿಕೊಂಡಿದ್ದರು. ದೇವರಾಜ್ ಅವರು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರಿಗೆ ಚಾಮರಾಜಪೇಟೆ ಕ್ಷೇತ್ರ ಬಿಟ್ಟುಕೊಟ್ಟ ನಂತರ […]
The post ಎಲ್ಲರ ಪ್ರೀತಿ, ವಿಶ್ವಾಸಗಳಿಸಿದ್ದ ಸ್ನೇಹಜೀವಿ ಆರ್.ವಿ.ದೇವರಾಜ್ : ಚಲುವರಾಯಸ್ವಾಮಿ appeared first on nudikarnataka.
ಆರ್.ವಿ.ದೇವರಾಜ್ ಅವರು ಅಂಬರೀಶ್ ತರಹ ಎಲ್ಲರ ಪ್ರೀತಿ,ವಿಶ್ವಾಸ ಗಳಿಸಿಕೊಂಡು ಸ್ನೇಹಜೀವಿಯಾಗಿದ್ದರು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ಅಖಿಲ ಕರ್ನಾಟಕ ಅಂಬರೀಶ್ ಅಭಿಮಾನಿಗಳ ಸಂಘದ ವತಿಯಿಂದ ಮಂಡ್ಯ ನಗರದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ನಡೆದ ಆರ್.ವಿ. ದೇವರಾಜ್ ಪುಷ್ಪನಮನ ಹಾಗೂ ನುಡಿನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಆರ್.ವಿ.ದೇವರಾಜು ಅವರು ಮಂಡ್ಯದಲ್ಲಿ ಕಾಂಗ್ರೆಸ್ ಪಕ್ಷದ ಉಸ್ತುವಾರಿಯಾಗಿದ್ದಾಗ ಎಲ್ಲರ ಜೊತೆ ಆತ್ಮೀಯತೆ ಬೆಳೆಸಿಕೊಂಡಿದ್ದರು. ದೇವರಾಜ್ ಅವರು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರಿಗೆ ಚಾಮರಾಜಪೇಟೆ ಕ್ಷೇತ್ರ ಬಿಟ್ಟುಕೊಟ್ಟ ನಂತರ ಅವರಿಗೆ ರಾಜಕೀಯದಲ್ಲಿ ಮತ್ತೆ ಅವಕಾಶ ಸಿಗಲಿಲ್ಲ ಎಂದು ತಿಳಿಸಿದರು.
ಆರ್.ವಿ.ದೇವರಾಜ್ ಅವರ ಪುತ್ರ ಯುವರಾಜ್ ರಾಜಕೀಯವಾಗಿ ಬೆಳೆಯಲು ಅವರ ಜೊತೆ ಇರುತ್ತೇನೆ ಎಂದು ಹೇಳಿದರು.

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಹಾಗೂ ಮಳವಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಪಿ.ಎಂ. ನರೇಂದ್ರಸ್ವಾಮಿ ಮಾತನಾಡಿ ಆರ್.ವಿ.ದೇವರಾಜ್ ಅವರು ಜನಪರ ಕಾಳಜಿ ಇದ್ದ ಸೇವಕರಾಗಿ ಕೆಲಸ ಮಾಡುತ್ತಿದ್ದರು.ತಳಮಟ್ಟದಿಂದ ಹೋರಾಟದಲ್ಲಿ ಸಾಮಾಜಿಕ ಕಾಳಜಿ ಇಟ್ಟುಕೊಂಡು ರಾಜಕಾರಣದಲ್ಲಿ ಗುರುತಿಸಿಕೊಂಡಿದ್ದರು ಎಂದು ತಿಳಿಸಿದರು.
ಮುಖ್ಯಮಂತ್ರಿ ಆಗಿದ್ದ ಎಸ್ಎಮ್ ಕೃಷ್ಣ ಅವರು ಮಂಡ್ಯದ ಕಾಂಗ್ರೆಸ್ ಪಕ್ಷ ವಿಚಾರಕ್ಕೆ ಆರ್.ವಿ. ದೇವರಾಜ್ ಅವರನ್ನು ನಂಬಿದವರು.ಮಂಡ್ಯದಲ್ಲಿ ಗುಂಪುಗಾರಿಕೆಗೆ ಪ್ರಾಧಾನ್ಯತೆ ಕೊಡಬಾರದು ಎಂದು ತೀರ್ಮಾನ ಮಾಡಿ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಎಂ.ಶಿವಣ್ಣ ಅವರನ್ನು ನೇಮಿಸಿದರು ಇದು ಎಸ್.ಎಮ್.ಕೃಷ್ಣ ಅವರ ರಾಜಕೀಯ ಚತುರತೆ ಎಂದು ಹೇಳಿದರು.
ಆರ್.ವಿ.ದೇವರಾಜ್ ಅವರು ಪಕ್ಷಾಂತರ ಮಾಡಿದ್ದರೆ ಅಧಿಕಾರದಲ್ಲಿ ಇರುತ್ತಿದ್ದರು. ದೇವರಾಜ್ ಅವರ ಕಾಂಗ್ರೆಸ್ ಪಕ್ಷ ನಿಷ್ಠೆ, ಬದ್ಧತೆ ಅವರಲ್ಲಿ ಇತ್ತು ಎಂದು ಹೇಳಿದರು
ಕಾಂಗ್ರೆಸ್ ಪಕ್ಷದ ಎನ್ಎಸ್ ಯುಐ ಹಾಗೂ ಸೇವಾದಳ ಸಂಘಟನೆ ಅವತ್ತು ಯಾವ ರೀತಿ ಇತ್ತು ಎಂಬುದನ್ನು ಕಾಂಗ್ರೆಸ್ ಕಾರ್ಯಕರ್ತರು ತಿಳಿದುಕೊಳ್ಳಬೇಕು.ಕಾಂಗ್ರೆಸ್ ಪಕ್ಷ ಉಳಿದರೆ ಮಾತ್ರ ನಾವು ಉಳಿಯಲು ಸಾಧ್ಯ ಆದ್ದರಿಂದ ಸಂಘಟನೆಗಳ ಮೂಲ ಉದ್ದೇಶಗಳನ್ನು ಕಾಂಗ್ರೆಸ್ ಕಾರ್ಯಕರ್ತರು ತಿಳಿದುಕೊಳ್ಳಬೇಕು ಎಂದು ತಿಳಿಸಿದರು.
ಆರ್.ವಿ.ದೇವರಾಜ್ ಸುಪುತ್ರ ಯುವರಾಜು ಮಾತನಾಡಿ ಆರ್.ವಿ.ದೇವರಾಜ್ ಅವರು ಕಾಂಗ್ರೆಸ್ ಕಟ್ಟಾಳು ರೀತಿ ನಿಷ್ಠಾವಂತ ಕಾರ್ಯಕರ್ತರಾಗಿ ಕೆಲಸ ಮಾಡುತ್ತಿದ್ದರು.ಎಲ್ಲರನ್ನೂ ಪ್ರೀತಿ ವಿಶ್ವಾಸದಿಂದ ಕಾಣುತ್ತಿದ್ದರೂ ಎಂದು ಹೇಳಿದರು.

ಆರ್.ವಿ.ದೇವರಾಜ್ ಅವರ ಪ್ರೀತಿ ವಿಶ್ವಾಸವನ್ನು ರಾಜ್ಯದಲ್ಲಿ ಉಳಿಸಿ ಬೆಳೆಸಿಕೊಂಡು ಹೋಗಲು ಸರ್ವ ಪ್ರಯತ್ನ ಮಾಡುತ್ತೇವೆ.ಹುಟ್ಟು ಸಾವು ನಡುವೆ ಮನುಷ್ಯ ಸಂಪಾದನೆ ಮಾಡುವುದು ಪ್ರೀತಿ,ವಿಶ್ವಾಸ.ಮುಂದಿನ ದಿನಗಳಲ್ಲಿ ನನಗೆ ಅವಕಾಶ ಸಿಕ್ಕಾಗ ಮಂಡ್ಯದ ಋಣ ತೀರಿಸುವ ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಅಖಿಲ ಕರ್ನಾಟಕ ಅಂಬರೀಶ್ ಅಭಿಮಾನಿಗಳ ಸಂಘದ ಅಧ್ಯಕ್ಷ ಬೇಲೂರು ಸೋಮಶೇಖರ್ ಮಾತನಾಡಿ ಆರ್.ವಿ.ದೇವರಾಜ್ ಅವರು ಮಂಡ್ಯಕ್ಕೋಸ್ಕರ ಅವರ ಕ್ಷೇತ್ರವನ್ನು ತ್ಯಾಗ ಮಾಡಿದ ಮಹಾನ್ ನಾಯಕ. ಅವರ ಸ್ಮರಣೆ ಮಾಡುವುದು ಮಂಡ್ಯದವರ ಕರ್ತವ್ಯ ಎಂದು ಹೇಳಿದರು.
ಮಂಡ್ಯ ಜಿಲ್ಲೆಯಲ್ಲಿ ಕಾಂಗ್ರೆಸ್ ಉಸ್ತುವಾರಿಯಾಗಿ ಕೆಲಸ ಮಾಡುವಾಗ ಯಾವುದೇ ಚುನಾವಣೆಗಳು ನಡೆದರು
ಆರ್.ವಿ.ದೇವರಾಜ್ ಅವರು ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷದಲ್ಲಿ ಕೆಲಸ ಮಾಡುತ್ತಿದ್ದರು. ಮಂಡ್ಯ ಜಿಲ್ಲೆಯವರು ಎಂದರೆ ಅವರಿಗೆ ಪ್ರೀತಿ ಹೆಚ್ಚು.ಅವರ ನಿವಾಸಕ್ಕೆ ಮಂಡ್ಯದವರು ಹೋದರೆ ಆತಿಥ್ಯ ಕೊಟ್ಟು ಕಳುಹಿಸುತ್ತಿದ್ದರು ಎಂದು ತಿಳಿಸಿದರು.
ನುಡಿ ನಮನ ಕಾರ್ಯಕ್ರಮದಲ್ಲಿ ಮಾಜಿ ಶಾಸಕಿ ವಿಜಯಲಕ್ಷ್ಮಿ ಬಂಡಿ ಸಿದ್ದೇಗೌಡ, ಮನಮುಲ್ ಅಧ್ಯಕ್ಷ ಉಮ್ಮಡಹಳ್ಳಿ ಶಿವಪ್ಪ, ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಮಾಜಿ ಅಧ್ಯಕ್ಷ ಹಾಲಹಳ್ಳಿ ರಾಮಲಿಂಗಯ್ಯ, ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಚಿದಂಬರ್, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಹೆಚ್.ಸಿ. ಶಿವಲಿಂಗೇಗೌಡ, ಮನ್ ಮುಲ್ ಮಾಜಿ ಅಧ್ಯಕ್ಷ ಎಲ್.ಸಿ.ಮಂಜುನಾಥ್, ಸೇರಿದಂತೆ ಇತರರು ಭಾಗವಹಿಸಿದರು
The post ಎಲ್ಲರ ಪ್ರೀತಿ, ವಿಶ್ವಾಸಗಳಿಸಿದ್ದ ಸ್ನೇಹಜೀವಿ ಆರ್.ವಿ.ದೇವರಾಜ್ : ಚಲುವರಾಯಸ್ವಾಮಿ appeared first on nudikarnataka.
Previous Article
‘ನಾರಾಯಣ ಗುರು ಚಿಂತನೆ ರವೀಂದ್ರನಾಥ ಟ್ಯಾಗೋರ್ ಅವರನ್ನು ಪ್ರಭಾವಿಸಿತ್ತು’ – ಸಿಎಂ ಸಿದ್ದರಾಮಯ್ಯ
Next Article
ವಿಬಿ- ಜೀ ರಾಮ್- ಜೀ ಹೆಸರಿನಲ್ಲಿ ರಾಜ್ಯ ಸರ್ಕಾರಗಳ ಮೇಲೆ ಹೊರೆ : ವಿ.ಶಿವದಾಸನ್