Search

    Language Settings
    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    -1

    ಇ.ವಿಯ. ಚಾರ್ಜಿಂಗ್, ಬ್ಯಾಟರಿ ವಿನಿಮಯ ಕೇಂದ್ರಕ್ಕೆ ಭೂಮಿ ನೀಡಲು ಪೋರ್ಟಲ್ ಲಾಂಚ್‌ ! ಕರೆಂಟ್ ಕನೆಕ್ಷನ್‌ಗೆ ಏಕಗವಾಕ್ಷಿ ಯೋಜನೆ ಜಾರಿ

    2 days ago

    ಬೆಸ್ಕಾಂ ನಿಂದ ಲ್ಯಾಂಡ್ ಅಗ್ರಿಗೇಟರ್ ಪೋರ್ಟಲ್‌  ಲಾಂಚ್ ಮಾಡಲಾಗುತ್ತಿದೆ.  E.V. ವಾಹನಗಳನ್ನು ಖರೀದಿಸುವವರಿಗೆ ಗುಡ್ ನ್ಯೂಸ್ ಅನ್ನು ಬೆಸ್ಕಾಂ ನೀಡುತ್ತಿದೆ.  ರಾಜ್ಯವ್ಯಾಪಿ ಇವಿ ಚಾರ್ಜಿಂಗ್ ಸ್ಟೇಷನ್ಸ್ ತಲೆ ಎತ್ತಲಿವೆ.  ಇ.ವಿ ವಾಹನಗಳ ಅನುಕೂಲಕ್ಕಾಗಿ ದೇಶದಲ್ಲೇ ವಿನೂತನ ಯೋಜನೆ ಜಾರಿಗೊಳಿಸಲಾಗುತ್ತಿದೆ.   ರಾಜ್ಯದಲ್ಲಿ ಹಸಿರು ಚಲನಶೀಲತೆಗೆ (green mobility) ಒತ್ತು ನೀಡಲಾಗುತ್ತಿದೆ.

      ಮಾಲಿನ್ಯ ತಡೆಯುವ ಉದ್ದೇಶ ಇದರ ಹಿಂದೆ ಇದೆ.  ಈ ಪೋರ್ಟಲ್‌  ಮೂಲಕ ಭೂಮಾಲೀಕರು ತಮ್ಮ ಭೂಮಿಯನ್ನು ಇವಿ ಚಾರ್ಜಿಂಗ್ ಹಾಗೂ ಬ್ಯಾಟರಿ ವಿನಿಮಯ ಕೇಂದ್ರಗಳ ಸ್ಥಾಪನೆಗೆ ನೀಡಬಹುದು
    ಇ.ವಿ ಚಾರ್ಜಿಂಗ್ ಹಾಗೂ ಬ್ಯಾಟರಿ ವಿನಿಮಯ ಕೇಂದ್ರಗಳ ಸ್ಥಾಪನೆಗೆ ನಿರ್ಧಾರ ಮಾಡಲಾಗಿದೆ. 
    ತ್ವರಿತ ವಿದ್ಯುತ್‌ ಸಂಪರ್ಕಕ್ಕೆ ಏಕ ಗವಾಕ್ಷಿ ವ್ಯವಸ್ಥೆ ಜಾರಿ ಮಾಡಲಾಗುತ್ತಿದೆ.  ಚಾರ್ಜಿಂಗ್ ಸ್ಟೇಶನ್ ಗಳ‌ ನಿರ್ಮಾಣಕ್ಕೆ ಏಕಗವಾಕ್ಷಿ ವ್ಯವಸ್ಥೆ ಜಾರಿ ಮಾಡಲಾಗುತ್ತಿದೆ.  ಲ್ಯಾಂಡ್ ಅಗ್ರಿಗೇಟರ್ ಪೋರ್ಟಲ್ ಮೂಲಕ ಏಕಗವಾಕ್ಷಿ ವ್ಯವಸ್ಥೆ ಕಾರ್ಯ ನಿರ್ವಹಿಸಲಿದೆ.   ಈ ಡಿಜಿಟಲ್ ವೇದಿಕೆ ರಾಜ್ಯಾದ್ಯಂತ ಇ.ವಿ. ಮೂಲಸೌಕರ್ಯದ ಅಭಿವೃದ್ಧಿಗೆ ವೇಗ ನೀಡಲಿದೆ . ಇವಿ ಸ್ಟೇಶನ್ ಗಳ ತೆರೆಯಲು ಪ್ರೋತ್ಸಾಹಿಸುವ ಯೋಜನೆ ಆಗಿದೆ. 
      ಖಾಸಗಿ ಭೂಮಾಲೀಕರು, ಸರ್ಕಾರಿ ಇಲಾಖೆಗಳು, ಖಾಸಗಿ ಸಂಸ್ಥೆಗಳು ಹಾಗೂ ಚಾರ್ಜ್ ಸ್ಟೇಷನ್‌ ಆಪರೇಟರ್‌ಗಳಿಗೆ ವೇದಿಕೆ ಕಲ್ಪಿಸಲಿರುವ ಪೋರ್ಟಲ್ ಇದಾಗಿದೆ. 
    ರಾಜ್ಯಾದ್ಯಂತ ಇ.ವಿ ಚಾರ್ಜಿಂಗ್ ಹಾಗೂ ಬ್ಯಾಟರಿ ವಿನಿಮಯ ಕೇಂದ್ರಗಳನ್ನು ಸ್ಥಾಪನೆ ಇನ್ಮುಂದೆ ಮತ್ತಷ್ಟು ಸುಲಭ ಆಗಲಿದೆ.   ಬೆಸ್ಕಾಂನಿಂದ ವಿದ್ಯುತ್‌ ಸಂಪರ್ಕವನ್ನು ತ್ವರಿತವಾಗಿ ಪಡೆಯಲು ಏಕ ಗವಾಕ್ಷಿ ವ್ಯವಸ್ಥೆ ಜಾರಿ ಮಾಡಲಾಗುತ್ತಿದೆ.   ಪೋರ್ಟಲ್ ಮೂಲಕ ಚಾರ್ಜಿಂಗ್ ಸ್ಟೇಶನ್ ಗಳಿಗೆ ತ್ವರಿತ ವಿದ್ಯುತ್ ಪಡೆಯಲು ಅವಕಾಶ ನೀಡಲಾಗುತ್ತಿದೆ.   ನಗರ ಹಾಗೂ ಹೆದ್ದಾರಿ ಪ್ರದೇಶಗಳಲ್ಲಿ ಸಾರ್ವಜನಿಕ ಇ.ವಿ ಮೂಲಸೌಕರ್ಯಗಳಿಗೆ ಒತ್ತು ನೀಡಲಾಗುತ್ತಿದೆ.  ಅತ್ಯಂತ ತ್ವರಿತಗತಿಯಲ್ಲಿ  ಸ್ಥಾಪಿಸಲು  ಪೋರ್ಟಲ್  ಸಹಕಾರಿಯಾಗಲಿದೆ.   ಭೂಮಾಲೀಕರು ಮತ್ತು ಚಾರ್ಜಿಂಗ್ ಆಪರೇಟರ್‌ಗಳಿಗೆ ಲ್ಯಾಂಡ್ ಅಗ್ರಿಗೇಟರ್ ಪೋರ್ಟಲ್‌  ನೆರವು ನೀಡಲಿದೆ.  ಇ.ವಿ ಹಬ್‌ಗಳ ನಿರ್ಮಾಣವನ್ನು ಉತ್ತೇಜಿಸಲು ಯೋಜನೆ ಜಾರಿ ಮಾಡಲಾಗುತ್ತಿದೆ. 
    ಸಾರ್ವಜನಿಕ–ಖಾಸಗಿ ಸಹಭಾಗಿತ್ವದಲ್ಲಿ ಯೋಜನೆ ವಿಸ್ತರಣೆ ಮಾಡಲಾಗುತ್ತಿದೆ.  ಈ ಪೋರ್ಟಲ್‌  ಮೂಲಕ ಭೂಮಾಲೀಕರು ತಮ್ಮ ಭೂಮಿಯನ್ನು ಇವಿ ಚಾರ್ಜಿಂಗ್ ಹಾಗೂ ಬ್ಯಾಟರಿ ವಿನಿಮಯ ಕೇಂದ್ರಗಳ ಸ್ಥಾಪನೆಗೆ ನೀಡಬಹುದು.  ಆದಾಯ ಹಂಚಿಕೆ ಆಧಾರದ ಮೇಲೆ ಬಾಡಿಗೆಗೆ ಅಥವಾ ಭೋಗ್ಯಕ್ಕೆ ನೀಡಲು ಅವಕಾಶ  ಇದೆ.   ಅದೇ ರೀತಿ ವಿತರಕರು ಮತ್ತು ಚಾರ್ಜ್ ಪಾಯಿಂಟ್ ಆಪರೇಟರ್‌ಗಳು ಇವಿ ಚಾರ್ಜಿಂಗ್ ಕೇಂದ್ರಗಳ ಸ್ಥಾಪನೆ, ನಿರ್ವಹಣೆಯನ್ನ ವಹಿಸಿಕೊಳ್ಳಬಹುದು.  ಏಕ-ಗವಾಕ್ಷಿ ಡಿಜಿಟಲ್ ಡ್ಯಾಶ್‌ಬೋರ್ಡ್ ಮೂಲಕ ವಿದ್ಯುತ್ ಸಂಪರ್ಕ ಪಡೆಯಬಹದು

    ಪೋರ್ಟಲ್‌ನ ಪ್ರಮುಖ  ಉದ್ದೇಶಗಳು 

    - ಇವಿ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಬ್ಯಾಟರಿ ವಿನಿಮಯ ಕೇಂದ್ರಗಳ ಸ್ಥಾಪನೆಗೆ  ಭೂಮಿಯನ್ನು ಬಾಡಿಗೆಗೆ ನೀಡುವ ಅವಕಾಶಗಳಿಗೆ ಉತ್ತೇಜನ

    - ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಹಾಗೂ ಅನುಮೋದನಾ ಪ್ರಕ್ರಿಯೆ ಪ್ರಗತಿ ಪರಿಶೀಲನೆ 


    - ಭೂಮಾಲೀಕರು ಸುಲಭವಾಗಿ ನೋಂದಣಿ ಮಾಡಿಕೊಂಡು ತಮ್ಮ ಭೂಮಿಯನ್ನು ಇವಿ ಚಾರ್ಜಿಂಗ್ ಮತ್ತು ಬ್ಯಾಟರಿ ವಿನಿಮಯ ಕೇಂದ್ರಗಳಿಗೆ ನೀಡುವ ವ್ಯವಸ್ಥೆ

    - ವೆಂಡರ್ಸ್‌ ಹಾಗೂ ಚಾರ್ಜ್ ಸ್ಟೇಷನ್‌ ಆಪರೇಟರ್‌ಗಳು ಚಾರ್ಜಿಂಗ್ ಮತ್ತು ಬ್ಯಾಟರಿ ವಿನಿಮಯ ಕೇಂದ್ರಗಳನ್ನು ಸ್ಥಾಪಿಸಿ ಹಾಗೂ ಅದರ ಕಾರ್ಯಾಚರಣೆಯನ್ನು ನಿರ್ವಹಿಸಬಹುದು

    - ಪೋರ್ಟಲ್ ಮೂಲಕ ಬೆಸ್ಕಾಂ, ಚಾರ್ಜ್ ಸ್ಟೇಷನ್‌ ಆಪರೇಟರ್‌ಗಳೊಂದಿಗೆ ಸಂಪರ್ಕಿಸಿ ಇವಿ ಚಾರ್ಜಿಂಗ್ ಅಥವಾ ಬ್ಯಾಟರಿ ವಿನಿಮಯ ಕೇಂದ್ರಗಳ ಸ್ಥಾಪನೆಗೆ ಸಹಕಾರ ನೀಡಲಿದೆ

    - ಭೂ ಮಾಲೀಕರು ಹಾಗೂ ಚಾರ್ಜ್ ಸ್ಟೇಷನ್‌ ಆಪರೇಟರ್‌ ಗಳು ಸ್ಥಳವನ್ನು ಅಂತಿಮಗೊಳಿಸಿ ಕಾರ್ಯಸಾಧನಾ ವರದಿಯನ್ನು ಪಡೆದ ನಂತರ, ಚಾರ್ಜಿಂಗ್‌ ಸ್ಟೇಷನ್‌ ಆಪರೇಟರ್‌ ಗಳು ಪೋರ್ಟ್‌ಲ್‌ ನ ಏಕ  ಗವಾಕ್ಷಿ ಡ್ಯಾಶ್‌ ಬೋರ್ಡ್‌ ಮೂಲಕ ವಿದ್ಯುತ್‌ ಸಂಪರ್ಕಕ್ಕೆ ಅರ್ಜಿ ಸಲ್ಲಿಸಬಹುದು.

    EV CHARGING PORTAL LAUNCH (1)






    ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

    Click here to Read More
    Previous Article
    ಪೌರಾಯುಕ್ತೆಗೆ ಜೀವ ಬೆದರಿಕೆ ಹಾಕಿದ ಆರೋಪಿ ವಿರುದ್ದ ಕ್ರಮ ಕೈಗೊಳ್ಳಿ-ಕೇಂದ್ರ ಸಚಿವ HDK ಆಗ್ರಹ
    Next Article
    ಬೂದನೂರು ಉತ್ಸವದಲ್ಲಿ ಗ್ರಾಮೀಣ ಕ್ರೀಡೆಗಳಿಗೆ ಪ್ರೋತ್ಸಾಹ : ರವಿಕುಮಾರ್

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment