Search

    Language Settings
    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    -1

    ಮಣಿಪಾಲ್ ಇಂಟಿಗ್ರೇಟೆಡ್ ಲಿವರ್& ಟ್ರಾನ್ಸ್ ಪ್ಲಾಂಟ್ ಕ್ಲಿನಿಕ್ ಆರಂಭ

    1 week ago

    ಉಡುಪಿ: ಯಕೃತ್ತು(ಲಿವರ್) ಸಮಸ್ಯೆಯಿಂದ ಬಳಲುತ್ತಿರುವ ಕರಾವಳಿ ಕರ್ನಾಟಕ, ದಕ್ಷಿಣಕನ್ನಡ ಭಾಗದ ರೋಗಿಗಳಿಗೆ ಸುಸಜ್ಜಿತ ಮತ್ತು ಅತ್ಯಾಧುನಿಕ ತಂತ್ರಜ್ಞಾನದಿಂದ ಪರಿಣಾಮಕಾರಿ ಚಿಕಿತ್ಸೆ...

    The post ಮಣಿಪಾಲ್ ಇಂಟಿಗ್ರೇಟೆಡ್ ಲಿವರ್& ಟ್ರಾನ್ಸ್ ಪ್ಲಾಂಟ್ ಕ್ಲಿನಿಕ್ ಆರಂಭ first appeared on Udupi Times.



    ಉಡುಪಿ: ಯಕೃತ್ತು(ಲಿವರ್) ಸಮಸ್ಯೆಯಿಂದ ಬಳಲುತ್ತಿರುವ ಕರಾವಳಿ ಕರ್ನಾಟಕ, ದಕ್ಷಿಣಕನ್ನಡ ಭಾಗದ ರೋಗಿಗಳಿಗೆ ಸುಸಜ್ಜಿತ ಮತ್ತು ಅತ್ಯಾಧುನಿಕ ತಂತ್ರಜ್ಞಾನದಿಂದ ಪರಿಣಾಮಕಾರಿ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಮಣಿಪಾಲ್ ಇಂಟಿಗ್ರೇಟೆಡ್ ಲಿವರ್ ಆ್ಯಂಡ್ ಟ್ರಾನ್ಸ್ ಪ್ಲಾಂಟ್ ಕ್ಲಿನಿಕ್ ಆರಂಭಿಸಲಾಗಿದ್ದು, ಪ್ರತಿ ತಿಂಗಳ ಮೊದಲ ಮಂಗಳವಾರ ಬೆಂಗಳೂರಿನ ತಜ್ಞ ವೈದ್ಯರಿಂದ ಆರೈಕೆ ಲಭ್ಯವಿದೆ ಎಂದು ಮಣಿಪಾಲ ಕೆಎಂಸಿ ಆಸ್ಪತ್ರೆ ತಿಳಿಸಿದೆ.

    ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಬೆಂಗಳೂರು ಮಣಿಪಾಲ ಆಸ್ಪತ್ರೆಯ ಎಚ್‌‌ಪಿಬಿ ಆ್ಯಂಡ್ ಲಿವರ್ ಮತ್ತು ಪ್ಯಾಂಕ್ರಿ ಯಾಟಿಕ್ (ಮೇದೋಜ್ಜೀರಕ ಗ್ರಂಥಿ) ಟ್ರಾನ್ಸ್‌ ಪ್ಲಾಂಟ್‌ನ ಪ್ರಮುಖ ಸಲಹೆಗಾರ ಡಾ.ಜಯಂತ್ ರೆಡ್ಡಿ ಮಾತನಾಡಿ, ಈ ಚಿಕಿತ್ಸಾಲಯದ ಮೂಲಕ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಮೊದಲ ಬಾರಿ ಯಕೃತ್ತು ಕಸಿ ಸೇವೆಗಳನ್ನು ಪರಿಚಯಿಸುತ್ತಿದ್ದೇವೆ ಎಂದರು.

    ಈ ಚಿಕಿತ್ಸಾಲಯದಲ್ಲಿ ಶಸ್ತ್ರಚಿಕಿತ್ಸೆ ಟ್ರಾನ್ಸ್ ಪ್ಲಾಂಟ್, ಚಿಕಿತ್ಸೆಯ ಜತೆಗೆ ರೋಗಿಯ ಆರೈಕೆ ನಡೆಯಲಿದೆ. ಬೆಂಗಳೂರಿನ ತಜ್ಞರ ಜತೆಗೆ ಇಲ್ಲಿನ ತಜ್ಞ ವೈದ್ಯರ ತಂಡ ಮತ್ತು ಅತ್ಯಾಧುನಿಕ ಸವಲತ್ತುಗಳನ್ನು ಬಳಸಿಕೊಳ್ಳಲಾ ಗುತ್ತದೆ. ಲಿವರ್ ಟ್ರಾನ್ಸ್‌ ಪ್ಲಾಂಟ್‌ನಿಂದ ರೋಗಿಯ ಚೇತರಿಕೆಯ ಪ್ರಮಾಣ ಶೇ. 85 ರಿಂದ 90ರಷ್ಟಿದೆ. ಲಿವರ್ ಸಮಸ್ಯೆಯನ್ನು ಆರಂಭಿಕ ಹಂತದಲ್ಲಿ ಪತ್ತೆ ಹಚ್ಚಿದರೆ ಸೂಕ್ತ ಚಿಕಿತ್ಸೆ ಲಭ್ಯವಿದೆ ಎಂದು ತಿಳಿಸಿದರು.

    ಆಲೋಹಾಲ್‌ನಿಂದ ಶೇ.40ರಷ್ಟು ಲಿವರ್ ಸಮಸ್ಯೆ: ಕಳೆದ 5 ವರ್ಷಗಳಲ್ಲಿ ವರದಿಯಾಗುತ್ತಿರುವ ಲಿವರ್ ಸಂಬಂಧಿತ ಪ್ರಕರಣಗಳನ್ನು ಪರಿಶೀಲಿಸಿದಾಗ ಶೇ.40 ರಷ್ಟು ಪ್ರಕರಣಗಳು ಆಲೋಹಾಲ್ ಸೇವನೆ ಮಾಡುವವರಲ್ಲಿ ಹೆಚ್ಚಿದೆ.

    ದೇಶದಲ್ಲಿ ಯಕೃತ್ತಿನ ಕಾಯಿಲೆಗಳು ವಿಶೇಷವಾಗಿ ಫ್ಯಾಟಿ ಲಿವರ್ (ಕೊಬ್ಬಿನ ಪಿತ್ತಜನಕಾಂಗ) ಮತ್ತು ಸಿರೋಸಿಸ್, ಬಿಪಿ, ಶುಗರ್, ಅತಿಯಾದ ಬೊಜ್ಜು ಇರುವವರಲ್ಲಿ ಶೇ.15ರಷ್ಟು ಲಿವರ್ ಹಾಳಾಗುತ್ತಿದೆ. ಇದನ್ನು ಆಹಾರ ಪರಿಕ್ರಮಗಳಿಂದ ನಿಯಂತ್ರಣ ಮಾಡುವುದಕ್ಕೆ ಸಾಧ್ಯವಿದೆ ತಿಳಿಸಿದರು.

    ಭಾರತದಲ್ಲಿ ಪ್ರತಿವರ್ಷ 35-40 ಸಾವಿರ ರೋಗಿಗಳಿಗೆ ಲಿವರ್ ಟ್ರಾನ್ಸ್ ಪ್ಲಾಂಟ್ ಅವಶ್ಯಕತೆವಿದ್ದು, 800- 900 ಮಂದಿಗಷ್ಟೇ ಟ್ರಾನ್ಸ್ಪ್ಲಾಂಟ್ ಮಾಡು ವುದಕ್ಕೆ ಸಾಧ್ಯವಾಗುತ್ತಿದೆ. ಕರ್ನಾಟಕದಲ್ಲಿ 2025 ರ ಸಾಲಿನಲ್ಲಿ 198 ಮಂದಿಗೆ ದಾನಿಗಳ ನೆರವಿನಿಂದ ಟ್ರಾನ್ಸ್ ಪ್ಲಾಂಟ್ ಸಾಧ್ಯವಾಗಿದ್ದು, 2000- 3000 ಮಂದಿ ರೋಗಿಗಳು ಅಂಗಾಂಗಕ್ಕಾಗಿ ದಾನಿಗಳನ್ನು ಕಾಯುವ ಸ್ಥಿತಿ ನಿರ್ಮಾಣವಾಗಿದೆ ಎಂದು ಡಾ. ಜಯಂತ್ ರೆಡ್ಡಿ ತಿಳಿಸಿದರು.

    ತೀವ್ರ ಮತ್ತು ದೀರ್ಘಕಾಲದ ಯಕೃತ್ತಿನ ಕಾಯಿಲೆ. ಕೊಬ್ಬಿನ ಲಿವರ್ ಕಾಯಿಲೆ, ಸಿರೋಸಿಸ್ ಮತ್ತು ಅದರ ತೊಡಕುಗಳು, ಅಸೈಟ್ಸ್, ಯಕೃತ್ತಿನ ಗೆಡ್ಡೆಗಳು ಮತ್ತು ಕ್ಯಾನ್ಸರ್, ಹೆಪಟೋರೆನಲ್ ಸಿಂಡೋಮ್, ಸಂಕೀರ್ಣ ಯಕೃತ್ತಿನ ಅಸ್ವಸ್ಥತೆಗಳು, ಯಕೃತ್ತಿಗೆ ಸಂಬಂಧಿಸಿ ಕಾಯಿಲೆಯ ಪರಿಸ್ಥಿತಿ ಗಳಿರುವ ಮಕ್ಕಳು ಮತ್ತು ಕಸಿ ಮಾಡುವ ಮೊದಲು ಅಥವಾ ನಂತರ ಆರೈಕೆಯ ಅಗತ್ಯವಿರುವ ರೋಗಿಗಳಿಗೆ ಕ್ಲಿನಿಕ್ ಬೆಂಬಲ ನೀಡುತ್ತದೆ ಎಂದು ಹೇಳಿದರು.

    ಮಣಿಪಾಲ ಕ್ಲಸ್ಟರ್‌ನ ಸಿಒಒ ಡಾ.ಸುಧಾಕರ್ ಕಂಟಿಪುಡಿ ಮಾತನಾಡಿದರು. ಬೆಂಗಳೂರು ಮಣಿಪಾಲ್ ಆಸ್ಪತ್ರೆಯ ಎಚ್‌ಪಿಬಿ ಆ್ಯಂಡ್ ಲಿವರ್ ಮತ್ತು ಪ್ಯಾಂಕ್ರಿಯಾಟಿಕ್ ಟ್ರಾನ್ಸ್‌ ಪ್ಲಾಂಟ್‌ನ ಸಲಹೆಗಾರ ಡಾ.ಶ್ರುತಿ ಎಚ್.ಎಸ್. ರೆಡ್ಡಿ, ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ಗ್ಯಾಸ್ಟೋಎಂಟರಾಲಜಿ ವಿಭಾಗದ ಮುಖ್ಯಸ್ಥ ಡಾ. ಗಣೇಶ್ ಭಟ್, ಗ್ಯಾಸ್ಟೋ ಎಂಟರಾಲಜಿ ವಿಭಾಗದ ಪ್ರಾಧ್ಯಾಪಕ ಮತ್ತು ಘಟಕ ಮುಖ್ಯಸ್ಥ ಡಾ. ಶಿರನ್ ಶೆಟ್ಟಿ ಉಪಸ್ಥಿತರಿದ್ದರು.

    The post ಮಣಿಪಾಲ್ ಇಂಟಿಗ್ರೇಟೆಡ್ ಲಿವರ್& ಟ್ರಾನ್ಸ್ ಪ್ಲಾಂಟ್ ಕ್ಲಿನಿಕ್ ಆರಂಭ first appeared on Udupi Times.

    Click here to Read More
    Previous Article
    ಜ.11 ರಿಂದ ರಂಗಾಯಣದಲ್ಲಿ 25ನೇ ವರ್ಷದ ಬಹುರೂಪಿ ನಾಟಕೋತ್ಸವ
    Next Article
    ಉಡುಪಿ ಪರ್ಯಾಯ ಮಹೋತ್ಸವಕ್ಕೆ ವಿಶೇಷ ಸಹಕಾರ ಜಿಲ್ಲಾ ಉಸ್ತುವಾರಿ ಸಚಿವರಿಗೆ ಕೃತಜ್ಞತೆ ಸಲ್ಲಿಸಿದ ರಮೇಶ್ ಕಾಂಚನ್

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment