Search

    Language Settings
    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    -1

    ‘ಇಂಗ್ಲೀಷ್ ಭಾಷಾ ಪ್ರಾವೀಣ್ಯತೆ ಬಿ.ಎಂ.ಶ್ರೀ ಅವರಲ್ಲಿತ್ತು’ ; ಶುಭಶ್ರೀ ಪ್ರಸಾದ್

    1 week ago

    ‘ಅಂದಿನ ಕಾಲದಲ್ಲಿ ಇಂಗ್ಲೀಷ್ ಭಾಷಾ ಪ್ರಾವೀಣ್ಯತೆ ಮತ್ತು ಚಾಕಚಕ್ಯತೆ ಬಿ.ಎಂ.ಶ್ರೀ ಅವರಲ್ಲಿತ್ತು’ ಎಂದು ಸಾಹಿತಿ ಡಾ.ಶುಭಶ್ರೀ ಪ್ರಸಾದ್ ಹೇಳಿದರು. ಮಂಡ್ಯ ನಗರದ ಗಾಂಧಿಭವನದಲ್ಲಿ ಜಿಲ್ಲಾ ಬಬ್ಬೂರುಕಮ್ಮೆ ಸೇವಾ ಬಳಗ ಆಯೋಜಿಸಿದ್ದ ಕನ್ನಡದ ಕಣ್ವ ಆಚಾರ್ಯ ಬಿ.ಎಂ.ಶ್ರೀ (ಬೆಳ್ಳೂರು ಮೈಲಾರಯ್ಯ ಶ್ರೀಕಂಠಯ್ಯ) ಅವರ ೧೪೨ನೇ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಇಂಗ್ಲೀಷ್ ಭಾಷೆಯ ಅನೇಕ ಸುಪ್ರಸಿದ್ದ ಕೃತಿಗಳನ್ನು ಕನ್ನಡದ ಸೊಗಡಿಗೆ ತಕ್ಕಂತೆ ಇಲ್ಲಿಯ ಸಂಸ್ಕೃತಿಗೆ ಹೊಂದುವಂತೆ ಕನ್ನಡಕ್ಕೆ ಅನುವಾದಿಸುವ ಭಾಷಾ ಪ್ರಾವೀಣ್ಯತೆ ಮತ್ತು ಚಾಕಚಕ್ಯತೆ ಹೊಂದಿದ್ದಂತಹ ಮಹಾನ್ […]

    The post ‘ಇಂಗ್ಲೀಷ್ ಭಾಷಾ ಪ್ರಾವೀಣ್ಯತೆ ಬಿ.ಎಂ.ಶ್ರೀ ಅವರಲ್ಲಿತ್ತು’ ; ಶುಭಶ್ರೀ ಪ್ರಸಾದ್ appeared first on nudikarnataka.



    ‘ಅಂದಿನ ಕಾಲದಲ್ಲಿ ಇಂಗ್ಲೀಷ್ ಭಾಷಾ ಪ್ರಾವೀಣ್ಯತೆ ಮತ್ತು ಚಾಕಚಕ್ಯತೆ ಬಿ.ಎಂ.ಶ್ರೀ ಅವರಲ್ಲಿತ್ತು’ ಎಂದು ಸಾಹಿತಿ ಡಾ.ಶುಭಶ್ರೀ ಪ್ರಸಾದ್ ಹೇಳಿದರು.

    ಮಂಡ್ಯ ನಗರದ ಗಾಂಧಿಭವನದಲ್ಲಿ ಜಿಲ್ಲಾ ಬಬ್ಬೂರುಕಮ್ಮೆ ಸೇವಾ ಬಳಗ ಆಯೋಜಿಸಿದ್ದ ಕನ್ನಡದ ಕಣ್ವ ಆಚಾರ್ಯ ಬಿ.ಎಂ.ಶ್ರೀ (ಬೆಳ್ಳೂರು ಮೈಲಾರಯ್ಯ ಶ್ರೀಕಂಠಯ್ಯ) ಅವರ ೧೪೨ನೇ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

    ಇಂಗ್ಲೀಷ್ ಭಾಷೆಯ ಅನೇಕ ಸುಪ್ರಸಿದ್ದ ಕೃತಿಗಳನ್ನು ಕನ್ನಡದ ಸೊಗಡಿಗೆ ತಕ್ಕಂತೆ ಇಲ್ಲಿಯ ಸಂಸ್ಕೃತಿಗೆ ಹೊಂದುವಂತೆ ಕನ್ನಡಕ್ಕೆ ಅನುವಾದಿಸುವ ಭಾಷಾ ಪ್ರಾವೀಣ್ಯತೆ ಮತ್ತು ಚಾಕಚಕ್ಯತೆ ಹೊಂದಿದ್ದಂತಹ ಮಹಾನ್ ಕವಿ ಬಿ.ಎಂ.ಶ್ರೀ ಅವರ ಸಾಹಿತ್ಯದಲ್ಲಿದೆ ಎಂದು ನುಡಿದರು.

    ನಮ್ಮ ಮಂಡ್ಯದವರೇ ಆದ ಕನ್ನಡ ಕಣ್ವ, ಆಚಾರ್ಯ ಬಿ.ಎಂ.ಶ್ರೀ ನಮ್ಮ ಹೆಮ್ಮೆ, ಕರುಣಾಳು ಬಾ ಬೆಳಕೆ ಮಸುಕಿದೀ ಮಬ್ಬಿನಲಿ ಕೈ ಹಿಡಿದು ನಡೆಸೆನ್ನನು ಎನ್ನುವ ಸಾಹಿತ್ಯದ ಸಾಲುಗಳು ಅತ್ಯದ್ಬುತ ಎಂದು ಹೇಳಿದರು.

    ಹಿರಿಯ ಪತ್ರಕರ್ತ ಡಿ.ಎನ್.ಶ್ರೀಪಾದು, ಮೂಲತಃ ಬೆಳ್ಳೂರಿನವರಾದ ಮೈಲಾರಯ್ಯ ಮತ್ತು ಭಾಗೀರಥಮ್ಮ ದಂಪತಿಗಳ ಮಗನಾಗಿ ತಮ್ಮ ಅಜ್ಜನ ಊರಾದ ಸಂಪಿಗೆಯಲ್ಲಿ ಬಿ. ಎಂ. ಶ್ರೀಯವರು ಜ. ೩, ೧೮೮೪ ರಂದು ಜನಿಸಿದರು ತಮ್ಮ ಬಾಲ್ಯದ ಶಿಕ್ಷಣವನ್ನು ತಮ್ಮ ಊರಾದ ಬೆಳ್ಳೂರಿನಲ್ಲಿಯೇ ಆರಂಭಿಸಿ ಮುಂದೆ ಶ್ರೀರಂಗಪಟ್ಟಣ ಹಾಗೂ ಮೈಸೂರಿನಲ್ಲಿ ಮುಂದುವರೆಸಿ, ಬಿ. ಎ. ಪದವಿಯನ್ನು ಬೆಂಗಳೂರಿನಲ್ಲಿ ಮುಗಿಸಿ, ಎಂ. ಎ. ಹಾಗೂ ಎಲ್. ಎಲ್. ಬಿ. ಪದವಿಯನ್ನು ಮದರಾಸಿನಲ್ಲಿ ಪೂರ್ಣಗೊಳಿಸಿದರು ಎಂದು ಸ್ಮರಿಸಿದರು.

    ಕನ್ನಡವನ್ನು ಮತ್ತು ಕನ್ನಡದ ಅಸ್ಮಿತೆಯನ್ನು ಎತ್ತಿ ಹಿಡಿಯಲು ನಿರ್ಧರಿಸಿ, ತಮ್ಮ ಇಡೀ ಜೀವನವನ್ನು ಕನ್ನಡಕ್ಕಾಗಿಯೇ ಮುಡಿಪಾಗಿಟ್ಟವರು, ೧೯೨೬-೧೯೩೦ ರವರೆಗೆ ನಾಲ್ಕು ವರ್ಷಗಳ ಕಾಲ ಕುಲಸಚಿವರಾಗಿದ್ದರು, ೧೯೨೮ರಲ್ಲಿ ಗುಲಬರ್ಗಾ’ದಲ್ಲಿ ನಡೆದ ೧೪ ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು, ೧೯೩೮-೧೯೪೨ ರವರೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ, ೧೯೩೮ರಲ್ಲಿ ಮೈಸೂರಿನ ಮಹಾರಾಜರಿಂದ ರಾಜ ಸೇವಾಸಕ್ತ ಎಂಬ ಬಿರುದನ್ನು ಪಡೆದಿದ್ದರು ಎಂದು ತಿಳಿಸಿದರು.

    ಕಾರ್ಯಕ್ರಮದಲ್ಲಿ ಜಿಲ್ಲಾ ಬಬ್ಬೂರುಕಮ್ಮೆ ಸೇವಾ ಬಳಗ ಅಧ್ಯಕ್ಷ ಎನ್.ರಮೇಶ್, ಪತ್ರಕರ್ತ ಕಬ್ಬನಹಳ್ಳಿ ಶಂಭು, ಬಳಗದ ಕಾರ್ಯದರ್ಶಿ ಶ್ರೀನಿವಾಸ್, ಶಿಕ್ಷಕಿ ಪದ್ಮಶ್ರೀನಿವಾಸ್ ಮತ್ತಿತರರಿದ್ದರು.

    The post ‘ಇಂಗ್ಲೀಷ್ ಭಾಷಾ ಪ್ರಾವೀಣ್ಯತೆ ಬಿ.ಎಂ.ಶ್ರೀ ಅವರಲ್ಲಿತ್ತು’ ; ಶುಭಶ್ರೀ ಪ್ರಸಾದ್ appeared first on nudikarnataka.

    Click here to Read More
    Previous Article
    ನರೇಗಾ ಕಾಯ್ದೆ ಮತ್ತೆ ಜಾರಿಗೊಳಿಸಿ, ಪಂಚಾಯತ್‌ಗಳ ಸ್ವಯಂ ಆಡಳಿತದ ಹಕ್ಕನ್ನು ಮರು ಸ್ಥಾಪಿಸಿ: ಸಿಎಂ ಸಿದ್ದರಾಮಯ್ಯ ಒತ್ತಾಯ
    Next Article
    ಒಳಉಡುಪು ಸಾಕ್ಷ್ಯ ತಿರುಚಿದ ಪ್ರಕರಣ | ಶಾಸಕ ಆಂಟನಿ ರಾಜು ತಪ್ಪಿತಸ್ಥ; ಕೇರಳ ನ್ಯಾಯಾಲಯದ ತೀರ್ಪು

    Related ಮುಖಪುಟ Updates:

    Are you sure? You want to delete this comment..! Remove Cancel

    Comments (0)

      Leave a comment