Search

    Language Settings
    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    -1

    ಮಂಡ್ಯ | ‘ಈಡುಗಾಯಿ ಒಡೆದು-ಕಡ್ಲೇಪುರಿ ಹಂಚಿ’ ವಾಟಾಳ್ ಪ್ರತಿಭಟನೆ

    2 weeks ago

    ಸಮಗ್ರ ಕನ್ನಡಿಗರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್ ಇತರರು ನಗರದಲ್ಲಿ ಈಡುಗಾಯಿ ಒಡೆದು, ಕಡ್ಲೇಪುರಿ ಹಂಚಿ ವಿಶೇಷವಾಗಿ ಪ್ರತಿಭಟನೆ ನಡೆಸಿದರು. ಮಂಡ್ಯ ನಗರದ ಸಂಜಯ ವೃತ್ತಕ್ಕೆ ಧಾವಿಸಿದ ವಾಟಾಳ್ ನಾಗರಾಜ್ ನೇತೃತ್ವದ ಕಾರ‍್ಯಕರ್ತರು, ರಾಜ್ಯ ಸರ್ಕಾರದ ಕನ್ನಡ ವಿರೋಧಿ ನೀತಿಯನ್ನು ಖಂಡಿಸಿ ಘೋಷಣೆ ಕೂಗಿದರು. ಈ ಸಂದರ್ಭದಲ್ಲಿ ಮಾತನಾಡಿದ ವಾಟಾಳ್, ಕನ್ನಡ ನೆಲದಲ್ಲಿ ಪರಭಾಷಿಕರ ದೌರ್ಜನ್ಯ ಹೆಚ್ಚಾಗಿದೆ. ಪ್ರತಿ ಜಿಲ್ಲೆ, ಜಿಲ್ಲೆಗಳಲ್ಲೂ ಪರಬಾಷಿಕರು, ಬಿಹಾರ, ಉತ್ತರ ಪ್ರದೇಶ, ರಾಜಸ್ತಾನ್, ತಮಿಳುನಾಡು, […]

    The post ಮಂಡ್ಯ | ‘ಈಡುಗಾಯಿ ಒಡೆದು-ಕಡ್ಲೇಪುರಿ ಹಂಚಿ’ ವಾಟಾಳ್ ಪ್ರತಿಭಟನೆ appeared first on nudikarnataka.



    ಸಮಗ್ರ ಕನ್ನಡಿಗರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್ ಇತರರು ನಗರದಲ್ಲಿ ಈಡುಗಾಯಿ ಒಡೆದು, ಕಡ್ಲೇಪುರಿ ಹಂಚಿ ವಿಶೇಷವಾಗಿ ಪ್ರತಿಭಟನೆ ನಡೆಸಿದರು.

    ಮಂಡ್ಯ ನಗರದ ಸಂಜಯ ವೃತ್ತಕ್ಕೆ ಧಾವಿಸಿದ ವಾಟಾಳ್ ನಾಗರಾಜ್ ನೇತೃತ್ವದ ಕಾರ‍್ಯಕರ್ತರು, ರಾಜ್ಯ ಸರ್ಕಾರದ ಕನ್ನಡ ವಿರೋಧಿ ನೀತಿಯನ್ನು ಖಂಡಿಸಿ ಘೋಷಣೆ ಕೂಗಿದರು.

    ಈ ಸಂದರ್ಭದಲ್ಲಿ ಮಾತನಾಡಿದ ವಾಟಾಳ್, ಕನ್ನಡ ನೆಲದಲ್ಲಿ ಪರಭಾಷಿಕರ ದೌರ್ಜನ್ಯ ಹೆಚ್ಚಾಗಿದೆ. ಪ್ರತಿ ಜಿಲ್ಲೆ, ಜಿಲ್ಲೆಗಳಲ್ಲೂ ಪರಬಾಷಿಕರು, ಬಿಹಾರ, ಉತ್ತರ ಪ್ರದೇಶ, ರಾಜಸ್ತಾನ್, ತಮಿಳುನಾಡು, ಆಂಧ್ರದವರು ಎಲ್ಲಡೆ ಸೇರಿದ್ದಾರೆ. ಪರಭಾಷಿಕರಿಂದ ಕನ್ನಡಿಗರ ಮೇಲೆ ಪರಭಾಷಿಕರಿಂದ ಆಗುತ್ತಿರುವ ದಬ್ಬಾಳಿಕೆ ನಿಲ್ಲಿಸಬೇಕು. ಹಿಂದಿ ಬೇಡವೇ ಬೇಡ, ಕೇಂದ್ರ ಸರ್ಕಾರದ ಮಲತಾಯಿ ಧೋರಣೆಯನ್ನು ಖಂಡಿಸಿದರು.

    ಮೈಸೂರು, ಕಾರವಾರ, ಮಂಗಳೂರು ಬಂದರು ಅಭಿವೃದ್ಧಿ ಆಗಬೇಕು. ಬಳಗಾವಿ ಉಳಿಸಬೇಕು. ಎಂಇಎಸ್ ನಿಷೇದಿಸಬೇಕು. ಕನ್ನಡಿಗರಿಗೆ ಉದ್ಯೋಗಕ್ಕಾಗಿ ನಿರಂತರವಾಗಿ ಹೋರಾಟ ಮಾಡುತ್ತಿದ್ದೇವೆ. ಇದುವರೆಗೆ ಪ್ರಾಮಾಣಿಕ ಚಿಂತನೆ ಇಲ್ಲ. ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ, ರಾಜ್ಯದ ಸಮಗ್ರ ಅಭಿವೃದ್ಧಿಯಾಗಬೇಕು. ಕೇರಳದಲ್ಲಿ ಕನ್ನಡಿಗರನ್ನು ಗುಲಾಮರ ರೀತಿ ಕಾಣುತ್ತಿದ್ದಾರೆ. ರಾಜ್ಯದಲ್ಲಿ ಕೇರಳಿಗರಿಗೆ ತೊಂದರೆಯಾದರೆ ಅವರು ಗಂಭೀರವಾಗಿ ಮಾತನಾಡುತ್ತಾರೆ ಇದು ಸರಿಯಲ್ಲ ಎಂದು ಆರೋಪಿಸಿದರು.

    ಮುಂದಿನ ದಿನಗಳಲ್ಲಿ ಮಲಯಾಳಿಗಳಿಂದ ಕನ್ನಡಿಗರ ಮೇಲೆ ದೌರ್ಜನ್ಯವಾದಲ್ಲಿ ಮಲಯಾಳಿಗಳೇ ಕರ್ನಾಟಕ ಬಿಟ್ಟು ತೊಲಗಿ ಎಂಬ ಚಳವಳಿ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

    ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮೇಕೆದಾಟು ಯೋಜನೆಗಾಗಿ ಹೋರಾಟ ನಡೆಸಿದ್ದರು. ಆದರೆ ಅವರೇ ಅಧಿಕಾರಕ್ಕೆ ಬಂದರೂ ಏನೂ ಮಾಡಲಿಲ್ಲ. ತಮಿಳುನಾಡು ಸರ್ಕಾರದೊಂದಿಗೆ ಕೂಡಲೇ ವ್ಯವಹರಿಸಿ ತಕ್ಷಣ ಮೇಕೆದಾಟು ಯೋಜನೆಗೆ ಅನುಮತಿ ಪಡೆಯಬೇಕು ಎಂದು ಒತ್ತಾಯಿಸಿದರು.

    ಬಿಜೆಪಿಯವರು ಮುಸ್ಲೀಮರನ್ನು ವಿರೋಧಿಸುತ್ತಾರೆ. ಇದು ಸರಿಯಲ್ಲ. ಬಿಜೆಪಿಯವರಿಗೆ ಮುಸಲ್ಮಾನರ ಬಗ್ಗೆ ಕೋಪ ಇದೆ. ಹಿಂದಿಯವರು ಇಲ್ಲೇ ಕುಳಿತಿದ್ದಾರೆ. ಅದರ ಬಗ್ಗೆ ನಿಮ್ಮ ಮಾತಿಲ್ಲ. ಮಹದಾಯಿ, ಕಳಸಾ ಬಂಡೂರಿ ಆಗಲೇಬೇಕು. ಇದಕ್ಕಾಗಿ ಜ. 18ರಂದು ಹುಬ್ಬಳ್ಳಿಯ ಕಿತ್ತೂರು ರಾಣಿ ಚನ್ನಮ್ಮ ಪ್ರತಿಮೆ ಮುಂದೆ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

    ಹೊಸ ವರ್ಷದಲ್ಲಿ ಕನ್ನಡ ನಾಡಿಗಾಗಿ, ನಾಡಿನ ಅಭ್ಯುದಯಕ್ಕಾಗಿ, ಕರ್ನಾಟದ ಸಮಗ್ರ ಅಭಿವೃದ್ಧಿ, ಬೆಳಗಾವಿ, ಕಲ್ಯಾಣ ಕರ್ನಾಟಕದ ಪ್ರಗತಿಗಾಗಿ, ಕನ್ನಡಿಗರ ಉದ್ಯೋಗಕ್ಕಾಗಿ ಬಾರೀ ಹೋರಾಟ ಮಾಡಲು ನಿರ್ದಾರ ಮಾಡಿದ್ದೇವೆ, ಇದಕ್ಕಾಗಿ ನಾವು ಬಂಧನಕ್ಕೊಳಗಾಗಿ ಜೈಲಿಗೆ ಹೋಗಲೂ ಸಿದ್ಧರಿದ್ದೇವೆ ಎಂದು ಹೇಳಿದರು.

    ಕನ್ನಡ ಸೇನೆ ಜಿಲ್ಲಾಧ್ಯಕ್ಷ ಮಂಜುನಾಥ್, ಮುಖಂಡರಾದ ಮಹಂತಪ್ಪ, ಬೆಟ್ಟಹಳ್ಳಿ ಮಂಜುನಾಥ್, ಕರವೇ ಎಚ್.ಡಿ. ಜಯರಾಂ, ನಾರಾಯಣ, ಪಾರ್ಥಸಾರಥಿ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

    The post ಮಂಡ್ಯ | ‘ಈಡುಗಾಯಿ ಒಡೆದು-ಕಡ್ಲೇಪುರಿ ಹಂಚಿ’ ವಾಟಾಳ್ ಪ್ರತಿಭಟನೆ appeared first on nudikarnataka.

    Click here to Read More
    Previous Article
    ಕಂದಾಯ ಇಲಾಖೆ ನೌಕರರು ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಒಳ್ಳೆಯ ಸಾಧನೆ ಮಾಡಬಹುದು: ಡಾ.ಕುಮಾರ
    Next Article
    ನೀರು ಸರಬರಾಜಿನ ಪೈಪ್‌ಲೈನ್ ದುರಸ್ಥಿ ಕಾರ್ಯ ಆದ್ಯತೆಯ ಮೇಲೆ ಕೈಗೊಳ್ಳಿ: ಸಂಸದ ಕೋಟ ಶ್ರೀನಿವಾಸ ಪೂಜಾರಿ

    Related ಮುಖಪುಟ Updates:

    Are you sure? You want to delete this comment..! Remove Cancel

    Comments (0)

      Leave a comment