Search

    Language Settings
    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    -1

    ವಿಬಿ- ಜೀ ರಾಮ್- ಜೀ ಹೆಸರಿನಲ್ಲಿ ರಾಜ್ಯ ಸರ್ಕಾರಗಳ ಮೇಲೆ ಹೊರೆ : ವಿ.ಶಿವದಾಸನ್

    2 weeks ago

    ದೇಶದ ಗ್ರಾಮೀಣ ಭಾಗದ ಜನರ ಜೀವನಾಡಿ ಮನರೇಗಾ ಯೋಜನೆಯನ್ನು ದುರ್ಬಲಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ವಿಬಿ ಜೀ ರಾಮ್ ಜೀ ಹೆಸರಿಗೆ ಬದಲಾಯಿಸುತ್ತಿದೆ ಎಂದು ರಾಜ್ಯಸಭೆ ಸದಸ್ಯ ವಿ.ಶಿವದಾಸನ್ ಆರೋಪಿಸಿದರು. ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮನರೇಗಾ ಗಾಂಧಿಜಿ ಅವರ ಮಹತ್ವಾಕಾಂಕ್ಷೆಯ ಯೋಜನೆಯಾಗಿತ್ತು. ಗ್ರಾಮೀಣರಿಗೆ ಉದ್ಯೋಗದ ಗ್ಯಾರೆಂಟಿ ನೀಡುತ್ತಿದ್ದ ಯೋಜನೆಯನ್ನು ರದ್ದುಗೊಳಿಸುವ ಹುನ್ನಾರ ಇದಾಗಿದೆ ಎಂದರು. ಈ ಯೋಜನೆಯನ್ನು ವಿಬಿ ಜೀ ರಾಮ್ ಜೀ ಎಂದು ಹೆಸರಿಸಿ ರಾಜ್ಯ ಸರಕಾರಗಳ ಮೇಲೆ ಹೊರೆ ಹಾಕಲಾಗುತ್ತಿದೆ. ಬಿಜೆಪಿ ಸರಕಾರ […]

    The post ವಿಬಿ- ಜೀ ರಾಮ್- ಜೀ ಹೆಸರಿನಲ್ಲಿ ರಾಜ್ಯ ಸರ್ಕಾರಗಳ ಮೇಲೆ ಹೊರೆ : ವಿ.ಶಿವದಾಸನ್ appeared first on nudikarnataka.



    ದೇಶದ ಗ್ರಾಮೀಣ ಭಾಗದ ಜನರ ಜೀವನಾಡಿ ಮನರೇಗಾ ಯೋಜನೆಯನ್ನು ದುರ್ಬಲಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ವಿಬಿ ಜೀ ರಾಮ್ ಜೀ ಹೆಸರಿಗೆ ಬದಲಾಯಿಸುತ್ತಿದೆ ಎಂದು ರಾಜ್ಯಸಭೆ ಸದಸ್ಯ ವಿ.ಶಿವದಾಸನ್ ಆರೋಪಿಸಿದರು.

    ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮನರೇಗಾ ಗಾಂಧಿಜಿ ಅವರ ಮಹತ್ವಾಕಾಂಕ್ಷೆಯ ಯೋಜನೆಯಾಗಿತ್ತು. ಗ್ರಾಮೀಣರಿಗೆ ಉದ್ಯೋಗದ ಗ್ಯಾರೆಂಟಿ ನೀಡುತ್ತಿದ್ದ ಯೋಜನೆಯನ್ನು ರದ್ದುಗೊಳಿಸುವ ಹುನ್ನಾರ ಇದಾಗಿದೆ ಎಂದರು.

    ಈ ಯೋಜನೆಯನ್ನು ವಿಬಿ ಜೀ ರಾಮ್ ಜೀ ಎಂದು ಹೆಸರಿಸಿ ರಾಜ್ಯ ಸರಕಾರಗಳ ಮೇಲೆ ಹೊರೆ ಹಾಕಲಾಗುತ್ತಿದೆ. ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ಮನರೇಗಾ ಯೋಜನೆಯ ಅನುದಾನ ಕಡಿತಮಾಡುವ ಕೆಲಸದಲ್ಲಿ ತೊಗಿದೆ. ಇದೀಗ ಶೇ.೬೦ರಷ್ಟು ಕೇಂದ್ರ ಸರಕಾರ ಹಾಗೂ ಶೇ.೪೦ರಷ್ಟನ್ನು ರಾಜ್ಯ ಸರಕಾರಗಳು ಭರಿಸುವಂತೆ ಬಿಲ್‌ನಲ್ಲಿ ಸೂಚಿಸಲಾಗಿದೆ ಎಂದು ಹೇಳಿದರು.

    ಬಿಲ್‌ನಲ್ಲಿ ೧೨೫ ದಿನಗಳ ಉದ್ಯೋಗ ನೀಡುವ ಭರವಸೆ ನೀಡಿ ವಂಚಿಸಲಾಗುತ್ತಿದೆ. ಯೋಜನೆಯಡಿ ಅರ್ಜಿ ಸಲ್ಲಿಸಿದ ಎಲ್ಲರಿಗೂ ಉದ್ಯೋಗ ಒದಗಿಸುವ ಗ್ಯಾರೆಂಟಿಯನ್ನು ಕಸಿದಿದೆ. ಅಲ್ಲದೇ ಶೇ.೬೦ರಷ್ಟು ಉದ್ಯೋಗ ಮಾತ್ರ ಗ್ರಾಮೀಣರಿಗೆ ದೊರೆಯಲಿದ್ದು ೭೫ ದಿನಗಳ ಉದ್ಯೋಗ ನೀಡುವುದು ನೂತನ ಬಿಲ್‌ನ ಉದ್ದೇಶವಾಗಿದೆ ಎಂದು ದೂರಿದರು.

    ಅದರಂತೆಯೇ ಅಂಗನವಾಡಿ, ಆಶಾ ಕಾರ್‍ಯಕತೆಯರಿಗೂ ವೇತನ ನೀಡುವುದನ್ನು ರಾಜ್ಯ ಸರಕಾರಗಳ ಮೇಲೆ ಹೊರಿಸಿರುವ ಕೇಂದ್ರ ಸರಕಾರವು ಮಾಸಿಕ ಒಂದು ಸಾವಿರ ರೂ ಮಾತ್ರ ನೀಡುತ್ತಿದ್ದು, ಉಳಿಕೆಯನ್ನು ರಾಜ್ಯ ಸರಕಾರ ಭರಿಸಬೇಕಿದೆ. ಸಿಪಿಐಎಂ ಪಕ್ಷ, ಕೃಷಿ ಕಾರ್ಮಿಕರ ಸಂಘಟನೆಯು ನಿರಂತರವಾಗಿ ಗ್ರಾಮೀಣ, ಕೃಷಿ ಕಾರ್ಮಿಕರು ಹಾಗೂ ಬಡವರ ಪರವಾಗಿ ಹೋರಾಟ ನಡೆಸಲಿದೆ. ಅಂತೆಯೇ ಸದರಿ ಯೋಜನೆಯಲ್ಲಿ ಕೆಲಸ ಮಾಡುತ್ತಾ, ಯೋಜನೆ ರೂಪ ಬದಲಿಸಲು ಹೋರಾಟ ನಡೆಸಲಿದೆ ಎಂದು ಪ್ರಶ್ನೆಗೆ ಉತ್ತರ ನೀಡಿದರು.

    ದೇಶದ ಎಲ್ಲ ರಾಜ್ಯ ಸರಕಾರಗಳು ಗ್ರಾಮೀಣ ಭಾಗದ ಕಾರ್ಮಿಕರು, ಕೃಷಿ ಕಾರ್ಮಿಕರಿಗೆ ಪಿಂಚಣಿ, ಕ್ಷೇಮಾಭಿವೃದ್ಧಿ ಯೋಜನೆಯನ್ನು ಜಾರಿಗೆ ತರಬೇಕು. ಕೇರಳ ರಾಜ್ಯದಲ್ಲಿ ಇ.ಕೆ.ನಾಯರ್ ಅವರು ೧೯೮೦ರಲ್ಲಿ ಪಿಂಚಣಿ, ಕ್ಷೇಮಾಭಿವೃದ್ಧಿ ಯೋಜನೆ ಜಾರಿಗೊಳಿಸಿ ಕಾರ್ಮಿಕರಿಗೆ ಪ್ರತಿ ತಿಂಗಳು ೨೦೦೦ ರೂ ಪಿಂಚಣಿ ನೀಡುವುದಲ್ಲದೇ, ಶೈಕ್ಷಣಿಕ, ಸಾಮಾಜಿಕ ಅಭಿವೃದ್ಧಿಗೆ ಸಹಕಾರ ನೀಡಲಾಗುತ್ತಿದೆ ಎಂದು ತಿಳಿಸಿದರು.

    ಬೆಂಗಳೂರಿನ ಕೋಗಿಲು ಗ್ರಾಮದಲ್ಲಿನ ಬಡವರಿಗೆ ಪರ್ಯಾಯ ವಸತಿ ಕಲ್ಪಿಸದೇ ತೆರವು ಮಾಡುವುದನ್ನು ಪಕ್ಷ ಖಂಡಿಸುತ್ತದೆ. ಇದರ ವಿರುದ್ಧ ನಿರಂತರ ಹೋರಾಟ ನಡೆಸುವುದಾಗಿ ಹೇಳಿದ ಅವರು, ಪಕ್ಷವು ಬಿಜೆಪಿ, ಆರ್‌ಎಸ್‌ಎಸ್, ಎಸ್‌ಡಿಪಿಐ, ಜಮತ್ ಇ-ಇಸ್ಲಾಮಿಕ್‌ಗಳಂತಹ ಕೋಮುವಾದಿ ಸಂಘಟನೆಗಳ ವಿರುದ್ಧವಿದೆ. ಕೋಮು ಸೌಹಾರ್ದ ಕೆಡವುವವರ ವಿರುದ್ಧ ಹೋರಾಟ ನಡೆಸುತ್ತದೆ ಎಂದು ಪ್ರಶ್ನೆಗೆ ಉತ್ತರಿಸಿದರು.

    ಗೋಷ್ಠಿಯಲ್ಲಿ ಸಿಪಿಐಎಂ ರಾಜ್ಯ ಕಾರ್‍ಯದರ್ಶಿ ಟಿ.ಎಲ್.ಕೃಷ್ಣೇಗೌಡ, ಪುಟ್ಟಮಾದು, ಬಿ.ಎಂ.ಶಿವಮಲ್ಲು, ಬಿ.ಹನುಮೇಶ್, ಸುರೇಂದ್ರ, ವರದಯ್ಯ ಇದ್ದರು.

    The post ವಿಬಿ- ಜೀ ರಾಮ್- ಜೀ ಹೆಸರಿನಲ್ಲಿ ರಾಜ್ಯ ಸರ್ಕಾರಗಳ ಮೇಲೆ ಹೊರೆ : ವಿ.ಶಿವದಾಸನ್ appeared first on nudikarnataka.

    Click here to Read More
    Previous Article
    ಎಲ್ಲರ ಪ್ರೀತಿ, ವಿಶ್ವಾಸಗಳಿಸಿದ್ದ ಸ್ನೇಹಜೀವಿ ಆರ್.ವಿ.ದೇವರಾಜ್ : ಚಲುವರಾಯಸ್ವಾಮಿ
    Next Article
    ಮಾಂಗಲ್ಯ ಸರ ಕಿತ್ತು ಪರಾರಿ ಪ್ರಕರಣ : ಆರೋಪಿಗಳ ಸೆರೆ

    Related ಮುಖಪುಟ Updates:

    Are you sure? You want to delete this comment..! Remove Cancel

    Comments (0)

      Leave a comment