Filters

Channels
Topics
Other Filters

ಶಿವಮೊಗ್ಗ : ಹೆಂಡತಿಗೆ ತಿಳಿಯದೆ ಮತ್ತೊಂದು ಮದುವೆಯಾಗಿ ಪೊಲೀಸರಿಗೆ ಫೋನ್​ ಮಾಡಿದ ಗಂಡ-ಏನಿದು ಘಟನೆ?

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ: ಶಿವಮೊಗ್ಗ ನಗರದಲ್ಲಿ ಪ್ರತಿನಿತ್ಯವೂ ಒಂದಲ್ಲ ಒಂದು ಆಶ್ಚರ್ಯಕರ ಹಾಗೂ ಅಪರೂಪದ ಘಟನೆಗಳು ನಡೆಯುತ್ತಲೇ ಇರುತ್ತವೆ. ಅವುಗಳು ಕೊನೆಗೆ 112 ಸಿಬ್ಬಂದಿಯ ... ಕ್ಲಿಕ್ ಮಾಡಿ

ಗೋಕರ್ಣ ಸಮುದ್ರ ದುರಂತಕ್ಕೆ ಮೂವರು ಬಲಿ; ನಾಪತ್ತೆಯಾಗಿದ್ದ ಯುವಕನ ಮೃತದೇಹ ಪತ್ತೆ

ಹೊಸದಿಗಂತ ವರದಿ ಗೋಕರ್ಣ: ಇಲ್ಲಿನ ದುಬ್ಬನಶಸಿ ಕಡಲ ತೀರದಲ್ಲಿ ಸಮುದ್ರದಲ್ಲಿ ಕೊಚ್ಚಿ ಹೋಗಿದ್ದ ಬೆಂಗಳೂರಿನ ಯುವಕ ವಿಶ್ವೇಶ್(24) ಮೃತದೇಹ ಸೋಮವಾರ ಬೆಳಗಿನ ಜಾವ ದುಬ್ಬನಶಸಿ ಕಡಲ ತೀರದಲ್ಲಿ ಪತ್ತೆಯಾಗಿದ್ದು ದುರ್ಘಟನೆಯಲ್ಲಿ ಮೂವರು ಮೃತಪಟ್ಟಿರುವುದು ಖಚಿತಗೊಂಡಂತಾಗಿದೆ. ಬೆಂಗಳೂರಿನಿಂದ ಗೋಕರ್ಣ ಪ್ರವಾಸಕ್ಕೆ ಆಗಮಿಸಿದ್ದ ಪ್ರವಾಸಿಗರ ತಂಡ ರವಿವಾರ ಬೆಳಗಿನ ಜಾವ ಸಮುದ್ರದ ನೀರಿಗಿಳಿದ ಸಂದರ್ಭದಲ್ಲಿ ಭಾರೀ ಅಲೆಗಳ ಹೊಡೆತಕ್ಕೆ ಸಿಲುಕಿ ಜಾರ್ಖಂಡ್ ಮೂಲದ ಶೋಭಾ ದಾಸ್(22) ಬೆಂಗಳೂರಿನ ಮಹಮ್ಮದ ಅಕ್ರಂ(27) ಮತ್ತು ವಿಶ್ವೇಶ್ ಆನಂದ ಕುಲಾಲ್(24) ಅವರು ನೀರಿನಲ್ಲಿ ಮುಳುಗಿದ್ದರು […] The post ಗೋಕರ್ಣ ಸಮುದ್ರ ದುರಂತಕ್ಕೆ ಮೂವರು ಬಲಿ; ನಾಪತ್ತೆಯಾಗಿದ್ದ ಯುವಕನ ಮೃತದೇಹ ಪತ್ತೆ appeared first on ONLINE.

ಮಡಿಕೇರಿಯಲ್ಲಿ ಭೀಕರ ಅಪಘಾತ : ಬೈಕ್‌ಗಳ ನಡುವೆ ಡಿಕ್ಕಿ, ಮೂವರ ದುರ್ಮ*ರಣ

ಹೊಸದಿಗಂತ ವರದಿ ಮಡಿಕೇರಿ: ಬೈಕ್’ಗಳೆರಡರ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಮೂವರು ಸಾವಿಗೀಡಾದ ಘಟನೆ ಕುಶಾಲನಗರ ತಾಲೂಕಿನ ನಂಜರಾಯಪಟ್ಟಣದಲ್ಲಿ‌ ನಡೆದಿದೆ. ಕಬ್ಬಿನಗದ್ದೆ ನಿವಾಸಿ,‌ ರ‍್ಯಾಫ್ಟಿಂಗ್ ಗೈಡ್ ಸುಬ್ರಮಣಿ (28) ತ್ಯಾಗತ್ತೂರಿನ ರಿನಾಸ್(21) ಎಂಬವರು ಸ್ಥಳದಲ್ಲೇ ಸಾವಿಗೀಡಾದರೆ, ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಹಿಂಬದಿ ಸವಾರರಾದ ತ್ಯಾಗತ್ತೂರಿನ ಶ್ವಾಲಿನ್ ಹಾಗೂ ವಿರೂಪಾಕ್ಷಪುರದ ಹರೀಶ್ ಎಂಬವರ ಪೈಕಿ ಓರ್ವ ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿ ಹೇಳಲಾಗಿದೆ. ನಂಜರಾಯಪಟ್ಟಣದ ಮಸೀದಿ ಬಳಿ ಈ ದುರ್ಘಟನೆ ನಡೆದಿದೆ. The post ಮಡಿಕೇರಿಯಲ್ಲಿ ಭೀಕರ ಅಪಘಾತ : ಬೈಕ್‌ಗಳ ನಡುವೆ ಡಿಕ್ಕಿ, ಮೂವರ ದುರ್ಮ*ರಣ appeared first on ONLINE.

ಟ್ರೋಫಿ ನಮ್ಮದೆ ಆದರೂ, ಶ್ರೇಯಸ್ ಪಡೆಗೆ ಬ್ಯಾಕ್-ಟು-ಬ್ಯಾಕ್ ಸೋಲಿನ ಕಹಿ ಅನುಭವ!

ಹೊಸದಿಗಂತ ಡಿಜಿಟಲ್ ಡೆಸ್ಕ್: ನ್ಯೂಜಿಲೆಂಡ್ ಪ್ರವಾಸ ಕೈಗೊಂಡಿದ್ದ ಭಾರತ ಕ್ರಿಕೆಟ್ ತಂಡವು ಐದು ಪಂದ್ಯಗಳ ಟಿ20 ಸರಣಿಯನ್ನು 3-2 ಅಂತರದಿಂದ ವಶಪಡಿಸಿಕೊಂಡಿದೆ. ಸರಣಿಯ ಆರಂಭದಲ್ಲಿ ಅದ್ಭುತ ಪ್ರದರ್ಶನ ನೀಡಿದ ಟೀಮ್ ಇಂಡಿಯಾ ಮೊದಲ ಮೂರು ಪಂದ್ಯಗಳನ್ನು ಸತತವಾಗಿ ಗೆದ್ದು ಮುಂಚೂಣಿ ಸಾಧಿಸಿತು. ಆದರೆ, ಸರಣಿ ಜಯದ ಸಂಭ್ರಮದಲ್ಲಿದ್ದ ಭಾರತ ತಂಡಕ್ಕೆ ಕೊನೆಯ ಎರಡು ಪಂದ್ಯಗಳಲ್ಲಿ ನ್ಯೂಜಿಲೆಂಡ್ ಆಟಗಾರರು ಕಠಿಣ ಸವಾಲು ಒಡ್ಡಿದರು. ದ್ವಿಪಕ್ಷೀಯ ಟಿ20 ಸರಣಿಯೊಂದರಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಸತತ ಎರಡು ಪಂದ್ಯಗಳಲ್ಲಿ ಸೋತಿರಲಿಲ್ಲ. ಕೊನೆಯ […] The post ಟ್ರೋಫಿ ನಮ್ಮದೆ ಆದರೂ, ಶ್ರೇಯಸ್ ಪಡೆಗೆ ಬ್ಯಾಕ್-ಟು-ಬ್ಯಾಕ್ ಸೋಲಿನ ಕಹಿ ಅನುಭವ! appeared first on ONLINE.

ಇಂದಿನ ದಿನಭವಿಷ್ಯ: ಧನಲಾಭ? ಉದ್ಯೋಗದಲ್ಲಿ ಪ್ರಗತಿ? ಪಂಚಾಂಗ ಮತ್ತು 12 ರಾಶಿಗಳ ದಿನಭವಿಷ್ಯ

ಮಲೆನಾಡು ಟುಡೆ ಸುದ್ದಿ / ಇಂದು ನವೆಂಬರ್ 2, 2026ರ ಸೋಮವಾರ. ಶೃಂಗೇರಿ ಪಂಚಾಂಗದ ಪ್ರಕಾರ, ಇಂದು ಪರಾಭವ ನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ಆಶ್ವಯುಜ ಮಾಸ, ... ಕ್ಲಿಕ್ ಮಾಡಿ

ಸಾಗರದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಪಲ್ಟಿ: ಅಪಘಾತಕ್ಕೆ ಕಾರಣವೇನು? ಚಾಲಕ, ನಿರ್ವಾಹಕ ಹೇಳಿದ್ದೇನು? ನಡೆದಿದ್ದೇನು! ವಿಡಿಯೋ ಸ್ಟೋರಿ

ಮಲೆನಾಡು ಟುಡೆ ಸುದ್ದಿ / ಸಾಗರ / ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಬಸವನಹೊಳೆ ಸಮೀಪ ಬೆಂಗಳೂರಿನಿಂದ ಸಾಗರಕ್ಕೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ನಿಯಂತ್ರಣ ತಪ್ಪಿ ರಸ್ತೆ ... ಕ್ಲಿಕ್ ಮಾಡಿ

46 ಶ್ವಾನ, 40ಕ್ಕೂ ಹೆಚ್ಚು ಸ್ಪರ್ಧಿಗಳು! ಕೃಷಿ ಮೇಳದಲ್ಲಿ ಎಷ್ಟು ಚೆನ್ನಾಗಿತ್ತು ನೋಡಿ ಡಾಗ್​ ಶೋ!

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಕೃಷಿ ಮೇಳದ ಅಂಗವಾಗಿ ಆಯೋಜಿಸಿದ್ದ ವಲಯ ಮಟ್ಟದ ಶ್ವಾನ ಪ್ರದರ್ಶನ ನಿನ್ನೆ ದಿನ ವಿಶೇಷವಾಗಿ ಗಮನ ಸೆಳೆಯಿತು. ಶ್ವಾನ ... ಕ್ಲಿಕ್ ಮಾಡಿ

ಚನ್ನಗಿರಿ ರಸ್ತೆ, ಹೊಳೆಹೊನ್ನೂರು ರಸ್ತೆ ಸೇರಿ ಹಲವು ಬಡಾವಣೆಗಳಲ್ಲಿ ಇವತ್ತು ಕರೆಂಟ್ ಕಟ್!

ಮಲೆನಾಡು ಟುಡೆ ಸುದ್ದಿ / ಭದ್ರಾವತಿ / ಭದ್ರಾವತಿ ನಗರದ ಮೆಸ್ಕಾಂ ವಿದ್ಯುತ್ ಉಪವಿಭಾಗದ ವ್ಯಾಪ್ತಿಯಲ್ಲಿ ವಿದ್ಯುತ್ ಮಾರ್ಗಗಳ ನಿರ್ವಹಣಾ ಕಾಮಗಾರಿ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಇಂದು (ನವೆಂಬರ್ ... ಕ್ಲಿಕ್ ಮಾಡಿ

Job News: ವೈದ್ಯಕೀಯ ತಜ್ಞರಿಗೆ ಸುವರ್ಣಾವಕಾಶ, ಮೊದಲು ಬಂದವರಿಗೆ ಮೊದಲ ಆದ್ಯತೆ!

ಚಿತ್ರದುರ್ಗ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಅತಿ ವಿಶೇಷಜ್ಞ ವೈದ್ಯ ಸಲಹೆಗಾರರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ರೋಗಿಗಳಿಗೆ ಉಂಟಾಗುವ ಆರ್ಥಿಕ ಹೊರೆಯನ್ನು ತಗ್ಗಿಸಲು ಈ ನೇಮಕಾತಿ ನಡೆಸಲಾಗುತ್ತಿದೆ.

ಕನ್ನಡದ ಹೆಸರಿನಲ್ಲಿ ಕಾನೂನು ಕೈಗೆ ಬೇಡ; ಐಟಿ ಕಂಪನಿಗಳ ಮೇಲೆ ದಾಳಿ ಮಾಡಿದರೆ ಕ್ರಮ: ಸಿಎಂ ಡಿಕೆಶಿ ಎಚ್ಚರಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಕನ್ನಡ ಮತ್ತು ಕರ್ನಾಟಕದ ರಕ್ಷಣೆಗೆ ಸರ್ಕಾರ ಬದ್ಧವಾಗಿದ್ದರೂ, ಕನ್ನಡಪರ ಹೋರಾಟದ ಹೆಸರಿನಲ್ಲಿ ಕಾನೂನು ಕೈಗೆ ತೆಗೆದುಕೊಳ್ಳುವುದು ಹಾಗೂ ಐಟಿ ಕಂಪನಿಗಳ ಮೇಲೆ ದಾಳಿ ನಡೆಸುವುದನ್ನು ಸಹಿಸುವುದಿಲ್ಲ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ. ಕನ್ನಡ ಹೋರಾಟಗಾರರು ನೈತಿಕ ಪೊಲೀಸ್ ಗಿರಿ ಮಾಡದೆ, ಸಮಸ್ಯೆಗಳಿದ್ದರೆ ಸರ್ಕಾರದ ಗಮನಕ್ಕೆ ತರಬೇಕು ಎಂದು ಅವರು ಕಿವಿಮಾತು ಹೇಳಿದರು. ಬೆಳಗಾವಿಯಲ್ಲಿ ಎಂಇಎಸ್ ಪುಂಡಾಟಿಕೆ ಕುರಿತು ಪ್ರತಿಕ್ರಿಯಿಸಿದ ಸಿಎಂ ಡಿಕೆಶಿ, ನಮ್ಮ ಭೂಮಿಯಲ್ಲಿ ಇರುವವರು ಈ ನೆಲಕ್ಕೆ ಗೌರವ […] The post ಕನ್ನಡದ ಹೆಸರಿನಲ್ಲಿ ಕಾನೂನು ಕೈಗೆ ಬೇಡ; ಐಟಿ ಕಂಪನಿಗಳ ಮೇಲೆ ದಾಳಿ ಮಾಡಿದರೆ ಕ್ರಮ: ಸಿಎಂ ಡಿಕೆಶಿ ಎಚ್ಚರಿಕೆ appeared first on ONLINE.

ಸೋಲಿನ ನೋವಿಗೆ ಜರ್ಮನಿಯಲ್ಲಿ ಗೆಲುವಿನ ಮದ್ದು: ಹೈಲೋ ಓಪನ್ ಕಿರೀಟ ಮುಡಿಗೇರಿಸಿಕೊಂಡ ಪಿ.ವಿ. ಸಿಂಧು

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಫೈನಲ್ ಸೋಲಿನ ನಿರಾಸೆಯನ್ನು ಹೆಚ್ಚು ಕಾಲ ಉಳಿಸಿಕೊಳ್ಳದ ಭಾರತದ ತಾರೆ ಪಿ.ವಿ. ಸಿಂಧು, ಹೈಲೋ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟಕ್ಕೇರಿದ್ದಾರೆ. ಭಾನುವಾರ ನಡೆದ ಮಹಿಳೆಯರ ಸಿಂಗಲ್ಸ್ ಫೈನಲ್‌ನಲ್ಲಿ ಡೆನ್ಮಾರ್ಕ್‌ನ ಲೈನ್ ಕೇರ್ಸ್‌ಫೆಲ್ಡ್ ಅವರನ್ನು 21-12, 21-14 ಅಂತರದಲ್ಲಿ ಮಣಿಸಿದ ಸಿಂಧು, ಈ ಋತುವಿನ ಎರಡನೇ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ನೇರ ಗೇಮ್‌ಗಳಲ್ಲಿ ಸಿಂಧು ಪ್ರಾಬಲ್ಯ ಆರಂಭಿಕ ಗೇಮ್‌ನಲ್ಲಿ ಎದುರಾಳಿ ಆರಂಭದಲ್ಲಿ ಪೈಪೋಟಿ ನೀಡಿದರೂ, ಸಿಂಧು ತಮ್ಮ ಚುರುಕಿನ ಆಟದಿಂದ ಕ್ರಮೇಣ ಹಿಡಿತ ಸಾಧಿಸಿದರು. […] The post ಸೋಲಿನ ನೋವಿಗೆ ಜರ್ಮನಿಯಲ್ಲಿ ಗೆಲುವಿನ ಮದ್ದು: ಹೈಲೋ ಓಪನ್ ಕಿರೀಟ ಮುಡಿಗೇರಿಸಿಕೊಂಡ ಪಿ.ವಿ. ಸಿಂಧು appeared first on ONLINE.

ಸ್ಟಿಂಗ್ ಮಾಡಿದ್ದು ಯಾರು, ಪ್ರಚಾರ ಮಾಡಿದ್ದು ಯಾರು ಎಂಬುದು ಪತ್ತೆಯಾಗಬೇಕು: ಪ್ರಿಯಾಂಕ್ ಖರ್ಗೆ

ಹೊಸದಿಗಂತ ವರದಿ ಕಲಬುರಗಿ: ಸಿದ್ದರಾಮಯ್ಯ ಅವರ ಸ್ಟಿಂಗ್ ಪ್ರಕರಣ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ದೆಹಲಿ ನಿವಾಸದಲ್ಲಿ ಮೊಬೈಲ್ ಪತ್ತೆಯಾದ ವಿಚಾರಕ್ಕೆ ಸಂಬಂಧಿಸಿದಂತೆ ತಾಂತ್ರಿಕವಾಗಿ ತನಿಖೆ ನಡೆಸಿದಾಗ ಕೆಲ ಅಂಶಗಳು ಬೆಳಕಿಗೆ ಬಂದಿವೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರೇ ಆಗಿರಲಿ ತಮ್ಮ ಸ್ಥಾನಮಾನ ಹಾಗೂ ಘನತೆಯನ್ನು ಕಾಪಾಡಿಕೊಳ್ಳಬೇಕು. ಅದನ್ನು ಬಿಟ್ಟು ವೈಯಕ್ತಿಕ ಟೀಕೆಗಳಲ್ಲಿ ತೊಡಗುವುದು ಸರಿಯಲ್ಲ ಎಂದರು. ಇದನ್ನೂ ಓದಿ: ಕುಮಾರಸ್ವಾಮಿ ಅವರು […] The post ಸ್ಟಿಂಗ್ ಮಾಡಿದ್ದು ಯಾರು, ಪ್ರಚಾರ ಮಾಡಿದ್ದು ಯಾರು ಎಂಬುದು ಪತ್ತೆಯಾಗಬೇಕು: ಪ್ರಿಯಾಂಕ್ ಖರ್ಗೆ appeared first on ONLINE.

ಬೆಳಗಾವಿಯಲ್ಲಿ ಎಂಇಎಸ್ ಕರಾಳ ದಿನದ ರ‍್ಯಾಲಿಗೆ ವಿರೋಧ: ಕರವೇ ಕಾರ್ಯಕರ್ತರು ಪೊಲೀಸ್ ವಶಕ್ಕೆ

ಹೊಸದಿಗಂತ ವರದಿ ಬೆಳಗಾವಿ: ನವೆಂಬರ್ 1ರಂದು ಕರ್ನಾಟಕ ರಾಜ್ಯೋತ್ಸವದ ಸಂಭ್ರಮದ ನಡುವೆಯೇ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ವತಿಯಿಂದ ಕರಾಳ ದಿನಾಚರಣೆ ನಡೆಸಲಾಯಿತು. ಈ ರ‍್ಯಾಲಿಗೆ ಪ್ರತಿಯಾಗಿ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆಗೆ ಮುಂದಾಗಿ ಎಂಇಎಸ್ ರ‍್ಯಾಲಿಗೆ ನುಗ್ಗುವ ಪ್ರಯತ್ನ ಮಾಡಿದ ಸಂದರ್ಭದಲ್ಲಿ ಪೊಲೀಸರು ಕನ್ನಡಪರ ಸಂಘಟ‌ನೆಯ ಕಾರ್ಯಕರ್ತರನ್ನು ತಡೆದು ವಶಕ್ಕೆ ಪಡೆದರು.‌ಇದರಿಂದಾಗಿ ನಗರದಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಮಾಡಲಾಯಿತು. ‌ಎಂಇಎಸ್ ರ‍್ಯಾಲಿಯು ಗೋಗಟೆ ವೃತ್ತದ ಬಳಿ ಬರುತ್ತಿದ್ದಂತೆ ಕರವೇ ಕಾರ್ಯಕರ್ತರು ರ‍್ಯಾಲಿಯತ್ತ ತೆರಳಿ ವಿರೋಧ ವ್ಯಕ್ತಪಡಿಸಲು […] The post ಬೆಳಗಾವಿಯಲ್ಲಿ ಎಂಇಎಸ್ ಕರಾಳ ದಿನದ ರ‍್ಯಾಲಿಗೆ ವಿರೋಧ: ಕರವೇ ಕಾರ್ಯಕರ್ತರು ಪೊಲೀಸ್ ವಶಕ್ಕೆ appeared first on ONLINE.

ಇಂಡಿಯನ್ ರೇಸಿಂಗ್ ಫೆಸ್ಟಿವಲ್‌ನಲ್ಲಿ ಕಿಚ್ಚಾಸ್ ಕಿಂಗ್ಸ್ ಬೆಂಗಳೂರು ತಂಡದ ರುಹಾನ್ ಆಳ್ವಗೆ ಜಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಇಂಡಿಯನ್ ರೇಸಿಂಗ್ ಫೆಸ್ಟಿವಲ್‌ನ ಬುದ್ಧ್ ಇಂಟರ್‌ನ್ಯಾಷನಲ್ ಸರ್ಕ್ಯೂಟ್‌ನಲ್ಲಿ ನಡೆದ ಎರಡು ದಿನಗಳ ರೇಸ್‌ಗಳು ರೋಚಕವಾಗಿ ಮುಕ್ತಾಯಗೊಂಡಿವೆ. ಎಫ್4 ಇಂಡಿಯನ್ ಚಾಂಪಿಯನ್‌ಶಿಪ್‌ನಲ್ಲಿ ಗೋವಾ ಏಸಸ್ ಜೆಎ ರೇಸಿಂಗ್ ತಂಡದ ಆರ್ಯನ್ ನರೋಲಾ ಎರಡು ರೇಸ್‌ಗಳನ್ನು ಗೆದ್ದು ಗಮನ ಸೆಳೆದರೆ, ಇಂಡಿಯನ್ ರೇಸಿಂಗ್ ಲೀಗ್‌ನ (ಐಆರ್‌ಎಲ್) ಎರಡನೇ ರೇಸ್‌ನಲ್ಲಿ ಕಿಚ್ಚಾಸ್ ಕಿಂಗ್ಸ್ ಬೆಂಗಳೂರು ತಂಡದ ರುಹಾನ್ ಆಳ್ವ ಜಯ ಸಾಧಿಸಿದರು. ಮೊದಲ ದಿನದ ಐಆರ್‌ಎಲ್ ರೇಸ್‌ನಲ್ಲಿ ರೌಲ್ ಹೈಮನ್ ಗೆಲುವು ಅಕ್ಟೋಬರ್ 31ರಂದು ನಡೆದ ಮೊದಲ […] The post ಇಂಡಿಯನ್ ರೇಸಿಂಗ್ ಫೆಸ್ಟಿವಲ್‌ನಲ್ಲಿ ಕಿಚ್ಚಾಸ್ ಕಿಂಗ್ಸ್ ಬೆಂಗಳೂರು ತಂಡದ ರುಹಾನ್ ಆಳ್ವಗೆ ಜಯ appeared first on ONLINE.

ಗೋಕರ್ಣ ಕಡಲತೀರದಲ್ಲಿ ಭೀಕರ ದುರಂತ: ಅಲೆಗಳಿಗೆ ಸಿಲುಕಿ ಮೂವರು ಪ್ರವಾಸಿಗರು ಸಮುದ್ರಪಾಲು

ಹೊಸದಿಗಂತ ವರದಿ ಗೋಕರ್ಣ: ಸಮುದ್ರದ ಅಲೆಗಳ ಹೊಡೆತಕ್ಕೆ ನೀರಿನಲ್ಲಿ ಕೊಚ್ಚಿಹೋಗಿ ಮೂವರು ಪ್ರವಾಸಿಗರು ನೀರುಪಾಲಾದ ಘಟನೆ ದುಬ್ಬನಸಸಿ ಕಡಲತೀರದಲ್ಲಿ ಭಾನುವಾರ ಬೆಳಗಿನ ಜಾವ ಸಂಭವಿಸಿದೆ. ಜಾರ್ಖಂಡ್ ಮೂಲದ ಶೋಭಾ ದಾಸ್ (22), ಬೆಂಗಳೂರಿನ ಮಹಮ್ಮದ ಅಕ್ರಂ (27) ಮತ್ತು ವಿಶ್ವೇಶ್ (24) ನೀರುಪಾಲಾದವರು. ಈ ಪೈಕಿ ಸಮುದ್ರದಲ್ಲಿ ಕೊಚ್ಚಿ ಹೋಗಿರುವ ವಿಶ್ವೇಶ್ ಗಾಗಿ ಶೋಧ ಕಾರ್ಯ ನಡೆಯುತ್ತಿದೆ. ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ನಾಲ್ಕು ಜನರನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಬೆಂಗಳೂರಿನ ಖಾಸಗಿ ಕಂಪನಿಯೊಂದರ 16 ಜನ ಉದ್ಯೋಗಿಗಳ […] The post ಗೋಕರ್ಣ ಕಡಲತೀರದಲ್ಲಿ ಭೀಕರ ದುರಂತ: ಅಲೆಗಳಿಗೆ ಸಿಲುಕಿ ಮೂವರು ಪ್ರವಾಸಿಗರು ಸಮುದ್ರಪಾಲು appeared first on ONLINE.