ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ (ಕೆ.ಆರ್. ಪೇಟೆ) ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಗಂಭೀರವಾದ ಪೋಕ್ಸೋ (POCSO) ಪ್ರಕರಣವೊಂದನ್ನು ದಾಖಲಿಸುವ ವೇಳೆ, ಸಂತ್ರಸ್ತೆಯ ತಾಯಿ ನೀಡಿದ ಮೂಲ ದೂರನ್ನು ತಿರುಚಿ ತಮಗೆ ಇಷ್ಟಬಂದಂತೆ ಎಫ್.ಐ.ಆರ್ (FIR) ದಾಖಲಿಸಲಾಗಿದೆ ಎಂದು ಸಂತ್ರಸ್ತೆಯ ಕುಟುಂಬ ಮತ್ತು ಸಾಮಾಜಿಕ ಕಾರ್ಯಕರ್ತರು ಗಂಭೀರ ಆರೋಪ ಮಾಡಿದ್ದಾರೆ. ಅಪ್ರಾಪ್ತ ಬಾಲಕಿಯ ಮೇಲೆ ನಡೆದ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ನ್ಯಾಯ ಕೋರಿ ಸಂತ್ರಸ್ತೆಯ ತಾಯಿ ವಸಂತ ಕೆ.ಆರ್. ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಲು ಬಂದಿದ್ದರು. ಈ ವೇಳೆ […]
The post ಕೆ.ಆರ್.ಪೇಟೆ | ಪೋಕ್ಸೋ ಪ್ರಕರಣದ ದೂರು ತಿರುಚಿದ ಆರೋಪ ; ಇನ್ಸ್‌ಪೆಕ್ಟರ್ ವಿರುದ್ಧ ಸಂತ್ರಸ್ತೆಯ ತಾಯಿ ಆಕ್ರೋಶ appeared first on nudikarnataka.
ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ (ಕೆ.ಆರ್. ಪೇಟೆ) ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಗಂಭೀರವಾದ ಪೋಕ್ಸೋ (POCSO) ಪ್ರಕರಣವೊಂದನ್ನು ದಾಖಲಿಸುವ ವೇಳೆ, ಸಂತ್ರಸ್ತೆಯ ತಾಯಿ ನೀಡಿದ ಮೂಲ ದೂರನ್ನು ತಿರುಚಿ ತಮಗೆ ಇಷ್ಟಬಂದಂತೆ ಎಫ್.ಐ.ಆರ್ (FIR) ದಾಖಲಿಸಲಾಗಿದೆ ಎಂದು ಸಂತ್ರಸ್ತೆಯ ಕುಟುಂಬ ಮತ್ತು ಸಾಮಾಜಿಕ ಕಾರ್ಯಕರ್ತರು ಗಂಭೀರ ಆರೋಪ ಮಾಡಿದ್ದಾರೆ.
ಅಪ್ರಾಪ್ತ ಬಾಲಕಿಯ ಮೇಲೆ ನಡೆದ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ನ್ಯಾಯ ಕೋರಿ ಸಂತ್ರಸ್ತೆಯ ತಾಯಿ ವಸಂತ ಕೆ.ಆರ್. ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಲು ಬಂದಿದ್ದರು. ಈ ವೇಳೆ ಪೊಲೀಸ್ ಇನ್ಸ್‌ಪೆಕ್ಟರ್ ಆನಂದೇಗೌಡ ಸಂತ್ರಸ್ತೆ ಮತ್ತು ಆಕೆಯ ತಾಯಿ ನೀಡಿದ ನಿಖರವಾದ ಹೇಳಿಕೆಗಳನ್ನು ದಾಖಲಿಸಿಕೊಳ್ಳದೆ, ಪ್ರಕರಣದ ತೀವ್ರತೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ದೂರಿನ ಅಂಶಗಳನ್ನು ಬದಲಾಯಿಸಿದ್ದಾರೆ ಎಂದು ದೂರಲಾಗಿದೆ.
ಸಂತ್ರಸ್ತೆಯ ತಾಯಿ ವಸಂತ ಮಾತನಾಡಿ, “ನಾನು ಮೊದಲೇ ಒಂದು ಹೇಳಿಕೆ ನೀಡಿದ್ದೆ. ಆದರೆ ಪೊಲೀಸರು ನೆಟ್‌ವರ್ಕ್ ಇಲ್ಲ ಎಂಬ ನೆಪ ಹೇಳಿ ಸಮಯ ಕಳೆದರು. ನಂತರ ನನಗೆ ತಿಳಿಯದಂತೆ ಬೇರೆಯದೇ ರೀತಿಯ ದೂರು ಪತ್ರ ಸಿದ್ಧಪಡಿಸಿ, ಅದರ ಮೇಲೆ ಸಹಿ ಹಾಕುವಂತೆ ಒತ್ತಡ ಹೇರಿದರು. ಅತ್ಯಂತ ಅವಸರವಾಗಿ ನನ್ನಿಂದ ಸಹಿ ಪಡೆದುಕೊಂಡಿದ್ದಾರೆ,” ಎಂದು ಅಳಲು ತೋಡಿಕೊಂಡಿದ್ದಾರೆ.
ಆರೋಪಿ ಕಿರಣ್.ಎಂ.ಎನ್ ನನ್ನ ಹಾಗೂ ನನ್ನ ಮಗಳಿಗೆ “ನನ್ನ ಮೇಲೆ ದೂರು ದಾಖಲಿಸಿದರೆ ನಿಮ್ಮ ಹೆಸರು ಬರೆದು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ” ಎಂದು ಪೋನಿನ ಮೂಲಕ ಬೆದರಿಕೆ ಪತ್ರ ಕಳುಹಿಸಿರುತ್ತಾನೆ ಎಂಬ ಮಾಹಿತಿ ನೀಡಿದರು.
ಪೊಕ್ಸೋ ಪ್ರಕರಣದಲ್ಲಿ ರಾಜಜೀ ಪಂಚಾಯಿತಿಗೆ ಅನುವು ಇಲ್ಲದಿದ್ದರು ನ್ಯಾಯ ಕೊಡಿಸುವುದಾಗಿ ಮಣಿಪುರಕ್ಕೆ ಕರೆದುಕೊಂಡು ಹೋಗಿ ಸಂತ್ರಸ್ತೆಯಿಂದ ಲಕ್ಷಾಂತರ ಹಣ ದುಂದು ವೆಚ್ಚ ಮಾಡಿಸಿ ಮೋಸ ಮಾಡಿ ನಮಗೇ ಬೆದರಿಕೆ ಹಾಕುತ್ತಿರುವ ರಜನಿರಾಜ್ ಎಂಬ ಮಹಿಳೆಯ ಮೇಲೆ ಎಫ್.ಐ.ಆರ್ ದಾಖಲಿಸುವಂತೆ ದೂರಿನಲ್ಲಿ ಉಲ್ಲೇಖಿಸಲಾಗಿದ್ದರು ಇವರ ಹೆಸರುಗಳನ್ನು ಕೈಬಿಡಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ ಎಂಬ ಅಂಶವೂ ಸಂತ್ರಸ್ತೆಯ ತಾಯಿಯ ಹೇಳಿಕೆಯಿಂದ ತಿಳಿದುಬಂದಿದೆ.
ಈ ಕುರಿತು ಮಾತನಾಡಿದ ‘ಮಹಿಳಾ ಮುನ್ನಡೆ’ ಸಂಘಟನೆಯ ಸಾಮಾಜಿಕ ಕಾರ್ಯಕರ್ತೆ ಪೂರ್ಣಿಮಾ, “ಪೊಲೀಸರು ಸಂತ್ರಸ್ತೆಯ ಪರವಾಗಿ ನಿಲ್ಲುವ ಬದಲು ಆರೋಪಿಗಳ ಪರವಾಗಿ ಕೆಲಸ ಮಾಡುತ್ತಿದ್ದಾರೆ. ತಾಯಿ-ಮಗಳು ನೀಡಿದ ದೂರಿನಂತೆ ಎಫ್.ಐ.ಆರ್ ದಾಖಲಿಸದೆ, ಇನ್ಸ್‌ಪೆಕ್ಟರ್ ತಮಗೆ ಬೇಕಾದಂತೆ ಬರೆದುಕೊಂಡಿದ್ದಾರೆ. ಇದನ್ನು ವಿರೋಧಿಸಿದಾಗ ಸಂತ್ರಸ್ತೆಯನ್ನೇ ಅಪರಾಧಿಯಂತೆ ಕಂಡು ಠಾಣೆಯಲ್ಲಿ ಕೂರಿಸುವ ಮೂಲಕ ದರ್ಪ ಪ್ರದರ್ಶಿಸಿದ್ದಾರೆ,” ಎಂದು ಆರೋಪಿಸಿದರು.
ಈಗಾಗಲೇ ಈ ವಿಚಾರವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು (SP) ಮತ್ತು ಜಿಲ್ಲಾಧಿಕಾರಿಗಳ (DC) ಗಮನಕ್ಕೆ ತರಲಾಗಿದೆ. ಸಂತ್ರಸ್ತೆಗೆ ನ್ಯಾಯ ಸಿಗದಿದ್ದರೆ ಮತ್ತು ತಿರುಚಲಾದ ಎಫ್.ಐ.ಆರ್ ಅನ್ನು ಸರಿಪಡಿಸದಿದ್ದರೆ ಬೃಹತ್ ಪ್ರತಿಭಟನೆ ಮಾಡಿ ಪತ್ರಿಕಾಗೋಷ್ಠಿ ನಡೆಸುವುದಾಗಿ ಸಂಘಟನೆಗಳು ಎಚ್ಚರಿಕೆ ನೀಡಿವೆ.
ಠಾಣೆಗೆ ಭೇಟಿ ನೀಡಿದ ಅತ್ಯಾಚಾರ ವಿರೋಧಿ ಆಂದೋಲನ’ದ ನಿಯೋಗದಲ್ಲಿ ಪದಾಧಿಕಾರಿಗಳಾದ ಕರ್ನಾಟಕ ಜನಶಕ್ತಿ ಸಿದ್ದರಾಜು, ಕರ್ನಾಟಕ ರೈತ ಸಂಘದ ಲತಾಶಂಕರ್, ಮಹಿಳಾಮುನ್ನಡೆಯ ಶಿಲ್ಪ, ಗಂಗಾಧರ್ ಬಿಎಸ್‌ಪಿ, ರವಿ ಹಾಗೂ ಜಾಗೃತ ಕರ್ನಾಟಕದ ಜಗದೀಶ್ ನಗರಕೆರೆ ಇನ್ನೂ ಮುಂತಾದವರು ಹಾಜರಿದ್ದರು.
The post ಕೆ.ಆರ್.ಪೇಟೆ | ಪೋಕ್ಸೋ ಪ್ರಕರಣದ ದೂರು ತಿರುಚಿದ ಆರೋಪ ; ಇನ್ಸ್‌ಪೆಕ್ಟರ್ ವಿರುದ್ಧ ಸಂತ್ರಸ್ತೆಯ ತಾಯಿ ಆಕ್ರೋಶ appeared first on nudikarnataka.
Previous Article
ಅಮಾನತುಗೊಂಡ ಬಳ್ಳಾರಿ ಎಸ್‌ಪಿ ಪವನ್ ನಿಜೂರು ಆತ್ಮಹತ್ಯೆಗೆ ಯತ್ನ.!?
Next Article
ಸಲಹೆ ನೀಡುವ ನೆಪದಲ್ಲಿ ವಾಣಿಜ್ಯ ಚಟುವಟಿಕೆ | ರಾಜ್ಯ ವಕೀಲರ ಪರಿಷತ್ತಿನಿಂದ ಐವರು ‘ರೀಲ್ಸ್ ವಕೀಲ’ರ ಅಮಾನತು