Search

    Language Settings
    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    -1

    ರಾಜಕೀಯ ಶಿಕ್ಷಣವನ್ನು ಸಮರ್ಥವಾಗಿ ಅರಿಯಬೇಕಿದೆ – ವೆಂಕಟಗಿರಿಯಯ್ಯ

    2 weeks ago

    ಪ್ರಸ್ತುತ ಭಾರತದಲ್ಲಿ ಅಸ್ಪೃಶ್ಯತೆ ಕಾರಣಕ್ಕಾಗಿ ಮುಖ್ಯಮಂತ್ರಿ ಪ್ರಧಾನಮಂತ್ರಿ ಸ್ಥಾನಗಳನ್ನ ಅಲಂಕರಿಸಲು ಅವಕಾಶ ನೀಡದೆ ರಾಜಕೀಯ ಅಸ್ಪೃಶ್ಯತೆ ಆಚರಿಸುತ್ತಿರುವ ಈ ಸಂದರ್ಭದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಅಡಿಯಲ್ಲಿಯೇ ರಾಜಕೀಯ ಶಿಕ್ಷಣವನ್ನು ಸಮರ್ಥವಾಗಿ ಅರಿಯಬೇಕಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ ತಿಳಿಸಿದರು. ಕರ್ನಾಟಕ ದಲಿತ ಸಂಘರ್ಷ ಸಮಿತಿ ಮದ್ದೂರಿನ ನಗರಸಭೆ ಆವರಣದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಪುತ್ಥಳಿಯ ಮುಂಭಾಗ ಆಯೋಜಿಸಿದ್ದ ಭೀಮ್ ಕೋರೆಗಾಂವ್ ಮಹಾಯುದ್ಧದ ವಿಜಯೋತ್ಸವ ಸಮಾರಂಭದಲ್ಲಿ ಮಾತನಾಡಿದರು. ವಿದ್ಯೆ ಮತ್ತು ವ್ಯಕ್ತಿ ಗೌರವ ಸ್ವಾತಂತ್ರ್ಯ ಸಮಾನತೆ, […]

    The post ರಾಜಕೀಯ ಶಿಕ್ಷಣವನ್ನು ಸಮರ್ಥವಾಗಿ ಅರಿಯಬೇಕಿದೆ – ವೆಂಕಟಗಿರಿಯಯ್ಯ appeared first on nudikarnataka.



    ಪ್ರಸ್ತುತ ಭಾರತದಲ್ಲಿ ಅಸ್ಪೃಶ್ಯತೆ ಕಾರಣಕ್ಕಾಗಿ ಮುಖ್ಯಮಂತ್ರಿ ಪ್ರಧಾನಮಂತ್ರಿ ಸ್ಥಾನಗಳನ್ನ ಅಲಂಕರಿಸಲು ಅವಕಾಶ ನೀಡದೆ ರಾಜಕೀಯ ಅಸ್ಪೃಶ್ಯತೆ ಆಚರಿಸುತ್ತಿರುವ ಈ ಸಂದರ್ಭದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಅಡಿಯಲ್ಲಿಯೇ ರಾಜಕೀಯ ಶಿಕ್ಷಣವನ್ನು ಸಮರ್ಥವಾಗಿ ಅರಿಯಬೇಕಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ ತಿಳಿಸಿದರು.

    ಕರ್ನಾಟಕ ದಲಿತ ಸಂಘರ್ಷ ಸಮಿತಿ ಮದ್ದೂರಿನ ನಗರಸಭೆ ಆವರಣದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಪುತ್ಥಳಿಯ ಮುಂಭಾಗ ಆಯೋಜಿಸಿದ್ದ ಭೀಮ್ ಕೋರೆಗಾಂವ್ ಮಹಾಯುದ್ಧದ ವಿಜಯೋತ್ಸವ ಸಮಾರಂಭದಲ್ಲಿ ಮಾತನಾಡಿದರು.

    ವಿದ್ಯೆ ಮತ್ತು ವ್ಯಕ್ತಿ ಗೌರವ ಸ್ವಾತಂತ್ರ್ಯ ಸಮಾನತೆ, ಸಾಮಾಜಿಕ ನ್ಯಾಯಕ್ಕಾಗಿ ವಿಶ್ವ ದಾಖಲೆಯ ಯುದ್ಧ ಒಂದು ನಡೆದಿದೆ ಎಂದರೆ ಅದು ಭೀಮ ಕೊರಂಗಾವ್ ಮಹಾ ಯುದ್ಧ. ಈ ಯುದ್ಧವನ್ನು ಭಾರತದ ಮೂಲ ನಿವಾಸಿಗಳಾದ ಮರಾಠ ವಾಡದ ಮಹರ್ ರೆಜಿಮೆಂಟ್ ಮೂಲಕ ಸಿದ್ದನಾಯಕನ ನೇತೃತ್ವದಲ್ಲಿ 500 ವೀರ ಸೇನಾನಿಗಳು ಮನಸ್ಮೃತಿ ಪ್ರತಿಪಾದಕ ಎರಡನೇ ಬಾಜಿರಾಯ ನ 30,000 ಬಲವಳ್ಳ ಸೇನೆಯನ್ನು ಸದೆಬಡಿದ ಐತಿಹಾಸಿಕ ವಿಜಯದ ಸಂಭ್ರಮವಿದು ಎಂದು ಸ್ಮರಿಸಿದರು.

    ಆಯುಧ ಹಿಡಿಯುವ ವಿದ್ಯೆ ಕಲಿಯುವುದನ್ನು, ವಸ್ತ್ರ- ಆಭರಣಗಳನ್ನು ಧರಿಸುವುದನ್ನು ಆಸ್ತಿ ಹೊಂದುವುದನ್ನು ನಿರಾಕರಿಸಲ್ಪಟ್ಟ ಮನುಸ್ಮೃತಿಯ ಕರಾಳ ಕಾನೂನುಗಳ ವಿರುದ್ಧ ಮಹರ್ ರೆಜಿಮೆಂಟ್ ವೀರ ಸೇನಾನಿಗಳ ರಕ್ತ ಸಿಕ್ತ ಹೋರಾಟದ ವಿಜಯವನ್ನು ನಾವು ನೆನಪಿಸಿಕೊಳ್ಳುತ್ತ, ಬಾಬಾ ಸಾಹೇಬ್ ಡಾ. ಬಿಆರ್ ಅಂಬೇಡ್ಕರ್ ಅವರು ಸಮರ್ಪಿಸಿರುವ ಭಾರತದ ಸಂವಿಧಾನದ ಪ್ರಜಾಪ್ರಭುತ್ವ ಮತ್ತು ಜಾತ್ಯತೀತ ತತ್ವ ಹಾಗೂ ಬಹುತ್ವದ ಭಾರತದ ಸಂರಕ್ಷಣೆಗಾಗಿ ಭಾರತದಲ್ಲಿನ ರಾಜಕೀಯ ಅಸ್ಪೃಶ್ಯತೆಯನ್ನು ಕೊನೆಗಾಣಿಸುವ ಹೊಣೆ ನಮದಾಗಿದೆ. ಈ ಮೂಲಕ ಭೀಮ ಕೊರಂಗಾವ್ ವೀರಯೋಧರಿಗೆ ನಮನ ಸಲ್ಲಿಸುವ ದೃಢ ಸಂಕಲ್ಪಿತರಾಗಬೇಕಾಗಿದೆ ಎಂದರು.

    ಸಾನಿಧ್ಯ ವಹಿಸಿದ್ದ ಪರಮಪೂಜ್ಯ ಪಂಚೆಜಿ ಬೋಧಿರತ್ನ ಅವರು ಬುದ್ಧ ವಂದನೆ ಮಾಡಿ, ವೈದಿಕ ಸಂಸ್ಕೃತಿಯಲ್ಲಿ ದಾನವರನ್ನು ಸದೆಬಡಿದ ದಿನವನ್ನು ದೀಪಾವಳಿ ಏಕಾದಶಿ ಮುಂತಾದ ಹಬ್ಬಗಳನ್ನಾಗಿ ಆಚರಿಸುವ ಮೂಲಕ ಶೋಷಿತ ನಾಯಕರನ್ನು ಅಪಮಾನಿಸುವ ಕೃತ್ಯಗಳ ನಡೆಯುತ್ತಿವೆ ಇದನ್ನು ಶೋಷಿತ ಸಮುದಾಯಗಳ ಬೆಂಬಲಿಸುವ ಮೂಲಕ ತಮ್ಮ ಸಾಂಸ್ಕೃತಿಕ ದಿವಾಳಿತನ ಪ್ರದರ್ಶಿಸುತ್ತಿವೆ ಇದು ಭಾರತದ ಶ್ರೇಷ್ಠ ಸಂಸ್ಕೃತಿಗೆ ಕಳಂಕವಾಗಿದೆ ಎಂದು ಅಭಿಪ್ರಾಯಪಟ್ಟರು.

    ಮೌರ್ಯ ಸಾಮ್ರಾಜ್ಯದ ಮಹಾದೊರೆ ಸಾಮ್ರಾಟ್ ಅಶೋಕ ಸರ್ವಸಮ್ಮತ ಆಡಳಿತ ನಡೆಸಿ ಪ್ರತಿಯೊಬ್ಬರನ್ನು ಗೌರವಿಸಿದ ಇತಿಹಾಸವಿದೆ, ಇವರು ಬುದ್ಧ ಧರ್ಮವನ್ನು ಜಾಗತಿಕ ಮಟ್ಟದಲ್ಲಿ ಬೆಳೆಸಿದ ದೊರೆಯಾಗಿದ್ದಾರೆ ಇಂಥವರ ಇತಿಹಾಸಗಳು ಹೊರ ಬರುತ್ತಿಲ್ಲ ಜನರು ಹರಿಯುತ್ತಿಲ್ಲ ಇದೊಂದು ದುರಂತ ಎಂದು ವಿಷಾದ ವ್ಯಕ್ತಪಡಿಸಿದ್ದರು.

    ಜಗತ್ತಿನ ಇತಿಹಾಸದಲ್ಲಿ ಭೀಮ ಕೋರೆಂಗಾವ್ ಮಹಾಯುದ್ಧ ವಿಜಯೋತ್ಸವ ಭಾರತದ ಮೂಲ ನಿವಾಸಿ ಬಹುಜನರ ಸಾಂಸ್ಕೃತಿಕ ಹಬ್ಬವಾಗಿ ಪರಿವರ್ತನೆಗೊಳ್ಳಬೇಕು ಈ ಮೂಲಕ ಸಮುದಾಯಗಳು ರಾಜಕೀಯ ಅಧಿಕಾರದ ಗಡೆಗೆ ಸಾಗುವಂತೆ ಆಗಬೇಕೆಂದು ಕರೆ ನೀಡಿದರು.

    ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಮಂಡ್ಯ ಜಿಲ್ಲಾಧ್ಯಕ್ಷ ಬಿ ಆನಂದ ಮಾತನಾಡಿ ಕಾಂಗ್ರೆಸ್ ಬಿಜೆಪಿ ರಾಜಕೀಯ ಪಕ್ಷಗಳು ಭಾರತದ ಸಂವಿಧಾನದ ಆಸೆಯಂತೆ ಸ್ವಾತಂತ್ರ್ಯ ಸಮಾನತೆ ಸಹೋದರತೆಯ ಸದಾಶಯಗಳನ್ನು ಜಾರಿ ಮಾಡುವಲ್ಲಿ ವಿಫಲವಾಗಿವೆ ಎಂದರು..

    ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಮದ್ದೂರು ತಾಲೂಕು ಅಧ್ಯಕ್ಷ ಮುತ್ತುರಾಜು ನಗರಕೆರೆ ಪ್ರಸ್ತಾವಿಕ  ನುಡಿ ನುಡಿದರು. ಮೈಸೂರು ವಿಭಾಗ್ಯ ಸಂಚಾಲಕರಾದ ಅನಿಲ್ ಕುಮಾರ್ , ಜಿಲ್ಲಾ ಸಂಪನ್ಮೂಲ ವ್ಯಕ್ತಿಶರಾವತಿ ಅಶ್ವತ್, ದಲಿತ ಮಹಿಳಾ ಒಕ್ಕೂಟದ ಜಿಲ್ಲಾಧ್ಯಕ್ಷ ಸುಶ್ಮಿತಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗರಾಜ, ವೆಂಕಟೇಶ್, ಶೆಟ್ಟಹಳ್ಳಿ ಸುರೇಶ್ ಕುಮಾರ್, ದೊಡ್ಡಬೊವಳ್ಳಿ ಸಿದ್ದಪ್ಪ ಉಪಸ್ಥಿತರಿದ್ದರು.

    The post ರಾಜಕೀಯ ಶಿಕ್ಷಣವನ್ನು ಸಮರ್ಥವಾಗಿ ಅರಿಯಬೇಕಿದೆ – ವೆಂಕಟಗಿರಿಯಯ್ಯ appeared first on nudikarnataka.

    Click here to Read More
    Previous Article
    2027 ರ ವೇಳೆಗೆ ಭಾರತದಲ್ಲಿ ಮೊದಲ ಬುಲೆಟ್ ರೈಲು ಸೇವೆ ಆರಂಭ
    Next Article
    ಗೃಹಬಳಕೆ ಎಲ್‌ಪಿಜಿ ಸಿಲೆಂಡರ್ ಬೆಲೆಯಲ್ಲಿ ಬದಲಾವಣೆ ಇಲ್ಲ

    Related ಮುಖಪುಟ Updates:

    Are you sure? You want to delete this comment..! Remove Cancel

    Comments (0)

      Leave a comment