Search

    Language Settings
    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    -1

    ಪರ್ಯಾಯೋತ್ಸವನ್ನು ರಾಜಕೀಯ ಕಿತ್ತಾಟದ ಅಖಾಡವನ್ನಾಗಿಸುವ ಪ್ರಯತ್ನವನ್ನು ಯಶ್ಪಾಲ್ ಸುವರ್ಣ ತಕ್ಷಣ ನಿಲ್ಲಿಸಬೇಕು- ಸುನಿಲ್ ಡಿ.ಬಂಗೇರ

    1 week ago

    ಉಡುಪಿ: ಪರ್ಯಾಯ ಶ್ರೀ ಕೃಷ್ಣ ಮಠದಂತಹ ಪವಿತ್ರ ಧಾರ್ಮಿಕ ಉತ್ಸವವನ್ನು ರಾಜಕೀಯ ಲಾಭಕ್ಕಾಗಿ ವಿವಾದದ ಕೇಂದ್ರಬಿಂದುಗೊಳಿಸುವ ಪ್ರಯತ್ನ ಅತ್ಯಂತ ಅಪಾಯಕಾರಿ...

    The post ಪರ್ಯಾಯೋತ್ಸವನ್ನು ರಾಜಕೀಯ ಕಿತ್ತಾಟದ ಅಖಾಡವನ್ನಾಗಿಸುವ ಪ್ರಯತ್ನವನ್ನು ಯಶ್ಪಾಲ್ ಸುವರ್ಣ ತಕ್ಷಣ ನಿಲ್ಲಿಸಬೇಕು- ಸುನಿಲ್ ಡಿ.ಬಂಗೇರ first appeared on Udupi Times.



    ಉಡುಪಿ: ಪರ್ಯಾಯ ಶ್ರೀ ಕೃಷ್ಣ ಮಠದಂತಹ ಪವಿತ್ರ ಧಾರ್ಮಿಕ ಉತ್ಸವವನ್ನು ರಾಜಕೀಯ ಲಾಭಕ್ಕಾಗಿ ವಿವಾದದ ಕೇಂದ್ರಬಿಂದುಗೊಳಿಸುವ ಪ್ರಯತ್ನ ಅತ್ಯಂತ ಅಪಾಯಕಾರಿ ಹಾಗೂ ಖಂಡನೀಯ. ಈ ಸಂಬಂಧ ಉಡುಪಿ ಶಾಸಕರಾದ ಯಶ್ ಪಾಲ್ ಸುವರ್ಣ ಅವರು ನೀಡಿರುವ ಇತ್ತೀಚಿನ ಪತ್ರಿಕಾ ಪ್ರಕಟಣೆ, ಶಾಂತಿ ಕಾಪಾಡುವ ಜವಾಬ್ದಾರಿಯುತ ನಡೆಗಿಂತಲೂ, ಸಮಾಜದಲ್ಲಿ ಗೊಂದಲ ಮತ್ತು ಧ್ರುವೀಕರಣ ಉಂಟುಮಾಡುವ ರಾಜಕೀಯ ಉದ್ದೇಶವನ್ನೇ ಸ್ಪಷ್ಟಪಡಿಸುತ್ತದೆ.

    ಜನಪ್ರತಿನಿಧಿಯಾಗಿ ನಡೆದುಕೊಳ್ಳಬೇಕಾದ ವ್ಯಕ್ತಿಯೊಬ್ಬರು, ಧಾರ್ಮಿಕ ವಿಷಯಗಳನ್ನು ತಪ್ಪಾಗಿ ವ್ಯಾಖ್ಯಾನಿಸಿ, ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಂಡು ಮಾತನಾಡುವುದು ಅಸಹಿಷ್ಣು ರಾಜಕೀಯ ಮನಸ್ಥಿತಿಯ ಪ್ರತಿಬಿಂಬ. ಇದು ಧರ್ಮ ರಕ್ಷಣೆ ಅಲ್ಲ; ಇದು ಧರ್ಮವನ್ನು ಬಳಸಿಕೊಂಡು ರಾಜಕೀಯ ಬೇಳೆ ಬೇಯಿಸುವ ನಾಚಿಕೆಗೇಡಿತನ.

    ಯಶ್ಪಾಲ್ ಸುವರ್ಣ ಅವರು ಪರ್ಯಾಯದಂತಹ ಸಂವೇದನಾಶೀಲ ಸಂದರ್ಭವನ್ನು ಆಯ್ಕೆ ಮಾಡಿಕೊಂಡು ಈ ರೀತಿಯ ಹೇಳಿಕೆ ನೀಡಿರುವುದು, ಉದ್ದೇಶಪೂರ್ವಕವಾಗಿ ಸಮಾಜದಲ್ಲಿ ಆತಂಕ ಮತ್ತು ಅನುಮಾನ ಬಿತ್ತುವ ತಂತ್ರದ ಭಾಗವೇ ಎಂಬ ಅನುಮಾನಕ್ಕೆ ಕಾರಣವಾಗುತ್ತದೆ.

    ಶಾಂತಿ ಮತ್ತು ಸೌಹಾರ್ದ ಕಾಪಾಡಬೇಕಾದ ಶಾಸಕರಿಂದ ಇಂತಹ ಪ್ರಚೋದನಾತ್ಮಕ ಭಾಷೆ ಹೊರಬರುವುದು ಅತೀವ ದುರದೃಷ್ಟಕರ. ಸಮಾಜದಲ್ಲಿ ಅಶಾಂತಿ ಉಂಟಾದಲ್ಲಿ ಅದರ ಸಂಪೂರ್ಣ ನೈತಿಕ ಮತ್ತು ಸಾಮಾಜಿಕ ಹೊಣೆಗಾರಿಕೆಯಿಂದ ಯಶ್ಪಾಲ್ ಸುವರ್ಣ ಅವರು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.

    ನಂತರದ ದಿನಗಳಲ್ಲಿ ನೀಡುವ ಸ್ಪಷ್ಟೀಕರಣಗಳು ಅಥವಾ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುವ ಹೇಳಿಕೆಗಳಿಗೆ ಶಾಂತಿಪ್ರಿಯ ಜನತೆ ಮರುಳಾಗುವುದಿಲ್ಲ ಎಂಬುದನ್ನು ಸ್ಪಷ್ಟವಾಗಿ ಹೇಳಬೇಕು. ಧಾರ್ಮಿಕ ಭಾವನೆಗಳನ್ನು ಕೆರಳಿಸಿ ರಾಜಕೀಯ ಲಾಭ ಪಡೆಯುವ ಇಂತಹ ಪ್ರಯತ್ನಗಳು ಮುಂದುವರಿದಲ್ಲಿ, ಸಮಾಜದ ಸಹನೆ ಮಿತಿಯನ್ನು ಮೀರುವ ದಿನ ದೂರವಿಲ್ಲ. ಶಾಂತಿ, ಸಂಪ್ರದಾಯ ಮತ್ತು ಸಹಬಾಳ್ವೆಯನ್ನು ಗೌರವಿಸುವ ಜನರು ಮೌನವಾಗಿರುತ್ತಾರೆ ಎಂದು ಯಾರೂ ತಪ್ಪಾಗಿ ಅಂದಾಜು ಮಾಡಬಾರದು. ಪರ್ಯಾಯದಂತಹ ಪವಿತ್ರ ಉತ್ಸವಗಳನ್ನು ರಾಜಕೀಯ ಕಿತ್ತಾಟದ ಅಖಾಡವನ್ನಾಗಿ ಮಾಡುವ ಪ್ರಯತ್ನವನ್ನು ಯಶ್ ಪಾಲ್ ಸುವರ್ಣ ಅವರು ತಕ್ಷಣ ನಿಲ್ಲಿಸಬೇಕು. ಇಲ್ಲದಿದ್ದರೆ ಸಮಾಜದಿಂದ ಬರುವ ಪ್ರತಿರೋಧಕ್ಕೆ ಅವರು ನೈತಿಕವಾಗಿ ಹಾಗೂ ರಾಜಕೀಯವಾಗಿ ಹೊಣೆ ಹೊರುವ ಪರಿಸ್ಥಿತಿ ನಿರ್ಮಾಣವಾಗುತ್ತದೆ.

    ಇದು ಯಾವುದೇ ವೈಯಕ್ತಿಕ ದ್ವೇಷದ ಹೇಳಿಕೆ ಅಲ್ಲ, ಇದು ಸಮಾಜದ ಶಾಂತಿ ಮತ್ತು ಸೌಹಾರ್ದವನ್ನು ಕಾಪಾಡುವ ದೃಷ್ಟಿಯಿಂದ ನೀಡುವ ಕಠಿಣ ಮತ್ತು ಅಂತಿಮ ಎಚ್ಚರಿಕೆ- ಸುನಿಲ್ ಡಿ.ಬಂಗೇರ, ಆಡಳಿತ ಮೊಕ್ತೇಸರರು, ವಿಷ್ಣುಮೂರ್ತಿ ದೇವಸ್ಥಾನ ಮಟ್ಟು

    The post ಪರ್ಯಾಯೋತ್ಸವನ್ನು ರಾಜಕೀಯ ಕಿತ್ತಾಟದ ಅಖಾಡವನ್ನಾಗಿಸುವ ಪ್ರಯತ್ನವನ್ನು ಯಶ್ಪಾಲ್ ಸುವರ್ಣ ತಕ್ಷಣ ನಿಲ್ಲಿಸಬೇಕು- ಸುನಿಲ್ ಡಿ.ಬಂಗೇರ first appeared on Udupi Times.

    Click here to Read More
    Previous Article
    ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಹಿನ್ನೆಲೆ ಗಾಯಕ ವಿಜಯ ಪ್ರಕಾಶ್ ಭೇಟಿ
    Next Article
    ವೆನೆಜುವೆಲಾ ಮೇಲೆ ಅಮೆರಿಕ ದಾಳಿ ಅಂತರರಾಷ್ಟ್ರೀಯ ಕಾನೂನಿನ ಉಲ್ಲಂಘನೆ: ಚೀನಾ

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment