Search

    Language Settings
    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    -1

    ಟಾಕ್ಸಿಕ್​ ಟೀಸರ್​ ಬಗ್ಗೆ ಕೇಂದ್ರ ಸೆನ್ಸಾರ್​ ಮಂಡಳಿಗೆ ದೂರು..! ಬೀಳುತ್ತಾ ಕತ್ತರಿ..?

    11 hours ago

    ಕನ್ನಡದಲ್ಲಿ ಟಾಕ್ಸಿಕ್‌ ಸಿನಿಮಾ ಟೀಸರ್‌ ರಿಲೀಸ್‌ ಆಗಿ ಕೇವಲ ಎರಡೇ ಎರಡು ದಿನ ಆಗಿದೆ. ಈ ಎರಡು ದಿನದಲ್ಲಿ ಸಿನಿಮಾ ರಂಗದ ಸಾರ್ವಕಾಲಿಕ ದಾಖಲೆಗಳೆಲ್ಲಾ ಉಢೀಸ್​ ಆಗಿದೆ. ರಾಕಿಭಾಯ್ ಯಶ್‌ ನಟನೆಯ ಟಾಕ್ಸಿಕ್‌ ಟೀಸರ್‌ 2 ನಿಮಿಷ 52 ಸೆಕೆಂಡ್‌ ಟೀಸರ್‌‌ ಸಿನಿಲೋಕದಲ್ಲಿ ಸುನಾಮಿಯನ್ನೇ ಎಬ್ಬಿಸಿದೆ. ಭಾರತೀಯ ಚಿತ್ರರಂಗ ಮಾತ್ರವಲ್ಲ, ಬಾಲಿವುಡ್​, ಹಾಲಿವುಡ್‌ ಸಿನಿಮಾ ಮಂದಿ ಕೂಡ ಕನ್ನಡದ ಕಡೆಗೆ ಈಗಾಗಲೇ ಟಾಕ್ಸಿಕ್‌ ಸಿನಿಮಾ ಕ್ರೇಜ್‌ ಶುರುವಾಗಿದೆ. ಇದರ ನಡುವೆ...

    The post ಟಾಕ್ಸಿಕ್​ ಟೀಸರ್​ ಬಗ್ಗೆ ಕೇಂದ್ರ ಸೆನ್ಸಾರ್​ ಮಂಡಳಿಗೆ ದೂರು..! ಬೀಳುತ್ತಾ ಕತ್ತರಿ..? appeared first on The Public Spot.



    ಕನ್ನಡದಲ್ಲಿ ಟಾಕ್ಸಿಕ್‌ ಸಿನಿಮಾ ಟೀಸರ್‌ ರಿಲೀಸ್‌ ಆಗಿ ಕೇವಲ ಎರಡೇ ಎರಡು ದಿನ ಆಗಿದೆ. ಈ ಎರಡು ದಿನದಲ್ಲಿ ಸಿನಿಮಾ ರಂಗದ ಸಾರ್ವಕಾಲಿಕ ದಾಖಲೆಗಳೆಲ್ಲಾ ಉಢೀಸ್​ ಆಗಿದೆ. ರಾಕಿಭಾಯ್ ಯಶ್‌ ನಟನೆಯ ಟಾಕ್ಸಿಕ್‌ ಟೀಸರ್‌ 2 ನಿಮಿಷ 52 ಸೆಕೆಂಡ್‌ ಟೀಸರ್‌‌ ಸಿನಿಲೋಕದಲ್ಲಿ ಸುನಾಮಿಯನ್ನೇ ಎಬ್ಬಿಸಿದೆ. ಭಾರತೀಯ ಚಿತ್ರರಂಗ ಮಾತ್ರವಲ್ಲ, ಬಾಲಿವುಡ್​, ಹಾಲಿವುಡ್‌ ಸಿನಿಮಾ ಮಂದಿ ಕೂಡ ಕನ್ನಡದ ಕಡೆಗೆ ಈಗಾಗಲೇ ಟಾಕ್ಸಿಕ್‌ ಸಿನಿಮಾ ಕ್ರೇಜ್‌ ಶುರುವಾಗಿದೆ. ಇದರ ನಡುವೆ ಕೇಂದ್ರ ಸೆನ್ಸಾರ್​ ಬೋರ್ಡ್​ಗೆ ದೂರು ಕೂಡ ಸಲ್ಲಿಕೆ ಆಗಿದೆ. ಯಶ್‌ ಕನಸಿನ ಟಾಕ್ಸಿಕ್​ ಮೇಲೆ ಮಡಿವಂತಿಕೆಯ ನೆರಳು ಬಿದ್ದಿದೆ. ಟೀಸರ್‌ನಲ್ಲಿ ಅಶ್ಲೀಲ ದೃಶ್ಯ ಹಾಕಿದ್ದಾರೆ ಅನ್ನೋ ಕೂಗು ಎದ್ದಿದೆ.

    ಟಾಕ್ಸಿಕ್‌ ಟೀಸರ್‌ ಬಂದ ಬಳಿಕ ಸಿನಿಮಾ ಮಂದಿಯೇ ನಿಬ್ಬೆರಗಾಗಿ ನೋಡ್ತಿದ್ದಾರೆ. ಮೈಚಳಿ ಬಿಟ್ಟು ಅಖಾಡಕ್ಕೆ ಇಳಿದಿರೋ ಯಶ್‌, ಒಂದೊಂದು ಸೀನ್‌ನಲ್ಲೂ ಮೈನವಿರೇಳಿಸುವಂತೆ ಮಾಡಿದ್ದಾರೆ. ಆದರೆ, ಟೀಸರ್‌‌ನ ಆರಂಭದಲ್ಲೇ ಶುರುವಾಗೋ ಬಾಂಬ್‌ ಸೀನ್‌ ಕೆಲವರ ನಿದ್ದೆಗೆಡಿಸಿದೆ. ಟೀಸರ್​ನ ಮತ್ತೊಂದು ಭಾಗದಲ್ಲಿ ಕಾರು, ಕಾರಿನ ಒಳಗೆ ನಡೆದಿರಬಹುದಾಗ ಅಶ್ಲೀಲ ದೃಶ್ಯಗಳ ಊಹೆ, ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರಲಿದೆ ಅಂತಾ ವಕೀಲ ಲೋಹಿತ್ ಕುಮಾರ್​ ಕೇಂದ್ರ ಸೆನ್ಸಾರ್ ಮಂಡಳಿಗೆ ಇ-ಮೇಲ್ ಮೂಲಕ ದೂರು ನೀಡಿದ್ದಾರೆ.

    ಸಿನಿಮಾ ರಿಲೀಸ್ ಆಗುವ ಮೊದಲು ಸೆನ್ಸಾರ್‌ ಆಗುತ್ತದೆ. ಸೆನ್ಸಾರ್‌ ಸರ್ಟಿಫಿಕೇಟ್‌ ಸಿಕ್ಕ ಬಳಿಕ ಸಿನಿಮಾ ತೆರೆಗೆ ಬರುತ್ತದೆ. ಆದರೆ ಟೀಸರ್‌ಗಳಿಗೂ ಸೆನ್ಸಾರ್ ಪ್ರಮಾಣಪತ್ರ ಮತ್ತು ಮಾರ್ಗಸೂಚಿ ಕಡ್ಡಾಯ ಮಾಡಬೇಕು ಅಂತಾ ದೂರು ನೀಡಿದ್ದಾರೆ. ಸೆನ್ಸಾರ್ ಇಲ್ಲದ ಟೀಸರ್‌ ಬಿಡುಗಡೆ ಮಾಡ್ತಿದ್ದಾರೆ. ಇದರಿಂದೆ ಅಪ್ರಾಪ್ತರು ಹಾಗೂ ಸಾರ್ವಜನಿಕರ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆಯಿದೆ. ಈ ತಪ್ಪನ್ನ ಸರಿಪಡಿಸದೇ ಇದ್ದರೆ ಪ್ರತಿಭಟನೆ ನಡೆಸೋದಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟಾಕ್ಸಿಕ್‌ ವಿವಾದ ಶುರುವಾದ ಬಳಿಕ ಟಾಕ್ಸಿಕ್​ ನಿರ್ದೇಶಕಿ ಗೀತು ಮೋಹನ್‌ ದಾಸ್‌ ಕಿಡಿಕಾರಿದ್ದಾರೆ. ಇನ್‌ಸ್ಟಾ ಪೋಸ್ಟ್‌ ಹಾಕಿದ್ದು, ಮಹಿಳೆಯ ಸಂತೋಷ, ಸಮ್ಮತಿ, ಆಕೆಯ ವ್ಯವಸ್ಥೆ ಜೊತೆ ಆಟ ಆಡುವುದನ್ನ ಜನ ಗುರುತಿಸಿದಾಗ ಮಜಾವಾಗಿರುತ್ತೆ ಅಂತಾ ವ್ಯಂಗ್ಯವಾಡಿದ್ದಾರೆ.

    ಈ ದೃಶ್ಯ ಕೆಲವೇ ಸೆಕೆಂಡ್​ನಲ್ಲಿ ಬಂದು ಮುಗಿದು ಹೋಗುತ್ತದೆ. ನಾವು ಅಂದುಕೊಂಡಿದ್ದು ಸಿನಿಮಾದಲ್ಲಿ ಇಲ್ಲದೆ ಇರಲೂ ಬಹುದು. ಅಥವಾ ಆ ಸೀನ್​​ ಜನ ಮೆಚ್ಚುಗೆಗೆ ಪಾತ್ರವಾದರೂ ಆಗಬಹುದು. ಈಗಾಗಲೇ ಟೀಸರ್​ ಬಗ್ಗೆ ಇಷ್ಟೊಂದು ಮಾತು ಹುಟ್ಟಿಕೊಳ್ಳುವುದಕ್ಕೆ ಕಾರಣವೂ ಆ ದೃಶ್ಯವೇ ಆಗಿದೆ. ಹೀಗಿರುವಾಗ ಆ ದೃಶ್ಯ ಜನರನ್ನು ಸೆಳೆಯುವುದರಲ್ಲಿ ಯಶಸ್ವಿಯಾಗಿದೆ. ಸಿನಿಮಾದಲ್ಲಿ ಈ ದೃಶ್ಯ ಇರಬೇಕು ಎಂದರೆ A ಅರ್ಟಿಫಿಕೇಟ್​ ಜೊತೆಗೆ ಬಂದರೆ ಯಾವುದೇ ಸಮಸ್ಯೆ ಇರಲ್ಲ. ಇನ್ನು ಯೂಟ್ಯೂಬ್​, ಫೇಸ್​ಬುಕ್​ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಸೆನ್ಸಾರ್​ ಇರಬೇಕು ಅನ್ನೋದರಲ್ಲೂ ತಪ್ಪಿಲ್ಲ ಅಲ್ಲವೇ..?

     

    The post ಟಾಕ್ಸಿಕ್​ ಟೀಸರ್​ ಬಗ್ಗೆ ಕೇಂದ್ರ ಸೆನ್ಸಾರ್​ ಮಂಡಳಿಗೆ ದೂರು..! ಬೀಳುತ್ತಾ ಕತ್ತರಿ..? appeared first on The Public Spot.

    Click here to Read More
    Previous Article
    ಬಳ್ಳಾರಿಯ ಬ್ಯಾನರ್ ಹೋರಾಟಕ್ಕೆ ಬಿಜೆಪಿ ನಾಯಕರ ಸಿದ್ಧತೆ.. ರಾಜ್ಯ ನಾಯಕರಿಗೆ ಮನಸ್ಸಿಲ್ಲ ಯಾಕೆ..?
    Next Article
    ಸ್ವಂತ ಜಮೀನಲ್ಲಿ ನಿಧಿ ಸಿಕ್ಕರೂ ಸರ್ಕಾರಕ್ಕೆ ಸೇರುತ್ತಾ..? ಕಾರಣವೇನು..?

    Related PublicSpot Updates:

    Are you sure? You want to delete this comment..! Remove Cancel

    Comments (0)

      Leave a comment