Search

    Language Settings
    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    -1

    ಸ್ವಾಭಿಮಾನ ಸಂಕೇತವೇ ಭೀಮಾ ಕೋರೇಗಾಂವ್ ವಿಜಯ – ಸುರೇಶ ಕಂಠಿ

    2 weeks ago

    ಸಮಾನತೆ ಮತ್ತು ಸ್ವಾಭಿಮಾನದ ಅಮರ ಸಂಕೇತವೇ ಭೀಮಾ ಕೋರೇಗಾಂವ್ ಸಮರ ಎಂದು ರಾಜ್ಯ ಶೋಷಿತ ಸಮುದಾಯಗಳ ವೇದಿಕೆಯ ರಾಜ್ಯಾಧ್ಯಕ್ಷ ಸುರೇಶ ಕಂಠಿ ಹೇಳಿದರು. ಮಂಡ್ ನಗರದ ಡಿ.ಸಿ ಕಚೇರಿ ಮುಂಭಾಗದ ಉದ್ಯಾವನದ ಭಾರತ ರತ್ನ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆಗೆ ಭೀಮಾ ಕೋರೆಗಾಂವ್ ವಿಜಯೋತ್ಸವದ ಹಿನ್ನೆಲೆಯಲ್ಲಿ ಮಾಲಾರ್ಪಣೆ ಮಾಡಿ ಜೈಕಾರ ಹಾಕುವ ಮೂಲಕ ಕೋರೆಗಾವ್ ವಿಜಯೋತ್ಸವವನ್ನು ಸಂಭ್ರಮಿಸಿ ಆಚರಿಸಿದರು. ಭೀಮಾ ಕೋರೆಗಾಂವ್ ವಿಜಯೋತ್ಸವ ಐತಿಹಾಸಿಕ ಘಟನೆಯಾಗಿದ್ದು, ೩೦ ಸಾವಿರದಷ್ಟು ಸೈನಿಕರಿದ್ದ ಪೇಶ್ವೆಗಳನ್ನು ೫೦೦ ಮಂದಿಯಿದ್ದ ಮಹರ್ […]

    The post ಸ್ವಾಭಿಮಾನ ಸಂಕೇತವೇ ಭೀಮಾ ಕೋರೇಗಾಂವ್ ವಿಜಯ – ಸುರೇಶ ಕಂಠಿ appeared first on nudikarnataka.



    ಸಮಾನತೆ ಮತ್ತು ಸ್ವಾಭಿಮಾನದ ಅಮರ ಸಂಕೇತವೇ ಭೀಮಾ ಕೋರೇಗಾಂವ್ ಸಮರ ಎಂದು ರಾಜ್ಯ ಶೋಷಿತ ಸಮುದಾಯಗಳ ವೇದಿಕೆಯ ರಾಜ್ಯಾಧ್ಯಕ್ಷ ಸುರೇಶ ಕಂಠಿ ಹೇಳಿದರು.

    ಮಂಡ್ ನಗರದ ಡಿ.ಸಿ ಕಚೇರಿ ಮುಂಭಾಗದ ಉದ್ಯಾವನದ ಭಾರತ ರತ್ನ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆಗೆ ಭೀಮಾ ಕೋರೆಗಾಂವ್ ವಿಜಯೋತ್ಸವದ ಹಿನ್ನೆಲೆಯಲ್ಲಿ ಮಾಲಾರ್ಪಣೆ ಮಾಡಿ ಜೈಕಾರ ಹಾಕುವ ಮೂಲಕ ಕೋರೆಗಾವ್ ವಿಜಯೋತ್ಸವವನ್ನು ಸಂಭ್ರಮಿಸಿ ಆಚರಿಸಿದರು.

    ಭೀಮಾ ಕೋರೆಗಾಂವ್ ವಿಜಯೋತ್ಸವ ಐತಿಹಾಸಿಕ ಘಟನೆಯಾಗಿದ್ದು, ೩೦ ಸಾವಿರದಷ್ಟು ಸೈನಿಕರಿದ್ದ ಪೇಶ್ವೆಗಳನ್ನು ೫೦೦ ಮಂದಿಯಿದ್ದ ಮಹರ್ ಸೈನಿಕರು ೧೮೧೮ರ ಜನವರಿ ೧ ರಂದು ಯುದ್ಧ ಮಾಡಿ ಹೋರಾಟ ನಡೆಸಿ ಸೋಲಿಸಿದ ಮಹತ್ವದ ದಿನವೇ ಭೀಮಾ ಕೋರೆಗಾಂವ್ ವಿಜಯೋತ್ಸವ ಎಂದು ಸ್ಮರಿಸಿದರು.

    ಮಹಾರ್ ಸಮುದಾಯದ ಸ್ವಾಭಿಮಾನ, ಸಮಾನತೆ ಮತ್ತು ಶೈಕ್ಷಣಿಕ ಬೆಳೆವಣಿಗೆ ಸಹಕಾರ ನೀಡದ ಪೇಶ್ವೆ ರಾಜಾಡಳಿತದ ೨ನೇ ಬಾಜಿರಾಯನ ಸೈನಿಕರೊಂದಿಗೆ ಭೀಮಾ ನದಿಯ ದಡದಲ್ಲಿನ ಕೋರೆಗಾಂವ್ ಎಂಬ ಸ್ಥಳದಲ್ಲಿ ೨ನೇ ಬಾಜಿರಾಯನ ಕಾಲದಲ್ಲಿ ಆತನ ಸೈನ್ಯದ ವಿರುದ್ಧ ಸಿದ್ಧನಾಯ್ಕ ನೇತೃತ್ವದಲ್ಲಿ ಯುದ್ಧ ನಡೆದಿತ್ತು ಎಂದರು ಹೇಳಿದರು.

    ಪೇಶ್ವೆಯ ಸೈನ್ಯದಲ್ಲಿದ್ದ ಆಯುಧ ಇಲ್ಲದೇ ಇದ್ದರೂ ಸಿದ್ಧನಾಯ್ಕನ ಸೈನ್ಯವು ವೀರಾವೇಶದಿಂದ ಹೋರಾಡಿ ಜಯಗಳಿಸಿತ್ತು. ೨೨ ಜನ ಭೀಮ ಸೈನಿಕರು ವೀರಮರಣ ಹೊಂದಿದ್ದರು. ಮೂಲ ಸೌಕರ್ಯಕ್ಕಾಗಿ ಪೇಶ್ವೆಗಳ ಮತ್ತು ಅಸ್ಪೃಶ್ಯರ ನಡುವೆ ನಡೆದ ಯುದ್ಧ ಎಂದು ನೆನಪು ಮಾಡಿಕೊಂಡರು.

    ಭಾರತದಲ್ಲಿ ೨೦೭ ವರ್ಷಗಳ ಹಿಂದೆ ನಡೆದ ಭೀಮಾ ಕೋರೆಗಾಂವ್ ಹೋರಾಟ  ಇತಿಹಾಸವನ್ನು ಸೃಷ್ಟಿಸಿದೆ, ಅಂದಿನ ಯುದ್ದವನ್ನು ಸ್ಥಳಕ್ಕೆ ಇತಿಹಾಸ ತಜ್ಞ ಅಂಬೇಡ್ಕರ್ ಅವರು ವಿದೇಶಗಳಲ್ಲಿದ್ದರೂ ಕೋರೆಗಾಂವ್ ಸ್ಮರಕಸ್ಥಂಭಕ್ಕೆ ಬಂದು ನಮನ ಸಲ್ಲಿಸುತ್ತಿದ್ದರು ಎಂದು ತಿಳಿಸಿದರು.

    ಮಹಾರ್ ಯೋಧರ ತ್ಯಾಗ ವ್ಯರ್ಥವಾಗಲು ಬಿಡಬಾರದು. ಅವರ ಸಮಾನತೆಯ ಕನಸು ನನಸಾಗಿಸುವುದು ನಮ್ಮ ಗುರಿಯಾಗಬೇಕು, ೫೦೦ ಮಹಾರ್ ಸೈನಿಕರು ಸೋಲಿಸಿ ವಿಜಯಪತಾಕೆ ಹಾರಿಸಿದ ದಿನವನ್ನು ಕೋರೆಗಾಂವ್ ವಿಜಯೋತ್ಸವವಾಗಿ ದೇಶಾದ್ಯಂತ ಆಚರಣೆ ಮಾಡಲಾ ಗುತ್ತಿದೆ.ಪೇಶ್ವೆಗಳ ಆಡಳಿತದಲ್ಲಿದ್ದ ಜಾತಿ, ಅಸ್ಪೃಶ್ಯತೆ, ಮೇಲುಕೀಳುಗಳ ವಿರುದ್ಧ ನಿಂತು ಮಾನವೀಯ ವೌಲ್ಯಗಳನ್ನು ಪಡೆದು ಕೊಳ್ಳಲು ಹಂಬಲಿಸುವ ಮಹಾರ್ ಸೈನಿಕರ ಧೈರ್ಯ ಸಾಹಸ, ಕೆಚ್ಚೆದೆಯ ಹೋರಾಟವಾಗಿದೆ ಎಂದರು.

    ಕಾರ್ಯಕ್ರಮದಲ್ಲಿ ಕೆಪಿಸಿಸಿ ರಾಜ್ಯ ಸಂಚಾಲಕ ಆನಂದ್ ಕುಮಾರ್ , ಸಿದ್ದರಾಜು , ಸೀತಾರಾಮು , ವಿಜಯ್ ಕುಮಾರ್,ಕುಮಾರಸ್ವಾಮಿ,ವಿ.ಎಸ್.ಪ್ರಾಣೇಶ್,ರಾಘು, ಶಿವಣ್ಣ,ಮಧು ಕುಮಾರ್,ಆನಂದ್ ಅಹಿಂದ ಇತರರು ಇದ್ದರು.

    The post ಸ್ವಾಭಿಮಾನ ಸಂಕೇತವೇ ಭೀಮಾ ಕೋರೇಗಾಂವ್ ವಿಜಯ – ಸುರೇಶ ಕಂಠಿ appeared first on nudikarnataka.

    Click here to Read More
    Previous Article
    ನೀರು ಸರಬರಾಜಿನ ಪೈಪ್‌ಲೈನ್ ದುರಸ್ಥಿ ಕಾರ್ಯ ಆದ್ಯತೆಯ ಮೇಲೆ ಕೈಗೊಳ್ಳಿ: ಸಂಸದ ಕೋಟ ಶ್ರೀನಿವಾಸ ಪೂಜಾರಿ
    Next Article
    ಅಡಿಕೆ ಧಾರಣೆ | ಜನವರಿ 1 | ರಾಜ್ಯದ ಪ್ರಮುಖ ಮಾರುಕಟ್ಟೆಗಳ ಅಡಿಕೆ ರೇಟ್‌

    Related ಮುಖಪುಟ Updates:

    Are you sure? You want to delete this comment..! Remove Cancel

    Comments (0)

      Leave a comment