Search

    Language Settings
    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    -1

    ಅರಸು ದಾಖಲೆ ಮುಟ್ಟಿದ ಸಿಎಂ ಸಿದ್ದರಾಮಯ್ಯ.. ನಾಳೆ ದೀರ್ಘಾವಧಿ ಸಿಎಂ ಅನ್ನೋ ಪಟ್ಟ..

    11 hours ago

    ಕರ್ನಾಟಕ ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್​ನಲ್ಲಿ ಎರಡು ಬಾರಿ ಮುಖ್ಯಮಂತ್ರಿ ಆಗುವ ಮೂಲಕ ಈ ಹಿಂದೆ ದೇವರಾಜ ಅರಸು ಹೆಸರಲ್ಲಿದ್ದ ದಾಕಲೆಯನ್ನು ಅಳಿಸಿ ಹಾಕುತ್ತಿದ್ದಾರೆ. ದೇವರಾಜ ಅರಸು ಅತೀ ಹೆಚ್ಚು ದಿನಗಳ ಕಾಲ ಸಿಎಂ ಆಗಿ ಆಳ್ವಿಕೆ ಮಾಡಿದರು ಅನ್ನೋ ದಾಖಲೆ ಇತ್ತು. ಆದರೆ ಸಿಎಂ ಸಿದ್ದರಾಮಯ್ಯ ಇವತ್ತಿಗೆ ಆ ದಾಖಲೆಯನ್ನು ಯಶಸ್ವಿಯಾಗಿ ತಲುಪಿದ್ದು, ನಾಳೆ ಅರಸು ದಾಖಲೆಯನ್ನು ಸರಿಗಟ್ಟಿ ಅತೀ ಹೆಚ್ಚು ದಿನಗಳ ಕಾಲ ಮುಖ್ಯಮಂತ್ರಿಯಾಗಿ ಆಳ್ವಿಕೆ ಮಾಡಿದ...

    The post ಅರಸು ದಾಖಲೆ ಮುಟ್ಟಿದ ಸಿಎಂ ಸಿದ್ದರಾಮಯ್ಯ.. ನಾಳೆ ದೀರ್ಘಾವಧಿ ಸಿಎಂ ಅನ್ನೋ ಪಟ್ಟ.. appeared first on The Public Spot.



    ಕರ್ನಾಟಕ ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್​ನಲ್ಲಿ ಎರಡು ಬಾರಿ ಮುಖ್ಯಮಂತ್ರಿ ಆಗುವ ಮೂಲಕ ಈ ಹಿಂದೆ ದೇವರಾಜ ಅರಸು ಹೆಸರಲ್ಲಿದ್ದ ದಾಕಲೆಯನ್ನು ಅಳಿಸಿ ಹಾಕುತ್ತಿದ್ದಾರೆ. ದೇವರಾಜ ಅರಸು ಅತೀ ಹೆಚ್ಚು ದಿನಗಳ ಕಾಲ ಸಿಎಂ ಆಗಿ ಆಳ್ವಿಕೆ ಮಾಡಿದರು ಅನ್ನೋ ದಾಖಲೆ ಇತ್ತು. ಆದರೆ ಸಿಎಂ ಸಿದ್ದರಾಮಯ್ಯ ಇವತ್ತಿಗೆ ಆ ದಾಖಲೆಯನ್ನು ಯಶಸ್ವಿಯಾಗಿ ತಲುಪಿದ್ದು, ನಾಳೆ ಅರಸು ದಾಖಲೆಯನ್ನು ಸರಿಗಟ್ಟಿ ಅತೀ ಹೆಚ್ಚು ದಿನಗಳ ಕಾಲ ಮುಖ್ಯಮಂತ್ರಿಯಾಗಿ ಆಳ್ವಿಕೆ ಮಾಡಿದ ಹೆಸರಿನ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲಲಿದ್ದಾರೆ. ಜೆಡಿಎಸ್​ನಲ್ಲಿ ಶಾಸಕರಾಗಿ ಸಚಿವರಾಗಿ, ಉಪಮುಖ್ಯಮಂತ್ರಿಯಾಗಿ ರಾಜಕಾರಣ ಮಾಡಿದ ಸಿದ್ದರಾಮಯ್ಯ, ಬದಲಾದ ರಾಜಕೀಯ ಸಮರದಲ್ಲಿ ಕಾಂಗ್ರೆಸ್​ ಪಕ್ಷವನ್ನು ಸೇರಿ ಕಾಂಗ್ರೆಸ್​ ಪಕ್ಷದಲ್ಲೇ ಮುಖ್ಯಮಂತ್ರಿಯಾಗಿದ್ದ ಬಡವರ ಬಂಧು ದೇವರಾಜ ಅರಸು ಅವರ ದಾಖಲೆಯನ್ನು ಸರಿಗಟ್ಟಿದ್ದು ದಾಖಲೆಯೇ ಸರಿ.

    ​​
    ದೇವರಾಜ ಅರಸು ದಾಖಲೆಯನ್ನು ಸರಿಗಟ್ಟುತ್ತಿರುವ ಸಿಎಂ ಸಿದ್ದರಾಮಯ್ಯ, ಇವತ್ತು ನಾಳೆ ತವರು ಜಿಲ್ಲೆ ಪ್ರವಾಸದಲ್ಲಿದ್ದು, ಮೈಸೂರಿನಲ್ಲಿ ಕೆ‌.ಸಿ ವೇಣುಗೋಪಾಲ್ ಭೇಟಿ ಮಾಡಿ ಚರ್ಚಿಸಿದ್ದಾರೆ. ಮೈಸೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ AICC ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್​ ಅವರನ್ನು ಭೇಟಿ ಮಾಡಿದ್ದರು. ವೇಣುಗೋಪಾಲ್ ಭೇಟಿ ವೇಳೆ ಸಚಿವರಾದ ಡಾ. ಹೆಚ್.ಸಿ ಮಹದೇವಪ್ಪ, ಸತೀಶ್ ಜಾರಕಿಹೊಳಿ, ವೆಂಕಟೇಶ್, ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಉಪಸ್ಥಿತರಿದ್ದರು. ಅರಸು‌ ದಾಖಲೆ ಸರಿಗಟ್ಟುತ್ತಿರುವ ಸಿಎಂ ಸಿದ್ದರಾಮಯ್ಯಗೆ ವೇಣುಗೋಪಾಲ್ ಶುಭಾಶಯ ತಿಳಿಸಿದ್ದಾರೆ. ಇನ್ನಷ್ಟು ಪರಿಣಾಮಕಾರಿ ಆಡಳಿತ ನೀಡಲು ಸಿಎಂ ಸಿದ್ದರಾಮಯ್ಯಗೆ ವೇಣುಗೋಪಾಲ್ ಕಿವಿಮಾತು ಕೂಡ ಹೇಳಿದ್ದಾರೆ ಎನ್ನಲಾಗ್ತಿದೆ.

    ಅರಸು ದಾಖಲೆಗೆ ಸರಿಸಮಾನವಾಗಿ ನಿಂತು ಅರಸು ದಾಖಲೆ ಸರಿಗಟ್ಟುತ್ತಿರುವ ಸಿಎಂ ಸಿದ್ದರಾಮಯ್ಯ ಹೆಸರಿನಲ್ಲಿ ದೀರ್ಘಾವಧಿ ಸಿಎಂ ಅನ್ನೋ ದಾಖಲೆ ಸೃಷ್ಟಿಯಾಗುತ್ತಿರುವುದಕ್ಕೆ ನೆಲಮಂಗಲದಲ್ಲಿ‌ ಇವತ್ತು ನಾಟಿಕೋಳಿ ಊಟ ಆಯೋಜನೆ ಮಾಡಲಾಗಿದೆ. ಸಿದ್ದರಾಮಯ್ಯ ಅಭಿಮಾನಿಗಳು ಈ ದಿನವನ್ನು ಸಂಭ್ರಮವನ್ನಾಗಿ ಮಾಡಲು ನಾಟಿ ಕೋಳಿ ಊಟ ಹಾಕಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ನೆಲಮಂಗಲದ ಭಕ್ತರ ಪಾಳ್ಯದಲ್ಲಿ ಸುಮಾರು ಎರಡು ಎಕರೆ ಜಾಗದಲ್ಲಿ ಸಕಲ ವ್ಯವಸ್ಥೆ ಆಗಿದ್ದು, ನಾಟಿಕೋಳಿ ಬಾಡೂಟದ ಜೊತೆಗೆ ವೇದಿಕೆ‌ ಕಾರ್ಯಕ್ರಮವೂ ನಡೆಯಲಿದೆ. ಸಿದ್ದರಾಮಯ್ಯ ಸಾಧನೆಯ ಕುರಿತು ಸಭಾ ಕಾರ್ಯಕ್ರಮ ನಡೆಯಲಿದೆ. ಅಹಿಂದ ಯುವ ಒಕ್ಕೂಟದ ಕುಶಾಲ್ ಹರಿವೆಗೌಡ ನೇತೃತ್ವದಲ್ಲಿ ಬಾಡೂಟ ಆಯೋಜನೆ ಆಗಿದ್ದು, ಇಂದು ಮಧ್ಯಾಹ್ನ 12 ಗಂಟೆಯಿಂದ ಸಾರ್ವಜನಿಕರಿಗೆ ಊಟ ನೀಡಲಾಗುತ್ತದೆ. ಸಿಎಂ‌ ಸಿದ್ದರಾಮಯ್ಯ, ಸಚಿವ ಸತೀಶ್ ಜಾರಕಿಹೊಳಿ, ಯತಿಂದ್ರ ಸಿದ್ದರಾಮಯ್ಯ ಸೇರಿದಂತೆ ಹಲವರಿಗೆ ಆಹ್ವಾನ ನೀಡಲಾಗಿದೆ.

    ಸಿದ್ದರಾಮಯ್ಯ ದೇವರಾಜ ಅರಸು ದಾಖಲೆ ಸರಿಗಟ್ಟುತ್ತಿರುವ ಬಗ್ಗೆ ಡಿಸಿಎಂ ಡಿ.ಕೆ ಶಿವಕುಮಾರ್ ಮಾತನಾಡಿ, ಸಿಎಂ ಸಿದ್ದರಾಮಯ್ಯ ಅರಸು ದಾಖಲೆ ಸರಿಗಟ್ಟುತ್ತಿರುವುದು ಬಹಳ ಸಂತೋಷದ ವಿಚಾರ. ರಾಜ್ಯಕ್ಕೂ ಸಂತೋಷ, ನಮಗೂ ಸಂತೋಷ. ನಾನು ತುಂಬು ಹೃದಯದಿಂದ ಹಾರೈಸುತ್ತೇನೆ ಎಂದಿದ್ದಾರೆ. ಜೀವನದಲ್ಲಿ ಏನನ್ನಾದ್ರು ಸಾಧನೆ ಮಾಡಬೇಕು ಅಂತೂ ಎಲ್ಲರಿಗೂ ಇರುತ್ತಲ್ಲ. ನಮ್ಮ ಸಿಎಂ ಇತಿಹಾಸದ ಪುಟಕ್ಕೆ ಸೇರಿದ್ದಾರೆ. ಹಿಂದೇನೂ ಸೇರಿದ್ದಾರೆ ಮುಂದೆನೂ ಇತಿಹಾಸದ ಪುಟಕ್ಕೆ ಸೇರುತ್ತಾರೆ. ನಾನು ಹಳ್ಳಿಯಿಂದ ಬಂದವನೂ ಇಲ್ಲಿಯವರೆಗೂ ತಲುಪಿದ್ದೇನೆ. ಇದಕ್ಕಿಂತ ಇನ್ನು ಎನು ಬೇಕು..? ಎಂದಿರುವ ಡಿಸಿಎಂ ನಾನು ಯಾವುದನ್ನೂ ಹುಡುಕಿಕೊಂಡು ಹೋಗಬೇಕಾಗಿಲ್ಲ. ನನ್ನ ಬಾಯಲ್ಲಿ ಏನೇನೋ ಮಾತನಾಡಿಸಬೇಡಿ. ನನಗೆ ಪ್ರತಿ ದಿನವೂ ಶುಭದಿನ ಆಗಿರುತ್ತದೆ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.

    ಸಿದ್ದರಾಮಯ್ಯ ಸಿಎಂ ಸ್ಥಾನ ಬಿಟ್ಟು ಕೊಡುವ ವಿಚಾರವಾಗಿ ಡಿಸಿಎಂ ಅಳೆದೂ ತೂಗಿ ಮಾತನಾಡಿದ್ದಾರೆ. ಆದರೆ ಜನವರಿ 8 ರಂದು ಶಾಸಕರು ಸಂಸದರಿಗೆ ಔತಣಕೂಟ ಏರ್ಪಡಿಸಲಾಗಿದೆ ಅನ್ನೋ ವಿಚಾರವನ್ನು ಹಂಚಿಕೊಂಡಿದ್ದಾರೆ. ಮನರೇಗಾ ಹೋರಾಟದ ಬಗ್ಗೆ ಜನವರಿ 8 ರಂದು ಸಂಜೆ ಎಲ್ಲಾ ಶಾಸಕರು ಹಾಗೂ ಸಂಸದರು ಮತ್ತು ವಿಧಾನ ಪರಿಷತ್ ಸದಸ್ಯರಿಗೆ ಆಹ್ವಾನ ಮಾಡಿದ್ದೇನೆ. ಎಐಸಿಸಿ ಗೈಡ್ ಲೈನ್ ಪ್ರಕಾರ ಹೋರಾಟ ರೂಪಿಸುತ್ತೇನೆ. ಅಂದು ಸಂಜೆ ಎಲ್ಲಾ ಶಾಸಕರ ಜೊತೆ ಡಿನ್ನರ್ ಮಾಡುತ್ತೇನೆ ಎಂದಿದ್ದಾರೆ. ಒಂದು ಮೂಲಗಳ ಮಾಹಿತಿ ಪ್ರಕಾರ ಸಿಎಂ ಸಿದ್ದರಾಮಯ್ಯ ಮುಖ್ಯಮಂತ್ರಿ ಪದವಿ ಬಿಟ್ಟು ಕೊಡದೆ ಇರುವುದೇ ಈ ಅರಸು ದಾಖಲೆ ಸರಿಗಟ್ಟಬೇಕು ಅನ್ನೋ ಕಾರಣಕ್ಕೆ ಎನ್ನಲಾಗ್ತಿತ್ತು. ಇದೀಗ ಅರಸು ದಾಖಲೆ ಮೀರಿ ಸಿದ್ದರಾಮಯ್ಯ ತನ್ನ ಹೆಸರಿನಲ್ಲಿ ದೀರ್ಘಾವಧಿ ಸಿಎಂ ಎಂದು ಬರೆದುಕೊಂಡಿದ್ದು ಆಯ್ತು. ಈಗಲಾದರೂ ಡಿ.ಕೆ ಶಿವಕುಮಾರ್​ ಸಿಎಂ ಆಗ್ತಾರಾ ಅನ್ನೋದು ಡಿಸಿಎಂ ಬೆಂಬಲಿಗರ ನಿರೀಕ್ಷೆ ಆಗಿದೆ.

    The post ಅರಸು ದಾಖಲೆ ಮುಟ್ಟಿದ ಸಿಎಂ ಸಿದ್ದರಾಮಯ್ಯ.. ನಾಳೆ ದೀರ್ಘಾವಧಿ ಸಿಎಂ ಅನ್ನೋ ಪಟ್ಟ.. appeared first on The Public Spot.

    Click here to Read More
    Previous Article
    ಸ್ವಂತ ಜಮೀನಲ್ಲಿ ನಿಧಿ ಸಿಕ್ಕರೂ ಸರ್ಕಾರಕ್ಕೆ ಸೇರುತ್ತಾ..? ಕಾರಣವೇನು..?
    Next Article
    BJP ಬಾಣವನ್ನು ಬಿಜೆಪಿಗೇ ತಿರುಗಿಸಿದ ಸಚಿವ ಕೃಷ್ಣಬೈರೇಗೌಡ..!

    Related PublicSpot Updates:

    Are you sure? You want to delete this comment..! Remove Cancel

    Comments (0)

      Leave a comment