
ಎಕ್ಸಲೆಂಟ್ ಕವರ್ಡ್ರೈವ್ಸ್, ಸುಪರ್ಬ್ ಬ್ಯಾಕ್ ಫೂಟ್ ಪಂಚಸ್, ಸ್ಟ್ರಾಂಗ್ ಆಫ್ ಸೈಡ್ ಬ್ಯಾಟರ್ ಕರ್ನಾಟಕದ ಕೆ.ಎಲ್.ರಾಹುಲ್, ಪ್ರತಿಭಾವಂತ ಕ್ರಿಕೆಟರ್. 11 ವರ್ಷಗಳ ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ ರಾಹುಲ್, ಅನೇಕ ಸಾಧನೆಗಳನ್ನ ಮಾಡಿದ್ದಾರೆ, ದಾಖಲೆಗಳನ್ನ ನಿರ್ಮಿಸಿದ್ದಾರೆ. ಕಮಿಟ್ಮೆಂಟ್, ಕನ್ಸಿಸ್ಟೆನ್ಸಿ, ಕ್ಲಾಸ್ಗೆ ಹೆಸರುವಾಸಿ ಆಗಿರುವ ರಾಹುಲ್, ದಿನೇ ದಿನೇ ಕೋಟ್ಯಾಂತರ ಕ್ರಿಕೆಟ್ ಅಭಿಮಾನಿಗಳ ಮನ ಗೆಲ್ಲುತ್ತಿದ್ದಾರೆ.
ಇದನ್ನೂ ಓದಿ: ಕೊಟ್ಟ ಮಾತು ಉಳಿಸಿಕೊಳ್ಳಲು KSCA ದಿಟ್ಟ ಹೆಜ್ಜೆ.. RCB ಅಭಿಮಾನಿಗಳಿಗೆ ಗುಡ್ನ್ಯೂಸ್..!
/fit-in/580x348/filters:format(webp)/newsfirstlive-kannada/media/media_files/2025/12/02/kl-rahul-1-2025-12-02-09-07-28.jpg)
ಮಿಸ್ಟರ್ ಡಿಪೆಂಡಬಲ್ KL ರಾಹುಲ್..!
ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಕೆ.ಎಲ್.ರಾಹುಲ್, ಟೀಮ್ ಮ್ಯಾನೇಜ್ಮೆಂಟ್ನ ನೆಚ್ಚಿನ ಆಟಗಾರ. ಬ್ಯಾಟ್ ಹಿಡಿದು ರನ್ ಸ್ಕೋರ್ ಮಾಡೋ ರಾಹುಲ್, ವಿಕೆಟ್ ಹಿಂದೆಯೂ ಅಚ್ಚುಕಟ್ಟಾಗಿ ಕೆಲಸ ನಿರ್ವಹಿಸುತ್ತಾರೆ. ಹಾಗಾಗಿ ಕನ್ನಡಿಗ ರಾಹುಲ್, ಟೀಮ್ ಇಂಡಿಯಾದ ಮಿಸ್ಟರ್ ಡಿಪೆಂಡಬಲ್ ಆಗಿದ್ದಾರೆ. 50 ಓವರ್ ಬ್ಯಾಟಿಂಗ್ ಮತ್ತು 50 ಓವರ್ ವಿಕೆಟ್ ಕೀಪಿಂಗ್ ಅಂದ್ರೆ ಸುಮ್ಮನೇನಾ..? ಆದ್ರೆ ರಾಹುಲ್ ಇದ್ಯಾವುದನ್ನ ಲೆಕ್ಕಿಸದೆ, ಹೇಳಿದ ಕೆಲಸವನ್ನ ಮಾಡುತ್ತಿದ್ದಾರೆ.
ಟೆಸ್ಟ್, ಏಕದಿನ ಮತ್ತು ಟಿ-20! ಈ ಮೂರು ಫಾರ್ಮೆಟ್ಗಳಲ್ಲಿ ಕೆ.ಎಲ್.ರಾಹುಲ್, ಓಪನರ್ ಆಗಿ ಕಾಣಕ್ಕಿಳಿದಿದ್ದಾರೆ. ಆರಂಭಿಕನಾಗೇ ಕ್ರಿಕೆಟ್ ಶುರುಮಾಡಿದ್ದ ರಾಹುಲ್, ಹೆಸರು ಮಾಡಿದ್ದೇ ಇದೇ ಸ್ಲಾಟ್ನಲ್ಲಿ. ನಂಬರ್.1 ಸ್ಥಾನದಿಂದ ನಂಬರ್.7ನೇ ಸ್ಥಾನದವರೆಗೂ ಬ್ಯಾಟಿಂಗ್ ಮಾಡಿರುವ ರಾಹುಲ್, ಟನ್ಗಟ್ಟಲೇ ರನ್ಗಳಿಸಿದ್ದಾರೆ. ಈ ಸ್ಲಾಟ್ನಲ್ಲಿ ತಂಡಕ್ಕೆ ಅತ್ಯಾಮೂಲ್ಯ ಕಾಣಿಕೆ ನೀಡಿದ್ದಾರೆ.
ಮಿಡಲ್ ಆರ್ಡರ್ನಲ್ಲಿ ರಾಹುಲ್ ಅತಿ ಹೆಚ್ಚು ಸಕ್ಸಸ್ ಕಂಡಿದ್ದಾರೆ. ಅದ್ರಲ್ಲೂ ಏಕದಿನ ಕ್ರಿಕೆಟ್ನಲ್ಲಿ 55ರ ಬ್ಯಾಟಿಂಗ್ ಸರಾಸರಿಯಲ್ಲಿ ರನ್ಗಳಿಸಿರುವ ರಾಹುಲ್, ಮಿಡಲ್ ಆರ್ಡರ್ ಬ್ಯಾಟರ್ ಆಗಿ ಹೆಚ್ಚು ಗಮನ ಸೆಳೆದಿದ್ದಾರೆ. ಟಾಪ್ ಆರ್ಡರ್ ಕೈಕೊಟ್ರೂ ಮಿಡಲ್ ಆರ್ಡರ್ನಲ್ಲಿ ರಾಹುಲ್ ತಂಡಕ್ಕೆ ಆಪತ್ಭಾಂಧವರಾಗಿ ನಿಂತು ತಂಡದ ಕೈಹಿಡಿದ್ದಾರೆ. ಜೊತೆಗೆ ಮಿಡಲ್ ಆರ್ಡರ್ನಲ್ಲಿ ರಾಹುಲ್ ಸಾಕಷ್ಟು ಜೊತೆಯಾಟವಾಡಿ ಗಮನ ಕೂಡ ಸೆಳೆದಿದ್ದಾರೆ.
ಇದನ್ನೂ ಓದಿ: ಆರ್ಸಿಬಿಗೆ ಸತತ ಎರಡನೇ ಗೆಲುವು.. ಪಾಯಿಂಟ್ಸ್ ಟೇಬಲ್ನಲ್ಲಿ ಭಾರೀ ಬದಲಾವಣೆ..!
/fit-in/580x348/filters:format(webp)/newsfirstlive-kannada/media/media_files/2025/10/03/kl-rahul-2-2025-10-03-13-11-34.jpg)
ಮಹೇಂದ್ರ ಸಿಂಗ್ ಧೋನಿ ಬಳಿಕ, ಟೀಮ್ ಇಂಡಿಯಾ ಗೇಮ್ ಫಿನಿಷರ್ ಯಾರು ಅಂತ ಹುಡುಕಾಟದಲ್ಲಿದ್ದ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ಗೆ, ಸಿಕ್ಕಿದ್ದೇ ಕೆ.ಎಲ್.ರಾಹುಲ್. ಕೆಳ ಕ್ರಮಾಂಕದಲ್ಲಿ ಹಾಗೆ ಡೆಥ್ ಓವರ್ಗಳಲ್ಲಿ ಅಗ್ರೆಸಿವ್ ಬ್ಯಾಟಿಂಗ್ ನಡೆಸೋ ರಾಹುಲ್, ಏಕಾಂಗಿಯಾಗಿ ಸಾಕಷ್ಟು ಪಂದ್ಯಗಳನ್ನ ಗೆಲ್ಲಿಸಿಕೊಟ್ಟಿದ್ದಾರೆ. ಬರೋಡಾ ಪಂದ್ಯದಲ್ಲೂ ರಾಹುಲ್, ಫಿನಿಷರ್ ಆಗಿ ಕಾಣಿಸಿಕೊಂಡ್ರು.
ನಂ.1 ವಿಕೆಟ್ ಕೀಪರ್ ರಾಹುಲ್
ಬ್ಯಾಟ್ ಹಿಡಿದು ರನ್ ಸ್ಕೋರ್ ಮಾಡೋದಷ್ಟೇ ಅಲ್ಲ. ವಿಕೆಟ್ ಹಿಂದೆ ಕೀಪರ್ ಆಗಿ ರಾಹುಲ್ ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸುತ್ತಾರೆ. ಬ್ಯಾಟಿಂಗ್ ಜೊತೆಗೆ 50 ಓವರ್ ವಿಕೆಟ್ ಕೀಪಿಂಗ್ ಮಾಡೋದು ಅಷ್ಟು ಸುಲಭವಲ್ಲ. ರಾಹುಲ್ ಕಷ್ಟದ ಕೆಲಸವನ್ನ ಇಷ್ಟಪಟ್ಟು ಮಾಡ್ತಾರೆ. ರಾಹುಲ್ ಕಮಿಟೆಮೆಂಟ್ಗೆ ಇದೊಂದು ಸಣ್ಣ ಉದಾಹರಣೆ ಅಷ್ಟೇ.
ಆಟಗಾರನಾಗಿ ಆಡಲು ಸೈ, ಸಾರಥಿಯಾಗಿ ಜವಾಬ್ದಾರಿಗೂ ಜೈ
ಬ್ಯಾಟ್ಸ್ಮನ್, ವಿಕೆಟ್ ಕೀಪರ್ ಆಗಿ ಟೀಮ್ ಇಂಡಿಯಾಕ್ಕೆ ಕೊಡುಗೆ ನೀಡಿರುವ ರಾಹುಲ್, ನಾಯಕನಾಗಿ ಗಮನ ಸೆಳೆದಿದ್ದಾರೆ. ಅದ್ಭುತ ಗೇಮ್ ರೀಡಿಂಗ್, ಮ್ಯಾಚ್ ಟ್ಯಾಕ್ಟಿಕ್ಸ್, ಸ್ಟ್ರಾಟಜಿ ಮಾಡೋದ್ರಲ್ಲಿ, ಕೆ.ಎಲ್.ರಾಹುಲ್ ನಿಸ್ಸೀಮರು. ಆದ್ರೆ ನಾಯಕನಾಗಿ ರಾಹುಲ್ಗೆ ಅದರಷ್ಟ ಕೈಹಿಡಿಯಲಿಲ್ಲ. ಒಂದು ವೇಳೆ ರಾಹುಲ್ ನಾಯಕನಾಗಿ ಸಕ್ಸಸ್ ಕಂಡಿದ್ದಿದ್ರೆ, ಇವತ್ತು ಟೀಮ್ ಇಂಡಿಯಾದ ಆಲ್ ಫಾರ್ಮೆಟ್ ಕ್ಯಾಪ್ಟನ್ ಆಗಿರುತ್ತಿದ್ರೇನೋ..! ಕೆ.ಎಲ್.ರಾಹುಲ್ ಒಬ್ಬ ಕ್ವಾಲಿಟಿ, ಸ್ಕಿಲ್ಡ್ ಮತ್ತು ಹೈಲಿ ಟ್ಯಾಲೆಂಟೆಡ್ ಕ್ರಿಕೆಟರ್. ವಿರಾಟ್ ಕೊಹ್ಲಿಯಂತೆ ಕೆ.ಎಲ್.ರಾಹುಲ್ ಸಹ ಗ್ರೇಟೆಸ್ಟ್ ಕ್ರಿಕೆಟರ್ಗಳಲ್ಲಿ ಒಬ್ಬರು. ಹಾಗಾಗಿ ರಾಹುಲ್ಗೆ ರಾಹುಲ್ಲೇ ಸರಿಸಾಟಿ.
ಇದನ್ನೂ ಓದಿ: ಕೊಟ್ಟ ಮಾತು ಉಳಿಸಿಕೊಳ್ಳಲು KSCA ದಿಟ್ಟ ಹೆಜ್ಜೆ.. RCB ಅಭಿಮಾನಿಗಳಿಗೆ ಗುಡ್ನ್ಯೂಸ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
Previous Article
ದೇಶ ವಿರೋಧಿ ಘೋಷಣೆ ಕೂಗಿದ್ದ ಮಹಿಳೆ ಅರೆಸ್ಟ್
Next Article
ಇರಾನ್ ಜತೆ ವ್ಯವಹರಿಸುವ ರಾಷ್ಟ್ರಗಳ ಮೇಲೆ ಶೇ 25ರಷ್ಟು ಸುಂಕ : ಟ್ರಂಪ್