
ಮುಂಬೈ ಇಂಡಿಯನ್ಸ್ ವಿರುದ್ಧ ರೋಚಕ ಗೆಲುವು ದಾಖಲಿಸಿದ್ದ ಆರ್ಸಿಬಿ ವುಮೆನ್ಸ್ ಇದೀಗ ಉತ್ತರ್ ಪ್ರದೇಶ್ ವಾರಿಯರ್ಸ್ ವಿರುದ್ಧ ಯುದ್ದಕ್ಕೆ ಸಜ್ಜಾಗಿದ್ದಾರೆ. ಅನುಭವಿ ನಾಯಕಿ ಮೆಗ್ ಲ್ಯಾನಿಂಗ್ ಪಡೆಯನ್ನ ಸೋಲಿಸೋದು ಅಷ್ಟೊಂದು ಸುಲಭವಲ್ಲ. ಆದ್ರೆ ಆರ್ಸಿಬಿ ನಾಯಕಿ ಸ್ಮೃತಿ ಮಂದಾನ, ಯು.ಪಿ ವಿರುದ್ಧ ಗೆಲ್ಲೋಕೆ ಸಖತ್ ಪ್ಲಾನ್ ಮಾಡಿಕೊಂಡಿದ್ದಾರೆ.
ಮೊದಲ ಪಂದ್ಯವನ್ನ ಗೆದ್ದು ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಹಿಳೆಯರು, ಡಿವೈ ಪಾಟೀಲ್ ಸ್ಟೇಡಿಯಮ್ನಲ್ಲಿ ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಈ ಸೀಸನ್ನಲ್ಲಿ ಬಲಿಷ್ಟವಾಗಿ ಕಾಣುತ್ತಿರುವ ಆರ್ಸಿಬಿ ವುಮೆನ್ಸ್, ಎದುರಾಳಿಗಳಿಗೆ ಸೋಲಿನ ರುಚಿ ತೋರಿಸುವ ತವಕದಲ್ಲಿದೆ. ಅದ್ಭುತ ಗೇಮ್ ಪ್ಲಾನ್, ಸ್ಟಾಟಜಿ, ಮ್ಯಾಚ್ ಟ್ಯಾಕ್ಟಿಕ್ಸ್ ಹೊಂದಿರುವ ಕೂಲ್ ಌಂಡ್ ಕಾಮ್ ಕ್ಯಾಪ್ಟನ್ ಸ್ಮೃತಿ ಮಂದಾನ, ವಿಜಯಯಾತ್ರೆ ಮುಂದುವರೆಸುವ ಉತ್ಸಾಹದಲ್ಲಿದ್ದಾರೆ.
ಇದನ್ನೂ ಓದಿ: ತನ್ನನ್ನು ತಾನೇ ವೆನಿಜುವೆಲಾದ ಹಂಗಾಮಿ ಅಧ್ಯಕ್ಷ ಎಂದು ಘೋಷಿಸಿಕೊಂಡ ಡೋನಾಲ್ಡ್ ಟ್ರಂಪ್!! ಮತ್ತೊಂದು ಟ್ರಂಪ್ ಹುಚ್ಚಾಟ
/fit-in/580x348/filters:format(webp)/newsfirstlive-kannada/media/media_files/2026/01/08/rcb-wpl-2026-01-08-14-14-11.jpg)
ಹ್ಯಾರಿಸ್-ಮಂದಾನರಿಂದ ಬಿರುಸಿನ ಸ್ಟಾರ್ಟ್ ನಿರೀಕ್ಷೆ
ಮುಂಬೈ ಇಂಡಿಯನ್ಸ್ ವಿರುದ್ಧ ಗ್ರೇಸ್ ಹ್ಯಾರಿಸ್ ಮತ್ತು ಸ್ನೃತಿ ಮಂದಾನ, ಸಾಲಿಡ್ ಸ್ಟಾರ್ಟ್ ನೀಡಿದ್ರು. ಆದ್ರೆ ಯು.ಪಿ.ವಿರುದ್ಧ ಆರಂಭಿಕರಿಂದ ಹೆಚ್ಚಿನ ನಿರೀಕ್ಷೆ ಇದೆ. ಡೀಸೆಂಟ್ ಬೌಲಿಂಗ್ ಅಟ್ಯಾಕ್ ಹೊಂದಿರುವ ಯು.ಪಿ, ಬೆಂಗಳೂರು ಓಪನರ್ಸ್ರನ್ನ ಪಕ್ಕಾ ಟೆಸ್ಟ್ ಮಾಡುತ್ತದೆ. ಹಾಗಾಗಿ ಹ್ಯಾರಿಸ್-ಮಂದಾನ, ಯು.ಪಿ ಚಾಲೆಂಜ್ಗೆ ರೆಡಿಯಾಗಲೇಬೇಕು.
ಆರ್ಸಿಬಿ ಮಿಡಲ್ ಆರ್ಡರ್ರಿಂದ ರನ್ ನಿರೀಕ್ಷೆ..!
ಬೆಂಗಳೂರು ತಂಡ ಬ್ಯಾಟಿಂಗ್ನಲ್ಲಿ ಮತ್ತಷ್ಟು ಬಲಿಷ್ಟಗೊಳ್ಳಬೇಕು. ಅದ್ರಲ್ಲೂ ಆರ್ಸಿಬಿ ಮಿಡಲ್ ಆರ್ಡರ್ ಸುಧಾರಿಸಲೇಬೇಕು. ಕಳೆದ ಪಂದ್ಯದಲ್ಲಿ ಬೆಂಗಳೂರು ಮಿಡಲ್ ಆರ್ಡರ್ ಬ್ಯಾಟಿಂಗ್ ಲೈನ್ಅಪ್, ಕೊಲ್ಯಾಪ್ಸ್ ಆಗಿದೆ. ಆದ್ರೆ ಯು.ಪಿ. ವಿರುದ್ಧ ಆರ್ಸಿಬಿ ಮಿಡಲ್ ಆರ್ಡರ್, ಪುಟಿದೇಳಲೇಬೇಕು. ಒಂದು ವೇಳೆ ಅದೇ ಕಥೆ ಮುಂದುವರೆದ್ರೆ, ಆರ್ಸಿಬಿಗೆ ಸಂಕಷ್ಟ ತಪ್ಪಿದಲ್ಲ.
ಇದನ್ನೂ ಓದಿ: ನಿಧಿ ಸಿಕ್ಕಿರೋ ಲಕ್ಕುಂಡಿ ಗ್ರಾಮದ ಇತಿಹಾಸ ಏನು? ಮೂವರು ಅರಸರು ಆಳಿದ್ದ ಊರಿದು..!
ಡಿ ಕ್ಲಾರ್ಕ್ ಆರ್ಸಿಬಿ ತಂಡದ ಡಿಪೆಂಡಬಲ್ ಬ್ಯಾಟರ್..!
ಆರ್ಸಿಬಿ ತಂಡಕ್ಕೆ ನಾಡಿನ್ ಡಿ ಕ್ಲಾರ್ಕ್ ಎಂಟ್ರಿ, ಆನೆಬಲ ತಂದಿದೆ. ದಕ್ಷಿಣ ಆಫ್ರಿಕಾ ತಂಡದ ಪರವೂ ಫಿನಿಷರ್ ರೋಲ್ ಪ್ಲೇ ಮಾಡ್ತಿದ್ದ ಡಿ ಕ್ಲಾರ್ಕ್, ಡಬ್ಲ್ಯೂ.ಪಿ.ಎಲ್ನಲ್ಲಿ ಬೆಂಗಳೂರು ಪರವೂ ಅದೇ ರೋಲ್ ಪ್ಲೇ ಮಾಡ್ತಿದ್ದಾರೆ. ಕೆಳ ಕ್ರಮಾಂಕದಲ್ಲಿ ಡಿಪೆಂಡಬಲ್ ಬ್ಯಾಟರ್ ಎನಿಸಿಕೊಂಡಿರುವ ಡಿ ಕ್ಲಾರ್ಕ್, ಬೆಂಗಳೂರು ತಂಡದ ರಾಯಲ್ ಗೇಮ್ ಚೇಂಜರ್.
ಆರ್ಸಿಬಿ ಇನ್ನಷ್ಟು ಸುಧಾರಿಸಬೇಕು
ಆರ್ಸಿಬಿ ಬೌಲಿಂಗ್ ಡೀಸೆಂಟ್ ಆಗಿದೆ. ಆದ್ರೆ ಮತ್ತಷ್ಟು ಸುಧಾರಿಸಿಕೊಂಡ್ರೆ, ಅತ್ಯುತ್ತಮ. ವೇಗಿ ಲಾರೆನ್ ಬೆಲ್ ಹೊರತುಪಡಿಸಿದ್ರೆ, ಉಳಿದ ಬೌಲರ್ಗಳು ಟೈಟ್ ಸ್ಪೆಲ್ ಮಾಡಬೇಕಿದೆ. ಮುಂಬೈ ವಿರುದ್ಧವೈ ಆರ್ಸಿಬಿ ಬೌಲರ್ಗಳು ಸ್ವಲ್ಪ ದುಬಾರಿಯಾದ್ರು. ಆಲ್ಮೋಸ್ಟ್ ಓವರ್ಗೆ 8ರಂತೆ ರನ್ ನೀಡಿದ್ರು. ಬೌಲರ್ಸ್ ರನ್ ಕಂಟ್ರೋಲ್ ಮಾಡಿದ್ರೆ, ಬ್ಯಾಟರ್ಸ್ಗೆ ಗೇಮ್ ಫಿನಿಷ್ ಮಾಡಲು ಅನುಕೂಲವಾಗುತ್ತದೆ.
ಇದನ್ನೂ ಓದಿ: ಸರ್ಕಾರಕ್ಕೆ ಕೊಡ ತುಂಬಾ ‘ಹೊನ್ನಿನ ನಿಧಿ’ ಕೊಟ್ಟ ತಾಯಿ, ಮಗ.. ಈ ಕುಟುಂಬದ ಹಿನ್ನೆಲೆ ಏನು?
ಉತ್ತರ ಪ್ರದೇಶ್ ವಾರಿಯರ್ಸ್ ಈ ವಾರಿ ಐಪಿಎಲ್ ಹರಾಜಿನಲ್ಲಿ ಉತ್ತಮ ಆಟಗಾರ್ತಿಯನ್ನ ಖರೀದಿ ಮಾಡಿದೆ. ವಾರಿಯರ್ಸ್ ಸಹ ಟೂರ್ನಿಯಲ್ಲಿ ಮೊದಲ ಗೆಲುವನ್ನ ಎದುರು ನೋಡ್ತಿದೆ. ತಂಡದಲ್ಲಿ 5 ಮಂದಿ ಸ್ಪಿನ್ನರ್ಗಳನ್ನ ಹೊಂದಿರುವ ಯು.ಪಿ, ಬೆಂಗಳೂರು ವಿರುದ್ಧ ಸ್ಪಿನ್ ಗಾಳ ಹಾಕಲು ಮುಂದಾಗಲಿದೆ.
ಮೆಗ್ ಲ್ಯಾನಿಂಗ್ ಬಲ
ಯು.ಪಿ ತಂಡಕ್ಕೆ ಅನುಭವಿ ಸಾರಥಿ ಮೆಗ್ ಲ್ಯಾನಿಂಗ್, ಬಲವಿದೆ. ಈಗಾಗಲೇ ಸಾಕಷ್ಟು ಟ್ರೋಫಿಗಳನ್ನ ಗೆದ್ದು ಅನುಭವ ಹೊಂದಿರುವ ಲ್ಯಾನಿಂಗ್, ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕಿಯಾಗಿದ್ದಾಗ್ಲೂ ಉತ್ತಮ ವಿನ್ನಿಂಗ್ ರೆಕಾರ್ಡ್ ಹೊಂದಿದ್ದಾರೆ. ಮೆಗ್ ಲ್ಯಾನಿಂಗ್ರ ಗೇಮ್ ರೀಡಿಂಗ್ ಅಬಿಲಿಟೀಸ್ ಮತ್ತು ಸ್ಮಾರ್ಟ್ ಲೀಡರ್ಶಿಪ್, ವಾರಿಯರ್ಸ್ ಕಾನ್ಫಿಡೆನ್ಸ್ ಹೆಚ್ಚಿಸಿದೆ. ಇಂದಿನ ಪಂದ್ಯ ಸ್ಮೃತಿ ಮಂದಾನ ವರ್ಸಸ್ ಮೆಗ್ ಲ್ಯಾನಿಂಗ್ ಅಂತಾನೇ ಬಿಂಬಿಸಲಾಗಿದೆ. ವಿಶ್ವಕ್ರಿಕೆಟ್ನ ಇಬ್ಬರು ಬಲಿಷ್ಟ ಮತ್ತು ಸೂಪರ್ಸ್ಟಾರ್ ಆಟಗಾರ್ತಿಯರ ಬ್ಯಾಟಲ್ನಲ್ಲಿ ಗೆಲ್ಲೋದು ಯಾರು..? ಕಾದುನೋಡೋಣ.
ಇದನ್ನೂ ಓದಿ: ಲಕ್ಕುಂಡಿ ‘ಹೊನ್ನಿನ ನಿಧಿ’ಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
Previous Article
ಇಂಗ್ಲೆಂಡ್‌ನಿಂದ ರಹಸ್ಯವಾಗಿ ಬಂದ ಮಗ, ತಾಯಿಯ ಕೊಲೆಗೈದ! : ನಿಗೂಢ ಕೇಸ್ ಭೇಧಿಸಿದ ಪೊಲೀಸರು
Next Article
ಜೂನ್ 30 ರೊಳಗೆ ಜಿಬಿಎ ನ ಐದು ಪಾಲಿಕೆಗಳಿಗೂ ಚುನಾವಣೆ ನಡೆಸಲು ಸುಪ್ರೀಂಕೋರ್ಟ್ ಆದೇಶ