Search

    Language Settings
    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    -1

    ನಿಧಿ ಸಿಕ್ಕಿರೋ ಲಕ್ಕುಂಡಿ ಗ್ರಾಮದ ಇತಿಹಾಸ ಏನು? ಮೂವರು ಅರಸರು ಆಳಿದ್ದ ಊರಿದು..!

    4 days ago

    ನಿಧಿ ಸಿಕ್ಕಿರೋ ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದ ಇತಿಹಾಸ ತೇತ್ರಾಯುಗದವರೆಗೂ ವಿಸ್ತರಿಸಿದೆ. ಮೂವರು ಅರಸರು ಆಳಿದ್ದ ಊರಿದು ಅಂತ ಹೇಳ್ತಾರೆ. ಇಂಥಾ ಊರಲ್ಲಿ ನಿಧಿ ಸಿಕ್ಕಿದ್ದು, ಈ ಹಿಂದಿನ ಕೆಲ ಇತಿಹಾಸ ಕುರುಹುಗಳಿಗೆ ಪುಷ್ಠಿ ಕೊಟ್ಟಿದೆ. ಆ ನಿಧಿಯನ್ನ ಮೂರು ಗಂಟೆಗಳ ಕಾಲ ಪರಿಶೀಲಿಸಿ ನೋಡಿದಾಗ ಅಚ್ಚರಿಗಳು ಕಾಣಿಸಿವೆ. 

    ಲಕ್ಕುಂಡಿ.. ಶಾಸನಗಳ ಪ್ರಕಾರ, ಲಕ್ಕುಂಡಿಯನ್ನ 'ಲೋಕಿ ಗುಂಡಿ' ಅಂತ ಕರೀತಿದ್ರಂತೆ. ಇದು ಸಾವಿರ ವರ್ಷಗಳ ಹಿಂದಿನ ಪ್ರಮುಖ ನಗರ ಅಂತಲೂ ಹೇಳ್ತಾರೆ. 101 ಗುಡಿ, 101 ಬಾವಿಗಳ ಊರು ಅಂತಲೂ ಹೇಳ್ತಾರೆ. ಈ ಗ್ರಾಮದ ಇತಿಹಾಸ, ಒಂದು ಶಾಸನ. ಇಲ್ಲಿರೋ ಪ್ರಾಚೀನ ಸಂಪತ್ತು ಒಂದು ದರ್ಪಣ. 

    ಇದನ್ನೂ ಓದಿ: ಭಾರತಕ್ಕೆ EOS-N1 ಅನ್ವೇಷಾ ಶಕ್ತಿ; ನಭಕ್ಕೆ ನೆಗೆದ ಈ ಉಪಗ್ರಹದ ತಾಖತ್ತು ಎಂಥದ್ದು..?

    Gadaga nidhi

    ಕೋಟಿಗೆ ಬಾಳುವ ಸಂಪತ್ತು!

    ಎಡಿಸಿ ದುರ್ಗೇಶ್, ಎಸ್ಪಿ ರೋಹನ್ ಜಗದೀಶ್, ಎಸಿ ರಂಗಪ್ಪ, ತಹಶೀಲ್ದಾರ್ ಶ್ರೀನಿವಾಸ ಕುಲಕರ್ಣಿ ಇವ್ರೆಲ್ಲಾ ಸರ್ಕಾರ ಸೂಚನೆ ಮೇರೆಗೆ ನಿಧಿಯ ಲೆಕ್ಕವನ್ನ, ಗಂಗವ್ವ ಕುಟುಂಬದ ಮುಂದೆಯೇ ಲೆಕ್ಕ ಹಾಕಿದ್ರು.. ತೂಕ ಹಾಕಿ ಬೆಲೆ ಅಂದಾಜಿಸಿದ್ರು. ಬಟ್​ ಅದು ಯಾವ ಕಾಲದ ಆರಭಣ ಅನ್ನೋದು ಕೇವಲ ಅಂದಾಜಲ್ಲೆ ಇತ್ತು. 

    ಇದನ್ನೂ ಓದಿ: ಫೋನ್ ಸಂಪರ್ಕ ಇರಲಿಲ್ಲ, CCTV ಕೂಡ ಇರಲಿಲ್ಲ -ಟೆಕ್ಕಿ ಜೀವ ತೆಗೆದ ಆರೋಪಿ ಟ್ರೇಸ್ ಆಗಿದ್ದು ಹೇಗೆ..?

    Gadaga nidhi (5)

    ಸಿಕ್ಕ ಆ ಮಡಿಯಲ್ಲಿ ಪುರಾತನದ ನಾಣ್ಯಗಳೂ ಇವೆ. ಹಾಗೆ ನಾಗರ ರೂಪದ ಆಭರಣಗಳೂ ಇವೆಯಂತೆ. ಒಟ್ನಲ್ಲಿ ಚಿನ್ನ, ತಾಮ್ರ, ಇತ್ತಾಳೆ, ಹವಳ ಸಹ ಆ ಬಿಂದಿಗೆಯಲ್ಲಿ ಸಿಕ್ಕಿದೆ ಅನ್ನೋ ಮಾಹತಿಯನ್ನ ಎಡಿಸಿ ಅವ್ರು ಹಂಚಿಕೊಂಡಿದ್ದಾರೆ. ಈ ಎಲ್ಲಾ ಲೆಕ್ಕಾಚಾರವನ್ನ ಪೊಲೀಸರ ಬಿಗಿ ಬಂದೋಬಸ್ತ್​​ನಲ್ಲಿ ನಡೆದಿದೆ.

    ಹೂತಿಟ್ಟಿದ್ದ ಆ ನಿಧಿ ಕೊಡ ಯಾರದ್ದು? ಯಾವ ಕಾಲದ್ದು?

    ಮೊದಲಿಗೆ ಚಿನ್ನವನ್ನ ನೋಡಿದ್ದ ಊರಿನ ಗಣ್ಯರು.. ಅದೆಲ್ಲಾ ಚಿನ್ನವೇ ಅಂದುಕೊಂಡಿದ್ರು. ಬಟ್​ ತನಿಖಾ ಅಧಿಕಾರಿ ಬಂದ್ಮೇಲೆ ಅದು ಎಲ್ಲಾವೂ ಚಿನ್ನವೇ ಅಲ್ಲ.. ಅದ್ರಲ್ಲಿ ತಾಮ್ರ ಹಿತ್ತಾಳೆ, ಹವಳ ಎಲ್ಲಾವೂ ಸೇರಿದೆ.. ಕೈ ಖಡಗ, ಸರ, ದೊಡ್ಡ ತೊಡೆಹಾರ, ಬಂಗಾರದ ಗುಂಡುಗಳು, ವಂಕಿ ಉಂಗುರ, ಕಿವಿ ಓಲೆ, ನಾಗಮುದ್ರೆಗಳು, ನಾಗಮಣಿ ಉಂಗುರ, ಬಳೆ, ಕಲ್ಗೆಜ್ಜೆ, 22 ತೂತು ಬಿಲ್ಲೆಗಳು, ವಜ್ರ ಖಚಿತ ಉಂಗುರ ಸೇರಿದಂತೆ ಅನೇಕ ಆಭರಣಗಳು ಈ ಬಿಂದಿಗೆಯಲ್ಲಿ ಸಿಕ್ಕಿದ್ವು ಅಂತ ಹೇಳಿದ್ರು. ಬಟ್​ ಇದು ಯಾರಿಗೆ ಸೇರಿದ್ದ ನಿಧಿ ಇರ್ಬೋದು ಅನ್ನೋದನ್ನ, ಊರ ಜನರೇ ಅಂದಾಜಿಸಿದ್ದಾರೆ. 

    ಇದನ್ನೂ ಓದಿ: ಇಸ್ರೋದ PSLV-C62 ವಿಫಲ: 16 ಸ್ಯಾಟಲೈಟ್ ಗಳನ್ನು ಬಾಹ್ಯಾಕಾಶಕ್ಕೆ ಸೇರ್ಪಡೆ ಮಾಡುವಲ್ಲಿ ಇಸ್ರೋ ವಿಫಲ

    Gadaga nidhi (2)

    ಶಿಲ್ಪ ಗ್ಯಾಲರಿ ಇರೋ ಈ ಊರಲ್ಲಿ ಚಿನ್ನದ ಇತಿಹಾಸವಿದೆ!

    ಕರ್ನಾಟಕದ ಗದಗ ಜಿಲ್ಲೆಯಲ್ಲಿರೋ ಒಂದು ಐತಿಹಾಸಿಕ ಗ್ರಾಮ ಲಕ್ಕುಂಡಿ. ಕಲ್ಯಾಣ ಚಾಲುಕ್ಯರ ಕಾಲದ 100ಕ್ಕೂ ಹೆಚ್ಚು ದೇವಾಲಯಗಳು ಇಲ್ಲಿವೆ. 101 ಮೆಟ್ಟಿಲು ಬಾವಿಗಳು, ಕಲ್ಯಾಣಿಗಳು, ಶಾಸನಗಳು, ಶಿಲ್ಪಕಲೆಗಳು.. ವಿಶೇಷವಾಗಿ ಕಲ್ಲಿನ ಕೆತ್ತನೆ ಮತ್ತು ವಾಸ್ತುಶಿಲ್ಪದ ಶಿಲ್ಪ ಗ್ಯಾಲರಿ ಈ ಊರಲ್ಲಿದೆ. ಪ್ರಾಚೀನ ಕೋಟೆಗಳು, ಕಟ್ಟಡಗಳು, ದೇವಾಲಯಗಳು, ಮಸೀದಿಗಳು, ಇಗರ್ಜಿಗಳು, ಕೆರೆಗಳು, ಶಾಸನಗಳು ವೀರಗಲ್ಲು ಮುಂತಾದ ಸ್ಮಾರಕಶಿಲೆಗಳು, ತಾಮ್ರಪಟಗಳು,ತಾಳೆಗರಿಯ ಹೊತ್ತಿಗೆಗಳು, ಆಯುಧಗಳು ಹೇರಳವಾಗಿವೆ. ಲಕ್ಕುಂಡಿ ಗ್ರಾಮವನ್ನ ಮೂರು ಅರಸರು ಆಳಿದ್ದು, ಇದ್ರಲ್ಲಿ ಹೊಯ್ಸಳ ಅರಸರು ಲಕ್ಕುಂಡಿಯನ್ನ  ಉಪರಾಜಧಾನಿಯನ್ನಾಗಿ ಮಾಡಿಕೊಂಡಿದ್ರು. 

    Gadaga nidhi (3)

    ಇದೇ ಗ್ರಾಮದಲ್ಲಿ ನಾಣ್ಯವನ್ನ ಪ್ರಿಂಟ್​ ಮಾಡ್ತಿದ್ದ ಟಂಕಶಾಲೆ ಇತ್ತು ಎನ್ನಲಾಗ್ತಿದೆ. 22 ಮಠಗಳು, ಶಾಸನಗಳು ಹಾಗೂ ಕರಿಕಲ್ಲಿನ ಮೇಲೆ ಇಲ್ಲಿ ಒಂದು ಮಸೂತಿ ಸಹ ಇದೆಯಂತೆ. 2003 ರಿಂದ 2007ರ ವರೆಗೂ ಉತ್ಕನನ, ಅಂದ್ರೆ ಭೂಮಿ ತೋಡುವಿಕೆ ನಡೆದಿತ್ತು. ಇಲ್ಲಿನ ದೇವಸ್ಥಾನದ ತಳಪಾಯ ಮತ್ತು ಹಳೆಯ ವಸ್ತುಗಳು ಸಿಕ್ಕಿದ್ವು. ದೊಡ್ಡ ದೊಡ್ಡ ಅರಸರು, ದೊಡ್ಡ ರಾಜ ವಂಶಗಳು ಆಳಿದ್ದ ಈ ಕರ್ಮಭೂಮಿಯಲ್ಲಿ ಚಿನ್ನದ ನಿಧಿಗೆ ಕೊರತೆ ಇಲ್ಲವೇನೋ ಅನಿಸುತ್ತೆ. ಆದ್ರೆ ಅದೆಲ್ಲಾ ಭೂಗರ್ಭದಲ್ಲಿ ಅಡಗಿದೆ.. ಹೀಗೆ ಆಗೋ ಈಗೋ ಕಾಣಿಸಿಕೊಳ್ತಿದೆ. ಒಟ್ನಲ್ಲಿ ಸಿಕ್ಕ ನಿಧಿಗೆ ಆಸೆ ಪಡದೆ ಸರ್ಕಾರಕ್ಕೆ ಒಪ್ಪಿಸಿದ ರಿತ್ತಿ ಕುಟುಂಬ ಪ್ರಾಮಾಣಿಕತೆಗೆ ಭಾರಿ ಪ್ರಶಂಸೆಗಳು.. ಸನ್ಮಾನಗಳು ಸಿಕ್ಕಿವೆ.

    ಇದನ್ನೂ ಓದಿ: ಮನೆ ಕಟ್ಟಲು ಅಗೆಯುತ್ತಿದ್ದಾಗ ಸಿಕ್ಕೇ ಬಿಡ್ತು ನಿಧಿ.. ಪ್ರಾಮಾಣಿಕತೆ ಮೆರೆದರೂ ಕುಟುಂಬಕ್ಕೆ ಎದುರಾಯ್ತು ಗಂಡಾಂತರ..!

    ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

    Click here to Read More
    Previous Article
    ಲಕ್ಕುಂಡಿ ‘ಹೊನ್ನಿನ ನಿಧಿ’ಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
    Next Article
    ಸರ್ಕಾರಕ್ಕೆ ಕೊಡ ತುಂಬಾ ‘ಹೊನ್ನಿನ ನಿಧಿ’ ಕೊಟ್ಟ ತಾಯಿ, ಮಗ.. ಈ ಕುಟುಂಬದ ಹಿನ್ನೆಲೆ ಏನು?

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment