We use cookies to ensure you get the best experience on our website. By continuing to use our site, you accept our use of cookies,
Privacy Policy,
and
Terms of Service.
ಬೆಂಗಳೂರಿನ ಸುಬ್ರಹ್ಮಣ್ಯ ಲೇ ಔಟ್‌ನಲ್ಲಿ ಜನವರಿ 3 ರಂದು ಟೆಕ್ಕಿ ಶರ್ಮಿಳಾ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು. ರಾತ್ರಿ ಮಲಗಿದ ವೇಳೆ ಬೆಡ್ ರೂಮ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಹೊಗೆಯಿಂದ ಉಸಿರುಗಟ್ಟಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿತ್ತು. ಅದ್ರೆ ಪೊಲೀಸರ ತನಿಖೆಯಲ್ಲಿ ಅಕೆ ಹೊಗೆಯಿಂದ ಉಸಿರುಗಟ್ಟಿ ಸಾವನ್ನಪ್ಪಿದ್ದಲ್ಲ, ಕೊಲೆಯಾಗಿದ್ದಾರೆ ಅನ್ನೋದು ಬೆಳಕಿಗೆ ಬಂದಿದೆ. ಸೆಕೆಂಂಡ್ ಪಿಯು ವಿದ್ಯಾರ್ಥಿ ಕರ್ನಲ್ ಕುರೈ ಎಂಬಾತನನ್ನು ಬಂಧನ ಮಾಡಲಾಗಿದೆ. ದ್ವಿತೀಯ ಪಿಯುಸಿ ಓದುತ್ತಿದ್ದ 18 ವರ್ಷ 3 ತಿಂಗಳ ಯುವಕ...
ಬೆಂಗಳೂರಿನ ಸುಬ್ರಹ್ಮಣ್ಯ ಲೇ ಔಟ್‌ನಲ್ಲಿ ಜನವರಿ 3 ರಂದು ಟೆಕ್ಕಿ ಶರ್ಮಿಳಾ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು. ರಾತ್ರಿ ಮಲಗಿದ ವೇಳೆ ಬೆಡ್ ರೂಮ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಹೊಗೆಯಿಂದ ಉಸಿರುಗಟ್ಟಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿತ್ತು. ಅದ್ರೆ ಪೊಲೀಸರ ತನಿಖೆಯಲ್ಲಿ ಅಕೆ ಹೊಗೆಯಿಂದ ಉಸಿರುಗಟ್ಟಿ ಸಾವನ್ನಪ್ಪಿದ್ದಲ್ಲ, ಕೊಲೆಯಾಗಿದ್ದಾರೆ ಅನ್ನೋದು ಬೆಳಕಿಗೆ ಬಂದಿದೆ. ಸೆಕೆಂಂಡ್ ಪಿಯು ವಿದ್ಯಾರ್ಥಿ ಕರ್ನಲ್ ಕುರೈ ಎಂಬಾತನನ್ನು ಬಂಧನ ಮಾಡಲಾಗಿದೆ. ದ್ವಿತೀಯ ಪಿಯುಸಿ ಓದುತ್ತಿದ್ದ 18 ವರ್ಷ 3 ತಿಂಗಳ ಯುವಕ ಯುವತಿಯ ನಸುನಗೆಗೆ ಮನಸೋತು ಪ್ರೀತಿ ಅನ್ನೋ ಕಾಮಾಕರ್ಷಣೆಗೆ ಬಿದ್ದು ಕೊಲೆ ಮಾಡಿ ಅಂದರ್ ಆಗಿದ್ದಾನೆ.
ಕೊಡಗಿನ ವಿರಾಜಪೇಟೆ ಮೂಲದ ಯುವಕ ಕರ್ನಲ್ ಕುರೈ, ಕೊಲೆಯಾದ ಟೆಕ್ಕಿ ಶರ್ಮಿಳಾ ಮನೆಯ ಪಕ್ಕದಲ್ಲೇ ವಾಸವಾಗಿದ್ದ. ಅಕ್ಕಪಕ್ಕದ ಮನೆಯ ನಿವಾಸಿಗಳೇ ಆಗಿದ್ದರಿಂದ ಎದುರು ಸಿಕ್ಕಾಗ, ಟೆಕ್ಕಿ ಶರ್ಮಿಳಾನ್ನ ಈತನನ್ನು ನೋಡಿ ನಸುನಕ್ಕಿದ್ದಳು. ಆತನೂ ಕೂಡ ನಗಾಡಿದ್ದ ಅಷ್ಟೆ. ಆದರೆ ಆಕೆಯ ಬಗ್ಗೆ ಮನಸ್ಸಲ್ಲಿ ಮಂಡಿಗೆ ತಿಂದು, ಆಕೆಯನ್ನು ಮನಸಾರೆ ಮೋಹಿಸಿದ್ದ. ಜನವರಿ 3ರಂದು ರಾತ್ರಿ 9ಗಂಟೆ ಸುಮಾರಿಗೆ ಶರ್ಮಿಳಾ ಮನೆಗೆ ಕಿಟಕಿ ಮೂಲಕ ಎಂಟ್ರಿ ಪಡೆದ ಕರ್ನಲ್ ಕುರೈ, ಆಕೆಯನ್ನು ಹಿಂದಿನಿಂದ ತಬ್ಬಿಕೊಂಡಿದ್ದ. ತಕ್ಷಣ ಗಾಬರಿಯಾದ ಟೆಕ್ಕಿ ಶರ್ಮಿಳಾ ಕೂಗಿಕೊಂಡಳು. ಅಗ ಅಕೆಯನ್ನ ಕೆಳಕ್ಕೆ ತಳ್ಳಿದ್ದ. ಕೆಳಗೆ ಬಿದ್ದ ಶರ್ಮಿಳಾಗೆ ಹಣೆಯ ಭಾಗದಲ್ಲಿ ಗಾಯವಾಗಿತ್ತು. ಕೆಳಕ್ಕೆ ಬಿದ್ದವಳು ಮತ್ತೆ ಮೇಲೆ ಏಳಲಿಲ್ಲ. ಗಾಬರಿಗೊಂಡ ಕರ್ನಲ್ ಕುರೈ, ಸತ್ತು ಹೋಗಿರುವ ಭಯದಲ್ಲಿ ಸಾಕ್ಷಿ ನಾಶಕ್ಕಾಗಿ ತಾನು ಮುಟ್ಟಿದ್ದ ಎಲ್ಲಾ ವಸ್ತುಗಳಿಗೂ ಬೆಂಕಿ ಹಾಕಿ, ಮತ್ತೆ ಸೈಲ್ಡಿಂಗ್ ಡೋರ್ ಹಾಕಿ ಎಸ್ಕೇಪ್ ಅಗಿದ್ದ.
ಆರೋಪಿ ಕರ್ನಲ್ ಕುರೈ ಅತ್ಯಾಚಾರ ಮಾಡೋ ಉದ್ದೇಶದಿಂದಲೇ ಶರ್ಮಿಳಾ ಮನೆಗೆ ಹೋಗಿರೋದು ಬಯಲಾಗಿದೆ. ಆದರೆ ಅತ್ಯಾಚಾರ ಆಗಿದೆಯಾ..? ಇಲ್ವಾ..? ಅನ್ನೋ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಆದರೆ ಆರೋಪಿ ಮಾತ್ರ ನಾನು ಅತ್ಯಾಚಾರ ಮಾಡಿಲ್ಲ ಎಂದಿದ್ದಾನೆ. ಆರೋಪಿ ಎಷ್ಟೇ ಬುದ್ಧಿವಂತಿಕೆ ಮಾಡಿದ್ರೂ ಒಂದಲ್ಲ ಒಂದು ಸಣ್ಣ ತಪ್ಪನ್ನ ಮಾಡ್ತಾನೆ ಅನ್ನೋ ಹಾಗೆ ಮುಚ್ಚಿ ಹೋಗಿದ್ದ ಕೊಲೆ ಕೇಸ್‌ಗೆ ತಾನೇ ಜೀವ ಕೊಟ್ಟಿದ್ದಾನೆ. ಮನೆಯಿಂದ ಎಸ್ಕೇಪ್ ಆಗುವಾಗ ಶರ್ಮಿಳಾ ಮೊಬೈಲ್ ತೆಗೆದುಕೊಂಡು ಹೋಗಿದ್ದ ಆರೋಪಿ ಕರ್ನಲ್ ಕುರೈ, ಘಟನೆ ನಡೆದ ಕೆಲವು ದಿನಗಳ ಬಳಿಕ ಮೊಬೈಲ್ ಆನ್ ಮಾಡಿದ್ದ. ಅಗ ಅಲರ್ಟ್ ಆದ ಪೊಲೀಸರು ಆರೋಪಿಯನ್ನ ಕೆಡ್ಡಾಗೆ ಕೆಡವಿದ್ದಾರೆ.
ಮನೆಗೆ ಬೆಂಕಿ ಬಿದ್ದಾಗ ಹೊಗೆ ಆವರಿಸಿ ಉಸಿರುಗಟ್ಟಿ ಸಾವನ್ನಪ್ಪಿದ್ದಾಳೆ ಅನ್ನೋ ಬಗ್ಗೆಯೇ ವರದಿ ಆಗಿತ್ತು. ಪೊಲೀಸರು ಅನುಮಾನಾಸ್ಪದ ಸಾವು ಅನ್ನೋ ರೀತಿಯಲ್ಲೇ FIR ದಾಖಲಿಸಿಕೊಂಡರೂ ಕೂಡ ಈ ಪ್ರಕರಣದ ಬಗ್ಗೆ ದೊಡ್ಡ ಮಟ್ಟದ ಅನುಮಾನ ಏನು ಇರಲಿಲ್ಲ. ಕಾರಣವೇನು ಅಂದ್ರೆ ಬೆಂಕಿ ಹೊತ್ತಿಕೊಂಡಿದ್ರಿಂದ ಹೊಗೆಯಿಂದ ಉಸಿರುಗಟ್ಟಿ ಸಾವನ್ನಪ್ಪಿರಬಹುದು ಅಂತಾನೇ ಅಂದುಕೊಂಡಿದ್ರು. ಆದರೆ ಯಾವಾಗ ಮೊಬೈಲ್ ಆನ್ ಆಯ್ತೋ ಆಗ ಪೊಲೀಸ್ರು ಮನಸ್ಸಲ್ಲಿ ಸಣ್ಣದೊಂದು ಅನುಮಾನ ಮೂಡಿತ್ತು. ಮೊಬೈಲ್‌ಗೆ ಬೇರೆ ಸಿಮ್ ಹಾಕ್ತಿದ್ದ ಹಾಗೆ ಸಿಮ್ ನಂಬರ್ ಟ್ರೇಸ್ ಮಾಡಿದ್ರು. ಅದು ಟೆಕ್ಕಿ ಶರ್ಮಿಳಾ ಮನೆಯ ಪಕ್ಕದಲ್ಲೇ ಇತ್ತು. ಕರ್ಕೊಂಡು ಬಂದು ರಾಮಮೂರ್ತಿ ನಗರ ಪೊಲೀಸರು ವರ್ಕ್ ಮಾಡ್ತಿದ್ದ ಹಾಗೆ ಎಲ್ಲಾ ರಹಸ್ಯವೂ ಹೊರಬಿದ್ದಿತ್ತು. ಅತ್ಯಾಚಾರ ಆಗಿದ್ಯಾ ಇಲ್ವಾ ಅನ್ನೋ ಬಗ್ಗೆ ಪೊಲೀಸ್ರು ತನಿಖೆ ಮಾಡ್ತಿದ್ದು FSL ರಿಪೋರ್ಟ್ ಬರೋದು ಬಾಕಿಯಿದೆ. ಆದರೂ ಎಳಸು ಪ್ರೀತಿಗೆ ಟೆಕ್ಕಿ ಬಲಿಯಾಗಿದ್ದು ವಿಚಿತ್ರ.