Search

    Language Settings
    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    -1

    ಬಳ್ಳಾರಿಯಲ್ಲಿ ಆಯ್ತು.. ಈಗ ಬೀದರ್ ಸರದಿ.. ರಾಜ್ಯದಲ್ಲಿ ಎತ್ತ ಸಾಗುತ್ತಿದೆ ರಾಜಕಾರಣ..?

    10 hours ago

    ಬಳ್ಳಾರಿಯಲ್ಲಿ ವಾಲ್ಮೀಕಿ ಪುತ್ಥಳಿ ಅನಾವರಣದ ಫ್ಲೆಕ್ಸ್​ ಕಟ್ಟುವ ವಿಚಾರದಲ್ಲಿ ಕಾಂಗ್ರೆಸ್​ – ಬಿಜೆಪಿ ನಡುವೆ ಮಾರಾಮಾರಿ ನಡೆದು, ಗುಂಡು ಹಾರಿಸಿ ಓರ್ವ ಕಾಂಗ್ರೆಸ್​ ಕಾರ್ಯಕರ್ತನ ಹತ್ಯೆ ಆಗಿತ್ತು. ಆ ಪ್ರಕಣದಲ್ಲಿ ಈಗಾಗಲೇ 25ಕ್ಕೂ ಹೆಚ್ಚು ಜನರ ಬಂಧನ ಮಾಡಲಾಗಿದೆ. ಎಸ್​ಪಿಯನ್ನು ಸಸ್ಪೆಂಡ್​ ಕೂಡ ಮಾಡಲಾಗಿದೆ. ಬಳ್ಳಾರಿ ಪ್ರಕರಣ ಹಸಿರಾಗಿರುವಾಗಲೇ ಬೀದರ್​ನಲ್ಲೂ ಅದೇ ರೀತಿಯ ಪ್ರಕರಣಕ್ಕೆ ಕಾರಣವಾಗು ಎಲ್ಲಾ ಸಾಧ್ಯತೆಗಳು ಗೋಚರ ಆಗಿವೆ. ಅಷ್ಟೇ ಅಲ್ಲದೆ ಮತ್ತೊಂದು ಬಳ್ಳಾರಿ ಆಗಲಿದೆ ಎಂದು...

    The post ಬಳ್ಳಾರಿಯಲ್ಲಿ ಆಯ್ತು.. ಈಗ ಬೀದರ್ ಸರದಿ.. ರಾಜ್ಯದಲ್ಲಿ ಎತ್ತ ಸಾಗುತ್ತಿದೆ ರಾಜಕಾರಣ..?​ appeared first on The Public Spot.



    ಬಳ್ಳಾರಿಯಲ್ಲಿ ವಾಲ್ಮೀಕಿ ಪುತ್ಥಳಿ ಅನಾವರಣದ ಫ್ಲೆಕ್ಸ್​ ಕಟ್ಟುವ ವಿಚಾರದಲ್ಲಿ ಕಾಂಗ್ರೆಸ್​ – ಬಿಜೆಪಿ ನಡುವೆ ಮಾರಾಮಾರಿ ನಡೆದು, ಗುಂಡು ಹಾರಿಸಿ ಓರ್ವ ಕಾಂಗ್ರೆಸ್​ ಕಾರ್ಯಕರ್ತನ ಹತ್ಯೆ ಆಗಿತ್ತು. ಆ ಪ್ರಕಣದಲ್ಲಿ ಈಗಾಗಲೇ 25ಕ್ಕೂ ಹೆಚ್ಚು ಜನರ ಬಂಧನ ಮಾಡಲಾಗಿದೆ. ಎಸ್​ಪಿಯನ್ನು ಸಸ್ಪೆಂಡ್​ ಕೂಡ ಮಾಡಲಾಗಿದೆ. ಬಳ್ಳಾರಿ ಪ್ರಕರಣ ಹಸಿರಾಗಿರುವಾಗಲೇ ಬೀದರ್​ನಲ್ಲೂ ಅದೇ ರೀತಿಯ ಪ್ರಕರಣಕ್ಕೆ ಕಾರಣವಾಗು ಎಲ್ಲಾ ಸಾಧ್ಯತೆಗಳು ಗೋಚರ ಆಗಿವೆ. ಅಷ್ಟೇ ಅಲ್ಲದೆ ಮತ್ತೊಂದು ಬಳ್ಳಾರಿ ಆಗಲಿದೆ ಎಂದು ರಾಜಕಾರಣಿಗಳೇ ನೇರವಾಗಿ ಹೇಳಿಕೆ ಕೊಟ್ಟಿದ್ದಾರೆ.

    ಬೀದರ್‌ನ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ನಡೆಯುತ್ತಿದ್ದ ಕೆಡಿಪಿ ಸಭೆಯಲ್ಲಿ ಹುಮನಾಬಾದ್ ಬಿಜೆಪಿ ಶಾಸಕ ಸಿದ್ದು ಪಾಟೀಲ್ ಮತ್ತು ಕಾಂಗ್ರೆಸ್ ಎಂಎಲ್‌ಸಿ ಭೀಮರಾವ್ ಪಾಟೀಲ್ ಮಧ್ಯೆ ಜಟಾಪಟಿ ನಡೆದಿದೆ. ಸಚಿವ ಈಶ್ವರ್ ಖಂಡ್ರೆ ಮುಂದೆಯೇ ಕೈಕೈ ಮಿಲಾಯಿಸಿದ್ದಾರೆ. ಒಬ್ಬರಿಗೊಬ್ಬರು ಅವಾಚ್ಯ ಶಬ್ದಗಳಿಂದ ನಿಂದಿಸಿಕೊಂಡಿದ್ದಾರೆ. ಈ ವೇಳೆ ಬಿಜೆಪಿ ಶಾಸಕ ಸಿದ್ದು ಪಾಟೀಲ್‌ರನ್ನ ಹೊಡೆಯಲು ಮುಂದಾದ ಘಟನೆಯೂ ನಡೆದಿದೆ. ಲೇಔಟ್ ವಿಚಾರಕ್ಕೆ ಶಾಸಕರುಗಳ ಮಧ್ಯೆ ಗಲಾಟೆ ನಡೆದಿದೆ ಎನ್ನಲಾಗಿದೆ. ಕೆಡಿಪಿ ಸಭೆ ಆರಂಭಗೊಂಡ ಅರ್ಧ ಗಂಟೆಯಲ್ಲಿ ಲೇಔಟ್ ವಿಷಯ ಪ್ರಸ್ತಾಪಿಸಿದ್ದಾರೆ. ಸಿದ್ದು ಪಾಟೀಲ್ ಲೇಔಟ್ ವಿಚಾರ ಪ್ರಸ್ತಾಪಿಸುತ್ತಿದ್ದಂತೆ ಇಬ್ಬರ ನಡುವೆ ಮಾತಿನ ಚಕಮಕಿ ಆರಂಭವಾಗಿ ಗಲಾಟೆ ಶುರು ಆಗಿದೆ. ಕಾಂಗ್ರೆಸ್ ಎಂಎಲ್‌ಸಿ ಭೀಮರಾವ್ ಪಾಟೀಲ್ ಎದ್ದೇಳುತ್ತಿದ್ದಂತೆ ಓಡಿ ಹೋಗಿ ತಡೆದಿದ್ದಾರೆ ಚಂದ್ರಕಾಂತ್ ಪೂಜಾರಿ. ಆ ಬಳಿಕ ಸಚಿವ ಈಶ್ವರ್ ಖಂಡ್ರೆ ಕೆಡಿಪಿ ಸಭೆ ಮುಂದೂಡಿದ್ದಾರೆ.

    ಬೀದರ್ & ಹುಮನಾಬಾದ್‌ ಚಿಕ್ಕಪೇಟ್‌ನಲ್ಲಿರುವ ಲೇಔಟ್‌ನಲ್ಲಿ ಅಕ್ರಮ ನಡೆಯುತ್ತಿದೆ ಎಂದು ಕಳೆದ ಕೆಡಿಪಿ ಸಭೆಯಲ್ಲಿ ಸಚಿವರಿಗೆ ಪ್ರಶ್ನಿಸಿದ್ದ ಶಾಸಕ ಸಿದ್ದು ಪಾಟೀಲ್, ಉತ್ತರ ಬಯಸಿದ್ದರು. ಶಾಸಕರ ಪ್ರಶ್ನೆಗೆ ಅಧಿಕಾರಿಗಳು ಉತ್ತರ ಕೊಟ್ಟಿದ್ದರು. ಆದರೆ, ಉತ್ತರ ತೃಪ್ತಿಕರವಾಗಿಲ್ಲ ಯಾವ ಕ್ರಮ ಕೈಗೊಳ್ಳುತ್ತೀರಾ..? ಎಂದು ಸಭೆಯಲ್ಲಿ ಶಾಸಕ ಸಿದ್ದು ಪಾಟೀಲ್ ಮತ್ತೆ ಪ್ರಶ್ನೆ ಕೇಳಿ ಬಂದಿತ್ತು. ಶಾಸಕ ಸಿದ್ದು ಪಾಟೀಲ್ ಸಚಿವರನ್ನ ಪ್ರಶ್ನಿಸುತ್ತಿದ್ದಂತೆ ಎಂಎಲ್‌ಸಿಗಳಾದ ಭೀಮರಾವ್ ಪಾಟೀಲ್ & ಚಂದ್ರಶೇಖರ್ ಪಾಟೀಲ್ ಅವರು ಉತ್ತರ ಕೊಡೋಕೆ ಪ್ರಯತ್ನ ಮಾಡಿದ್ದರು. ಆದರೆ ನಾನು ಸಚಿವರನ್ನ ಕೇಳಿದ್ರೆ ನೀವ್ಯಾಕೆ ಹೇಳ್ತೀರಾ..? ಎಂದು ಹುಮನಾಬಾದ್‌ ಶಾಸಕ ಸಿದ್ದು ಪಾಟೀಲ್ ಹೇಳಿದಾಗ ಮಾತಿನ ಚಕಮಕಿ ನಡೆದು ವಿಕೋಪಕ್ಕೆ ಹೋಗಿದೆ.

    ಬೀದರ್​ನಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಬಿಜೆಪಿ ಶಾಸಕ ಹಾಗೂ ಕಾಂಗ್ರೆಸ್ ಪರಿಷತ್ ಸದಸ್ಯರ ನಡುವೆ ಗಲಾಟೆ ಆದ ಬೆನ್ನಲ್ಲೇ ಘರ್ಷಣೆ ಆಗುವ ಆತಂಕದಲ್ಲಿ ಹುಮನಾಬಾದ್ ತಾಲೂಕಿನಾದ್ಯಂತ ತಹಶೀಲ್ದಾರ್ ನಿಷೇದಾಜ್ಞೆ ಜಾರಿ ಮಾಡಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತೆ ವಹಿಸಲಾಗಿದೆ. ಪೊಲೀಸರಿಂದಲೂ ಹುಮನಾಬಾದ್ ಕಟ್ಟೆಚ್ಚರ ವಹಿಸಿದ್ದಾರೆ. ಯಾರು ಕೂಡ ಗುಂಪು ಗುಂಪಾಗಿ ತಿರುಗದಂತೆ ಆದೇಶಿಸಲಾಗಿದೆ. ಕೆಡಿಪಿ ಸಭೆಯಲ್ಲಿ ಶಾಸಕರ ನಡುವೆ ಗಲಾಟೆ ಆಗಿರುವ ಹಿನ್ನೆಲೆ ಅಧಿಕಾರಿಗಳು ಅಲರ್ಟ್​ ಆಗಿ ಈ ಕ್ರಮ ತೆಗೆದುಕೊಮಡಿದ್ದಾರೆ. MLA ಸಿದ್ದು ಪಾಟೀಲ್ ಹಾಗೂ MLC ಭೀಮರಾವ್ ಪಾಟೀಲ್ ಮನೆಗೆ ಭದ್ರತೆ ನೀಡಲಾಗಿದೆ.

    ಕೆಡಿಪಿ ಸಭೆಯಲ್ಲಿ ಬಿಜೆಪಿ ಎಂಎಲ್‌ಎ & ಕಾಂಗ್ರೆಸ್ ಎಂಎಲ್‌ಸಿ ನಡುವೆ ಗಲಾಟೆ ಹಿನ್ನೆಲೆ ಮೈಸೂರಿನಿಂದ ಹುಮನಾಬಾದ್‌ಗೆ ದೌಡಾಯಿಸಿದ ಮಾಜಿ ಸಚಿವ ರಾಜಶೇಖರ್ ಪಾಟೀಲ್, ಎಂಎಲ್‌ಸಿಗಳಾದ ಭೀಮರಾವ್ ಪಾಟೀಲ್, ಚಂದ್ರಶೇಖರ್ ಪಾಟೀಲ್ ಜೊತೆಗೆ ಜಂಟಿ ಸುದ್ದಿಗೋಷ್ಟಿ ನಡೆಸಿದ್ದಾರೆ. ಹುಮನಾಬಾದ್‌ನಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಇಬ್ಬರ ನಡುವೆಯೂ ಮಾತಿನ ಚಕಮಕಿ ನಡೆದಿದೆ, ಈ ಬಗ್ಗೆ ಸಹೋದರನ ಜೊತೆ ಚರ್ಚಿಸುತ್ತೇನೆ. ಹುಮನಾಬಾದ್‌ನಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿದೆ. ಶಾಸಕರು ಹೋದಲ್ಲೆಲ್ಲಾ ಧಮ್, ತಾಕತ್ತು ಬಗ್ಗೆ ಮಾತನಾಡುತ್ತಾರೆ. ಜವಾಬ್ದಾರಿಯುತ ಸ್ಥಾನದಲ್ಲಿರುವವರು ಮತದಾರರ ಅಭಿವೃದ್ಧಿ ಬಗ್ಗೆ ಚಿಂತನೆ ಮಾಡಬೇಕು. ಹುಮನಾಬಾದ್‌ ಕ್ಷೇತ್ರದಲ್ಲಿ ನಡೆಯುವ ಎಲ್ಲಾ ಕಾಮಗಾರಿಯನ್ನೂ ಶಾಸಕರು & ಅವರ ಸಹೋದರರು ಮಾಡ್ತಿದ್ದಾರೆ. ಗೌರವಯುತವಾದ ಶಾಸಕ ಸ್ಥಾನಕ್ಕೆ ಮಸಿ ಬಳಿಯುವ ಕೆಲಸವನ್ನ ಮಾಡುತ್ತಿದ್ದಾರೆ. ಶಾಸಕರಿಗೆ ಬರೀ ಕ್ರಿಮಿನಲ್ ಮೈಂಡ್ ಇದೆ. ಹೀಗೆ ಮುಂದುವರೆದರೆ ಎರಡನೇ ಬಳ್ಳಾರಿ ನಿರ್ಮಾಣವಾಗುವ ಪರಿಸ್ಥಿತಿ ಬರಲಿದೆ ಎಂದಿದ್ದಾರೆ.

    ಬೀದರ್​ ಗಲಾಟೆ ಬಗ್ಗೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಮಾತನಾಡಿ, ಬೀದರ್ ಕೆಡಿಪಿ ಸಭೆಯಲ್ಲಿ ಬಿಜೆಪಿ ಶಾಸಕರ ಮೇಲೆ ಹಲ್ಲೆ ಮಾಡುವ ಪ್ರಯತ್ನ ನಡೆದಿದೆ. ಒಂದು ಕಡೆ ಬಳ್ಳಾರಿಯಲ್ಲಿ ಜನಾರ್ದನ್ ರೆಡ್ಡಿಯ ಮೇಲೆ ಗುಂಡಿನ ದಾಳಿ ಮಾಡುತ್ತಾರೆ. ಮತ್ತೊಂದೆಡೆ ಕೇಂದ್ರ ಸಚಿವ ವಿ ಸೋಮಣ್ಣ ಮೇಲೆ ಹಲ್ಲೆಗೆ ಯತ್ನ ನಡೆದಿದೆ. ರಾಜ್ಯದಲ್ಲಿ ಏನ್ ನಡೀತ್ತಿದೆ, ಶಾಸಕರುಗಳಿಗೆ, ಕೇಂದ್ರದ ಮಂತ್ರಿ ಗಳಿಗೆ ರಕ್ಷಣೆ ಇಲ್ಲ. ಸೂಕ್ತ ಭದ್ರತೆ ಕೊಡುವಲ್ಲಿ ಸರ್ಕಾರ ವಿಫಲವಾಗಿದೆ. ಕಾನೂನು ಸುವ್ಯವಸ್ಥೆಯನ್ನು ಯಾರು ನಡೆಸ್ತಿದ್ದಾರೆಂದು ಗೊತ್ತಿಲ್ಲ. ಜಿಲ್ಲೆಗೊಬ್ಬ ಗೃಹ ಸಚಿವರು ಇದ್ದಾರಾ‌..? ಪೊಲೀಸರು ಎಲ್ಲಿ ನೋಡಿದ್ರು ನಿರಾಸಕ್ತಿ ವಹಿಸುತ್ತಿದ್ದಾರೆ. ಬೆಂಗಳೂರಿನಲ್ಲಿಒ ಓಂ ಶಕ್ತಿಯ ಮೆರವಣಿಗೆ ಮೇಲೆ ಮುಸ್ಲಿಂ ಯುವಕರು ಕಲ್ಲು ಹೊಡೆಯುತ್ತಾರೆ. ರಾಜ್ಯದಲ್ಲಿ ನಾಚಿಕೆಗೇಡಿನ ಸಂಗತಿ ಎಂದು ಕಿಡಿಕಾರಿದ್ದಾರೆ. ಒಟ್ಟಾರೆ ಬೀದರ್​ನಲ್ಲೂ ಘರ್ಷಣೆ ತಾರತಕ್ಕೇರುವ ಸಾಧ್ಯತೆ ನಿಚ್ಛಳವಾಗಿದೆ.

    The post ಬಳ್ಳಾರಿಯಲ್ಲಿ ಆಯ್ತು.. ಈಗ ಬೀದರ್ ಸರದಿ.. ರಾಜ್ಯದಲ್ಲಿ ಎತ್ತ ಸಾಗುತ್ತಿದೆ ರಾಜಕಾರಣ..?​ appeared first on The Public Spot.

    Click here to Read More
    Previous Article
    BJP ಬಾಣವನ್ನು ಬಿಜೆಪಿಗೇ ತಿರುಗಿಸಿದ ಸಚಿವ ಕೃಷ್ಣಬೈರೇಗೌಡ..!
    Next Article
    ಇಂದಿನ ರಾಶಿ ಭವಿಷ್ಯ : ಈ ರಾಶಿಯವರಿಗೆ ಯಶಸ್ಸಿನ ಸಂಭ್ರಮ, ಉಡುಗೊರೆ ಭಾಗ್ಯ

    Related PublicSpot Updates:

    Are you sure? You want to delete this comment..! Remove Cancel

    Comments (0)

      Leave a comment