Search

    Language Settings
    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    -1

    ಸರ್ವರು ಸಮಾನರಾಗಬೇಕೆಂದರೆ ಕಾನೂನಿನ ಅರಿವು ಪ್ರತಿಯೊಬ್ಬರಿಗೂ ಅವಶ್ಯ: ನ್ಯಾ.ವೇಲಾ ಡಿ.ಕೆ.

    3 days ago

    ದಾವಣಗೆರೆ, ಜ. 11 : ಸರ್ವರು ಸಮಾನರಾಗಿ ಬದುಕಲು ದೇಶದ ಕಾನೂನುಗಳ ಬಗ್ಗೆ ಪ್ರತಿಯೊಬ್ಬರು ತಿಳಿದಿರಬೇಕು, ಈ ದೃಷ್ಠಿಯಲ್ಲಿ ಎಲ್ಲರಲ್ಲಿಯು ಕಾನೂನಿನ ಅರಿವು ಅವಶ್ಯಕವಾಗಿದೆ. ಆದುದರಿಂದ ಕಾನೂನು ಸ್ವಯಂ ಸೇವಕರುಗಳು ಸಾಮಾಜಿಕ ಬದ್ದತೆಯೊಂದಿಗೆ ಕಾರ್ಯ ನಿರ್ವಹಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ವೇಲಾ ಡಿ.ಕೆ ಅವರು ತಿಳಿಸಿದರು. ಸೋಮವಾರ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ , ಬೆಂಗಳೂರು, ದಾವಣಗೆರೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ […]

    ದಾವಣಗೆರೆ, ಜ. 11 : ಸರ್ವರು ಸಮಾನರಾಗಿ ಬದುಕಲು ದೇಶದ ಕಾನೂನುಗಳ ಬಗ್ಗೆ ಪ್ರತಿಯೊಬ್ಬರು ತಿಳಿದಿರಬೇಕು, ಈ ದೃಷ್ಠಿಯಲ್ಲಿ ಎಲ್ಲರಲ್ಲಿಯು ಕಾನೂನಿನ ಅರಿವು ಅವಶ್ಯಕವಾಗಿದೆ. ಆದುದರಿಂದ ಕಾನೂನು ಸ್ವಯಂ ಸೇವಕರುಗಳು ಸಾಮಾಜಿಕ ಬದ್ದತೆಯೊಂದಿಗೆ ಕಾರ್ಯ ನಿರ್ವಹಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ವೇಲಾ ಡಿ.ಕೆ ಅವರು ತಿಳಿಸಿದರು.

    ಸೋಮವಾರ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ , ಬೆಂಗಳೂರು, ದಾವಣಗೆರೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಔಟ ಲಾಡ್ ಇಂಡಿಯಾ ಪೌಂಡೇಷನ್ ಆಶ್ರಯದಲ್ಲಿ ಯುಬಿಟಿಡಿ ಕಾಲೇಜಿನಲ್ಲಿ ಆಯೋಜಿಸಿದ್ದ ಅರೆಕಾಲಿಕ ಕಾನೂನು ಸ್ವಯಂ ಸೇವಕರುಗಳಿಗೆ 3 ದಿನಗಳ ತರಬೇತಿ ಶಿಬಿರವನ್ನು ಉದ್ಫಾಟಿಸಿ ಮಾತನಾಡಿದರು.

    seem1 dinamaana ads

    ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಕಾರ್ಯನಿರ್ವಹಿಸುವ ರೀತಿಯಲ್ಲಿ ಜಿಲ್ಲೆಯಲ್ಲಿ ಮತ್ತು ತಾಲ್ಲೂಕುಗಳಲ್ಲಿ ಕಾನೂನು ಸೇವೆಗಳ ಪ್ರಾಧಿಕಾರ ಕಾರ್ಯ ನಿರ್ವಹಿಸುತ್ತಿದೆ. ಕಾನೂನು ಸೇವಾ ಪ್ರಾಧಿಕಾರವು ಜನರಿಗೆ ಕಾನೂನು ಅರಿವು ಮೂಡಿಸಿ, ನೆರವು ನೀಡುವುದು ಇದರ ಉದ್ದೇಶವಾಗಿದೆ ಎಂದರು.

    ದೇಶದ ಜನರಿಗೆ ಕಾನೂನಿನ ಅರಿವಿನ ಕೊರತೆ ಇದೆ, ಕಾರಣ ಜನರಲ್ಲಿ ಶಿಕ್ಷಣ ಮತ್ತು ಆಸಕ್ತಿ ಕೊರತೆ ಇದೆ, ಅಭಿವೃದ್ಧಿಯು ಒಂದೇ ಗ್ರಾಫ್ ನಲ್ಲಿ ಇದೆ. ಅದನ್ನು ಮನಗಂಡು ನಾವು ಎಲ್ಲರಿಗೂ ನ್ಯಾಯ ಕೊಡಿಸುವ ಉದ್ದೇಶವನ್ನು ಹೊಂದಿದ್ದೇವೆ, ಸಾಮಾಜಿಕ ಬದ್ದತೆ ದೃಷ್ಠಿಯಿಂದ ಅರೆಕಾಲಿಕ ಕಾನೂನು ಸ್ವಯಂ ಸೇವಕರುಗಳನ್ನು ನೇಮಕ ಮಾಡಿಕೊಂಡಿದ್ದೆವೆ, ನಾವುಗಳೆಲ್ಲರು ನಮ್ಮ ಸಮಾಜ ನಿನ್ನೆಗಿಂತ ಇಂದು ಚೆನ್ನಾಗಿರಬೇಕು, ಇಂದಿಗಿಂತ ನಾಳೆ ಇನ್ನು ಚೆನ್ನಾಗಿರಬೇಕೆಂಬ ದೃಷ್ಠಿಕೋನದಿಂದ ಕಾನೂನು ಸೇವಾ ಪ್ರಾಧಿಕಾರದಡಿ ಕಾರ್ಯ ನಿರ್ವಹಿಸಬೇಕಾಗಿದೆ ಎಂದು ಸಲಹೆ ನೀಡಿದರು.

    ಕಾನೂನು ಸ್ವಯಂ ಸೇವಕರುಗಳ ಮುಂದೆ ಒಂದು ದೊಡ್ಡ ಜವಾಬ್ದಾರಿ ಇದೆ., ಅದು ಸಾಮಾಜಿಕ ಬದ್ದತೆಗಾಗಿ ಕಾರ್ಯ ನಿರ್ವಹಿಸಬೇಕಾಗಿದೆ. ಸಾಮಾಜಿಕ ಬದ್ದತೆ ಇಲ್ಲವಾದಲ್ಲಿ ಜನರು ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ, ಸಾರ್ವಜನಿಕರಿಗೆ ಸರ್ಕಾರದ ಯೋಜನೆಗಳನ್ನು ಯಾವ ರೀತಿ ಪಡೆಯಬೇಕೆಂದು ತಿಳಿದಿರುವುದಿಲ್ಲ. ಅಂತವರಿಗೆ ಕಾನೂನು ಸ್ವಯಂ ಸೇವಕರುಗಳು ಅರಿವು ಮೂಡಿಸಿ ಸರ್ಕಾರದ ಪ್ರಯೋಜನೆಗಳನ್ನು ಪಡೆದುಕೊಳ್ಳಲು ನೆರವಾಗಬೇಕು ಎಂದು ತಿಳಿಸಿದರು.

    Read also : ಆರೋಗ್ಯ ತಪಾಸಣೆ ಶಿಬಿರ:ನಿಟುವಳ್ಳಿ ಪ್ರವೀಣ್ ಕುಮಾರ್ ರಿಂದ ಉಚಿತ ಔಷಧಿ ವಿತರಣೆ

    ಜಿಲ್ಲೆಯ ಹೊನ್ನೆಮರನಹಳ್ಳಿ ಗ್ರಾಮಸ್ಥರು ಬಸ್, ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯಗಳಿಲ್ಲ ಎಂದು ಕಾನೂನು ಸೇವಾ ಪ್ರಾಧಿಕಾರಕ್ಕೆ ಮನವಿಯನ್ನು ಸಲ್ಲಿಸಿದ್ದರು. ಈಗ ಆ ಹಳ್ಳಿಗೆ ಬಸ್ ಸೌಲಭ್ಯ, ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಹಂತಹಂತವಾಗಿ ಕಲ್ಪಿಸಲಾಗಿದೆ. ಇದೇ ರೀತಿ ಪ್ರತಿ ಹಳ್ಳಿಯ ಜನರು ತಮ್ಮ ಕುಂದು ಕೊರತೆಗಳ ಬಗ್ಗೆ ಮನವಿ ಮಾಡಿದಲ್ಲಿ ಕಾನೂನು ಸೇವೆಗಳ ಪ್ರಾಧಿಕಾರ ನೆರವಿಗೆ ಬರಲಿದೆ ಎಂದು ತಿಳಿಸಿದರು.

    ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಮ.ಕರೆಣ್ಣವರ ಅವರು ಪ್ರಾಸ್ತವಿಕವಾಗಿ ಮಾತನಾಡಿ, ನಮ್ಮ ದೇಶದ ಎಲ್ಲಾ ಜನರಿಗೆ ಕಾನೂನಿನ ಅರಿವು ಮತ್ತು ನೆರವು ನೀಡಬೇಕು ಎಂಬ ಉದ್ದೇಶದಿಂದ ಕಾನೂನು ಸ್ವಯಂ ಸೇವಕರುಗಳನ್ನು ನೇಮಿಸಿಕೊಂಡಿದ್ದು ಅವರಿಗೆ ಕಾನೂನು ಕಾರ್ಯಗಾರ ತರಬೇತಿ ಶಿಬಿರವನ್ನು ಹಮ್ಮಿಕೊಂಡಿದೆ.

    ಇದು ರಾಷ್ಟ್ರ. ರಾಜ್ಯ, ಜಿಲ್ಲೆ ಮತ್ತು ತಾಲ್ಲೂಕು ಕಾನೂನು ಸೇವಾ ಪ್ರಾಧಿಕಾರ ಕಾರ್ಯನಿರ್ವಹಿಸುತ್ತಿದೆ. ಈ ಒಂದು ಕಾನೂನು ಪ್ರಾಧಿಕಾರದ ಅಡಿಯಲ್ಲಿ ಹಲವಾರು ನಿರ್ದೇಶನಗಳು, ನಿಯಮಗಳು ಮತ್ತು ಮಾಹಿತಿಗಳು ಬರುತ್ತಿರುತ್ತವೆ. ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಸಹಿತ ದೇಶದ ಪ್ರತಿಯೊಬ್ಬ ನಾಗರೀಕನು ಕಾನೂನಿನ ಕನಿಷ್ಠ ಮಾಹಿತಿಯನ್ನು ತಿಳಿದಿರಬೇಕು. ಮತ್ತು ಅವನ ಹಕ್ಕನ್ನು ಸಾಧಿಸಲು ಎಲ್ಲಲ್ಲಿ ಸಾಧ್ಯವಿದಿಯೋ ಅಲ್ಲಿ ಹಕ್ಕನ್ನು ಸಾಧಿಸಬೇಕು, ಜಿಲ್ಲೆಯಲ್ಲಿ 54 ಜನ ಪ್ಯಾನೆಲ್ ಅಡ್ವೋಕೆಟ್‌ಗಳು, 8 ಜನ ನುರಿತ ವಕೀಲರು, 204 ಜನ ಕಾನೂನು ಸೇವಕರು, 48 ಜನ ಸಹವರ್ತಿಗಳು ಇದ್ದಾರೆ. ಹಾಗಾಗಿ ಅರೆಕಾಲಿಕ ಕಾನೂನು ಸ್ವಯಂ ಸೇವಕರುಗಳು ಜನರನ್ನು ಭೇಟಿ ಮಾಡುವುದು ಮತ್ತು ಕಾನೂನಿನ ಮಾಹಿತಿಯನ್ನು ನೀಡುವುದು ಆಗಿರುತ್ತದೆ ಎಂದರು.

    2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಧೀಶರಾದ ಪ್ರವೀಣ್ ಕುಮಾರ್ ಆರ್ ಎನ್, ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಮತ್ತು ಟಿ.ಎಸ್.ಸಿ-1 ಎಸ್.ಎನ್.ಹೆಗಡೆ, ಜಿಲ್ಲಾ ಕೌಟುಂಬಿಕ ನ್ಯಾಯಾಧೀಶರಾದ ಶಿವಪ್ಪ ಗಂಗಪ್ಪ ಸಲಗರೆ ಹಾಗೂ ಜಿಲ್ಲಾ ಎಲ್ಲಾ ನ್ಯಾಯಾಧೀಶರುಗಳು ಉಪಸ್ಥಿತರಿದ್ದರು.

    job news dinamaana ads
    Click here to Read More
    Previous Article
    ದಾವಣಗೆರೆ:ಗ್ರಂಥಾಲಯ ಪುಸ್ತಕಗಳ ಆಯ್ಕೆಗೆ ಆಹ್ವಾನ
    Next Article
    ಆರೋಗ್ಯ ತಪಾಸಣೆ ಶಿಬಿರ:ನಿಟುವಳ್ಳಿ ಪ್ರವೀಣ್ ಕುಮಾರ್ ರಿಂದ ಉಚಿತ ಔಷಧಿ ವಿತರಣೆ

    Related ತಾಜಾ ಸುದ್ದಿ Updates:

    Are you sure? You want to delete this comment..! Remove Cancel

    Comments (0)

      Leave a comment